ಸೋಶಿಯಲ್‌ ಮೀಡಿಯಾದ ಹಾಟ್‌ ಜಾಬ್‌ಗಳು

Posted By:

ಸೋಶಿಯಲ್‌ ಮೀಡಿಯಾಗಳ ಬಂದ ಮೇಲೆ ನಮ್ಮ ಮೇಲೆ ಭಾರೀ ಪ್ರಭಾವ ಬೀರಿದೆ. ವೇಗದ ಸಂವಹನ ಮಾಧ್ಯಮವಾಗಿಯೂ ಇದು ಕೆಲಸ ಮಾಡುತ್ತಿದೆ. ಇಷ್ಟೇ ಅಲ್ಲದೇ ಸೋಶಿಯಲ್‌ ಮೀಡಿಯಾವನ್ನು ಸಮರ್ಪಕವಾಗಿ ಬಳಸಿ ಉದ್ಯೋಗ ಸಿಗುವುದರ ಜೊತೆಗೆ ಸೋಶಿಯಲ್‌ ಮೀಡಿಯಾ ಕಂಪೆನಿಗಳಲ್ಲಿ ಈಗ ಉದ್ಯೋಗಾವಕಾಶ ಸೃಷ್ಠಿಯಾಗಿದೆ.

ಹೀಗಾಗಿ ಗಿಝ್‌ಬಾಟ್‌ ಹೊಸದಾಗಿ ರೂಪುಗೊಂಡ ಸೋಶಿಯಲ್‌ ಮೀಡಿಯಾ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ತಂದಿದೆ. ಯಾವ ಹುದ್ದೆ? ಈ ಹುದ್ದೆ ಪಡೆಯಲು ಏನೆಲ್ಲ ಆರ್ಹ‌ತೆ ಹೊಂದಿರಬೇಕು ಮತ್ತು ಆರಂಭಿಕ ಸಂಬಳ ಎಷ್ಟು ಎನ್ನುವ ವಿವರ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Search Engine Optimisation | Marketing

Search Engine Optimisation | Marketing

ಸೋಶಿಯಲ್‌ ಮೀಡಿಯಾದ ಹಾಟ್‌ ಜಾಬ್‌ಗಳು

ವೆಬ್‌ಸೈಟ್‌ ಟೆಕ್ನಿಕಲ್‌ ಆಗಿ ಯಾವ ರೀತಿ ಬದಲಾಗಬೇಕು ಮತ್ತು ವೆಬ್‌ಸೈಟ್‌ ಕಡಿಮೆ ಸಮಯದಲ್ಲಿ ಹೆಚ್ಚು ಜನರನ್ನು ಆಕರ್ಷಿ‌ಸಲು ಯಾವೆಲ್ಲ ತಂತ್ರ ಅನುಸರಿಸಬೇಕು ಎನ್ನುವ ಸಲಹೆ ಸೂಚನೆಗಳನ್ನು ಈ ಹುದ್ದೆಯಲ್ಲಿರುವವರು ನೀಡಬೇಕಾಗುತ್ತದೆ.

ಆರ್ಹ‌ತೆ: ಎಂಬಿಎ ಮಾರ್ಕೆಂಟಿಗ್‌ ಜೊತಗೆ ಆನ್‌ಲೈನ್‌ ಮೀಡಿಯಾದ ಪರಿಣಿತಿ

ಸಂಬಳ: 10 ಲಕ್ಷದಿಂದ ಆರಂಭ

Social Media Specialist | Strategist

Social Media Specialist | Strategist

ಸೋಶಿಯಲ್‌ ಮೀಡಿಯಾದ ಹಾಟ್‌ ಜಾಬ್‌ಗಳು

ಕಂಪೆನಿಯ ಸೋಶಿಯಲ್‌ ಮೀಡಿಯಾಕ್ಕೆ ಹೊಸ ಹೊಸ ಆಯ್ಕೆಗಳನ್ನು ರೂಪಿಸಿ ಸಲಹೆ ನೀಡಿ, ಬಳಕೆದಾರ ಸ್ನೇಹಿಯಾಗಿ ಆ ಸೋಶಿಯಲ್‌ ಮೀಡಿಯಾವನ್ನು ಬದಲಾಯಿಸುವ ಹೊಣೆ ಈ ಹುದ್ದೆಯಲ್ಲಿದ್ದವರ ಮೇಲಿರುತ್ತದೆ

ಆರ್ಹ‌ತೆ: ಎಂಬಿಎ ಮಾರ್ಕೆ‌ಟಿಂಗ್‌, ಸಮೂಹ ಸಂವಹನದಲ್ಲಿ ಸ್ನಾತಕೊತ್ತರ ಪದವಿ, ಜೊತಗೆ ತಂತ್ರಜ್ಞಾನದ ಬಗ್ಗೆ ಮಾಹಿತಿ ತಿಳಿದಿರಬೇಕು

ಸಂಬಳ: 25 ಲಕ್ಷದಿಂದ ಆರಂಭ

Mobile Application Developer

Mobile Application Developer

ಸೋಶಿಯಲ್‌ ಮೀಡಿಯಾದ ಹಾಟ್‌ ಜಾಬ್‌ಗಳು

ಸೋಶಿಯಲ್‌ ಮೀಡಿಯಾಕ್ಕೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್‌ ತಯಾರಿಸುವುದು
ಆರ್ಹ‌ತೆ : ಸಾಫ್ಟ್‌ವೇರ್‌ ಎಂಜಿನಿಯರ್‌
ಸಂಬಳ : 20 ಲಕ್ಷದಿಂದ ಆರಂಭ

Digital Campaigns Manager

Digital Campaigns Manager

ಸೋಶಿಯಲ್‌ ಮೀಡಿಯಾದ ಹಾಟ್‌ ಜಾಬ್‌ಗಳು

ಸೈಟ್‌ಗೆ ಭೇಟಿ ನೀಡುವ ಗ್ರಾಹಕರ ನಡವಳಿಕೆಯನ್ನು ತಿಳಿಯುವ ಹೊಣೆ ಮತ್ತು ಆನ್‌ಲೈನ್‌ಲ್ಲಿ ವೆಬ್‌ಸೈಟ್‌ ಪ್ರಚಾರ ಮಾಡುವ ಜವಾಬ್ದಾರಿಯನ್ನು ಹುದ್ದೆಯಲ್ಲಿದ್ದವರು ನಿಭಾಯಿಸಬೇಕಾಗುತ್ತದೆ.

ಆರ್ಹ‌ತೆ : ಪ್ರಾಯೋಗಿಕ ಮನಶಾಸ್ತ್ರದಲ್ಲಿಎಂ ಎಸ್‌ ಅಧ್ಯಯನದ ಜೊತೆಗೆ, ಸೋಶಿಯಲ್‌ ಮೀಡಿಯಾದ ಬಗ್ಗೆ ಆಳವಾದ ಅಧ್ಯಯನ ಮಾಡಿರಬೇಕು

ಸಂಬಳ: 15 ಲಕ್ಷ ದಿಂದ ಆರಂಭ

User Experience Specialist

User Experience Specialist

ಸೋಶಿಯಲ್‌ ಮೀಡಿಯಾದ ಹಾಟ್‌ ಜಾಬ್‌ಗಳು

ವೆಬ್‌ಸೈಟ್‌‌ನ್ನು ಬಳಕೆದಾರ ಸ್ನೇಹಿ ವೆಬ್‌ಸೈಟ್‌‌ ಆಗಿ ರೂಪಿಸುವುದರ ಜೊತಗೆ ನೋಡಲು ಆಕರ್ಷ‌ಕ ಕಾಣುವಂತೆ ವೆಬ್‌ಸೈಟ್‌ ವಿನ್ಯಾಸ ಮಾಡುವ ಜವಾಬ್ದಾರಿ ಈ ಹುದ್ದೆಯಲ್ಲಿದ್ದವರ ಮೇಲಿರುತ್ತದೆ.

ಆರ್ಹ‌ತೆ: ಎಂಬಿಎ, ಸೋಶಿಯಲ್‌ ಮೀಡಿಯಾದ ಬಗ್ಗೆ ಜ್ಞಾನ,ಬಳಕೆದಾರನ ಸೆಂಟಿಮೆಂಟ್‌ಗಳನ್ನು ಅಧ್ಯಯನ ಮಾಡಿರಬೇಕು

ಸಂಬಳ: 30 ಲಕ್ಷ

Social Business Analytics

Social Business Analytics

ಸೋಶಿಯಲ್‌ ಮೀಡಿಯಾದ ಹಾಟ್‌ ಜಾಬ್‌ಗಳು

ಬೇರೆ ಸೋಶಿಯಲ್‌ ಮೀಡಿಯಾವನ್ನು ನೋಡಿ ಅದನ್ನು ವಿಶ್ಲೇಷಿಸಿ, ಅದಕ್ಕಿಂತಲೂ ಉತ್ತಮವಾದ ವಿಶೇಷತೆಗಳ ಬಗ್ಗೆ ಸಲಹೆ,ಜೊತೆಗೆ ಕಂಪೆನಿಯ ವೆಬ್‌ಸೈಟ್‌ನ್ನು ಸಂಪೂರ್ಣ‌ವಾಗಿ ಪರೀಕ್ಷಿಸುವ ಹೊಣೆ ಈ ಹುದ್ದೆಯಲ್ಲಿದ್ದವರ ಮೇಲಿರುತ್ತದೆ.

ಆರ್ಹ‌ತೆ: ಎಂಬಿಎ ಪದವಿ ಜೊತೆಗೆ ಉತ್ತಮ ವಿಶ್ಲೇಷಣೆ ಮಾಡುವ ಸಾಮರ್ಥ್ಯ‌
ಸಂಬಳ: 8 ಲಕ್ಷದಿಂದ ಆರಂಭ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot