ಭಾರತದ ಟೆಕ್ ವಲಯದಲ್ಲಿ ಸುನಾಮಿ ಎಬ್ಬಿಸಲು ಬರುತ್ತಿದೆ Honor X9b 5G! ಏನೆಲ್ಲಾ ನಿರೀಕ್ಷೆ?
ಹಾನರ್ ಕಂಪೆನಿ ಕಳೆದ ವರ್ಷದ ಅಂತ್ಯದಲ್ಲಿ ಭಾರತಕ್ಕೆ ರೀ ಎಂಟ್ರಿ ನೀಡುವ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಹೊಸ ಫೋನ್ ಪರಿಚಯಿಸಲು ತಯಾರಿ ನಡೆಸಿದೆ. ಅದರಂತೆ ಭಾರತದಲ್ಲಿ ಹೊಸದಾಗಿ Honor X9b 5G ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಹೌದು, ಹಾನರ್ ಕಂಪೆನಿ ಭಾರತದಲ್ಲಿ Honor X9b 5G ಸ್ಮಾರ್ಟ್‌ಫೋನ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ನ ಲಾಂಚ್ ಟೀಸರ್ ಈಗಾಗಲೇ ಸೊಶೀಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೆಟ್ ಮಾಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಕೂಡ ಆನ್‌ಲೈನ್‌ನಲ್ಲಿ ಬಹಿರಂಗವಾಗಿದ್ದು, ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಹಾಗಾದ್ರೆ Honor X9b 5G ಫೋನ್‌ನ ಫೀಚರ್ಸ್ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Honor X9b 5G ಫೀಚರ್ಸ್ ನಿರೀಕ್ಷೆ ಏನು?
Honor X9b 5G ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್‌ಪ್ಲೇಯೊಂದಿಗೆ ಬರಲಿದೆ. ಈ ಡಿಸ್‌ಪ್ಲೇಯು 1200 x 2652 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರಲಿದ್ದು, 19.9:9 ರಚನೆಯ ಅನುಪಾತವನ್ನು ಹೊಂದಿರಲಿದೆ. ಇನ್ನು ಡಿಸ್‌ಪ್ಲೇ 10-ಬಿಟ್ ಬಣ್ಣಗಳನ್ನು ನೀಡಲಿದೆ, 91.2% ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿ ಬರಲಿದೆ.
Honor X9b 5G ಪ್ರೊಸೆಸರ್ ಯಾವುದು?
Honor X9b 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್ ವೇಗದಲ್ಲಿ ಬರಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ MagicOS 7.2ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರುವ ಸಾಧ್ಯತೆಯಿದೆ.

Honor X9b 5G ಕ್ಯಾಮೆರಾ ಸೆಟಪ್ ಏನಿದೆ?
Honor X9b 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಎರಡನೇ ಕ್ಯಾಮೆರಾ 5MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾದಲ್ಲಿ ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ.
Honor X9b 5G ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ನಿರೀಕ್ಷೆ?
Honor X9b 5G ಸ್ಮಾರ್ಟ್‌ಫೋನ್‌ನಲ್ಲಿ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಕಾಣಬಹುದು. ಇದು USB ಟೈಪ್-C ಪೋರ್ಟ್‌ನಲ್ಲಿ 35W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್ ವೈಫೈ, ಯುಎಸ್‌ಬಿ ಸಿ ಪೋರ್ಟ್ ಅನ್ನು ಹೊಂದಿರಲಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಸಾಫ್ಟ್‌ವೇರ್ ಆಧಾರಿತ ಫೇಸ್ ಅನ್‌ಲಾಕ್ ಅನ್ನು ನೀಡುತ್ತದೆ.

Honor X9b 5G ಬೆಲೆ ಮತ್ತು ಲಭ್ಯತೆ
Honor X9b 5G ಸ್ಮಾರ್ಟ್‌ಫೋನ್ ಭಾರತದಲ್ಲಿ 35,000ರೂ ಕ್ಕಿಂತ ಕಡಿಮೆ ಇರುತ್ತದೆ ಎಂದು ಟಿಪ್‌ಸ್ಟರ್ ಹೇಳಿಕೊಂಡಿದೆ. ಟಿಪ್‌ಸ್ಟರ್ ಪ್ರಕಾರ, Honor X9b ಲಾಂಚ್ ಆಫರ್‌ಗಳನ್ನು ಕೊಡುಗೆಗಳನ್ನು ಒಳಗೊಂಡಂತೆ ಕಡಿಮೆ ರೂ 23,999 ಕ್ಕೆ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್ ಸನ್‌ರೈಸ್ ಆರೆಂಜ್, ಎಮರಾಲ್ಡ್ ಗ್ರೀನ್, ಟೈಟಾನಿಯಂ ಸಿಲ್ವರ್ ಮತ್ತು ಮಿಡ್‌ನೈಟ್ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ದೊರೆಯಲಿದೆ. ಬಹುಶಃ ಸ್ಮಾರ್ಟ್‌ಫೋನ್ ಫೆಬ್ರವರಿ 8 ಅಥವಾ 9 ರಂದು ಭಾರತದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಇದು ಈಗಾಗಲೇ ಜಾಗತಿಕ ಮರುಕಟ್ಟೆಯಲ್ಲಿ ಬಿಡುಗಡೆ ಆಗಿದೆ ಅನ್ನೊದು ಗಮನಿಸಬೇಕಾದ ವಿಚಾರ.


Click it and Unblock the Notifications








