ಆಂಡ್ರಾಯ್ಡ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್!..ಆಪ್ ಬಳಸುವ ಮುನ್ನ ಎಚ್ಚರ!!
ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಆಪ್‌ಗಳನ್ನು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಆ ಆಪ್‌ಗಳಿಗೆ ವೈಯಕ್ತಿಕ ಮಾಹಿತಿಯನ್ನು ನೀಡುವುದು ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಆಪ್‌ಗಳನ್ನು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಆ ಆಪ್‌ಗಳಿಗೆ ವೈಯಕ್ತಿಕ ಮಾಹಿತಿಯನ್ನು ನೀಡುವುದು ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ, ಆ ಆಪ್ ಅನ್ನು ಬಳಸಲು ಬಳಕೆದಾರ ಎಲ್ಲಾ ಮಾಹಿತಿ ಹಂಚಿಕೆಗೆ ಒಪ್ಪಲೇಬೇಕಿರುವುದರಿಂದ ಬಳಕೆದಾರರು ವಿಧಿಯಿಲ್ಲದೇ ಒಪ್ಪಿಗೆ ನೀಡುತ್ತಿದ್ದಾರೆ.!!
ಉದಾಹರಣೆಗೆ ಹಲವು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಅವರಿಗೆ ಸಂಬಂಧವಿಲ್ಲದ ಸಂಪರ್ಕಗಳು ಅಥವಾ ಸಂದೇಶಗಳನ್ನು ಓದಲು ಅನುಮತಿ ಕೇಳಲಾಗುತ್ತದೆ. ಇನ್ನು ನಿಮ್ಮ ಲೊಕೇಶನ್ ಯಾವುದು ಎಂಬುದನ್ನು ಸಹ ಕೇಳಿ ತಿಳಿದುಕೊಳ್ಳುತ್ತದೆ. ಹೀಗೆ ನಿಮ್ಮ ಅನುಮತಿ ಮೂಲಕವೇ ನಿಮ್ಮೆಲ್ಲಾ ವೈಯಕ್ತಿಕ ಮಾಹಿತಿಯನ್ನು ಬಹಳ ಸುಲಭವಾಗಿ ಕದಿಯಲಾಗುತ್ತಿದೆ.!!

ಫೇಸ್‌ಬುಕ್‌ನಂತಹ ಜನಪ್ರಿಯ ಕಂಪೆನಿಯಿಂದಲೇ ಮಾಹಿತಿ ಸೋರಿಕೆಯಾಗಿರುವುದರಿಂದ, ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿಕೊಳ್ಳುವ ಆಪ್‌ಗಳು ವಿವಿಧ ರೀತಿಯಲ್ಲಿ ನಮ್ಮ ಮಾಹಿತಿಯನ್ನು ಹೇಗೆ ಕದಿಯುತ್ತಿವೆ ಎಂಬುದು ಮುನ್ನಲೆಗೆ ಬಂದಿದೆ. ಹಾಗಾದರೆ, ಏನಿದು ವರದಿ? ಆಂಡ್ರಾಯ್ಡ್ ಬಳಕೆದಾರರಿಗೆ ಏನು ಸಂಕಷ್ಟ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನಿಮ್ಮ ಮಾಹಿತಿ ಕದಿಯುತ್ತಿವೆ ಎಲ್ಲಾ ಆಪ್‌ಗಳು!!
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಇತ್ತೀಚಿನ ಯಾವುದೇ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡರೂ ಆ ಅಪ್ಲಿಕೇಶನ್ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಕೇಳುತ್ತಿದೆ ಎನ್ನುತ್ತವೆ ವರದಿಗಳು.! ಜನಪ್ರಿಯ ಆಪ್‌ಗಳೆಲ್ಲವೂ ಖಾಸಾಗಿ ಮಾಹಿತಿಯನ್ನು ಪಡೆಯುತ್ತಿದ್ದು, ಇದರಿಂದ ಸಣ್ಣ ಕಂಪೆನಿಗಳ ಅಪ್‌ಗಳು ಕೂಡ ಹೊರತಾಗಿಲ್ಲ ಎಂದು ರಿಪೋರ್ಟ್‌ನಲ್ಲಿ ಹೇಳಲಾಗಿದೆ.!!

ಬಳಕೆದಾರರಿಂದ ವಿಧಿಯಿಲ್ಲದೇ ಒಪ್ಪಿಗೆ!!
ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಯಾವುದೇ ಆಪ್ ಇನ್‌ಸ್ಟಾಲ್ ಮಾಡಿದರೂ ಆ ಆಪ್ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಪಡೆದುಕೊಳ್ಳಲು ಕೇಳುತ್ತದೆ. ಹೀಗೆ ಆಪ್ ಕೇಳುವ ವೇಳೆ ಅನುಮತಿ ನೀಡದಿದ್ದರೆ ಆಪ್ ಬಳಸಲು ಸಾಧ್ಯವ ಆಗುವುದಿಲ್ಲ. ಹಾಗಾಗಿ, ಎಲ್ಲಾ ಬಳಕೆದಾರರು ಹಿಂದೆ ಮುಂದೆ ನೋಡದೇ ಅವರಿಗೆ ಅನುಮತಿ ನೀಡುತ್ತಿದ್ದಾರೆ.!!

ಒಪ್ಪಿಗೆ ನೀಡಿದರೆ ಕಷ್ಟ!!
ಆಪ್‌ಸ್ಟೋರ್‌ನಲ್ಲಿರುವ ಯಾವುದೇ ಒಂದು ಆಪ್ ಅನ್ನು ಡೌನ್‌ಲೋಡ್ ಮಾಡುವಾಗ ಎಚ್ಚರವಿರಲಿ. ಒಮ್ಮೆ ಎಚ್ಚರ ಯಾವುದಾದರೂ ಸೈಬರ್ ಕ್ರಿಮಿನಲ್‌ಗೆ ಗೇಲ್ ಆಪ್ ಅನ್ನೋ ಅಥವಾ ಮನರಂಜನಾ ಆಪ್ ಅನ್ನೋ ಡೌನ್‌ಲೋಡ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸೈಬರ್ ಅಪರಾಧಿಗಳು ಕದ್ದು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.!!

ಪರಿಶೀಲನೇ ಅಗತ್ಯ!!
ಲಕ್ಷಾಂತರ ಆಪ್‌ಗಳಲ್ಲಿ ಯಾವ ಆಂಡ್ರಾಯ್ಡ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಎಂಬುದಕ್ಕೆ ಆಪ್ ಬಗ್ಗೆ ಬಳಕೆದಾರರಿಂದಲೇ ಪರಿಶೀಲನೇ ಅಗತ್ಯವಾಗಿದೆ. ಫೇಸ್‌ಬುಕ್‌ನಂತಹ ಜನಪ್ರಿಯ ಕಂಪೆನಿಯಿಂದಲೇ ಮಾಹಿತಿ ಸೋರಿಕೆಯಾಗಿರುವುದರಿಂದ ನಿಮಗೆ ತಿಳಿಯದೇ ಇರುವ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ.!!


ಸೈಬರ್ ಕಾನೂನು ಅಗತ್ಯ!!
ಎಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ಸೈಬರ್ ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಾದ ಅವಶ್ಯಕತೆ ಇದೆ. ಯಾವುದೇ ಖಾಸಾಗಿ ಕಂಪೆನಿ ಆಪ್ ಆದರ ತನ್ನ ಆದಾಯದ ದೃಷ್ಟಿಯಲ್ಲಿಯೇ ಅಭಿವೃದ್ದಿಯಾಗಿರುವುದರಿಂದ ಸರ್ಕಾರವೇ ಪ್ರತಿಯೊಂದು ಆಪ್‌ಗಳ ಮೇಲೆ ನಿಗಾವಹಿಸುವ ಅಗತ್ಯವಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಸಾಮಾನ್ಯರು ಹೇಳಬೇಕಿಲ್ಲ.!!


Click it and Unblock the Notifications








