ಡಿಸ್ನಿ ಪ್ಲಸ್‌ಗಾಗಿ ತನ್ನ ಲೋಗೊ ಬದಲಾಯಿಸಿದ ಹಾಟ್‌ಸ್ಟಾರ್!
ಇತ್ತೀಚಿನ ದಿನಗಳಲ್ಲಿ ವಿಡಿಯೋ ಸ್ಟ್ರೀಮಿಂಗ್ ಸೇವೆ ನೀಡುವ ಆಪ್‌ಗಳು ಭಾರಿ ಜನಪ್ರಿಯತೆಯನ್ನ ಪಡೆದುಕೊಳ್ಳುತ್ತಿವೆ. ಅದರಲ್ಲೂ ಈ ಆಪ್‌ಗಳಲ್ಲಿ ನೀವು ನೋಡಬೇಕಿನಿಸಿರುವ ಹಾಗೂ ಈಗಾಗ್ಲೇ ಪ್ರಸಾರವಾಗಿರುವ ಕಾರ್ಯಕ್ರಮವನ್ನು ಸಹ ಮತ್ತೆ ನೋಡುವ ಅವಕಾಶ ಈ ಮಾದರಿಯ ಆಪ್‌ಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಹಾಟ್‌ಸ್ಟಾರ್ ಆಪ್ಲಿಕೇಶನ್ ಕೂಡ ಒಂದು. ಡಿಸ್ನಿ ಪ್ಲಸ್ ಅಂಗ ಸಂಸ್ಥೆಯಾದ ಹಾಟ್‌ಸ್ಟಾರ್ ಭಾರತದಲ್ಲಿ ಯಶಸ್ವಿಯಾಗಿದ್ದು, ಇದೀಗ ತನ್ನ ಲೋಗೊವನ್ನ ಬದಲಾವಣೆ ಮಾಡಿಕೊಂಡಿದೆ.

ಹೌದು, ವಿಡಿಯೋ ಸ್ಟ್ರೀಮಿಂಗ್ ಸೇವೆ ನೀಡುವ ಹಾಟ್‌ಸ್ಟಾರ್ ಆಪ್ ಇದೀಗ ತನ್ನ ಮೂಲ ಲೋಗೊ ಹಾಗೂ ಥೀಮ್ ಕಲರ್ ಅನ್ನು ಬದಲಾಯಿಸಿಕೊಂಡಿದೆ. ಇನ್ನು ಹಾಟ್‌ಸ್ಟಾರ್ ಆಪ್ಲಿಕೇಶನ್ ಅಮೆರಿಕಾದ ಡಿಸ್ನಿ ಪ್ಲಸ್ ಕಂಪೆನಿಯ ಅಂಗ ಸಂಸ್ಥೆಯಾಗಿದ್ದು, ಇದೀಗ ಡಿಸ್ನಿ ಪ್ಲಸ್ ಕೂಡ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಲು ವೇದಿಕೆ ಸಿದ್ಧವಾಗಿದೆ. ಹಾಟ್‌ಸ್ಟಾರ್ ಇನ್ಮುಂದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆಗಿ ಬದಲಾಗಲಿದೆ. ಇದರ ಮುನ್ಸೂಚನೆ ಆಗಿ ಇದೀಗ ಹಾಟ್‌ಸ್ಟಾರ್ ತನ್ನ ಲೋಗೊ ಬದಲಾಯಿಸಿಕೊಂಡಿದೆ. ಹಾಗಾದ್ರೆ ಇದರ ವಿನ್ಯಾಸ ಹಾಗೂ ಕಾರ್ಯಚರಣೆಯಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಹಾಟ್‌ಸ್ಟಾರ್
ವೀಡಿಯೊ ಸ್ಟ್ರೀಮಿಂಗ್ ಸೇವೆ ನೀಡುವ ಆಂಡ್ರಾಯ್ಡ್ ಅಪ್ಲಿಕೇಶನ್ ಹಾಟ್‌ಸ್ಟಾರ್ ತನ್ನ ಹೊಚ್ಚ ಹೊಸ ಲೋಗೊವನ್ನು ಹೊರತಂದಿದೆ. ಹಾಟ್‌ಸ್ಟಾರ್ ಡಿಸ್ನಿ ಪ್ಲಸ್ ಆಗಿ ಬದಲಾಗುತ್ತಿರುವುದರ ಸೂಚಕವಾಗಿ ಹೊಸ ಥೀಮ್ ಒಳಗೊಂಡ ಸ್ಪ್ಲಾಶ್ ಡಿಸ್‌ಪ್ಲೇ ಸ್ಕ್ರೀನ್ ಅನ್ನು ಹೊರತಂದಿದೆ. ಸದ್ಯ ಇದೀಗ ಹೊಸ ವಿನ್ಯಾಸ ಮತ್ತು ಸ್ಪ್ಲಾಶ್ ಪರದೆಯನ್ನು ನೋಡಿದರೆ, ಕಂಪನಿಯು ಕಪ್ಪು ಮತ್ತು ಹಸಿರು ಥೀಮ್‌ನಿಂದ ನೀಲಿ ಬಣ್ಣದ ಇಶ್ ಥೀಮ್‌ಗೆ ಬದಲಾಗಿದೆ.

ಹೊಸ ಲೋಗೊ ಹಾಗೂ ಬದಲಾವಣೆ
ಇನ್ನು ಹಾಟ್‌ಸ್ಟಾರ್ ತನ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಲೋಗೋ ಅಪ್ಡೇಟ್ ಮಾಡುವುದಕ್ಕೆ ಮೂಲ ಕಾರಣ ಡಿಸ್ನಿ ಪ್ಲಸ್ ಭಾರತದಲ್ಲಿ ಪ್ರಾರಂಭವಾಗುತ್ತಿರೋದು. ಈಗಾಗ್ಲೇ ಡಿಸ್ನಿ ಪ್ಲಸ್ ಭಾರತದಲ್ಲಿ ಇದೇ ಮಾರ್ಚ್ 28 ರಿಂದ ತನ್ನ ಕಾರ್ಯವನ್ನ ಶುರುಮಾಡಲಿದೆ. ಈಗಾಗ್ಲೆ ತನ್ನ ಅಂಗಸಂಸ್ಥೆ ಹಾಟ್‌ಸ್ಟಾರ್ ಭಾರತದಲ್ಲಿ ಸ್ಟಾರ್‌ಇಂಡಿಯಾ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ಸೇವೆಗಳನ್ನ ನೀಡುತ್ತಿದೆ. ಈ ನಡುವೆ ಡಿಸ್ನಿ ಪ್ಲಸ್ ಪ್ರತ್ಯೇಕವಾಗಿ ತನ್ನ ಸೇವೆ ಪ್ರಾರಂಭಿಸುವುದು ಉತ್ತಮವಲ್ಲವೆಂದು ಕಂಪೆನಿ ನಿರ್ಧರಿಸಿದೆ. ಹೀಗಾಗಿ ಇಷ್ಟು ದಿನ ಇದ್ದ ಹಾಟ್‌ಸ್ಟಾರ್ ಮುಂದಿನ ದಿನಗಳಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆಗಿ ಬದಲಾಗಲಿದೆ.

ಡಿಸ್ನಿ ಪ್ಲಸ್ ಮತ್ತು ಹಾಟ್‌ಸ್ಟಾರ್ ಸೇವೆಗಳು
ಸದ್ಯ ಹಾಟ್‌ಸ್ಟಾರ್ ಹಾಗೂ ಸ್ಟಾರ್ ಇಂಡಿಯಾದ ವಿಡಿಯೋ ಸ್ಟ್ರೀಮಿಂಗ್ ಸೇವೆಯನ್ನ ಇನ್ನಷ್ಟು ವಿಸ್ತರಿಸಲು ಡಿಸ್ನಿಪ್ಲಸ್ ಎಂಟ್ರಿಯಾಗುತ್ತಿದೆ. ಹಾಗೇ ನೋಡಿದರೆ ಜಾಗತಿಕವಾಗಿ ಡಿಸ್ನಿಪ್ಲಸ್ ಆಪ್ ಪ್ರಸಿದ್ಧಿಯನ್ನ ಪಡೆದಿದ್ದು, ಮನರಂಜನೆ, ಕ್ರೀಡೆ, ನ್ಯೂಸ್, ಸೇರಿದಂತೆ ಎಲ್ಲಾ ವಲಯಗಳನ್ನ ವಿಡಿಯೋಗಳನ್ನ ವೀಕ್ಷಿಸುವುದಕ್ಕೆ ಅವಕಾಶವನ್ನ ನೀಡಿದೆ. ಹಾಗೇಯೆ ಹಾಟ್‌ಸ್ಟಾರ್‌ನಲ್ಲಿಯೂ ಕೂಡ ಈ ಸೇವೆ ಮುಂದುವರೆದಿದೆ. ಇದೀಗ ಇದನ್ನ ಇನ್ನಷ್ಟು ಬ್ರ್ಯಾಂಡ್ ಮಾಡುವುದಕ್ಕೆ ಡಿಸ್ನಿ ಪ್ಲಸ್ ಮುಂದಾಗಿದೆ.

ವಿಶೇಷತೆ
ಇನ್ನು ಹಾಟ್‌ಸ್ಟಾರ್ ತನ್ನ ಕಪ್ಪು ಹಾಗೂ ಹಸಿರು ಬಣ್ಣದ ಥೀಮ್‌ನಿಂದ ಹೊರಬಂದು ನೀಲಿ ಬಣ್ಣದ ಥೀಮ್‌ಗೆ ಬದಲಾಗಿದೆ. ಈ ಮೂಲಕ ಡಿಸ್ನಿ ಪ್ಲಸ್ ಆಪ್ ಭಾರತಕ್ಕೆ ಪ್ರವೇಶಿಸುತ್ತಿರೋದ್ರ ಸೂಚನೆಯನ್ನ ನೀಡಿದೆ. ಹಾಟ್‌ಸ್ಟಾರ್ ಇನ್ಮುಂದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆಗಿ ಬದಲಾಗಲಿದೆ. ಜೊತೆಗೆ ಇಷ್ಟು ದಿನ ಹಾಟ್‌ಸ್ಟಾರ್ ನೀಡುತ್ತಿದ್ದ ಸೇವೆಗಳಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಹಾಗೇಯೆ ಇವುಗಳ ಶುಲ್ಕ ಏನಿರಲಿದೆ ಅನ್ನೊದರ ಬಗ್ಗೆಯೂ ಇನ್ನಷ್ಟೇ ತಿಳಿಯಬೇಕಿದೆ. ಒಟ್ಟಾರೆ ಲೋಗೊ ಹಾಗೂ ಥೀಮ್ ಬದಲಾವಣೆ ಮೂಲಕ ಹಾಟ್‌ಸ್ಟಾರ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆಗಿ ಬದಲಾಗುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದೆ.


Click it and Unblock the Notifications








