Subscribe to Gizbot

ಯುಎಸ್‌ಬಿ ಕೇಬಲ್ ಮೂಲಕನೂ ಹ್ಯಾಕ್ ಮಾಡ್ತಾರೆ!!

Written By:

ನಿಮ್ಮ ಮೊಬೈಲ್, ಕಂಪ್ಯೂಟರ್ ಡೇಟಾವನ್ನು ಶೇರ್ ಮಾಡಲು ಸಿಕ್ಕಸಿಕ್ಕ ಯುಎಸ್‌ಬಿ ಕೇಬಲ್‌ ಬಳಕೆ ಮಾಡುತ್ತೀರಾ? ಹಾಗಿದ್ದರೆ ಎಚ್ಚರವಿರಲಿ. ಏಕೆಂದರೆ, ನೀವು ಬಳಕೆ ಮಾಡುವ ಯುಎಸ್‌ಬಿ ಕೇಬಲ್ ನಿಮ್ಮೆಲ್ಲಾ ಮಾಹಿತಿಗಳನ್ನು ಹ್ಯಾಕರ್‌ಗಳ ಜೊತೆಯಲ್ಲಿ ಹಂಚಿಕೊಳ್ಳಬಹುದು.!!

ಹೌದು, ಇಂತಹದೊಂದು ಆಘಾತಕಾರಿ ವಿಷಯವೊಂದು ಅಧ್ಯಯನದ ಮೂಲಕ ಸಾಬೀತಾಗಿದೆ.! ಆಸ್ಟ್ರೇಲಿಯಾದ ಯುನಿವರ್ಸಿಟಿ ಆಫ್‌ ಎಡಿಲೆಡ್‌ನ ಸಂಶೋಧನಾ ವಿದ್ಯಾರ್ಥಿಗಳು 50 ಬೇರೆ-ಬೇರೆ ಎಕ್ಸ್‌‌ಟರ್ನಲ್ ಯುಎಸ್‌‌ಬಿ ಹಬ್ಸ್ ಮೇಲೆ ಪರೀಕ್ಷೆ ನಡೆಸಿದ್ದು, ಈ ಬಗ್ಗೆ ವರದಿ ನೀಡಿದ್ದಾರೆ. ಹಾಗಾದರೆ, ಕೇಬಲ್‌ ಹ್ಯಾಕ್ ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೇಬಲ್‌ನಲ್ಲಿಯೇ ರೀಡರ್ಸ್ ಸೇರಿರುತ್ತದೆ.!!

ಕೇಬಲ್‌ನಲ್ಲಿಯೇ ರೀಡರ್ಸ್ ಸೇರಿರುತ್ತದೆ.!!

ಕೀಬೋರ್ಡ್, ಕಾರ್ಡ್‌ಸ್ವೈಪರ್ ಮತ್ತು ಫಿಂಗರ್‌ಪ್ರಿಂಟರ್ ಸೇರಿದಂತೆ ಹಲವು ಅತ್ಯುಪಯುಕ್ತ ಸೇವೆಗಳನ್ನು ಹ್ಯಾಕ್ ಮಾಡಲು ಯುಎಸ್‌‌ಬಿಗೆ ಸಂಬಂಧಿಸಿದ ಉಪಕರಣಗಳಲ್ಲಿ ರೀಡರ್ಸ್ ಸೇರಿಸಲಾಗಿದೆ. ಈ ರೀಡರ್ಸ್ ನಿಮ್ಮ ಮಾಹಿತಿಯನ್ನು ಕದ್ದು ಬೇರೆಯವರಿಗೆ ರವಾನಿಸುತ್ತದೆ.

ರಿಸರ್ಚ್‌ ಎಸೋಸಿಯೇಟ್ ಹೇಳಿದ್ದೇನು?

ರಿಸರ್ಚ್‌ ಎಸೋಸಿಯೇಟ್ ಹೇಳಿದ್ದೇನು?

ರಿಸರ್ಚ್‌ ಎಸೋಸಿಯೇಟ್ ಯುವಲ್ ಯಾರೋಮ್ ಹೇಳುವಂತೆ 90 ಶೇಕಡಾದಷ್ಟು ಮಾಹಿತಿ ಯುಎಸ್‌‌ಬಿ ಉಪಕರಣದ ಮೂಲಕ ಲೀಕ್ ಆಗುತ್ತಿದ್ದು, ಯುಎಸ್‌ಬಿ ಕೇಬಲ್‌ ಕನೆಕ್ಟ್ ಮಾಡಿದರೆ ಕಂಪ್ಯೂಟರ್‌ನಲ್ಲಿ ಸೇರಿರುವ ಎಲ್ಲಾ ಮಾಹಿತಿಗಳು ಕೇಬಲ್‌ ಮೂಲಕ ಲೀಕ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.!!

ಕಂಪ್ಯೂಟರ್ ನಿರ್ದೇಶನ ನೀಡುತ್ತಿಲ್ಲ.!!

ಕಂಪ್ಯೂಟರ್ ನಿರ್ದೇಶನ ನೀಡುತ್ತಿಲ್ಲ.!!

ಯುಎಸ್‌‌ಬಿಗೆ ಸಂಬಂಧಿಸಿದ ಉಪಕರಣಗಳಲ್ಲಿರುವ ರೀಡರ್ಸ್ ಕಂಪ್ಯೂಟರ್‌ನಿಂದ ವರ್ಗಾವಣೆಯಾಗುತ್ತಿರುವ ಮಾಹಿತಿಯನ್ನು ಕದ್ದರೂ ಸಹ ಇದನ್ನು ಕಂಪ್ಯೂಟರ್ ನಿರ್ದೇಶನ ನೀಡುತ್ತಿಲ್ಲ.!! ಹಾಗಾಗಿ, ನಿಮ್ಮ ಎಲ್ಲಾ ಡೇಟಾವನ್ನು ಹ್ಯಾಕರ್ಸ್‌ಗಳು ಅನಾಮತ್ತಾಗಿ ಎತ್ತಿಕೊಳ್ಳುತ್ತಾರೆ.!!

ಇನ್ನಷ್ಟು ಸುರಕ್ಷತೆ ಬೆಕಿದೆ.!!

ಇನ್ನಷ್ಟು ಸುರಕ್ಷತೆ ಬೆಕಿದೆ.!!

ಯುಎಸ್‌ಬಿಯನ್ನು ಕನೆಕ್ಟ್‌ ಮಾಡುವುದರಿಂದ ನಿಮ್ಮೆಲ್ಲಾ ಮಾಹಿತಿ ಮತ್ತು ಪಾಸ್‌ವರ್ಡ್‌ಗಳು ಲೀಕ್ ಆಗುವುದರಿಂದ ನಿಮಗೆ ಮತ್ತಞ್ಟು ಸುರಕ್ಷತೆಯ ಅವಶ್ಯಕತೆ ಇದೆ. ಹಾಗಾಗಿ, ಮೊಬೈಲ್ ಜೊತೆಗೆ ನೀಡಿರುವ ಯುಎಸ್‌ಬಿ ಕೇಬಲ್‌ಗಳನ್ನು ಮಾತ್ರ ಬಳಕೆ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
How Cybercriminals Attack You.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot