ಭಾರತದಲ್ಲೇ ಮೊದಲು!..'ಮೊಬೈಲ್ ಗೀಳು' ಬಿಡಿಸಲು ಆರೋಗ್ಯ ಕೇಂದ್ರ ಆರಂಭ!

|

ನೀವು ಊಹಿಸಲು ಸಾಧ್ಯವಿಲ್ಲದಂತಹ ವಿಶೇಷ ಹಾಗೂ ಕುತೋಹಲದ ಸುದ್ದಿ ಇದು ಎನ್ನಬಹುದು. ಏಕೆಂದರೆ, ಮೊಬೈಲ್ ಗೀಳು ಬಿಡಿಸುವ ದೇಶದ ಪ್ರಪ್ರಥಮ ಖಾಸಗಿ ಆರೋಗ್ಯ ಕೇಂದ್ರ ಭಾರತದಲ್ಲಿ ಆರಂಭವಾಗಿದೆ.! ಹೌದು, ನೀವು ಕೇಳಿದ್ದು ನಿಜ. ಮೊಬೈಲ್ ಗೀಳಿಗೆ ಬಿದ್ದು ಬಾಹ್ಯ ಪ್ರಪಂಚದಿಂದ ಸಂಪರ್ಕ ಕಡಿದುಕೊಳ್ಳುವ ಮಕ್ಕಳು ಮೊಬೈಲ್​ನಲ್ಲಿ ಮುಳುಗಿ ದೈಹಿಕವಾಗಲ್ಲದೆ ಮಾನಸಿಕವಾಗಿಯೂ ಆಘಾತಕ್ಕೊಳಗಾಗುತ್ತಿರುವುದರಿಂದ ಮೊಬೈಲ್ ಗೀಳು ಬಿಡಿಸುವ ಖಾಸಗಿ ಆರೋಗ್ಯ ಕೇಂದ್ರವನ್ನು ಪಂಜಾಬ್​ನ ಅಮೃತಸರದಲ್ಲಿ ತೆರೆಯಲಾಗಿದೆ.

ಭಾರತದಲ್ಲೇ ಮೊದಲು!..'ಮೊಬೈಲ್ ಗೀಳು' ಬಿಡಿಸಲು ಆರೋಗ್ಯ ಕೇಂದ್ರ ಆರಂಭ!

ಮೊಬೈಲ್ ವ್ಯಸನ ಮತ್ತು ಪಬ್​ಜಿಯಂತಹ ಗೇಮ್ ಗೀಳಿಗೆ ಬಿದ್ದವರ ಜೀವನ ನರಕವಾಗುತ್ತಿದೆ. ಬಹುತೇಕರು ಡಿಪ್ರೆಶನ್​ಗೆ ಬಿದ್ದು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇದರಲ್ಲಿ ಮಕ್ಕಳ ಮತ್ತು ಯುವಕರ ಪಾಲೇ ಹೆಚ್ಚಿರುವುದರಿಂದ ಮೊಬೈಲ್ ಹಾನಿ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಇದಕ್ಕೆ ಚಿಕಿತ್ಯೆಯನ್ನು ನೀಡಬೇಕಾಗಿದೆ ಎಂದು ಮೊಬೈಲ್ ಗೀಳು ಬಿಡಿಸುವ ಖಾಸಗಿ ಆರೋಗ್ಯ ಕೇಂದ್ರದ ಡಾ.ಜಗದೀಪ್ ಪಾಲ್ ಭಾಟಿಯಾ ಅಭಿಪ್ರಾಯಪಟ್ಟಿದ್ದಾರೆ. ಅನೇಕ ಪಾಲಕರ ಒತ್ತಾಯದ ಹಿನ್ನೆಲೆಯಲ್ಲಿ ಈ ಕೇಂದ್ರ ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ.

ಮೊಬೈಲ್ ಗೀಳು ಬಿಡಿಸುವ ಸಲುವಾಗಿ ಮೊಬೈಲ್ ವರ್ಜನ ಕೇಂದ್ರಕ್ಕೆ ದಾಖಲಾಗುವವರನ್ನು ಮೊದಲು ಮೊಬೈಲ್​ ಮುಕ್ತ ವಾತಾವರಣದಲ್ಲಿಡಲಾಗುತ್ತದೆ. ನಂತರ ತಜ್ಞರಿಂದ ಕೌನ್ಸೆಲಿಂಗ್, ಮೊಬೈಲ್ ಫೋನ್​ನಿಂದಾಗುವ ಹಾನಿ ಬಗ್ಗೆ ಚಿತ್ರ ಸಮೇತ ಜಾಗೃತಿ ಮೂಡಿಸಲಾಗುತ್ತದೆ ಮತ್ತು ಪ್ರೀತಿ, ಸ್ನೇಹ, ಸಂಬಂಧಗಳ ಮೌಲ್ಯವನ್ನು ಅರ್ಥಮಾಡಿಸಿ ತಾವಾಗಿಯೇ ಚಟದಿಂದ ಹೊರಬರಲು ಪ್ರೇರೇಪಣೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮೊಬೈಲ್‌ನಿಂದ ಆಗುವಂತಹ ಸಮಸ್ಯೆಗಳ ಬಗ್ಗೆಯೂ ಅಹ ಅವರು ಎಚ್ಚರ ನೀಡಿದ್ದಾರೆ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮಕ್ಕಳು ಮತ್ತು ವಯಸ್ಕರು ಸಹ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಿವೆ ಹಲವು ವರದಿಗಳು. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಹಾಗಾಗಿ, ಈ ಬಗ್ಗೆ ಮಕ್ಕಳ ಮತ್ತು ಪೋಷಕರು ಎಚ್ಚರಿಕೆಯಿಂದ ಇರಬೇಕು.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡುವ ಮಕ್ಕಳ ನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಸಂಶೋಧನೆ ನಡೆಸಲಾಗಿದೆ.

ನರಗಳ ಬೆಳವಣಿಗೆಯಲ್ಲಿ ತೊಂದರೆ.

ನರಗಳ ಬೆಳವಣಿಗೆಯಲ್ಲಿ ತೊಂದರೆ.

ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ.

ದೃಷ್ಟಿ ದೋಷ, ಕ್ಯಾನ್ಸರ್ ಸಾಧ್ಯತೆ

ದೃಷ್ಟಿ ದೋಷ, ಕ್ಯಾನ್ಸರ್ ಸಾಧ್ಯತೆ

ನಿದ್ರಾ ಹೀನತೆ, ವಿಪರೀತ ಬೆನ್ನು ನೋವು, ಕತ್ತು ನೋವು ಮತ್ತು ಖಿನ್ನತೆಗಳ ಜೊತೆಗೆ ದೃಷ್ಟಿ ದೋಷ ಮತ್ತು ಕ್ಯಾನ್ಸರ್ ಅನ್ನು ಮೊಬೈಲ್ ತರಲಿದೆ. ವ್ಯಕ್ತಿಯು ಸಾವನ್ನು ತಲುಪುವಷ್ಟು ಮೊಬೈಲ್‌ ಗೀಳು ಬೆಳೆದುಬಿಟ್ಟಿದೆ. ಮಾನಸಿಕ ಮತ್ತು ದೈಹಿಕವಾಗಿ ಮಾನವನ ಚಹರೆಯನ್ನೇ ಈ ಮೊಬೈಲ್‌ ಗೀಳು ಬದಲಾಗಿದೆ ಎಂದು ಹಲವು ಸಂಶೋಧಕರು ಹೇಳಿದ್ದಾರೆ.

ಪೋಷಕರೇ ಕಾರಣ

ಪೋಷಕರೇ ಕಾರಣ

ಮಕ್ಕಳೊಂದಿಗೆ ಬೆರೆಯದೆ ಮೊಬೈಲ್​ನಲ್ಲಿ ಮುಳುಗಿ ಹೋಗುವ ಪಾಲಕರೇ ಮಕ್ಕಳ ಮೊಬೈಲ್ ಗೀಳಿಗೆ ಕಾರಣ. ಪ್ರೀತಿ, ಸ್ನೇಹ ಬಯಸುವ ಮಕ್ಕಳಿಗೆ ಅದು ಸಿಗದಿದ್ದಾಗ ಮೊಬೈಲ್ ಪ್ರಪಂಚದಲ್ಲಿ ತೃಪ್ತಿಪಟ್ಟುಕೊಳ್ಳುತ್ತಾರೆ.ಅನಿವಾರ್ಯತೆ ಇದ್ದಾಗಲಷ್ಟೇ ಮಕ್ಕಳಿಗೆ ಮೊಬೈಲ್ ಕೊಡಬೇಕು. ಹೆಚ್ಚೆಚ್ಚು ಇಂಟರ್ನೆಟ್ನೋಡಲು, ಗೇಮ್ ಆಡಲು ಅವಕಾಶ ಮಾಡಿಕೊಡಬಾರದು

ನೋಟಿಫಿಕೇಷನ್ಸ್ ಬಂದ್‌ ಮಾಡಿ

ನೋಟಿಫಿಕೇಷನ್ಸ್ ಬಂದ್‌ ಮಾಡಿ

ಪ್ರತಿಸಾರಿ ಮೊಬೈಲ್‌ ಟಿಂಗ್ ಎಂದಾಗಲೂ ತೆರೆದು ನೋಡುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇಂತಹ ನೋಟಿಫಿಕೇಷನ್‌ಗಳು ಮೊಬೈಲ್ ನೋಡುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಹಾಗಾಗಿ, ತೀರಾ ಅಗತ್ಯವಿರುವ ಸಂಗತಿಗಳನ್ನು ಬಿಟ್ಟು ಉಳಿದವುಗಳ ನೋಟಿಫಿಕೇಷನ್‌ಗಳನ್ನು ಡಿಆಕ್ಟಿವೇಟ್ ಮಾಡುವ ಮೂಲಕ ಮೊಬೈಲ್ ಅನ್ನು ನಿಯಂತ್ರಿಸಬಹುದು.

ಮಲಗಿದ್ದಾಗ ಫೋನ್‌ ಬೇಡ

ಮಲಗಿದ್ದಾಗ ಫೋನ್‌ ಬೇಡ

ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಇನ್‌ಸ್ಟಗ್ರಾಮ್‌ನಂತಹ ಜಾಲತಾಣಗಳಿಂದ ರಾತ್ರಿ ಮಲಗುವ ಮುನ್ನ ದುರವಿರಿ. ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಮೊಬೈಲ್‌ನಿಮದ ದೂರವಿರಿ. ನೀವು ಹಾಸಿಗೆಯಲ್ಲಿ ಕಳೆಯುವ ಸಮಯ, ಬೆಳಗ್ಗೆ ಏಳುವ ಮುನ್ನದ ಗಳಿಗೆಗಳು ನಿಮ್ಮ ಅತ್ಯಂತ ಖಾಸಗಿ ಕ್ಷಣಗಳು. ಅಂತಹ ಸಮಯವನ್ನು ಹಾಳುಮಾಡಿಕೊಳ್ಳಬೇಡಿ.

ನಿಮಗೆ ನೀವೇ ಟೈಮರ್

ನಿಮಗೆ ನೀವೇ ಟೈಮರ್

ಮೊಬೈಲ್‌ ತೆರೆಯುವಾಗ ಇಂತಿಷ್ಟೇ ಸಮಯ ಇದನ್ನು ನೋಡುತ್ತೇನೆ ಎಂಬ ಸಮಯಮಿತಿಯನ್ನು ಹಾಕಿಕೊಳ್ಳಿ. ಆದರೆ ನೋಡುತ್ತಾ ಹೋದರೆ ಸಮಯ ದಾಟಿದ್ದೇ ತಿಳಿಯುವುದಿಲ್ಲ. ಅದಕ್ಕೇ ನೀವು ಅಂದುಕೊಂಡ ಸಮಯಕ್ಕೆ ಅಲಾರ್ಮ್ ಸೆಟ್‌ ಮಾಡಿಕೊಳ್ಳಿ. ಅದು ಸೂಚನೆ ನೀಡಿದ ಕೂಡಲೇ ನಿರ್ದಾಕ್ಷಿಣ್ಯವಾಗಿ ಮೊಬೈಲ್‌ ಅನ್ನು ಬದಿಗಿಡಿ.

ನಿರ್ದಿಷ್ಟ ಉದ್ದೇಶ ಇರಲಿ!

ನಿರ್ದಿಷ್ಟ ಉದ್ದೇಶ ಇರಲಿ!

ಒಂದು ಬಾರಿ ಮೊಬೈಲ್‌ ತೆರೆದಾಗ ಒಂದು ಕೆಲಸವನ್ನು ಮಾತ್ರ ಮಾಡುತ್ತೇನೆ ಎಂದು ನಿರ್ಧರಿಸಿ. ನಿರ್ದಿಷ್ಟ ಉದ್ದೇಶ ಈಡೇರಿದ ಬಳಿಕ ನಿಮ್ಮ ಫೋನ್‌ ಕೆಳಗಿಡಿ. ಒಮ್ಮೆ ಬಳಸಿದ ನಂತರ ಆಪ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿ. ಕಿರಿಕಿರಿ ಆಗುತ್ತಿದೆ ಎನಿಸಿದ ಆಪ್‌ಗಳನ್ನು ಹೈಡ್ ಮಾಡಿ ಅಥವಾ ಡಿಲೀಟ್ ಮಾಡಿದರೂ ತೊಂದರೆ ಏನಿಲ್ಲ.

ಸೋಶಿಯಲ್ ಸೈಟ್‌ ಏಕೆ?

ಸೋಶಿಯಲ್ ಸೈಟ್‌ ಏಕೆ?

ಒಂದು ತಿಂಗಳು ಅಥವಾ ವರ್ಷವೇ ಟ್ವಿಟ್ಟರ್‌, ಫೇಸ್‌ಬುಕ್‌ನಿಂದ ಆಚೆಗೆ ಇದ್ದರೆ ಆಕಾಶವೇನೂ ಮುಳುಗಿಹೋಗುವುದಿಲ್ಲ.ಬದಲಿಗೆ ನಿಮ್ಮ ಪಾಲಿಗೆ ಓದಲು, ಚಿಂತಿಸಲು ಕ್ವಾಲಿಟಿ ಟೈಮ್‌ ಉಳಿಯುತ್ತದೆ. ಕೆಲವು ಸೋಶಿಯಲ್ ಸೈಟ್‌ಗಳಿಂದ ಆಗಾಗ ಹೊರಗೆ ಹೋಗುವುದು, ಕೆಲವು ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.

ಆಪ್‌ಗಳನ್ನು ಹೈಡ್ ಮಾಡಿ

ಆಪ್‌ಗಳನ್ನು ಹೈಡ್ ಮಾಡಿ

ಇದು ಒಂದು ವಿಶೇಷ ತಂತ್ರವಾಗಿದ್ದು, ನೀವು ಮೊಬೈಲ್‌ ತೆರೆದು ನೋಡಿ ಯಾವುದೇ ಆಪ್‌ ನೋಡಿದರು ಮನಸ್ಸು ಸಲೀಸಾಗಿ ಅದರ ಹತ್ತಿರ ವಾಲುತ್ತದೆ. ನೀವು ಮೊಬೈಲ್ ಅನ್ನು ತೆಗೆದಾಗ ಪ್ರತಿಯೊಂದು ಆಪ್ ಅನ್ನು ಚೆಕ್ ಮಾಡುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ, ಹೆಚ್ಚು ಸೆಳೆಯುವಂತಹ ಆಪ್‌ಗಳಿಗಳನ್ನು ಹೈಡ್ ಮಾಡಿಡುವುದು ಒಳ್ಳೆಯದು.

Most Read Articles
Best Mobiles in India

English summary
A hospital in Punjab opened a mobile de-addiction centre in Amritsar.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more