ಹೌಸ್‌ಪಾರ್ಟಿ ಗೇಮ್‌ ಅಪ್ಲಿಕೇಶನ್‌ ಅನ್ನು ಬಳಸುವ ವಿಧಾನ ಹೇಗೆ!

|

ಕಳೆದ ಎರಡು ತಿಂಗಳಿನಿಂದ ಇಡೀ ಜಗತ್ತು ಕೋವಿಡ್‌-19ನಿಂದ ಬಳಲುತ್ತಿದೆ. ಚೀನಾದಲ್ಲಿ ಹುಟ್ಟಿ ಇಂದು ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳನ್ನ ಕಾಡುತ್ತಿರುವ ಕೊರೊನಾ ವೈರಸ್‌ ದಿನೇ ದಿನೇ ಮಾರಕವಾಗುತ್ತಿದೆ. ಸದ್ಯ ಇದಕ್ಕೆ ಭಾರತ ದೇಶವೂ ಕೂಡ ಹೊರತಾಗಿಲ್ಲ. ಹೆಚ್ಚು ಕಡಿಮೆ ಒಂದು ತಿಂಗಳಿನಿಂದ ಲಾಕ್‌ಡೌನ್‌ ಆಗಿದೆ. ಇದೇ ಕಾರಣಕ್ಕಾಗಿ ಎಲ್ಲವೂ ಬಂದ್‌ ಆಗಿದ್ದು, ಸದಾ ಉದ್ಯೋಗದ ಒತ್ತಡದಲ್ಲಿ ಕಾಲ ಕಳೆಯುತ್ತಿದ್ದವರೆಲ್ಲಾ ಇದೀಗ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಮನೆಯಲ್ಲಿದ್ದು ಕಾಲ ಕಳೆಯಲು ಹೊಸ ಮಾದರಿಯ ಅವಕಾಶಗಳನ್ನ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಲಾಕ್‌ಡೌನ್‌

ಹೌದು, ಸದ್ಯ ಲಾಕ್‌ಡೌನ್‌ ಇಕ್ಕಟ್ಟಿನಲ್ಲಿ ಸಿಲುಕಿರುವ ಬಹುತೇಕ ಜನರು ತಮ್ಮ ಸಮಯವನ್ನ ಕಳೆಯಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಟೆಕ್ನಾಲಜಿ ಆಧಾರಿತ ಗೇಮ್‌ ಆಪ್‌ಗಳು, ಮ್ಯೂಸಿಕ್‌ ಆಪ್‌ಗಳು, ವೀಡಿಯೊ ಆಪ್‌ಗಳ ಬಳಕೆ ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿದೆ. ಅಲ್ಲದೆ ವೈರಲ್‌ ವೀಡಿಯೋ ಆಪ್‌ಗಳ ಬಳಕೆ, ವೀಡಿಯೋ ಚಾಟ್‌ ಆಪ್‌ ಬಳಕೆ, ಆಡಿಯೋ ಆಪ್‌ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸದ್ಯ ಇದರಲ್ಲಿ ಹೌಸ್‌ಪಾರ್ಟಿ ಗೇಮ್‌ ಆಪ್ಲಿಕೇಶನ್‌ ಕೂಡ ಒಂದಾಗಿದೆ. ಕೊರೊನಾ ವೈರಸ್‌ನಿಂದ ಲಾಕ್‌ಡೌನ್‌ ಆದ ನಂತರ ದೇಶದಲ್ಲಿ ಹೌಸ್‌ಪಾರ್ಟಿ ಅಪ್ಲಿಕೇಶನ್‌ ಬಳಕೆ ಹೆಚ್ಚಾಗಿದೆ ಎನ್ನಲಾಗ್ತಿದೆ,. ಹಾಗಾದ್ರೆ ಹೌಸ್‌ಪಾರ್ಟಿ ಅಪ್ಲಿಕೇಶನ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಬನ್ನಿರಿ.

ಇದೀಗ

ಸದ್ಯ ಇದೀಗ ಹೆಚ್ಚಿನ ಜನರು ತಮ್ಮ ಮನೆಗಳಿಗೆ ಬೀಗ ಹಾಕಿರುವುದರಿಂದ, ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳನ್ನು ಭೇಟಿ ಮಾಡಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದರಲ್ಲಿ ಹೌಸ್‌ಪಾರ್ಟಿ ಎನ್ನುವುದು ಸಹ ಒಂದು ಅಪ್ಲಿಕೇಶನ್ ಆಗಿದೆ. ಇದು ಜನರನ್ನು ವಿಶಿಷ್ಟ ರೀತಿಯಲ್ಲಿ ಒಟ್ಟುಗೂಡಿಸುತ್ತದೆ. ಇದು ಗೇಮಿಂಗ್ ಆಪ್‌ ಆಗಿದ್ದು,ಬಹಳ ಮನರಂಜನಾತ್ಮಕವಾಗಿ ಕಾಲ ಕಳೆಯಲು ಅನುವು ಮಾಡಿಕೊಡಲಿದೆ. ಇನ್ನು ಹೌಸ್‌ಪಾರ್ಟಿ ಅಪ್ಲಿಕೇಶನ್ ಆಂಡ್ರಾಯ್ಡ್, ಐಒಎಸ್, ಕ್ರೋಮ್ ಓಎಸ್ ಮತ್ತು ಮ್ಯಾಕೋಸ್‌ನಲ್ಲಿ ಲಭ್ಯವಿದೆ. ಸದ್ಯ ಈ ಹೌಸ್‌ಪಾರ್ಟಿ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು ಮತ್ತು ಗೇಮ್‌ಗಳನ್ನ ಆಡುವುದು ಹೇಗೆ ಅನ್ನೊದರ ವಿವರ ಇಲ್ಲಿದೆ ಓದಿ.

ಹೌಸ್‌ಪಾರ್ಟಿ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು

ಹೌಸ್‌ಪಾರ್ಟಿ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೌಸ್‌ಪಾರ್ಟಿ್‌ ಅಪ್ಲಿಕೇಶನ್‌ ಹೊಂದಬೇಕಾದರೆ, ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಹೌಸ್‌ಪಾರ್ಟಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ಅಲ್ಲದೆ ನೀವು Chrome OS ಅಥವಾ macOS ನಂತಹ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ಗಳಲ್ಲಿದ್ದರೆ, ಆ ಪ್ಲಾಟ್‌ಫಾರ್ಮ್‌ಗಳಿಂದಲೂ ನೀವು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಬಹುದು.

ಹಂತ 2: ಇನ್ನು ನೀವು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ನಿಮ್ಮದೇ ಆದ ಖಾತೆಯನ್ನು ರಚಿಸಬೇಕು. ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ವೈಯಕ್ತಿಕ ಬಳಕೆದಾರ ಹೆಸರನ್ನು ಇಲ್ಲಿ ನೀವು ನಮೂದಿಸಬೇಕಾಗುತ್ತದೆ. ಅಲ್ಲದೆ ಇಲ್ಲಿ ನೀವು ನಿಮ್ಮ ಖಾತೆಯನ್ನು ರಚಿಸುವಾಗ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಬೇಕಾಗುತ್ತದೆ. ಇದನ್ನು ನಾಲ್ಕು ಅಂಕಿ ದೃಡೀಕರಣದ ಮೂಲಕ ಪ್ರಮಾಣೀಕರಿಸಬೇಕಾಗುತ್ತದೆ.

ಹಂತ 3: ನಂತರ ಈ ಅಪ್ಲಿಕೇಶನ್‌ ಹೊಂದಿಲ್ಲದ ನಿಮ್ಮ ಎಲ್ಲಾ ಸ್ನೇಹಿತರಿಗೆ ಅಪ್ಲಿಕೇಶನ್‌ ಬಲಸಲು ಶಶಿಫಾರಸು ಮಾಡಬೇಕು. ಅಲ್ಲದೆ ಸ್ನೇಹಿತರನ್ನು ಸ್ವಯಂಚಾಲಿತವಾಗಿ ಸೇರಿಸಲು ನಿಮ್ಮ ಸಂಪರ್ಕಗಳನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ನೀವು ಅನುಮತಿಸಬಹುದು. ಅಥವಾ ನೀವು ನಿಮ್ಮ ಸ್ನೇಹಿತರನ್ನು ಫೇಸ್‌ಬುಕ್ ಅಥವಾ ಸ್ನ್ಯಾಪ್‌ಚಾಟ್‌ನಿಂದ ಸಂಪರ್ಕಿಸಬಹುದು.

ಹಂತ 4: ಈ ಮೇಲಿನ ಹಂತಗಳು ಮುಗಿದ ನಂತರ ಹೌಸ್‌ಪಾರ್ಟಿಯನ್ನು ಪ್ರಾರಂಭಿಸಲು ಅಪ್ಲಿಕೇಶನ್‌ ಒಪನಿಂಗ್ ಸ್ಕ್ರೀನ್‌ ಮೇಲೆ ಸ್ವೈಪ್‌ ಮಾಡಿದರೆ ಸಾಕು. ಅಲ್ಲಿ ಇತ್ತೀಚಿಗೆ ಸೇರಿದ ನಿಮ್ಮ ಸ್ನೇಹಿತರ ಪಟ್ಟಿಯನ್ನ ತೋರಿಸುತ್ತದೆ. ಈ ಮೂಲಕ ನಿಮ್ಮ ಸ್ನೇಹಿತರನ್ನ ಒಮದೇ ವೇದಿಕೆಗೆ ನೀವು ತರಬಹುದು. ನಂತರ ನಿಮ್ಮ ಸ್ನಹಿತರಿಗೆ ಹೌಸ್‌ಪಾರ್ಟಿ ಆಪ್‌ ಮೂಲಕ ಕರೆ ಪ್ರಾರಂಭಿಸಲು ಫೋನ್ ಐಕಾನ್ ಟ್ಯಾಪ್ ಮಾಡಬೇಕಾಗುತ್ತದೆ. ಆಗ ನಿಮ್ಮ ಸ್ನೇಹಿತರಿಗೆ ನೊಟಿಫಿಕೇಶನ್‌ ತಲುಪಿರುತ್ತದೆ. ನೀವು ವೀಡಿಯೊ ಚಾಟ್ ಮಾಡಲು ಬಯಸುತ್ತೀರಿ ಎಂದು ನಿಮ್ಮ ಸ್ನೇಹಿತರಿಗೆ ತಿಳಿಸುತ್ತದೆ. ಇದರ ಮೂಲಕ ನೀವು ನಿರ್ದಿಷ್ಟ ಸಂಪರ್ಕಗಳನ್ನು ಹುಡುಕಬಹುದು ಮತ್ತು ಅವರೊಂದಿಗೆ ಚಾಟ್ ಮಾಡಬಹುದು.

ಗೇಮ್‌ ಆಡುವುದು ಹೇಗೆ

ಗೇಮ್‌ ಆಡುವುದು ಹೇಗೆ

ಹಂತ 1: ನೀವು ಹೌಸ್‌ಪಾರ್ಟಿಯಲ್ಲಿ ಆಟಗಳನ್ನು ಆಡಬಹುದು. ಅದಕ್ಕಾಗಿ, ನೀವು ಮೊದಲು ನಿಮ್ಮ ಸ್ನೇಹಿತರಿಗೆ ಕರೆಯನ್ನು ಮಾಡಬೇಕು, ಇಲ್ಲವೇ ಕರೆ ಮಾಡಿದ ಗುಂಪಿನ ಜೊತೆ ಕನೆಕ್ಟ ಆಗಬೇಕು. ನಂತರ ನೀವು ಕರೆ ಮಾಡಿದ ಸಮಯದಲ್ಲಿ ಆಟದ ಆಯ್ಕೆಗಳನ್ನು ನೋಡಲು ಮೂಲೆಯಲ್ಲಿರುವ ಡೈಸ್ ಐಕಾನ್ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಸ್ನೇಹಿತರೊಂದಿಗೆ ಆಟವಾಡಲು ಪ್ರಾರಂಭಿಸಲು ಹೆಡ್ಸ್ ಅಪ್, ಟ್ರಿವಿಯಾ, ಚಿಪ್ಸ್ ಮತ್ತು ಗ್ವಾಕ್ ಅಥವಾ ಇತರರನ್ನು ಆಯ್ಕೆಮಾಡಿ ಗೇಮ್‌ಗಳನ್ನ ಆಡಬಹುದಾಗಿದೆ.

ಇನ್ನು ಹೌಸ್‌ಪಾರ್ಟಿ ಬಳಕೆದಾರರ ಇಂಟರ್ಫೇಸ್ ಹೊಂದಿರುವ ಒಂದು ಅಪ್ಲಿಕೇಶನ್ ಆಗಿದೆ. ಆದಾಗ್ಯೂ, ಇದು ಗುಂಪು ಚಾಟ್‌ನಲ್ಲಿ 8 ಜನರಿಗೆ ಮಾತ್ರ ಸೀಮಿತವಾಗಿದೆ. ಆದರೆ ಒಂದೇ ಗುಂಪಿನ ಕರೆಯಲ್ಲಿ 12 ಜನರನ್ನು ಸೇರಿಸಲು ಗೂಗಲ್ ಡ್ಯುವೋ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಉನ್ನತ ಗುಣಮಟ್ಟದ ವೀಡಿಯೊ ಕರೆ ಅನುಭವ ಮತ್ತು ಉತ್ತಮ ಬಳಕೆದಾರ ಇಂಟರ್ಫೇಸ್ ಬಯಸುವವರಿಗೆ ಹೌಸ್‌ಪಾರ್ಟಿ ಸೂಕ್ತವಾಗಿದೆ. ಅದರ ಗೇಮಿಂಗ್ ಸೂಟ್‌ನೊಂದಿಗೆ, ಅಪ್ಲಿಕೇಶನ್ ಹೆಚ್ಚು ಉಪಯುಕ್ತ ಮತ್ತು ಕ್ರಿಯಾತ್ಮಕವಾಗುತ್ತದೆ.

Best Mobiles in India

English summary
Houseparty, like Zoom, has gone viral during the ongoing COVID-19 lockdown. Here is how you can get started with the app and even play games with your friends.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X