Home
ಸುದ್ದಿಜಾಲ

Honor: ಹಾನರ್‌ನಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ: ಡಿಸೈನ್‌ಗೆ ಫಿದಾ ಆಗ್ತೀರಾ

ಹಾನರ್‌ ಕಂಪೆನಿಯ ಫೋನ್‌ಗಳು ಮೊಬೈಲ್‌ ಲೋಕದಲ್ಲಿ ಮ್ಯಾಜಿಕ್‌ ಮಾಡುವುದು ಹೊಸತೇನಲ್ಲ. ವಿಭಿನ್ನ ಪ್ರೊಸೆಸರ್‌ ಹಾಗೂ ಕಾರ್ಯಕ್ಷತೆಯ ಕಾರಣಕ್ಕೆ ಹಾನರ್‌ ಕಂಪೆನಿ ಸೈ ಎನಿಸಿಕೊಂಡಿದೆ. ಇದೀಗ ಹಾನರ್‌ ಕಂಪೆನಿ ಹೊಸದಾಗಿ ಹಾನರ್‌ X50 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಎಂಟ್ರಿಯಲ್ಲಿಯೇ ಅಬ್ಬರದ ಸೌಂಡ್‌ ಮಾಡುತ್ತಿದೆ.

ಹೌದು, ಹಾನರ್‌ X50 ಪ್ರೊ ಸ್ಮಾರ್ಟ್‌ಫೋನ್‌ ಅಬ್ಬರಕ್ಕೆ ಟೆಕ್‌ ವಲಯ ಕಂಗಾಲಾಗುವ ಸೂಚನೆ ದೊರೆತಿದೆ. ಸೈಲೆಂಟ್‌ ಆಗಿ ಎಂಟ್ರಿ ನೀಡಿದ್ದರೂ ತನ್ನ ಕ್ಯಾಮೆರಾ ರಚನೆಯ ಮೂಲಕವೇ ಸಖತ್‌ ಸೌಂಡ್‌ ಮಾಡುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 108MP ಸೆನ್ಸಾರ್‌ ಸಾಮರ್ಥ್ಯದ ಮುಖ್ಯ ಕ್ಯಾಮೆರಾದೊಂದಿಗೆ ಬರಲಿದೆ. ಹಾಗಾದ್ರೆ ಹಾನರ್‌ X50 ಪ್ರೊ ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Honor: ಹಾನರ್‌ನಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ: ಡಿಸೈನ್‌ಗೆ ಫಿದಾ ಆಗ್ತೀರಾ

ಹಾನರ್‌ X50 ಪ್ರೊ ಡಿಸ್‌ಪ್ಲೇ ರಚನೆ ಹೇಗಿದೆ?
ಹಾನರ್‌ X50 ಪ್ರೊ (honor x50 pro) ಸ್ಮಾರ್ಟ್‌ಫೋನ್‌ 6.78 ಇಂಚಿನ ಕರ್ವ್ಡ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇ 10-ಬಿಟ್ ಸ್ಕ್ರೀನ್‌ ಆಗಿದ್ದು, 1920Hz PWM ಡಿಮ್ಮಿಂಗ್‌ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಬಯೋಮೆಟ್ರಿಕ್ಸ್‌ಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

ಹಾನರ್‌ X50 ಪ್ರೊ ಪ್ರೊಸೆಸರ್‌ ಯಾವುದು?
ಹಾನರ್‌ X50 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ನ ಅಂಡರ್‌ಲಾಕ್ಡ್ ಆವೃತ್ತಿ ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ ಓಎಸ್ 7.2 ನಲ್ಲಿ ರನ್‌ ಆಗಲಿದೆ. ಇನ್ನು ಸ್ಮಾರ್ಟ್‌ಫೋನ್‌ನ ಥರ್ಮಲ್‌ಗಳನ್ನು ನಿಯಂತ್ರಣದಲ್ಲಿಡಲು 5100 ಎಂಎಂ 2 ಆವಿ ಕೂಲಿಂಗ್ ವ್ಯವಸ್ಥೆಯೂ ಇದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Honor: ಹಾನರ್‌ನಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ: ಡಿಸೈನ್‌ಗೆ ಫಿದಾ ಆಗ್ತೀರಾ

ಹಾನರ್‌ X50 ಪ್ರೊ ಕ್ಯಾಮೆರಾ ಸೆಟಪ್‌ ಏನಿದೆ?
ಹಾನರ್‌ X50 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಹಾನರ್‌ X50 ಪ್ರೊ ಬ್ಯಾಟರಿ ಮತ್ತು ಇತರೆ ಸೌಲಭ್ಯ
ಹಾನರ್‌ X50 ಪ್ರೊ ಸ್ಮಾರ್ಟ್‌ಫೋನ್‌ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 35W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ NFC, ಬ್ಲೂಟೂತ್ 5.2 ಮತ್ತು USB ಟೈಪ್-C ಪೋರ್ಟ್‌ಗೆ ಬೆಂಬಲವನ್ನು ನೀಡಲಿದೆ.

Honor: ಹಾನರ್‌ನಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ: ಡಿಸೈನ್‌ಗೆ ಫಿದಾ ಆಗ್ತೀರಾ

ಹಾನರ್‌ X50 ಪ್ರೊ ಬೆಲೆ ಮತ್ತು ಲಭ್ಯತೆ
ಹಾನರ್‌ X50 ಪ್ರೊ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಮಾತ್ರ ಅನಾವರಣಗೊಂಡಿದೆ. ಆದರಿಂದ ಈ ಫೋನ್‌ನ 12GB RAM ಮತ್ತು 256GB ರೂಪಾಂತರದ ಆಯ್ಕೆಗೆ 2,799 ಯುವಾನ್ (ಅಂದಾಜು 33,638ರೂ)ಬೆಲೆಯನ್ನು ಪಡೆದುಕೊಂಡಿದೆ. ಇದು ಭಾರತದಲ್ಲಿ ಬಿಡುಗಡೆ ಆಗುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ಇತ್ತೀಚಿಗೆ ಹಾನರ್‌ ಕಂಪೆನಿ ಹಾನರ್‌ 90 GT ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾಗಳನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ 3840Hz PWM ಡಿಮ್ಮಿಂಗ್‌ ಬೆಂಬಲಿಸಲಿದೆ.

Best Mobiles in India

English summary
Honor X50 Pro with Snapdragon 8+ Gen 1 launched: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+