ಕಂಪ್ಯೂಟರ್ ಮುಖ ಹಾಗೂ ವಸ್ತುಗಳನ್ನು ಗುರುತಿಸುವುದು ಹೇಗೆ ಗೊತ್ತಾ?

By GizBot Bureau

  ಕಂಪ್ಯೂಟರ್ ಗಳು ಮನುಷ್ಯರ ಮುಖವನ್ನು ಗುರುತಿಸಲು ಆರಂಭಿಸಿ ಬಹಳ ವರ್ಷಗಳೇ ಕಳೆದವು. ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಷ್ಟು ಮುಂದುವರಿದಿದೆ ಅಂದರೆ ಸಜೀವ ಮತ್ತು ನಿರ್ಜೀವ ವಸ್ತುಗಳನ್ನು ಫೋಟೋ ಮತ್ತು ವೀಡಿಯೋಗಳಲ್ಲಿ ಗುರುತಿಸುವ ಸಾಮರ್ಥ್ಯವನ್ನು ಕಂಪ್ಯೂಟರ್ ಗಳು ಪಡೆದುಕೊಂಡಿದೆ.

  ಇದು ಸರ್ಕಾರಿ ಏಜೆನ್ಸಿಗಳು ಮತ್ತು ವ್ಯವಹಾರಿಕ ತಂತ್ರಗಾರಿಗೆಯನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯಲು ಸಹಾಯಕವಾಗಿದೆ.ಇದು ಎಲ್ಲಾ ರೀತಿಯ ಯಂತ್ರಗಳ ಮೇಲೆ ತನ್ನ ಹಿಡಿತವನ್ನು ಸಾಧಿಸಿಕೊಳ್ಳಲು ನೆರವಾಗುತ್ತದೆ.

  ಕಂಪ್ಯೂಟರ್ ಮುಖ ಹಾಗೂ ವಸ್ತುಗಳನ್ನು ಗುರುತಿಸುವುದು ಹೇಗೆ ಗೊತ್ತಾ?

  ಅದರಲ್ಲಿ ಪ್ರಮುಖವಾಗಿ ಸೆಲ್ಫ್ ಡ್ರೈವಿಂಗ್ ಕಾರುಗಳು, ಡ್ರೋನ್ಸ್, ಪರ್ಸನಲ್ ರೋಬೋಟ್ ಗಳು, ಇನ್-ಸ್ಟೋರ್ ಕ್ಯಾಮರಾಗಳು, ಮತ್ತು ಮೆಡಿಕಲ್ ಸ್ಕ್ಯಾನರ್ ಗಳು ಅಂದರೆ ಅವುಗಳು ಚರ್ಮದ ಕ್ಯಾನ್ಸರ್ ಗಳನ್ನು ಕೂಡ ಕಂಡುಹಿಡಿಯಲು ಇತ್ಯಾದಿ ಕೆಲಸಗಳಿಗೆ ಈ ತಂತ್ರಜ್ಞಾನವು ನೆರವಾಗುತ್ತದೆ. ನಮ್ಮ ಕೆಲವು ಫೋನ್ ಗಳೂ ಕೂಡ ಇದೇ ಟೆಕ್ನಾಲಜಿಯನ್ನು ಬಳಸಿ ಅನ್ ಲಾಕ್ ಆಗುತ್ತದೆ ಎಂಬುದು ಕೂಡ ನಿಮಗೆ ತಿಳಿದಿರಬಹುದು.

  ಇದು ಹೇಗೆ ಕೆಲಸ ನಿರ್ವಹಿಸುತ್ತದೆ?

  ದಶಕಗಳ ಹಿಂದೆ ಇದ್ದ ವಿನ್ಯಾಸಗೊಳಿಸಲಾದ ಈ ಮುಖವನ್ನು ಪತ್ತೆ ಹಚ್ಚುವ ವೈಶಿಷ್ಟ್ಯವು ಇತ್ತೀಚಿನ ದಿನಗಳಲ್ಲಿ ಬಹಳ ಸಂಕೀರ್ಣಗೊಳ್ಳುತ್ತಿದೆ ಮತ್ತು ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಮೂಗು ಮತ್ತು ಕಿವಿಯ ನಡುವಿನ ಅಂತರ ಅಥವಾ ಕಣ್ಣಿನ ಒಂದು ಮೂಲೆಯಿಂದ ಇನ್ನೊಂದಕ್ಕೆ ಮುಖದ ಆಯಾಮಗಳನ್ನು ಅಳತೆ ಮಾಡುವ ಸಾಮಾನ್ಯ ವಿಧಾನವನ್ನು ಈ ತಂತ್ರಜ್ಞಾನವು ಒಳಗೊಂಡಿದೆ.

  ಮಾಹಿತಿಯನ್ನು ನಂತರ ಸಂಖ್ಯೆಗಳಾಗಿ ವಿಭಜನೆ ಮಾಡಿಕೊಳ್ಳಲಾಗುತ್ತದೆ. ಅದನ್ನು ಇತರೆ ಭಾವಚಿತ್ರದೊಂದಿಗೆ ಬೇರ್ಪಡಿಸಲಾಗಿರು ಸಂಖ್ಯೆಗಳೊಂದಿಗೆ ಹೊಂದಿಸಿ ನೋಡಲಾಗುತ್ತದೆ. ಆ ಮೂಲಕ ಅವುಗಳ ಹತ್ತಿರದ ಸಂಖ್ಯೆಗಳ ಆಧಾರದ ಮೇಲೆ ವಿಭಜನೆ ಮಾಡಲಾಗುತ್ತದೆ ಮತ್ತು ಮ್ಯಾಚ್ ಮಾಡಲಾಗುತ್ತದೆ.

  ಅಂತಹ ವಿಶ್ಲೇಷಣೆಯು ಇದೀಗ ಹೆಚ್ಚಿನ ಕಂಪ್ಯೂಟಿಂಗ್ ಶಕ್ತಿ ಮತ್ತು ಡಿಜಿಟಲ್ ಚಿತ್ರಣದ ಬೃಹತ್ ಟ್ರೋವ್ ಗಳ ಸಹಾಯದಿಂದ ಉತಕೃಷ್ಟ ಮಟ್ಟಕ್ಕೆ ಏರಿದೆ ಮತ್ತು ಅದನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದೆ ಜೊತೆಗೆ ಹಂಚಲೂಬಹುದಾಗಿದೆ.

  ಕಂಪ್ಯೂಟರ್ ಮುಖ ಹಾಗೂ ವಸ್ತುಗಳನ್ನು ಗುರುತಿಸುವುದು ಹೇಗೆ ಗೊತ್ತಾ?

  ಮುಖದಿಂದ ವಸ್ತುಗಳ ವರೆಗಿನ ವ್ಯತ್ಯಾಸ ( ಪ್ರಾಣಿಗಳದ್ದೂ ಕೂಡ )

  “ಫೇಸ್ ರೆಕಗ್ನಿಷನ್ ಅನ್ನುವುದ ಬಹಳ ಹಳೆಯ ವಿಚಾರವಾಗಿದೆ. ಇದು ಯಾವಾಗಲೂ ಅತ್ಯುತ್ತಮವಾದ ವಿಚಾರ ಕೂಡ ಹೌದು ಮತ್ತು ಯಾವುದು ಎಲ್ಲರ ಕುತೂಹಲಕಾರಿ ವಿಚಾರ ಅಂದ್ರೆ ವಸ್ತುಗಳನ್ನು ಗುರುತಿಸುವಿಕೆಯ ತಂತ್ರಜ್ಞಾನ” ಎಂದು ಟೊರೆಂಟೋ ಯಾರ್ಕ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಷನ್ ಮತ್ತು ಪ್ಯಾಟರ್ನ್ ರೆಕಗ್ನಿಷನ್ ನ ವಾರ್ಷಿಕ ಸಮ್ಮೇಳನದಲ್ಲಿ ಕಂಪ್ಯೂಟರ್ ಪ್ರೊಫೆಸರ್ ಆಗಿರುವ ಮೈಕೆಲ್ ಬ್ರೌನ್ ತಿಳಿಸುತ್ತಿದ್ದಾರೆ.

  ಕೆಲವು ದಶಕಗಳಿಂದ ನಡೆಯುತ್ತಿರುವ ಅಧ್ಯಯನವು ನರವ್ಯೂಹವನ್ನು ಗುರುತಿಸುವಿಕೆಯ ಅಭಿವೃದ್ಧಿಯೆಡೆಗೆ ಗಮನವನ್ನು ಹರಿಸಿದೆ ಮತ್ತು ಮೆದುಳಿನ ಕಾರ್ಯ ಚಟುವಟಿಕೆಯನ್ನು ಕಂಪ್ಯೂಟರ್ ಗುರುತಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಕವಾಗಿದೆ. 2010 ರಿಂದ 2017 ವರೆಗಿನ ವಾರ್ಷಿಕ ಇಮೇಜ್ ಗುರುತಿಸುವಿಕೆ ಸ್ಪರ್ಧೆಯು ಗೂಗಲ್ ಮತ್ತು ಮೈಕ್ರೋಸಾಫ್ಟ್ ನಂತಹ ಕಂಪನಿಗಳಿಂದ ಉನ್ನತ ಸಂಶೋಧಕರನ್ನು ಸೆಳೆದಿದೆ.

  ಇಮೇಜ್ ಗಳ ವ್ಯತ್ಯಾಸ ಗುರುತಿಸುವಿಕೆಯಲ್ಲಿ ಕಂಪ್ಯೂಟರ್ಗಳು ವಿವಿಧ ವೆಲ್ಷ್ ಕಾರ್ಗಿ ತಳಿಗಳ ನಡುವಿನ ವ್ಯತ್ಯಾಸ ವನ್ನು ಭಾರೀ ವೇಗವಾಗಿ ಮಾಡಬಲ್ಲವು. ಆದರೂ ಕೆಲವು ಅಬ್ ಸ್ಟ್ರ್ಯಾಕ್ಟ್ ಇಮೇಜ್ ಗಳು ಅಂದರೆ ಪ್ರತಿಮೆಗಳನ್ನು ಗುರುತಿಸುವಿಕೆಯಲ್ಲಿ ಕಂಪ್ಯೂಟರ್ ಗಳು ಇವತ್ತಿಗೂ ಗೊಂದಲಕ್ಕೀಡಾಗುತ್ತವೆಯಂತೆ.

  ಅದು ಕೋಡೆಡ್ ನೋಟ

  ಎಂಐಟಿ ಕಂಪ್ಯೂಟರ್ ವಿಜ್ಞಾನಿ ಜಾಯ್ ಬುಯೊಲಮ್ವಿನಿಯ ನೇತೃತ್ವದ ಅಧ್ಯಯನವು ಐಬಿಎಂ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಕಂಪೆನಿಗಳು ನಿರ್ಮಿಸಿದ ಮುಖ ಗುರುತಿಸುವಿಕೆ ವ್ಯವಸ್ಥೆಗಳು ಗಾಢ-ಚರ್ಮದ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ತಪ್ಪಾಗಿ ಗುರುತಿಸಬಹುದೆಂದು ಕಂಡುಹಿಡಿದವು.( ಜಾಯ್ ಬುಯೊಲಮ್ವಿನಿಯ ಇದನ್ನು ಕೋಡೆಟ್ ನೋಟ ಎಂದು ಕರೆದಿದ್ದಾರೆ).

  ಆದರೆ ಈ ಎರಡೂ ಕಂಪೆನಿಗಳು ಮೈಕ್ರೋಸಾಫ್ಟ್ ಮತ್ತು ಐಬಿಎಮ್ ಇತ್ತೀಚೆಗೆ ಪ್ರಕರಣೆ ನೀಡಿರುವಂತೆ ತಮ್ಮ ಸಿಸ್ಟಮ್ ಗಳನ್ನು ಇನ್ನಷ್ಟು ಉತ್ತಮಗೊಳಿಸಲು ತಮ್ಮ ಸಾಫ್ಟ್ ವೇರ್ ಗೆ ಇನ್ನಷ್ಟು ತರಬೇತು ನೀಡುವುದಾಗಿ ಹೇಳಿಕೊಂಡಿವೆ.

  ಒಟ್ಟಾರೆ ಆರ್ಟಿಫಿಶಿಯಲ್ ಇಂಟಲಿಜೆನ್ ಅಥವಾ ಕೃತಕ ಬುದ್ಧಿಮತ್ತೆಯು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಅದು ಮನುಷ್ಯನ ಅಗತ್ಯತೆ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತಿದೆ.

  English summary
  How computers can 'see' your face and other objects. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more