ದಶಕದ ಹಿಂದೆಯೇ ಮೊಬೈಲ್ ಪ್ರಪಂಚದ ಭವಿಷ್ಯ ನುಡಿದಿದ್ದ ಸ್ಟೀವ್ ಜಾಬ್ಸ್‌..!

  By GizBot Bureau
  |

  ಸ್ಟೀವ್ ಜಾಬ್ಸ್ ಯಾರೆಂದು ನಿಮಗೆಲ್ಲಾ ತಿಳಿದೇ ಇದೆ. ಪುನಃ ಅವರ ಪರಿಚಯವನ್ನು ತಿಳಿಸುವ ಅಗತ್ಯ ಖಂಡಿತ ಇಲ್ಲ ಎಂದು ಭಾವಿಸುತ್ತೇವೆ. ಸ್ಟೀವ್ ಜಾಬ್ಸ್ ಮೊದಲ ಐಫೋನ್ ಬಿಡುಗಡೆಗೊಳಿಸಿದಾಗಿನಿಂದ ಇಂದಿನವರೆಗಿನ ಪಯಣದಲ್ಲಿ ಅಂದರೆ ಒಂದು ದಶಕದ ಪಯಣದಲ್ಲಿ ನಡೆದ ಬದಲಾವಣೆಗಳು ನಿಜಕ್ಕೂ ಊಹೆಗೆ ನಿಲುಕದ್ದು.

  ದಿ ಇನ್ಫರ್ ಮೇಷನ್ ಮತ್ತು ದಿ ವಾಲ್ ಸ್ಟ್ರೀಟ್ ಜರ್ನಲ್ ಜಂಟಿಯಾಗಿ 2008 ರಲ್ಲಿ ನಿಕ್ ವಿಂಗ್ಫೀಲ್ಡ್ ನಡೆಸಿದ ಸ್ಟ್ವೀವ್ ಜಾಬ್ಸ್ ರ ಸಂದರ್ಶನದ ಆಡಿಯೋವನ್ನು ಬಿಡುಗಡೆಗೊಳಿಸಿದೆ.ಈ ಸಂದರ್ಶನವನ್ನು ಆಲಿಸಿದರೆ ತಿಳಿಯುತ್ತದೆ ಸ್ಟೀವ್ ಜಾಬ್ಸ್ ಭವಿಷ್ಯವನ್ನು ಎಷ್ಟು ಕಲ್ಪಿಸಿಕೊಳ್ಳುತ್ತಿದ್ದರು ಎಂಬುದು.

  ದಶಕದ ಹಿಂದೆಯೇ ಮೊಬೈಲ್ ಪ್ರಪಂಚದ ಭವಿಷ್ಯ ನುಡಿದಿದ್ದ ಸ್ಟೀವ್ ಜಾಬ್ಸ್‌..!

  2008 ರಲ್ಲೇ ಮೊಬೈಲ್ ನ ಭವಿಷ್ಯದ ಬಗ್ಗೆ ಕೆಲವು ಊಹೆಗಳನ್ನು ಮಾಡಿದ್ದ ಸ್ಟೀವ್ ಜಾಬ್ಸ್ ಭವಿಷ್ಯದಲ್ಲೊಂದು ದಿನ ಮೊಬೈಲ್ ಬಹಳ ಪ್ರಯೋಜನಕ್ಕೆ ಬರಲಿದೆ ಎಂಬುದನ್ನು ತಿಳಿಸಿದ್ದರು. ಬಹಳಷ್ಟು ಜನರು ಮತ್ತು ನಾನು ಮೊಬೈಲ್ ನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಲಿದ್ದೇವೆ ಯಾಕೆಂದರೆ ಮೊಬೈಲ್ ನಿಂದ ಬಹಳಷ್ಟು ಕೆಲಸಗಳನ್ನು ಮಾಡಬಹುದು.

  ಡೆಸ್ಕ್ ಟಾಪ್ ಗೆ ಸಂಬಂಧಿಸಿರದ ಅದೆಷ್ಟೋ ಕೆಲಸಗಳಿಗೆ ಮೊಬೈಲ್ ಪ್ರಯೋಜನಕ್ಕೆ ಬರುತ್ತದೆ. ಅದೂ ಕೂಡ ನೀವಿರುವ ಸ್ಥಳದ ಆಧಾರದಲ್ಲಿ ಮೊಬೈಲ್ ಕೆಲಸ ಮಾಡುತ್ತದೆ. ಮೊಬೈಲ್ ನ ಉಪಯೋಗದ ಒಂದು ಸಣ್ಣ ಕೇಂದ್ರದಲ್ಲಿ ಅಷ್ಟೇ ನಾವಿದ್ದೇವೆ. ಮುಂದೊಂದು ದಿನ ಇದು ಬಹಳ ಎತ್ತರಕ್ಕೆ ಬೆಳೆಯಲಿದೆ ಎಂದು ಸ್ಟೀವ್ ಜಾಬ್ಸ್ 10 ವರ್ಷದ ಹಿಂದೆಯೇ ಅಭಿಪ್ರಾಯ ಪಟ್ಟಿದ್ದರು. ಅವರ ಅಭಿಪ್ರಾಯ ಖಂಡಿತ ಇಂದು ನಿಜವಾಗಿದೆ.

  ಇನ್ನೊಂದು ಊಹೆ ಸ್ಟೀವ್ ಜಾಬ್ಸ್ ಮಾಡಿದ್ದು ಏನೆಂದರೆ ಆಪ್ ಸ್ಟೋರ್ ಬಗ್ಗೆ. ಮುಂದಿನ ದಿನಗಳಲ್ಲಿ ಇದು ಬಿಲಿಯನ್ ಡಾಲರ್ ನ ಮಾರುಕಟ್ಟೆಯ ಸ್ಥಳವಾಗಲಿದೆ ಎಂದು ಅವರು ಹೇಳಿದ್ದರು. ಮೊದಲ 30 ದಿನದಲ್ಲಿ 360 ಮಿಲಿಯನ್ ಮಾರುಕಟ್ಟೆ ಸೃಷ್ಟಿಯಾಗಿತ್ತು ಮತ್ತು ಅದನ್ನು ಸ್ಟೀವ್ ಜಾಬ್ಸ್ ತನ್ನ ವೃತ್ತಿಜೀವನದಲ್ಲಿ ಸಾಫ್ಟ್ ವೇರ್ ಗೆ ಇಂತಹ ಮಾರುಕಟ್ಟೆ ಸೃಷ್ಟಿಯಾಗಿದ್ದನ್ನು ತಾನು ನೋಡಿರಲಿಲ್ಲ ಎಂದು ದಶಕದ ಹಿಂದೆಯೇ ಆಶ್ಚರ್ಯ ವ್ಯಕ್ತಪಡಿಸಿದ್ದರು.

  ದಶಕದ ಹಿಂದೆಯೇ ಮೊಬೈಲ್ ಪ್ರಪಂಚದ ಭವಿಷ್ಯ ನುಡಿದಿದ್ದ ಸ್ಟೀವ್ ಜಾಬ್ಸ್‌..!

  ಆಪ್ ಸ್ಟೋರ್ ಕೂಡ 10 ವರ್ಷಗಳನ್ನು ಪೂರೈಸಿದೆ ಮತ್ತು ಸದ್ಯ ವಾರಕ್ಕೆ 500 ಮಿಲಿಯನ್ ಸಂದರ್ಶಕರನ್ನು ಹೊಂದಿದ್ದು, ಡೆವಲಪರ್ ಗಳು 100 ಬಿಲಿಯನ್ ಡಾಲರ್ ಗೂ ಅಧಿಕ ಸಂಪಾದನೆಯನ್ನು ಮಾಡುತ್ತಿದ್ದಾರೆ.

  ಸ್ಟೀವ್ ಜಾಬ್ಸ್ ಅಂದಿನ ಸಂದರ್ಶನದಲ್ಲಿ ಆಪ್ ಸ್ಟೋರ್ ಇಂದು ಯಾವ ಕೆಲಸವನ್ನು ಮಾಡುತ್ತಿದೆಯೋ ಅದನ್ನು ಊಹೆ ಮಾಡಿದ್ದರು. ಐಟ್ಯೂನ್ಸ್ ಮತ್ತು ಐಪಾಡ್ ನಂತೆ ಐಫೋನ್ ನಲ್ಲಿ ಆಪ್ ಸ್ಟೋರ್ ಇದೆ. ಅಂತರ್ಜಾಲ ಸೇವೆಯ ಮೂಲಕ ಐಫೋನ್ ನಲ್ಲಿ ನಾವು ಸಾಧಿಸುತ್ತೇವೆ.ಅಂದರೆ ಅಂತರ್ಜಾಲದ ಮೂಲಕ ಅಗತ್ಯ ಸೇವೆಯನ್ನು ಗ್ರಾಹಕರಿಗೆ ನಾವು ತಲುಪಿಸುತ್ತೇವೆ.

  ಐಟ್ಯೂನ್ಸ್ ನ್ನು ಈಗಾಗಲೇ ಫೋನಿಗೆ ತಂದಿರುವುದರಿಂದಾಗಿ ಅದರ ಅಪ್ಲಿಕೇಷನ್ ನ್ನು ಕೂಡ ತರುತ್ತೇವೆ. ವಯರ್ ಲೆಸ್ ಆಗಿ ನಾವು ಕಂಟೆಂಟ್ ನ್ನು ಡಿವೈಸ್ ಗೆ ಡೆಲಿವರ್ ಮಾಡಬಹುದು. ಅದಕ್ಕೆ ಪಿಸಿಯ ಅಗತ್ಯವಿರುವುದಿಲ್ಲ. ಸ್ವಯಂಚಾಲಿತವಾಗಿ ಆಪ್ ಗಳು ಅಪ್ ಡೇಟ್ ಆಗುತ್ತದೆ. ಹೀಗೆ ಭವಿಷ್ಯದ ಕನಸನ್ನು 2008 ರಲ್ಲೇ ಸ್ಟೀವ್ ಜಾಬ್ಸ್ ಕಂಡಿದ್ದರು ಮತ್ತು ಅದನ್ನು ಅಂದಿನ ಸಂದರ್ಶನದಲ್ಲಿ ಹೇಳಿದ್ದರು. ಅದಕ್ಕೂ ಮಿಗಿಲಾದ ಅಭಿವೃದ್ಧಿಯು ಮೊಬೈಲ್ ಲೋಕದಲ್ಲಿ ಇಂದು ಆಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

  ಅಂದು ಸ್ವಿಟ್ ಜಾಬ್ಸ್ ಹೇಳಿದ ವಿಚಾರಗಳು ಈಗ ಸಾಕಾರಗೊಂಡಿದೆ. ಅಷ್ಟೇ ಯಾಕೆ ಮೊಬೈಲ್ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಿದೆ. ದಿನದಿಂದ ದಿನಕ್ಕೆ ಹೊಸಹೊಸ ತಂತ್ರಜ್ಞಾನ ಮತ್ತು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಮೊಬೈಲ್ ಗಳು ಮಾರುಕಟ್ಟೆಗೆ ಮುಂದಡಿಯಿಡುತ್ತಿದೆ.ಒಂದು ದಶಕದ ಹಿಂದೆ ಇದ್ದಂತೆ ಈಗಿಲ್ಲ, ಇನ್ನೊಂದು ದಶಕದಲ್ಲಿ ಏನೇನಾಗಿರುತ್ತದೆಯೋ ತಿಳಿಯದು. ಆದರೆ ಇಂತಹ ಒಬ್ಬ ವ್ಯಕ್ತಿಯ ಆಲೋಚನೆ ಜಗತ್ತಿನ ಜೀವನಶೈಲಿಯನ್ನೇ ಬದಲಾಯಿಸಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

  English summary
  How Apple co-founder Steve Jobs cracked the future of mobile in 2008. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more