Home
ಸುದ್ದಿಜಾಲ

ಹಾನರ್‌ನಿಂದ ಹೊಸ ಸ್ಮಾರ್ಟ್‌ಫೋನ್‌ ಅನಾವರಣ! 360-ಡಿಗ್ರಿ ಆಂಟಿ-ಡ್ರಾಪ್ ಪ್ರೊಟೆಕ್ಷನ್‌ ವಿಶೇಷ!

ಟೆಕ್‌ ವಲಯದ ದೈತ್ಯ ಹಾನರ್‌ ಹೊಸ ಹಾನರ್‌ X9b ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಹಾನರ್‌ X9aಗೆ ಉತ್ತರಾಧಿಕಾರಿಯಾಗಿದ್ದು, ಹೊಸ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 6 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದೆ.

ಹೌದು, ಹಾನರ್‌ X9b ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ 5,800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 360-ಡಿಗ್ರಿ ಆಂಟಿ-ಡ್ರಾಪ್ ರಕ್ಷಣೆಯನ್ನು ಹೊಂದಿರುವ ಫೋನ್‌ ಇದಾಗಿದೆ. ಈ ಸ್ಮಾರ್ಟ್‌ಫೋನ್‌ ಹೆಚ್ಚುವರಿಯಾಗಿ X9b ಮೈಕ್ರಾನ್-ಗಾತ್ರದ ರಂಧ್ರಗಳೊಂದಿಗೆ ವಿಶೇಷವಾದ ಮೆತ್ತನೆಯ ವಸ್ತುವನ್ನು ಸಂಯೋಜಿಸುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್‌ನಿಂದ ಹೊಸ ಫೋನ್‌ ಅನಾವರಣ! 360-ಡಿಗ್ರಿ ಆಂಟಿ-ಡ್ರಾಪ್ ಪ್ರೊಟೆಕ್ಷನ್‌ ವಿಶೇಷ

ಹಾನರ್‌ X9b ಡಿಸ್‌ಪ್ಲೇ ರಚನೆ
ಹಾನರ್‌ X9b ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1200 x 2652 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 19.9:9 ರಚನೆಯ ಅನುಪಾತವನ್ನು ಹೊಂದಿದ್ದು, 10-ಬಿಟ್ ಬಣ್ಣಗಳನ್ನು ನೀಡುತ್ತದೆ.

ಹಾನರ್‌ X9b ಪ್ರೊಸೆಸರ್‌ ಯಾವುದು?
ಹಾನರ್‌ X9b ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 6 Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಮ್ಯಾಜಿಕ್ OS 7.2 ನೊಂದಿಗೆ ಪೂರ್ವ-ಸ್ಥಾಪಿತವಾಗಿದೆ. ಹಾಗೆಯೇ 8GB RAM ಮತ್ತು 256 GB ಹಾಗೂ 8GB RAM ಮತ್ತು 12GB RAM ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಹಾನರ್‌ X9b ಕ್ಯಾಮೆರಾ ಸೆಟ್‌ಅಪ್‌
ಹಾನರ್‌ X9b ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಹಾನರ್‌ X9b ಬ್ಯಾಟರಿ ಮತ್ತು ಇತರೆ
ಹಾನರ್‌ X9b ಸ್ಮಾರ್ಟ್‌ಫೋನ್‌ 5,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 35W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, Wi-Fi 802.11ac, ಬ್ಲೂಟೂತ್ 5.1, GPS, NFC, USB-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್‌ನಂತಹ ಫೀಚರ್ಸ್‌ಗಳನ್ನು ನೀಡುತ್ತದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋ ಮೀಟರ್‌, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಅನ್ನು ಹೊಂದಿರಲಿದೆ.

ಹಾನರ್‌ X9b ಬೆಲೆ ಮತ್ತು ಲಭ್ಯತೆ
ಹಾನರ್‌ X9b ಸ್ಮಾರ್ಟ್‌ಫೋನ್‌ ಪ್ರಸ್ತುತ ಮಲೇಷ್ಯಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರೆ ಈ ಸ್ಮಾರ್ಟ್‌ಫೋನ್‌ನ ನಿಖರವಾದ ಬೆಲೆಯನ್ನು ಇನ್ನು ಕೂಡ ಬಹಿರಂಗಪಡಿಸಿಲ್ಲ. ಈ ಸ್ಮಾರ್ಟ್‌ಫೋನ್‌ ಮಿಡ್‌ನೈಟ್ ಬ್ಲ್ಯಾಕ್, ಎಮರಾಲ್ಡ್ ಗ್ರೀನ್ ಮತ್ತು ಸನ್‌ರೈಸ್ ಆರೆಂಜ್‌ನಂತಹ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಇದು ಶೀಘ್ರದಲ್ಲೇ ಭಾರತಕ್ಕೆ ಕೂಡ ಎಂಟ್ರಿ ನೀಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಹಾನರ್‌ ಕಂಪೆನಿ ಇತ್ತೀಚಿಗೆ ಹಾನರ್‌ ಮ್ಯಾಜಿಕ್‌ Vs 2 ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಒಳಗಿನ ಡಿಸ್‌ಪ್ಲೇ 7.92 ಇಂಚಿನ OLED ಪ್ಯಾನೆಲ್ ಅನ್ನು ಹೊಂದಿದ್ದು, ಇದು 2,344 x 2,156 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 1,600 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ 9.78:9 ರ ಆಕಾರ ಅನುಪಾತವನ್ನು ಹೊಂದಿದೆ. ಇನ್ನೊಂದು ಬದಿಯಲ್ಲಿ 6.43-ಇಂಚಿನ OLED ಕವರ್ ಡಿಸ್‌ಪ್ಲೇ ಆಯ್ಕೆಯು 2,376 x 1,060 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ್ ಪಡೆದಿದ್ದು, ಇದು 2,500 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ.

Best Mobiles in India

English summary
Honor X9b with 108MP triple cameras launched: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+