Home
ಸುದ್ದಿಜಾಲ

Honor: ಅ.16ಕ್ಕೆ ಬರ್ತಿವೆ 2 ಫೋನ್! 108MP ಕ್ಯಾಮೆರಾ.. ಬಿಗ್ ಸ್ಟೋರೇಜ್.. ಯಾವ ಮೊಬೈಲ್?

ಹಾನರ್‌ ಮೊಬೈಲ್‌ ಪ್ರಿಯರಿಗೆ ಡಬಲ್ ಸಿಹಿ ಸುದ್ದಿ ಇದೆ. ಶೀಘ್ರದಲ್ಲೇ ಎರಡು ಹೊಸ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೌದು, ಹಾನರ್ (Honor) ಕಂಪನಿಯು ತನ್ನ Honor X60 ಸರಣಿಯ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಸರಣಿಯಲ್ಲಿ ಹಾನರ್ X60 (Honor X60) ಮತ್ತು ಹಾನರ್ X60 ಪ್ರೊ (Honor X60 Pro) ಮೊಬೈಲ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಬನ್ನಿ, ಈ ಸರಣಿಯ ವಿಶೇಷತೆ ಮತ್ತು ಬಿಡುಗಡೆ ದಿನಾಂಕವನ್ನು ತಿಳಿಯೋಣ.

ಕಂಪನಿಯು ಮುಂದಿನ ವಾರ (ಅಕ್ಟೋಬರ್ 16) ಜಾಗತಿಕ ಮಾರುಕಟ್ಟೆಯಲ್ಲಿ (ಚೀನಾ ಮಾರುಕಟ್ಟೆ) Honor X60 ಸರಣಿಯನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಈಗಾಗಲೇ, ಮುಂಬರುವ ಹೊಸ ಫೋನಿನ RAM, ಸ್ಟೋರೇಜ್ ಮತ್ತು ಬಣ್ಣಗಳ ಆಯ್ಕೆಯನ್ನು ದೃಢಪಡಿಸಲಾಗಿದೆ. ಇದರೊಂದಿಗೆ ಫೋನಿನ ಫೋಟೋಗಳನ್ನು ಸಹ ಕಾಣಬಹುದು. ಈ ಮೂಲಕ ಲುಕ್ ಕೂಡ ರಿವೀಲ್ ಆಗಿದೆ. ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಮುಂಗಡ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Honor: ಅ.16ಕ್ಕೆ ಬರ್ತಿವೆ 2 ಫೋನ್! 108MP ಕ್ಯಾಮೆರಾ, ಬಿಗ್ ಸ್ಟೋರೇಜ್.. ಬೆಲೆ?

ಹಾನರ್ X60, ಹಾನರ್ X60 ಪ್ರೊ ಸ್ಟೋರೇಜ್ ಮತ್ತು ಬಣ್ಣಗಳ ಆಯ್ಕೆ

ಹಾನರ್ X60 ಮತ್ತು ಹಾನರ್ X60 ಪ್ರೊ ಮೊಬೈಲ್ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದು 8GB+128GB, 8GB+256GB, 12GB+256GB ಮತ್ತು 12GB+512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಹಾನರ್ X60 ಫೋನ್ ಎಲಿಗಂಟ್ ಬ್ಲಾಕ್, ಹೇಹೂಕಿಂಗ್ ಮತ್ತು ಮೂನ್ ಶ್ಯಾಡೋ ವೈಟ್‌ ಬಣ್ಣದಲ್ಲಿ ಮಾರಾಟವಾಗಲಿದೆ.

ಹಾನರ್ X60 ಪ್ರೊ ಮೊಬೈಲ್ ಬಸಾಲ್ಟ್ ಗ್ರೇ, ಬರ್ನಿಂಗ್ ಆರೆಂಜ್, ಸ್ಕೈ ಬ್ಲೂ ಮತ್ತು ಲಲಿತ ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಹಾನರ್ X60 ಪ್ರೊ ಫೋನಿನ 12GB + 512GB ಆಯ್ಕೆಯು ಚೀನಾ ಮೊಬೈಲ್ ಬೀಡೌ ಸ್ಯಾಟಲೈಟ್ ಎಸ್‌ಎಂಎಸ್ (SMS) ಸಂವಹನವನ್ನು ಬೆಂಬಲಿಸುತ್ತದೆ. ಇದು ಕಡಿಮೆ ಬೆಲೆಯಲ್ಲಿ ಸ್ಯಾಟಲೈಟ್ (ಉಪಗ್ರಹ) ಸಂಪರ್ಕವಿರುವ ಮೊದಲ ಫೋನ್ ಆಗಿರಲಿದೆ.

ಹಾನರ್ X60 GT ಕೂಡ ಬಿಡುಗಡೆ?

ಹಾನರ್ X60 ಸರಣಿಯ ಜೊತೆಗೆ ಹಾನರ್ X60 GT (Honor X60 GT) ಮೊಬೈಲ್‌ ಅನ್ನು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದನ್ನು 8GB+128GB, 8GB+256GB, 12GB+256GB ಮತ್ತು 16GB+512GB ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಲಾಗುವುದು. ಆದರೆ, ಈ ಫೋನನ್ನು ಇನ್ನೂ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದು ಅಕ್ಟೋಬರ್ 16 ರಂದು ಬೇಸ್ ಮತ್ತು ಪ್ರೊನೊಂದಿಗೆ ಬಿಡುಗಡೆಯಾಗುತ್ತದೆಯೇ? ಅಥವಾ ಇಲ್ಲವೇ? ಎಂಬುದನ್ನು ಕಾದು ನೋಡಬೇಕಿದೆ.

ಹಾನರ್ X60 ಸರಣಿಯ ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ವರದಿಯ ಪ್ರಕಾರ, ಮುಂಬರುವ ಹಾನರ್ X60 ಸರಣಿಯ ಮೂಲ ಮಾದರಿಯು 6.8 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ. ಇಡು ಪೂರ್ಣ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಎರಡೂ ಮೊಬೈಲ್‌ಗಳನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಹಾನರ್ X60 ಸ್ಮಾರ್ಟ್‌ಫೋನ್ 12GB RAM, 12GB ವರ್ಚುವಲ್ RAM ಮತ್ತು 512GB ಸ್ಟೋರೇಜ್‌ ಅನ್ನು ಹೊಂದಿರುತ್ತದೆ. ಈ ಸರಣಿಯು ಆಂಡ್ರಾಯ್ಡ್‌ 14 ಆಧಾರಿತ MagicOS 8 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ನಿರ್ವಿಸಲಿದೆ.

ಕ್ಯಾಮೆರಾ ಸೆಟಪ್

ಹಾನರ್ X60 ಸರಣಿಯು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದೆ. ಇದು ಎಲ್‌ಇಡಿ ಫ್ಲ್ಯಾಪ್‌ನೊಂದಿಗೆ ಬರುತ್ತದೆ. ಇದರೊಂದಿಗೆ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಲಭ್ಯವಿಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಈ ಫೋನ್‌ನಲ್ಲಿ 5,800mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ವೇಗದ ಚಾರ್ಜಿಂಗ್‌ ಮಾಡಲು, ಇದು 35W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ.

Best Mobiles in India

English summary
Honor X60 Series Set to Launch on October 16: colours, storage options confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+