ಆಧಾರ್ ಸೇವೆಗಳನ್ನು ಪಡೆಯಲು ಹೊಸ ಮೊಬೈಲ್ ನಂಬರ್ ಅಟ್ಯಾಚ್ ಮಾಡುವುದು ಹೇಗೆ?

|

ಆಧಾರ್ ಕಳೆದರೆ ಅಥವಾ ಆಧಾರ್ ಎಡಿಟ್ ಮಾಡಬೇಕಾದರೆ ಆಧಾರ್‌ಗೆ ಅಟ್ಯಾಚ್ ಆಗಿರುವ ಮೊಬೈಲ್ ನಂಬರ್ ಬಹುಮುಖ್ಯ. ಹಾಗೆಯೇ ಹಲವು ಸೇವೆಗೆಳನ್ನು ಆಧಾರ್‌ಗೆ ಅಟ್ಯಾಚ್ ಆಗಿರುವ ನಂಬರ್ ಮೂಲಕ ಪಡೆಯಬಹುದಾಗಿರುವುದರಿಂದ ಆಧಾರ್ ಕಾರ್ಡ್ ಮಾಡಿಸುವ ವೇಳೆ ನೀಡಿದ್ದ ಮೊಬೈಲ್ ನಂಬರ್ ಕಳೆದರೆ ಕಷ್ಟವೇ ಸರಿ.!!

ಹಾಗಾಗಿ, ಆಧಾರ್ ಕಾರ್ಡ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಈಗ ಉಪಯೋಗಿಸದಿದ್ದಲ್ಲಿ, ಅಥವಾ ಇನ್ಯಾವುದೇ ಕಾರಣಗಳಿಂದ ಹಳೆ ನಂಬರ್ ಬಳಕೆಯಲ್ಲಿ ಇಲ್ಲ ಎಂದರೆ ಆಧಾರ್‌ಕಾರ್ಡ್‌ಗೆ ಹೊಸ ಮೊಬೈಲ್ ನಂಬರ್ ಸೇರ್ಪಡೆ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಆಧಾರ್ ಸೇವೆಗಳನ್ನು ಪಡೆಯಲು ಹೊಸ ಮೊಬೈಲ್ ನಂಬರ್ ಅಟ್ಯಾಚ್ ಮಾಡುವುದು ಹೇಗೆ?

ಆಧಾರ್ ಕಾರ್ಡ್ ಮಾಡಿಸುವ ವೇಳೆ ನೀಡಿದ್ದ ಮೊಬೈಲ್ ನಂಬರ್ ಕಳೆದರೆ ಅಥವಾ ಆಧಾರ್ ಕಾರ್ಡ್ ಮಾಡಿಸುವ ವೇಳೆ ಮೊಬೈಲ್ ನಂಬರ್ ನೀಡದೇ ಇದ್ದರೆ ಏನು ಮಾಡುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪೂರ್ಣ ಮಾಹಿತಿಯೊಂದಿಗೆ ತಿಳಿಯಿರಿ.

ಆನ್‌ಲೈನ್‌ನಲ್ಲಿ ಸಾಧ್ಯವಿಲ್ಲ.!!

ಆನ್‌ಲೈನ್‌ನಲ್ಲಿ ಸಾಧ್ಯವಿಲ್ಲ.!!

ಆಧಾರ್ ಬಗೆಗಿನ ಬಹುತೇಕ ಮಾಹಿತಿಗಳನ್ನು ಆಧಾರ್ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಬಹುದಾಗಿದ್ದರೂ ಸಹ ಮೊಬೈಲ್ ನಂಬರ್ ಅನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ. ಹಾಗಾಗಿ, ನೀವು ಆಫ್‌ಲೈನಿನಲ್ಲಿಯೇ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಿಸಬೇಕು.!!

 ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ.

ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ.

ಆಧಾರ್‌ಕಾರ್ಡ್‌ಗೆ ಈಗಾಗಲೇ ನೋಂದಾಯಿಸಲ್ಪಟ್ಟ ಮೊಬೈಲ್ ನಂಬರ್ ಹಾಳಾಗಿದ್ದರೆ, ನೂತನ ಮೊಬೈಲ್ ನಂಬರ್ ಅಟ್ಯಾಚ್ ಮಾಡಿಸಲು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ. ನಂತರ ನಿಮ್ಮ ಆಧಾರ್ ನಂಬರ್ ಮತ್ತು ಹೊಸ ಮೊಬೈಲ್ ನಂಬರ್ ನೀಡಿ.

ಮೊಬೈಲ್ ನಂಬರ್ ಒಟಿಪಿ ಬರುತ್ತದೆ.

ಮೊಬೈಲ್ ನಂಬರ್ ಒಟಿಪಿ ಬರುತ್ತದೆ.

ಆಧಾರ್ ದಾಖಲಾತಿ ಕೇಂದ್ರದಲ್ಲಿ ಆಧಾರ್ ನಂಬರ್ ಮತ್ತು ಹೊಸ ಮೊಬೈಲ್ ನಂಬರ್ ನೀಡಿದ ನಂತರ ಅವರು ಪರಿಶೀಲನೆ ನೆಡಸುತ್ತಾರೆ. ನಂತರ ನಿಮ್ಮ ಹೊಸ ಮೊಬೈಲ್‌ ನಂಬರ್‌ ಅನ್ನು ನಿಮ್ಮ ಆಧಾರ್‌ ನಂಬರ್‌ಗೆ ಸೇರಿಸುತ್ತಾರೆ. ನಂತರ ನಿಮಗೆ ಒನ್ ಟೈಮ್ ಪಾಸ್‌ವರ್ಡ್ ಬರುತ್ತದೆ.!!

 ಬಯೋಮೆಟ್ರಿಕ್ ಸ್ಕ್ಯಾನ್ !

ಬಯೋಮೆಟ್ರಿಕ್ ಸ್ಕ್ಯಾನ್ !

ನಿಮ್ಮ ನೂತನ ಮೊಬೈಲ್‌ನಂಬರ್‌ಗೆ ಬಂದ ಒಟಿಪಿ ಪರಿಶೀಲನೆ ನಂತರ ಬಯೋಮೆಟ್ರಿಕ್ ಸ್ಕ್ಯಾನ್ ಮಾಡುತ್ತಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೊಸ ಮೊಬೈಲ್ ಸಂಖ್ಯೆಗೆ ಆಧಾರ್‌ಗೆ ಅಟ್ಯಾಚ್ ಆಗಿರುವ ಬಗ್ಗೆ ಎಸ್ಎಂಎಸ್ ಬರುತ್ತದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ನಂಬರ್ ಅಟ್ಯಾಚ್ ಆಗಿದೆ.!!

ನಂಬರ್ ಅಟ್ಯಾಚ್ ಆಗಿದೆ.!!

ಮೊಬೈಲ್ ಸಂಖ್ಯೆಗೆ ಆಧಾರ್‌ಗೆ ಅಟ್ಯಾಚ್ ಆಗಿರುವ ಬಗ್ಗೆ ಎಸ್ಎಂಎಸ್ ಬಂದ ನಂತರ 72 ಗಂಟೆಗಳ ಒಳಗೆ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗುತ್ತದೆ. ನಂತರ ನಿಮ್ಮ ಆಧಾರ್‌ ಸೇವೆಗಳ ಮಾಹಿತಿ ನಿಮ್ಮ ಹೊಸ ನಂಬರ್‌ಗೆ ಬಂದು ಸೇರಲಿದೆ.!!

ಕೇವಲ 7,999 ರೂ.ಗೆ 5000mAh ಬ್ಯಾಟರಿ ಫೋನ್ ''ಸ್ಮಾರ್ಟಾನ್ ಪಿಕೇವಲ 7,999 ರೂ.ಗೆ 5000mAh ಬ್ಯಾಟರಿ ಫೋನ್ ''ಸ್ಮಾರ್ಟಾನ್ ಪಿ"!!

Best Mobiles in India

English summary
If you want to register your mobile number to your Aadhaar Card then you need to follow the below mentioned steps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X