Subscribe to Gizbot

ಎಲ್ಲರಿಗಿಂತ ಮೊದಲು ಬೆಂಗಳೂರಿನಲ್ಲಿ ಶಿಯೋಮಿ ರೆಡ್‌ಮಿ 4 ಖರೀದಿಸುವುದು ಹೇಗೆ..?

Written By:

ಇಷ್ಟು ದಿನ ಆನ್‌ಲೈನಿನಲ್ಲಿ ಮಾತ್ರವೇ ಮಾರಾಟವಾಗುತ್ತಿದ್ದ ಶಿಯೋಮಿ ಇದೇ ಮೊದಲ ಬಾರಿಗೆ ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದುವೇ ಭಾರತದಲ್ಲಿ ಮೊದಲಿಗೆ, ಅಲ್ಲದೇ ಅದುವೇ ಬೆಂಗಳೂರಿನಲ್ಲಿ. ಹೀಗಾಗಿ ಬೆಂಗಳೂರಿಗರಿಗೆ ಶಿಯೋಮಿ ಭರ್ಜರಿ ಆಫರ್ ನೀಡಿದೆ.

ಎಲ್ಲರಿಗಿಂತ ಮೊದಲು ಬೆಂಗಳೂರಿನಲ್ಲಿ ಶಿಯೋಮಿ ರೆಡ್‌ಮಿ 4 ಖರೀದಿಸುವುದು ಹೇಗೆ..?

ಆರಂಭಿಕ ಬೆಲೆಯ ಫೋನ್‌ಗಳಲ್ಲಿ ಶಿಯೋಮಿ ಬಿಟ್ ಮಾಡುವವರು ಯಾರು ಇಲ್ಲ ಎನ್ನಲಾಗಿದ್ದು, ಅದಕ್ಕೆ ಸರಿ ಎನ್ನುವಂತೆ ಶಿಯೋಮಿ ರೆಡ್‌ಮಿ 4 ರೂ.6,999ಕ್ಕೆ ಮಾರಾಟವಾಗುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೇ. 23ರಿಂದ ಆನ್‌ಲೈನ್‌ನಲ್ಲಿ ಸೇಲ್:

ಮೇ. 23ರಿಂದ ಆನ್‌ಲೈನ್‌ನಲ್ಲಿ ಸೇಲ್:

ಶಿಯೋಮಿ ರೆಡ್‌ಮಿ 4 ಮೇ. 23ರಿಂದ ಆನ್‌ಲೈನ್‌ನಲ್ಲಿ ಸೇಲ್ ಆರಂಭವಾಗಲಿದ್ದು, ಈ ಫೋನ್ ಮಾರಾಟಕ್ಕೆ ಅಮೆಜಾನ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಮೇ. 23ರಿಂದ ಅಮೆಜಾನ್‌ನಲ್ಲಿ ಸೇಲ್ ಆರಂಭವಾಗಲಿದೆ.

ಬೆಂಗಳೂರಿಗೆ ಆರಂಭಿಕ ಆಫರ್:

ಬೆಂಗಳೂರಿಗೆ ಆರಂಭಿಕ ಆಫರ್:

ಬೆಂಗಳೂರಿಗರಿಗೆ ಶಿಯೋಮಿ ಪ್ರಾರಂಭಿಕ ಕೊಡುಗೆಯೊಂದನ್ನು ನೀಡಿದ್ದು, ಮೇ. 20 ರಂದು ಶಿಯೋಮಿ ತನ್ನ ಮೊದಲ ಶಾಪ್ ತೆರೆಯಲಿದ್ದು, ಅಲ್ಲಿ ಅಂದೇ ಈ ಫೋನ್ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಹೊಸ ಆಫರ್ ನೀಡಿದೆ.

ರಿಜಿಸ್ಟರ್ ಆಗಬೇಕು:

ರಿಜಿಸ್ಟರ್ ಆಗಬೇಕು:

ನೀವೆ ಮೊದಲು ಶಿಯೋಮಿ ರೆಡ್‌ಮಿ 4 ಫೋನ್‌ ಖರೀದಿಸಬೇಕಾಗದೆ ಮೊದಲು ಮಿ.ಕಾಮ್‌ನಲ್ಲಿ ರಿಜಿಸ್ಟರ್ ಆಗಬೇಕಾಗಿದೆ. ಇದಕ್ಕಾಗಿ ಮೊದಲು 1000 ರೂ, ಟೋಕನ್ ಆಡ್ವಾನ್ಸ್ ನೀಡಬೇಕಾಗಿದೆ. ಅನಂತರ ನಿಮಗೆ ಬೇಕಾದ ಸಮಯವನ್ನು ಆಯ್ಕೆ ಮಾಡಿಕೊಂಡು ಫೋನ್ ಪಡೆಯಬಹುದಾಗಿದೆ.

ರಿಜಸ್ಟರ್ ಮಾಡಿಕೊಳ್ಳುವುದು ಹೇಗೆ..?

ರಿಜಸ್ಟರ್ ಮಾಡಿಕೊಳ್ಳುವುದು ಹೇಗೆ..?

ಮಿ.ಕಾಮ್‌ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಿ ಸ್ಟೋರ್ ಓಪನ್ ಆಗುವ ಫೋಟೋ ವೊಂದನ್ನು ಹಾಕಲಾಗಿದ್ದು, ಅಲ್ಲಿ ಕ್ಲಿಕ್ ಮಾಡಿದರೆ ಅಲ್ಲಿ ರೆಡ್‌ಮಿ ಫೋನ್‌ಗಳ ಪಟ್ಟಿಯೊಂದು ತೆರೆಯಲಿದ್ದು, ಅಲ್ಲಿ ನಿಮಗೆ ಬೇಕಾದ ಫೋನ್‌ ಸೆಲೆಕ್ಟ್ ಮಾಡಿಕೊಳ್ಳಿ, ಎಷ್ಟು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಒಂದು ಫೋನಿಗೆ ರೂ.1000 ಆಡ್ವಾನ್ ಪೇ ಮಾಡಬೇಕು. ಇದಕ್ಕಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗಿದೆ. ಅಲ್ಲದೇ ಹಣವನ್ನು ಆನ್‌ಲೈನ್‌ನಲ್ಲಿ ಪೇ ಮಾಡಬೇಕಾಗಿದೆ.

ಶಿಯೋಮಿ ರೆಡ್‌ಮಿ 4 ಮಾತ್ರವಲ್ಲ, ಎಲ್ಲಾ ಫೋನ್‌ಗಳು ದೊರೆಯಲಿದೆ:

ಶಿಯೋಮಿ ರೆಡ್‌ಮಿ 4 ಮಾತ್ರವಲ್ಲ, ಎಲ್ಲಾ ಫೋನ್‌ಗಳು ದೊರೆಯಲಿದೆ:

ಓಪನಿಂಗ್ ಆಫರ್ ನಲ್ಲಿ ಶಿಯೋಮಿ ರೆಡ್‌ಮಿ 4 ಸೇರಿದಂತೆ ರೆಡ್‌ಮಿ ಸೇಲ್ ಮಾಡಿರುವ ಎಲ್ಲಾ ಫೋನ್‌ಗಳು ದೊರೆಯಲಿದೆ. ನಿಮಗೆ ಬೇಕಾದ ಫೋನ್‌ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಎಲ್ಲಾದಕ್ಕೂ ರಿಜಿಸ್ಟರ್ ಆಗುವುದು ಅವಶ್ಯ.

ಶಿಯೋಮಿ ರೆಡ್‌ಮಿ 4 ಬೆಲೆ ಎಷ್ಟು..?

ಶಿಯೋಮಿ ರೆಡ್‌ಮಿ 4 ಬೆಲೆ ಎಷ್ಟು..?

2GB RAM /16GB ROM ಫೋನ್ ಬೆಲೆ ರೂ.6,999, 3GB RAM/32GB ROM ಫೋನ್ ಬೆಲೆ ರೂ.8,999 ಮತ್ತು 4GB RAM/64GB ROMಫೋನ್ ಬೆಲೆ ರೂ.10,999.

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಹಿಂಭಾಗದಲ್ಲಿ ಕ್ಯಾಮೆರಾ ಕೆಳಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. 5 ಇಂಚಿನ HD (720x1280 p) ಡಿಸ್‌ಪ್ಲೇ, 2.5D ಕರ್ವಡ್ ಗ್ಲಾಸ್ ವಿನ್ಯಾಸ ಆಕ್ಟಾ ಕೋರ್ ಸಾಪ್ ಡ್ರಾಗನ್ 420 ಪ್ರೋಸೆಸರ್, ಇದರೊಂದಿಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ. ಹಿಂಭಾಗದಲ್ಲಿ 13 MP ಕ್ಯಾಮೆರಾ, ಡ್ಯುಯಲ್ LED ಫ್ಲಾಷ್, ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ. 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ ನ್ಯಾಗಾ, MIUI8 ಕಾರ್ಯಚರಣೆಯನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Tricks to buy Redmi Note 4 from offline store. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot