Home
ಸುದ್ದಿಜಾಲ

ಏರ್ ಟೆಲ್ ನ ಹೊಸ 398 ರುಪಾಯಿ ಪ್ಲಾನ್- ರಿಲಯನ್ಸ್ ಜಿಯೋ ಜೊತೆಗೆ ಸ್ಪರ್ಧೆ

By Gizbot Bureau

ಬೆಲೆ ಮತ್ತು ಡಾಟಾ ಯುದ್ಧವು ಟೆಲಿಕಾಂ ಇಂಡಸ್ಟ್ರಿಯಲ್ಲಿ ನಿಲ್ಲುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಹೊಸ ಹೊಸ ಪ್ಲಾನ್ ಗಳು ಬಿಡುಗಡೆಯಾಗುತ್ತಲೇ ಇದೆ. ಇದೀಗ ದೇಶದ ಪ್ರಮುಖ ಟೆಲಿಕಾಂ ಪ್ರೊವೈಡರ್ ಅನ್ನಿಸಿಕೊಂಡಿರುವ ಏರ್ ಟೆಲ್ ಹೊಸದಾಗಿ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಹೊಸ ಪ್ಲಾನ್ ವೊಂದನ್ನು ಬಿಡುಗಡೆಗೊಳಿಸಿದೆ. ಹೊಸದಾಗಿ 398 ರುಪಾಯಿಯ ಪ್ಲಾನ್ ನ್ನು ಬಿಡುಗಡೆಗೊಳಿಸಿರುವ ಕಂಪೆನಿ, ಈ ಪ್ಲಾನಿನ ಅಡಿಯಲ್ಲಿ 105ಜಿಬಿ ಡಾಟಾವನ್ನು ಲಾಭವನ್ನು ಗ್ರಾಹಕರಿಗೆ ನೀಡುತ್ತಿದೆ.

ಪ್ಲಾನ್ ನ ಲಾಭಗಳು:

ಪ್ಲಾನ್ ನ ಲಾಭಗಳು:

398 ರುಪಾಯಿ ಪ್ಲಾನಿನ ಅಡಿಯಲ್ಲಿ ಏರ್ ಟೆಲ್ ಟೆಲಿಕಾಂ ಆಪರೇಟರ್ ಯಾವುದೆ ಎಫ್ ಯುಪಿ ಲಿಮಿಟ್ ಇಲ್ಲದೆ ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ. ಇದರ ಜೊತೆಗೆ 100ಎಸ್ಎಂಎಸ್ ಗಳನ್ನು ಪ್ರತಿದಿನ ಉಚಿತವಾಗಿ ಕಳುಹಿಸಬಹುದು. ಇನ್ನು ಪ್ರತಿದಿನ 1.5ಜಿಬಿ ಡಾಟಾ ಬಳಕೆ ಮಾಡಲು ಅವಕಾಶವಿದ್ದು ಈ ಪ್ಲಾನ್ 70 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಏರ್ ಟೆಲ್ ನ 399 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧೆ:

ಏರ್ ಟೆಲ್ ನ 399 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧೆ:

ಇದನ್ನು ಹೊರತು ಪಡಿಸಿ ಏರ್ ಟೆಲ್ ಮತ್ತೊಂದು ಪ್ರಿಪೇಯ್ಡ್ ಪ್ಲಾನ್ ನ್ನು ಕೂಡ ಆಫರ್ ಮಾಡುತ್ತದೆ ಅದುವೇ ರುಪಾಯಿ 399 ರ ಪ್ಲಾನ್.ಈ ಪ್ಲಾನ್ ಹೊಸದಾಗಿ ಬಿಡುಗಡೆಗೊಂಡಿರುವ 398 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧೆಯೊಡ್ಡುತ್ತದೆ. 399 ರುಪಾಯಿ ಪ್ಲಾನಿನ ಅಡಿಯಲ್ಲಿ ಏರ್ ಟೆಲ್ 1ಜಿಬಿ ಡಾಟಾ ಮತ್ತು 100ಎಸ್ಎಂಎಸ್ ಗಳನ್ನು ನೀಡುತ್ತದೆ. ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದಕ್ಕೆ ಅವಕಾಶವಿರುತ್ತದೆ. ಈ ಎರಡೂ ಪ್ಲಾನ್ ನಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ ವ್ಯಾಲಿಡಿಟಿ. 399 ರುಪಾಯಿ ಪ್ಲಾನಿನ ಅವಧಿ 84 ದಿನಗಳು. ಅಂದರೆ 14 ದಿನಗಳ ಹೆಚ್ಚು ಅವಧಿಯನ್ನು 398 ರುಪಾಯಿ ಪ್ಲಾನ್ ನಲ್ಲಿ ಪಡೆಯಲು ಅವಕಾಶವಿರುತ್ತದೆ.

ಜಿಯೋ ಜೊತೆಗೆ ಸ್ಪರ್ಧೆ:

ಜಿಯೋ ಜೊತೆಗೆ ಸ್ಪರ್ಧೆ:

ಇನ್ನು ಏರ್ ಟೆಲ್ ನ 398 ರುಪಾಯಿ ಪ್ಲಾನ್ ರಿಲಯನ್ಸ್ ಯೋ ಸಂಸ್ಥೆಯ 398 ರುಪಾಯಿ ಪ್ಲಾನ್ ನೊಂದಿಗೆ ಸ್ಪರ್ಧಿಸುತ್ತದೆ. ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಆಪರೇಟರ್ ಅನಿಯಮಿತ ಸ್ಥಳೀಯ ಮತ್ತು ನ್ಯಾಷನಲ್ ಕರೆಗಳನ್ನು ಯಾವುದೇ ಎಫ್ ಯುಪಿ ಲಿಮಿಟ್ ಇಲ್ಲದೆ ನೀಡುತ್ತದೆ ಮತ್ತು 100ಎಸ್ಎಂಎಸ್ ಗಳನ್ನು ಪ್ರತಿದಿನ ಕಳುಹಿಸುವುದಕ್ಕೆ 398 ರುಪಾಯಿ ಪ್ಲಾನಿನ ಅಡಿಯಲ್ಲಿ ನೀಡುತ್ತದೆ.

ಇದರ ಜೊತೆಗೆ ರಿಲಯನ್ಸ್ ಜಿಯೋ ಚಂದಾದಾರರು ಈ ಪ್ಲಾನಿನ ಅಡಿಯಲ್ಲಿ 2ಜಿಬಿ ಡಾಟಾ ಬಳಸಲು ಅವಕಾಶವಿರುತ್ತದೆ. ರಿಲಯನ್ಸ್ ಜಿಯೋ ಸಂಸ್ಥೆಯ 398 ರುಪಾಯಿ ಪ್ಲಾನ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಮತ್ತು ಜಿಯೋ ಸ್ಯೂಟ್ ಆಪ್ಸ್ ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತರೆ ಆಪ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಕೂಡ ಲಭ್ಯವಿದೆ.

ಎರಡೂ ಪ್ಲಾನ್ ಗಳನ್ನು ಗಮನಿಸಿದಾಗ ರಿಲಯನ್ಸ್ ಜಿಯೋ ಆಫರ್ ಬೆಟರ್ ಎಂದು ಅನ್ನಿಸುತ್ತದೆ ಯಾಕೆಂದರೆ ಹೆಚ್ಚು ಡಾಟಾವನ್ನು ಈ ಪ್ಲಾನ್ ನೀಡುತ್ತದೆ.

Best Mobiles in India

English summary
How Airtel's new Rs 398 plan compares to Reliance Jio's similar plan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+