ಸಾಲ ಮರುಪಾವತಿಗಾಗಿ ಬ್ಯಾಂಕ್‌ಗಳಿಂದ ವಾಟ್ಸ್‌ಆಪ್ ಬಳಕೆ..!
ಹೆಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಇತರೆ ಬ್ಯಾಂಕ್ ಗಳು ವಾಟ್ಸ್ ಆಪ್ ಮತ್ತು ಇಮೇಲ್ ಗಳ ಮೂಲಕ ಬೇರೆಬೇರೆ ರೀತಿಯ ಸಾಲ ಮರುಪಾವತಿ ಮತ್ತು ಇತರೆ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಗ್ರಾಹಕರ ಜೊತೆಗಿನ ಸಂಪರ್ಕಕ್ಕಾಗಿ ಬಳಕೆ ಮಾಡುತ್ತಿವೆ. ಇತ್ತೀಚೆಗೆ ಸಾಂಪ್ರದಾಯಿಕ ಬ್ಯಾಂಕಿಂಗ್ ಪದ್ದತಿಗಳಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳುವುದಕ್ಕೆ ಬ್ಯಾಂಕುಗಳಿಗೆ ಕಷ್ಟವಾಗಿದೆ.
ಹಾಗಾಗಿ ಕಳೆದ ವರ್ಷ ಕೋರ್ಟ್ ತೀರ್ಪು ನೀಡಿರುವುದರ ಅನ್ವಯವಾಗಿ ಈ ರೀತಿ ವಾಟ್ಸ್ ಆಪ್ ಬಳಕೆ ಮೂಲಕ ಸಾಲ ತೀರಿಸಿದೆ ಬ್ಯಾಂಕಿಂಗೆ ಪಂಗನಾಮ ಹಾಕುವವರನ್ನು ಕಡಿವಾಣ ಹಾಕಲು ಪ್ರಯತ್ನಿಸಲಾಗುತ್ತಿದೆ. ಬ್ಯಾಂಕಿಗ್ ವ್ಯವಹಾರದ ಬಗ್ಗೆ ಪೋಸ್ಟ್ ಮೂಲಕ ಮಾಹಿತಿ ನೀಡಿದರೆ ಅದು ನಿಧಾನವಾಗುವ ಸಾಧ್ಯತೆ ಇರುತ್ತದೆ ಮತ್ತು ಒಂದೇ ನೋಟೀಸಿಗೆ ಯಾರೂ ಕೂಡ ಮರುಪಾವತಿ ಮಾಡುತ್ತಿಲ್ಲ ಜೊತೆಗೆ ವಿಳಾಸ ಬದಲಾಯಿಸಿರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದರೆ ಫೋನ್ ನಂಬರ್ ನ್ನು ಅಷ್ಟು ಸುಲಭದಲ್ಲಿ ಬದಲಾಯಿಸುವುದಿಲ್ಲ.

ಬದಲಾಯಿಸಿದರೆ ಅವರಿಗೆ ಸಮಸ್ಯೆಯಾಗುತ್ತದೆ ಎಂದು ಫೋನ್ ನಂಬರ್ ಗಳನ್ನು ಹೆಚ್ಚು ದೀರ್ಘವಾಗಿ ಇಟ್ಟುಕೊಂಡಿರುತ್ತಾರೆ. ವಾಟ್ಸ್ ಆಪ್ ಐಡಿ, ಇಮೇಲ್ ಐಡಿಗಳು ಕೂಡ ಕಾನ್ಸೆಂಟ್ ಆಗಿರುತ್ತದೆ. ಹಾದಾಗಿ ಪೋಸ್ಟ್ ಮಾಡಿ ನೋಟೀಸ್ ಮಾಡುವುದಕ್ಕಿಂತ ಡಿಜಿಟಲ್ ನೋಟೀಸ್ ಹೆಚ್ಚು ಸಮಂಜಸ ಎಂದು ಬ್ಯಾಂಕ್ ಗಳು ಅರ್ಥೈಸಿಕೊಳ್ಳುತ್ತಿದೆ.
ಇನ್ನು ವಾಟ್ಸ್ ಆಪ್ ಮೆಸೇಜ್ ಗಳನ್ನು ರಿಸೀವ್ ಮಾಡಿದ ವ್ಯಕ್ತಿ ಓದಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಬ್ಲೂ ಟಿಕ್ ಮಾರ್ಕ್ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ಗ್ರಾಹಕರು ಇದನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ರೀಡ್ ರೆಸಿಪ್ಟ್ ನ್ನು ಡಿಸೇಬಲ್ ಮಾಡುವುದು ಕೇವಲ ಒಂದು ಮಾರ್ಗವಾಗಬಹುದು ಅಷ್ಟೇ.
ಹೆಚ್ ಡಿ ಎಫ್ ಸಿ ಬ್ಯಾಂಕ್ ಈಗಾಗಲೇ ಕಳೆದ ಎರಡು ತಿಂಗಳಲ್ಲಿ ಕೋರ್ಟ್ ನಿಂದ 214 ಸಮನ್ಸ್ ಗಳನ್ನು ಜಾರಿಗೊಳಿಸಿದ್ದು ಇದೆಲ್ಲವೂ ವಾಟ್ಸ್ ಆಪ್ ಮತ್ತು ಇಮೇಲ್ ಮೂಲಕವೇ ಆಗಿದೆ. ತಮಿಳುನಾಡು, ಗುಜರಾತ್, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ರಾಜಸ್ಥಾನ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಇತರೆಡೆಗಳಲ್ಲೂ ಕೂಡ ಇದನ್ನು ಜಾರಿ ಮಾಡಲಾಗಿದೆ.

ಹೆಚ್ಚಿನ ಕೇಸುಗಳು ಚೆಕ್ ಬೌನ್ಸ್ ಆಗಿರುವುದೇ ಆಗಿದೆ. ಈ ನೋಟೀಸ್ ಗಳನ್ನು ಕೋರ್ಟ್ ಅಥವಾ ಬ್ಯಾಂಕ್ ಮೂಲಕ ಕಳುಹಿಸಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಹೇಳುವ ಪ್ರಕಾರ ಈ ಡಿಜಿಟಲ್ ವಿಧಾನವು ಹೆಚ್ಚು ಪರಿಣಾಮಕಾರಿಯಾಗಿದೆಯಂತೆ. ಮೊದಲೆಲ್ಲ ಸಮನ್ಸ್ ರಿಸಿಪ್ಟ್ ಸಿಗಲಿಲ್ಲ ಅಥವಾ ಬಂದು ತಲುಪಿಲ್ಲ ಅನ್ನೋ ನೆಪವೊಡ್ಡುತ್ತಿದ್ದರು ಹಾಗಾಗಿ ಡೀಫಾಲ್ಟರ್ ಗಳನ್ನು ಮ್ಯಾನೇಜ್ ಮಾಡುವುದು ಕಷ್ಟವಾಗುತ್ತಿತ್ತು. ಕೇಸ್ ಗಳು ಹೆಚ್ಚು ಸಮಯ ಹಿಡಿಯುತ್ತಿತ್ತು. ಆದರೆ ಈಗ ಹಾಗಿಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಬಾಂಬೆ ಹೈಕೋರ್ಟ್ ನೀಡಿದ ತೀರ್ಪು :
ಒಟ್ಟಾರೆ ಲಿಟಿಗೇಷನ್ ಮೇಲೆ ಧನಾತ್ಮಕ ಪರಿಣಾಮಗಳನ್ನು ಈ ವಿಧಾನ ಮಾಡುತ್ತಿದೆ.ಕಳೆದ ಜೂನ್ ತಿಂಗಳಲ್ಲಿ ಬಾಂಬೆ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿತ್ತು. ಸಾಲದಾತರಿಗೆ ಅಥವಾ ಸಂಬಂಧಪಟ್ಟ ಬ್ಯಾಂಕ್ ನ ಗ್ರಾಹಕರಿಗೆ ಯಾವುದೇ ನೋಟಿಸ್ ಕಳಿಸುವ ಅಗತ್ಯವಿದ್ದಲ್ಲಿ ಅದನ್ನು ವಾಟ್ಸ್ ಆಪ್ ಮೂಲಕವೂ ಕಳುಹಿಸಬಹುದು ಎಂದು ತಿಳಿಸಿತ್ತು.
ಕೇಸಿನ ವಿವರ:
ನ್ಯಾಯಮೂರ್ತಿ ಜಿಎಸ್ ಪಾಟೀಲ್ ಅವರು ಜೂನ್ 11 ರಂದು ಎಸ್ ಬಿಕಾರ್ಡ್ಸ್ ಮತ್ತು ಪೇಮೆಂಟ್ ಸರ್ವೀಸ್ ಪ್ರೈವೇಟ್ ಮತ್ತು ರೋಹಿದಾಸ್ ಜಾದವ್ ನಡುವಿನ ಕ್ರೆಡಿಟ್ ಕಾರ್ಡ್ ಡ್ಯೂ ಕೇಸ್ ವೊಂದರಲ್ಲಿ ಈ ತೀರ್ಪನ್ನು ನೀಡಿತ್ತು. ಎಸ್ ಬಿ ಐ ಬಳಿ ಜಾದವ್ ಅವರ ಮೊಬೈಲ್ ನಂಬರ್ ಇದ್ದ ಕಾರಣದಿಂದಾಗಿ ವಾಟ್ಸ್ ಆಪ್ ಮೂಲಕ ಅವರ ಮುಂದಿನ ಹಿಯರಿಂಗ್ ದಿನಾಂಕದ ಬಗ್ಗೆ ವಾಟ್ಸ್ ಆಪ್ ಮೆಸೇಜ್ ಮೂಲಕ ಮಾಹಿತಿ ನೀಡಿತ್ತು.
ಆರ್ಡರ್ ವಿ,ರೂಲ್ 9(3) ಅಡಿಯ ನಿಯಮದಂತೆ ಸಮನ್ಸ್ ಗಳನ್ನು ರಿಜಿಸ್ಟರ್ ಪೋಸ್ಟ್ ಜೊತೆಗೆ ಡ್ಯೂ ಅಕ್ ನಾಲೆಡ್ಜ್ ಮೆಂಟ್ ಇರಬೇಕು, ಆದರೆ ಯಾವುದೋ ನಿರ್ಧಿಷ್ಟ ಕಾರಣದಿಂದಾಗಿ ಒಂದು ವೇಳೆ ಸಮನ್ಸ್ ಗಳನ್ನು ಪೋಸ್ಟ್ ಮೂಲಕ ಡೆಲಿವರ್ ಮಾಡಲು ಅಸಾಧ್ಯವಾಗಿದ್ದಲ್ಲಿ ಕಾನೂನು ಡಾಕ್ಯೂಮೆಂಟ್ ಗಳನ್ನು ಇನ್ನಿತರೆ ಮಾರ್ಗಗಳ ಮೂಲಕ ಡೆಲಿವರ್ ಮಾಡಲು ಅವಕಾಶವನ್ನು ನೀಡುತ್ತದೆ. ಅದು ಫ್ಯಾಕ್ಸ್, ಇಮೇಲ್ ಕೂಡ ಆಗಿರಬಹುದು. ಬಾಂಬೆ ಹೈಕೋರ್ಟ್ ನಮೂದಿಸಿರುವ ಪ್ರಕಾರ ವಾಟ್ಸ್ ಆಪ್ ಮೆಸೇಜ್ ಕೂಡ ಇನ್ನಿತರೆ ಮಾರ್ಗಗಳ ಗುಂಪಿನಲ್ಲಿ ಸೇರುತ್ತದೆ ಎಂದು ಹೇಳಿದೆ.
ಇನ್ನೊಂದು ಪ್ರಕರಣದಲ್ಲಿ ದೆಹಲಿ ಕೋರ್ಟ್ ಮಾರ್ಚ್ ತಿಂಗಳಲ್ಲಿ ಮಹಿಳಾ ದೂರುದಾರರೊಬ್ಬರಿಗೆ ವಾಟ್ಸ್ ಆಪ್ ಮತ್ತು ಮೆಸೇಜ್, ಇಮೇಲ್ ಮೂಲಕ ಸಮನ್ಸ್ ಜಾರಿಗೊಳಿಸಲು ಮಹಿಳೆಯೊಬ್ಬರಿಗೆ ಅವಕಾಶ ನೀಡಿತ್ತು. ಸುಪ್ರೀಂ ಕೋರ್ಟ್ ನ ಲಾಯರ್ ಮತ್ತು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಮೋಹನ್ ಜೈನ್ ಅವರು ಇದನ್ನು ಸ್ವಾಗತಿಸಿದ್ದರು.
ಬೇರೆಬೇರೆ ದೋಷಗಳಿಂದ ತಪ್ಪಿತಸ್ಥರು ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಮಾಡಲು ಯತ್ನಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ತಂತ್ರಜ್ಞಾನವನ್ನು ಈ ನಿಟ್ಟಿನಲ್ಲಿ ಬಳಸುವುದು ಕಾನೂನು ರಕ್ಷಣೆಗೆ ಅನುಕೂಲ ಮಾಡಿದಂತಾಗುತ್ತದೆ ಎನ್ನುತ್ತಾರೆ ಅವರು.ಈ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ನಲ್ಲಿ ಸಂಜಯ್ ಘೋಷ್ ಎಂಬುವವರು ಕೂಡ ಕೆಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು.
ಒಟ್ಟಿನಲ್ಲಿ ಬ್ಯಾಂಕಿನ ಕಣ್ಣಿಗೆ ಮಸಿ ಎರಚುವ ಕೆಲಸಕ್ಕೆ ಇತ್ತೀಚಿನ ದಿನಗಳಲ್ಲಿ ಕೆಲವರು ಪ್ರಯತ್ನಿಸುತ್ತಿದ್ದಾರೆ. ಸಾಲ ಪಡೆಯುವಾಗ ಬ್ಯಾಂಕಿನ ಕಾಲಿಗೆ ಬೀಳುವವರಂತೆ ಮಾಡುವ ಅವರು ಅದನ್ನು ತೀರಿಸುವ ಪ್ರಶ್ನೆ ಬಂದಾಗ ತಲೆಮರೆಸಿಕೊಂಡು ಬಿಡುತ್ತಾರೆ.
ಸರ್ಕಾರ ನೀಡುವ ಪೊಳ್ಳು ಭರವಸೆಗಳು, ನಾನ್ಯಾಕೆ ಕಟ್ಟಬೇಕು ಎಂಬ ಅಹಂ, ಸಾಲ ತೀರಿಸದೇ ಇದ್ದರೆ ಏನಾಗುತ್ತದೆ ಎಂಬ ಮನಸ್ಥಿತಿಯು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದ್ದು ಬ್ಯಾಂಕಿನ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ತಂತ್ರಜ್ಞಾನ ಈ ನಿಟ್ಟಿನಲ್ಲಿ ಬ್ಯಾಂಕಿಗೆ ಹೇಗೆ ಸಹಕಾರ ನೀಡುತ್ತದೆ ಕಾದು ನೋಡಬೇಕು.


Click it and Unblock the Notifications





