ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ ನೀಡಿದ 'ಹಾಟ್‌ಸ್ಟಾರ್'!

|

ಬಹುತೇಕ ಕ್ರೀಡಾ ಪ್ರಸಾರದ ಹಕ್ಕು ಒಡೆತನಗಳನ್ನು ಹೊಂದಿರುವ ಆನ್‌ಲೈನ್ ಸ್ಟ್ರೀಮಿಂಗ್ ಜಾಲತಾಣ ಹಾಟ್‌ಸ್ಟಾರ್‌ ಭರ್ಜರಿ ಕೊಡುಗೆ ನೀಡಿದೆ. ಇನ್ನೇನು ಐಪಿಎಲ್ ಮತ್ತು ಕ್ರಿಕೆಟ್ ವರ್ಲ್ಡ್ ಕಪ್ ಶುರುವಾಗಲಿದ್ದು, ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ತಂದಿದೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿಯಾಗಿದೆ.

ಹೌದು, ಕಳೆದ ವರ್ಷ ಆನ್‌ಲೈನಿನಲ್ಲಿ ಸುಮಾರು 202 ಮಿಲಿಯನ್ ಜನರು ಐಪಿಎಲ್ ಪಂದ್ಯಗಳಲ್ಲಿ ವೀಕ್ಷಿಸಿದ್ದ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಹಾಟ್‌ಸ್ಟಾರ್, ಈ ಬಾರಿ ವಿಐಪಿ ಚಂದಾದಾರಿಕೆ ತಂದಿದೆ. ಈ ವಿಐಪಿ ಚಂದಾದಾರಿಕೆ ಮೂಲಕ ಪ್ರತಿದಿನ ಕೇವಲ ಒಂದು ರೂಪಾಯಿಗೆ ಚಂದಾದಾರಿಕೆ ನೀಡಿ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡಿದೆ.

ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ ನೀಡಿದ 'ಹಾಟ್‌ಸ್ಟಾರ್'!

ಹಾಟ್‌ಸ್ಟಾರ್ ವಿಐಪಿ ಎಂಬ ಹೊಸ ಚಂದಾದಾರಿಕೆ ಯೋಜನೆ ಇದೀಗ ವಾರ್ಷಿಕ ಕೇರವಲ 365 ರೂ.ಗಳಿಗೆ ಲಭ್ಯವಿದ್ದು, ಈ ಯೋಜನೆಗೆ ಚಂದಾದಾರಿಕೆ ಪಡೆದರೆ ವರ್ಷವೆಲ್ಲವೂ ಲೈವ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಎಲ್ಲ ಬಳಕೆದಾರರನ್ನು ಅನುಮತಿಸುತ್ತದೆ. ಈ ಮೊದಲು 299 ರೂಪಾಯಿಗಳಿಗೆ ಪ್ರತಿ ತಿಂಗಳು ಮಾತ್ರ ಚಂದಾದಾರಿಕೆ ನೀಡಿದ್ದ ಹಾಟ್‌ಸ್ಟಾರ್ ಇದೀಗ ಬದಲಾಗಿದೆ.

ಪೇ-ಬೈ-ಕ್ಯಾಶ್ ಆಯ್ಕೆಯನ್ನು ಬಳಸಿಕೊಂಡು, ಬಳಕೆದಾರರು ತಕ್ಷಣವೇ ವಿಐಪಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಾಟ್‌ಸ್ಟಾರ್ ತಿಳಿಸಿದ್ದು, ಇನ್ನು ಈಗಾಗಲೇ ಹಾಟ್‌ಸ್ಟಾರ್‌ನ ಎಲ್ಲ ವಾರ್ಷಿಕ ಕ್ರೀಡಾ ಯೋಜನೆ ಚಂದಾದಾರಿಕೆಯನ್ನು ಹೊಂದಿರುವ ಗ್ರಾಹಕರು, ಹಾಟ್‌ಸ್ಟಾರ್‌ನ ಹೊಸ ವಿಐಪಿ ಯೋಜನೆಗೆ ಹೆಚ್ಚುವರಿ ಶುಲ್ಕವಿಲ್ಲದೆ ನವೀಕರಿಸಲಾಗುತ್ತಿದೆ.

ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ ನೀಡಿದ 'ಹಾಟ್‌ಸ್ಟಾರ್'!

ಬಹುತೇಕ ಕ್ರಿಕೆಟ್ ಪ್ರೇಮಿಗಳು ಜಿಯೋ ಮೂಲಕ ಉಚಿತವಾಗಿ ಲೈವ್ ವೀಕ್ಷಣೆ ಮಾಡುತ್ತಿರುವುದಕ್ಕೆ ಹಾಟ್‌ಸ್ಟಾರ್ ಈ ರೀತಿ ಬದಲಾವಣೆ ತಂದಿದೆ ಎನ್ನಲಾಗಿದೆ. ಹಾಗಾಗಿಯೇ, ಹಾಟ್‌ಸ್ಟಾರ್ ಕೇವಲ ಕ್ರೀಡಾ ಚಂದಾದಾರಿಕೆಯನ್ನು ಮಾತ್ರ ಕಡಿಮೆ ಬೆಲೆಗೆ ನೀಡಿದೆ. ಆದರೂ, ಜನರು ಅಂತಿಮವಾಗಿ ತಮ್ಮ ವಿಷಯವನ್ನು ಆಯ್ದುಕೊಳ್ಳಬಹುದು ಎಂದು ಹಾಟ್‌ಸ್ಟಾರ್ ಅರಿತುಕೊಂಡಿದೆ.

Most Read Articles
Best Mobiles in India

Read more about:
English summary
Hotstar new VIP subscription plan for Rs 365 a year offers live matches. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X