ತಕ್ಷಣವೇ ಸಿಮ್-ಬ್ಯಾಂಕ್‌ಗೆ ನೀಡಿರುವ ಆಧಾರ್ ಮಾಹಿತಿ ಹಿಂಪಡೆಯಿರಿ..! ಹೇಗೆ..?
ಸುಪ್ರೀಂ ಕೋರ್ಟ್ ಈಗಾಗಲೇ ಬ್ಯಾಂಕ್ ಆಕೌಂಟ್ ಹಾಗೂ ಮೊಬೈಲ್ ಸಿಮ್ ಕಾರ್ಡ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಅಗತ್ಯವಿಲ್ಲ ಎನ್ನಲಾಗಿದೆ. ಆದರೆ ಈಗಾಗಲೇ ಸಿಮ್ ಹಾಗೂ ಬ್ಯಾಂಕ್ಗಳಿಗೆ ಆಧಾರ್ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು ಎನ್ನುವ ಕಾರಣಕ್ಕೆ ಹಲವು ಮಂದಿ ತಮ್ಮ ಮಾಹಿತಿಯನ್ನು ಎಲ್ಲಾ ಕಡೆಗಳಲ್ಲಿ ಹಂಚಿಕೊಂಡಿದ್ದಾರೆ.

ಆಧಾರ್ಗೆ ಸಾಂವಿಧಾನಿಕ ಮಾನ್ಯತೆ ನೀಡಿರುವ ಸುಪ್ರೀಂ ಕೋರ್ಟ್, ಇದೇ ಮಾದರಿಯಲ್ಲಿ ಮೊಬೈಲ್ ಸಿಮ್ ಕಾರ್ಡ್ ಖರೀದಿ, ಬ್ಯಾಂಕ್ಗಳು ಆಧಾರ್ ಮಾಹಿತಿ ಪಡೆಯುವುದು ಕಡ್ಡಾಯವಲ್ಲ ಎಂದು ಆದೇಶಿಸಿದೆ. ಆದರೆ PAN ಕಾರ್ಡ್ ಮತ್ತು ಇನ್‌ಕಮ್ ಟ್ಯಾಕ್ಸ್ ಪಾವತಿಗೆ ಆಧಾರ್ ಕಡ್ಡಾಯವನ್ನು ಮುಂದುವರೆಸಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ನೀವು ನೀಡಿರುವ ಆಧಾರ್ ಮಾಹಿತಿಯನ್ನು ಹಿಂಪಡೆಯುವುದು ಸಾಧ್ಯವೇ? ಅದು ಹೇಗೆ? ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಅವಕಾಶವಿದೆ:
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಳಿಕ ಆಧಾರ್ ಇ-ಕೆವೈಸಿ ಮಾಹಿತಿ ಹಾಗೂ ಬಯೋಮೆಟ್ರಿಕ್ ಮಾಹಿತಿಯನ್ನು ಹಿಂಪಡೆಯಲು ಅವಕಾಶವಿದೆ ಎನ್ನಲಾಗಿದೆ. ಈ ಕುರಿತು ವಿಶಿಷ್ಠ ಗುರುತಿನ ಪ್ರಾಧಿಕಾರ UDAI ತನ್ನ ವೆಬ್ಸೈಟ್ನಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಕರೆ ಮಾಡಿ:
ನೀವು ಸಲ್ಲಿಸಿರುವ ಆಧಾರ್ ಮಾಹಿತಿಯನ್ನು ಅಳಿಸಿ ಹಾಕುವ ಸಲುವಾಗಿ ನಿಮ್ಮ ಟೆಲಿಕಾಂ ಆಪರೇಟರ್‌ಗೆ ಕರೆಯನ್ನು ಮಾಡಿ. ಮಾಡಿದ ನಂತರದಲ್ಲಿ ನಿಮ್ಮ ಆಧಾರ್ ಮಾಹಿತಿಯನ್ನು ಅಳಿಸಿ ಹಾಕುವಂತೆ ಮನವಿ ಮಾಡಬಹುದಾಗಿದೆ.

ಮೇಲ್ ಮಾಡಿ:
ಇಲ್ಲದೇ ನಿಮ್ಮ ಟೆಲಿಕಾಂ ಆಪರೇಟರ್, ಇಲ್ಲವೇ ಬ್ಯಾಂಕ್ ಗಳಿಗೆ ನಿಮ್ಮ ಮಾಹಿತಿಯನ್ನು ಒಳಗೊಂಡ ಮೇಲ್ ವೊಂದನ್ನು ಬರೆದು, ನಿಮ್ಮ ಆಧಾರ್ ಮಾಹಿತಿಯನ್ನು ಹಿಂತಿರುಗಿಸುವಂತೆ ಕೋರಿಕೆಯನ್ನು ಸಲ್ಲಿಸಬಹುದಾಗಿದೆ.

ವ್ಯಾಲೆಟ್‌ಗಳು:
ಇದಲ್ಲದೇ ಸುಪ್ರಿಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಪೇಟಿಎಂ, ಫೋನ್ ಪೇ ಮೊಬೈಲ್ ವ್ಯಾಲೆಟ್ಗಳೊಂದಿಗೆ ಹಂಚಿಕೊಂಡಿರುವ ಆಧಾರ್ ಡೇಟಾವನ್ನು ಇದೇ ಮಾದರಿಯಲ್ಲಿ ನೀವು ಹಿಂಪಡೆಯಬಹುದಾಗಿದೆ.

ಇನ್ನು ಮುಂದೆ ನೀಡಬೇಡಿ:
ಮೊಬೈಲ್ ವ್ಯಾಲೆಟ್‌ಗಳು, ಬ್ಯಾಂಕ್ ಅಕೌಂಟ್‌ಗಳು ಹಾಗೂ ಸಿಮ್ ಕಾರ್ಡ್‌ಗಳು ಆಧಾರ್ ಮಾಹಿತಿಯನ್ನು ಈಗಾಗಲೇ ಪಡೆದುಕೊಂಡಿವೆ, ಈ ಹಿನ್ನಲೆಯಲ್ಲಿ ಟೆಲಿಕಾಂ ಸಂಸ್ಥೆಗಳು, ಬ್ಯಾಂಕ್ಗಳು ಈ ಮಾಹಿತಿಯನ್ನು ತೆಗೆದುಕೊಳ್ಳುವಂತಿಲ್ಲ. ಇನ್ನು ಮುಂದೆ ನೀವು ಎಲ್ಲಿಯೂ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಬೇಡಿ.


Click it and Unblock the Notifications