ಮೂವಿ ಟಿಕೆಟ್ ಕ್ಯಾನ್ಸಲ್ ಮಾಡಿ 40,000 ಕಳೆದುಕೊಂಡ ಮಹಿಳೆ
ಲಕ್ನೋದ ಜಾನಕೀಪುರಂ ನ ಮಹಿಳೆ ಆನ್ ಲೈನ್ ನಲ್ಲಿ ಮೂವಿ ಟಿಕೆಟ್ ಕ್ಯಾನ್ಸಲ್ ಮಾಡಿದ ನಂತರ ಮೋಸಗಾರರಿಗೆ ಬಲಿಯಾಗಿ 40,000 ರುಪಾಯಿಯನ್ನು ಕಳೆದುಕೊಂಡಿದ್ದಾರೆ. ಆಕೆ ಮೂವಿಗಾಗಿ ಪ್ರಸಿದ್ಧ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದರು ಮತ್ತು ನಂತರ ಕ್ಯಾನ್ಸಲ್ ಮಾಡಿ ರೀಫಂಡ್ ಗೆ ಕ್ಲೈಮ್ ಮಾಡಿದ್ದರು. ರೀಫಂಡ್ ಗಾಗಿ ಸಂಬಂಧಪಟ್ಟ ಗ್ರಾಹಕ ಸೇವಾ ಕೇಂದ್ರವೆಂದು ಹೇಳಲಾದ ಎಕ್ಸಿಕ್ಯೂಟೀವ್ ಬಗ್ಗೆ ಮತ್ತು ತನಗಾದ ಮೋಸದ ಬಗ್ಗೆ ಲಕ್ನೋ ಪೋಲೀಸ್ ಠಾಣೆಯ ಸೈಬರ್ ಸೆಲ್ ಗೆ ಮಹಿಳೆ ಇದೀಗ ದೂರು ನೀಡಿದ್ದಾರೆ.

ಇದೊಂದು ಫಿಶ್ಶಿಂಗ್ ಫ್ರಾಡ್ ಬಗ್ಗೆ ಇರುವ ಮತ್ತೊಂದು ಅಧ್ಬುತ ಉದಾಹರಣೆಯಾಗಿದೆ. ತನ್ನ ಹಣ ಕಳೆದುಕೊಳ್ಳುವವರೆಗೂ ಕೂಡ ಮಹಿಳೆಗೆ ತಾನು ಮೋಸ ಹೋಗುತ್ತಿದ್ದೇನೆ ಎಂಬುದು ಕರೆಯಲ್ಲಿ ತಿಳಿಯಲೇ ಇಲ್ಲ. ಆಕೆಯನ್ನು ಕೇವಲ ಒಂದು ಕರೆಯ ಮೂಲಕ ಮೋಸದ ಖೆಡ್ಡಾಕ್ಕೆ ಬೀಳಿಸಲಾಗಿದೆ. ಹಾಗಾದ್ರೆ ಹೇಗೆ ಆಕೆಯನ್ನು ಟ್ರ್ಯಾಕ್ ಮಾಡಿ ಮೋಸದ ಬಲೆಗೆ ಬೀಳಿಸಲಾಯಿತು ಎಂಬ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು. ಮುಂದೆ ಓದಿ.
ಆನ್ ಲೈನ್ ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದ ನಂತರ ಮಹಿಳೆಯು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದ್ದಾರೆ ಮತ್ತು ರೀಫಂಡ್ ಗಾಗಿ ಕೋರಿದ್ದಾರೆ
“ ನಾನು ನಿಗದಿತ ಸಮಯಕ್ಕಿಂತ ಮುಂಗಡವಾಗಿಯೇ ಟಿಕೆಟ್ ಕ್ಯಾನ್ಸಲ್ ಮಾಡಿದ್ದೇನೆ ಆದರೂ ಕೂಡ ನನ್ನ ಅಕೌಂಟಿಗೆ ಹಣವು ಮರುಪಾವತಿಯಾಗಿಲ್ಲ. ಹಾಗಾಗಿ ವೆಬ್ ಸೈಟ್ ಮೂಲಕ ತಿಳಿದು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದೆ. ಆ ಏಜೆಂಟ್ ನನ್ನನ್ನು ಮೋಸಗೊಳಿಸಿದ” ಎಂದು ಮಹಿಳೆ ಹೇಳಿದ್ದಾರೆ.
ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ನಿಂದ ಎಂದು ಹೇಳಿ ಆಕೆಗೆ ಒಂದು ಕರೆ ಬಂದಿದೆ. ಇದು ಮೋಸದ ಕರೆ ಎಂಬುದು ಆಕೆಗೆ ಅರಿವಿಲ್ಲ.
ಮಹಿಳೆಗೆ ಸಹಾಯ ಮಾಡುವಂತೆ ಕರೆಯಲ್ಲಿ ಏಜೆಂಟ್ ನಟಿಸಿದ್ದಾನೆ ಮತ್ತು ರೀಫಂಡ್ ಮಾಡುವುದಕ್ಕಾಗಿ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಕೇಳಿದ್ದಾರೆ.
ಕರೆ ಕಟ್ ಆಗುತ್ತಿದ್ದಂತೆಯೇ ಆಕೆಯ ಅಕೌಂಟಿನಿಂದ 40,000 ರುಪಾಯಿ ಡೆಬಿಟ್ ಆಗಿದೆ.
ಎಲ್ಲಾ ಫಿಶ್ಶಿಂಗ್ ಫ್ರಾಡ್ ಗಳಲ್ಲೂ ಕೂಡ ಯಾವುದಾದರೂ ಕಂಪೆನಿಯ ಹೆಸರು ಹೇಳಿಕೊಂಡೇ ಈ ಮೋಸಗಾರರು ಕರೆ ಮಾಡುತ್ತಾರೆ.
ಕರೆಯನ್ನು ನಿಜವಾದ ಕರೆ ಎಂಬಂತೆ ಭಾಸವಾಗುವ ದೃಷ್ಟಿಯಲ್ಲಿ ವ್ಯಕ್ತಿಯ ವಯಕ್ತಿಕ ಮಾಹಿತಗಳಾದ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಗಳನ್ನು ವೆರಿಫೈ ಮಾಡುತ್ತಿರುವವರಂತೆ ನಟಿಸುತ್ತಾರೆ.
ಇಂತಹ ಕರೆಗಳು ಹೆಚ್ಚಾಗಿ ಲ್ಯಾಂಡ್ ಲೈನ್ ನಂಬರ್ ಗಳಿಂದ ಬರುತ್ತದೆ.
ಸೇವೆಯ ಕೋರಿಕೆಯ ಆಧಾರದಲ್ಲಿ ಮೋಸಗಾರರು ನಿಮ್ಮ ಆನ್ ಲೈನ್ ಬ್ಯಾಂಕಿಂಗ್ ನ ಕಸ್ಟಮರ್ ಐಡಿ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿಯನ್ನು ಕೋರುತ್ತಾರೆ.
ಬ್ಯಾಂಕಿನ ಖಾತೆಯ ವಿವರಗಳನ್ನು ಕೂಡ ಕೇಳುತ್ತಾರೆ. ನೀವು ಯಾವ ರೀತಿಯ ಮನವಿಯನ್ನು ಮಾಡಿದ್ದೀರಿ ಎಂಬುದನ್ನು ಆಧರಿಸಿ ಅದರಂತೆಯೇ ನಟನೆ ಮಾಡುತ್ತಾರೆ.
ನಿಮ್ಮ ಫೋನಿಗೆ ಓಟಿಪಿ ಬಂದಿರುವುದನ್ನು ಹೇಳುವಂತೆ ಕೇಳುತ್ತಾರೆ. ಅದು ಸೇವೆಯನ್ನು ನೀಡಲು ನಿಮ್ಮನ್ನ ವೆರಿಫೈ ಮಾಡಲಾಗುತ್ತಿದೆ ಎಂಬುದಾಗಿ ನಿಮಗೆ ನಂಬಿಸುತ್ತಾರೆ.
ಒಟ್ಟಾರೆ ಕರೆಯು ನಿಮ್ಮ ಬ್ಯಾಂಕಿಂಗ್ ಅಕೌಂಟ್ ನ್ನು ಹೈಜಾಕ್ ಮಾಡಿ ಅಕೌಂಟಿನಲ್ಲಿರುವ ಎಲ್ಲಾ ಬ್ಯಾಂಕಿಂಗ್ ವಿವರಗಳನ್ನು ಕಲೆಹಾಕಿ ಹಣ ದೋಚುವ ಉದ್ದೇಶವನ್ನು ಹೊಂದಿರುತ್ತದೆ.


Click it and Unblock the Notifications








