ನಿಮ್ಮ ಮಕ್ಕಳು ಸ್ಮಾರ್ಟ್‌ಫೋನಿಗೆ ಅಡಿಕ್ಟ್ ಆಗಿದ್ದಾರೆಯೇ?..ಹೀಗೆ ಬಿಡಿಸಬಹುದು!

|

ನಮ್ಮ ಮಕ್ಕಳು ಸ್ಮಾರ್ಟ್‌ಫೋನಿಗೆ ಅಡಿಕ್ಟ್ ಆಗಿದ್ದು, ಚಾಟಿಂಗ್ ಮಾಡಲು ಮತ್ತು ಗೇಮ್ ಆಡಲು ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ಅವರ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ . ಇದು ಹೀಗೆಯೇ ಮುಂದುವರೆದರೆ ಅವರ ಮುಂದಿನ ಜೀವನ ಹಾಳಾಗುತ್ತದೆ ಎಂಬುದು ಬಹುತೇಕ ಪೋಷಕರ ಅಳಲು. ಆದರೆ, ಇದಕ್ಕೆ ಪರಿಹಾರ ಏನು ಎಂಬುದು ಮಾತ್ರ ಅವರು ತಿಳಿದಿಲ್ಲ. ಒಂದು ವೇಳೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದರೂ ಅದರಿಂದ ಸಮಸ್ಯೆಯೇ ಹೆಚ್ಚು.

ಹೌದು, ಉದಾಹರಣೆಗೆ ಮಕ್ಕಳನ್ನು ಸ್ಮಾರ್ಟ್‌ಪೋನ್ ಮುಟ್ಟದಂತೆ ಹೆದರಿಸುವುದು ಅಥವಾ ಅವರ ಕೈಗೆ ಫೋನ್ ಸಿಗದಂತೆ ನೋಡಿಕೊಳ್ಳುವಂತಹ ಪ್ರಯತ್ನವನ್ನು ಬಹುತೇಕ ಪೋಷಕರು ಮಾಡುತ್ತಾರೆ. ಇನ್ನು ಕೆಲ ಪೋಷಕರು ಮಕ್ಕಳಿಗೆ ಮೊಬೈಲ್ ನೀಡದೇ ಯಾವಾಗಲೂ ಓದು ಎಂದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಿಮಗೆ ಗೊತ್ತಾ?, ಈ ರೀತಿಯ ಯಾವುದೇ ಪ್ರಯತ್ನ ಸಫಲವಾಗುವುದಿಲ್ಲ. ಬದಲಾಗಿ ಇದು ಹೆಚ್ಚು ಸಮಸ್ಯೆಯನ್ನೇ ಸೃಷ್ಟಿಸುತ್ತದೆ.

ನಿಮ್ಮ ಮಕ್ಕಳು ಸ್ಮಾರ್ಟ್‌ಫೋನಿಗೆ ಅಡಿಕ್ಟ್ ಆಗಿದ್ದಾರೆಯೇ?..ಹೀಗೆ ಬಿಡಿಸಬಹುದು!

ಹಾಗಾಗಿ, ಇಂದಿನ ಲೇಖನದಲ್ಲಿ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗಿದ್ದರೆ ಪೋಷಕರು ಮಾಡಬೇಕಾದ ಕಾರ್ಯಗಳೇನು?, ಮಕ್ಕಳನ್ನು ಸ್ಮಾರ್ಟ್‌ಫೋನಿನಿಂದ ದೂರ ಮಾಡಲು ಇರುವ ದಾರಿಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಸ್ಮಾರ್ಟ್‌ಫೋನ್ ಮೇಲೆ ಆಸಕ್ತಿ ವಹಿಸುವ ಮಕ್ಕಳ ಬಗ್ಗೆ ಪೋಷಕರೂ ತಲೆಕೆಡಿಸಿಕೊಳ್ಳದ ಕಾರಣ ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿರುವುದು ಇಂದಿನ ಲೇಖನದ ಪ್ರಸ್ತುತಿ ಕೂಡ ಹೌದು.

ಮೊದಲು ಪ್ರೀತಿಯೇ ಮುಖ್ಯ

ಮೊದಲು ಪ್ರೀತಿಯೇ ಮುಖ್ಯ

ಪ್ರೀತಿಯಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದನ್ನು ನಾವೇನು ಹೇಳಬೇಕಿಲ್ಲ. ಮಕ್ಕಳಿಗೆ ಪೋಷಕರು ಹೆಚ್ಚು ಪ್ರೀತಿಯನ್ನು ತೋರಿಸಿದಂತೆಲ್ಲಾ ಮಕ್ಕಳು ಸ್ಮಾರ್ಟ್‌ಫೋನ್‌ನಿಂದ ದೂರವಾಗುತ್ತಾರೆ ಎಂದು ಮನಃಶಾಸ್ತ್ರಜ್ಞರು ಹೇಳಿದ್ದಾರೆ. ಅಧ್ಯಯನವೊಂದರ ಪ್ರಕಾರ ಕೇವಲ ಪ್ರೀತಿಯೊಂದೇ ಮಕ್ಕಳನ್ನು ಫೋನ್‌ ಅಡಿಕ್ಟ್‌ನಿಂದ ದೂರ ಮಾಡಬಲ್ಲದು ಎಂದು ಹೇಳಿದೆ.

ಮೊಬೈಲ್ ಮಾಹಿತಿ ಮಕ್ಕಳಿಗೆ ತಿಳಿದಿರಲಿ!

ಮೊಬೈಲ್ ಮಾಹಿತಿ ಮಕ್ಕಳಿಗೆ ತಿಳಿದಿರಲಿ!

ಮಕ್ಕಳು ಉಪಯೋಗಿಸುವ ಗ್ಯಾಜೆಟ್ ಅಥವಾ ಸ್ಮಾರ್ಟ್‌ಫೋನ್‌ ಬಗೆಗೆ ಪೋಷಕರು ಮಕ್ಕಳಿಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ನಿಡುತ್ತಿರಬೇಕು. ಇದರಿಂದ ಅವರಿಗೆ ಫೋನ್ ಬಗ್ಗೆ ಕುತೋಹಲ ಕಡಿಮೆಯಾಗುತ್ತಾ ಬರುತ್ತದೆ. ಒಮ್ಮೆ ಸ್ಮಾರ್ಟ್‌ಫೋನ್ ಬಗ್ಗೆ ಕುತೋಹಲವನ್ನು ಕಳೆದುಕೊಂಡ ಮಕ್ಕಳು ಮತ್ತೆ ಅದಕ್ಕೆ ದಾಸರಾಗುವುದಿಲ್ಲ ಎಂದು ಅಧ್ಯಯನ ಒಂದರಲ್ಲಿ ಹೇಳಲಾಗಿದೆ.

ಮಕ್ಕಳನ್ನು ಗೇಮ್ ಆಡಲು ಬಿಡಿ!

ಮಕ್ಕಳನ್ನು ಗೇಮ್ ಆಡಲು ಬಿಡಿ!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮಕ್ಕಳು ಹೆಚ್ಚು ಗೇಮ್ ಆಡುತ್ತಿದ್ದರೆ ಅದನ್ನು ತಡೆಯಬೇಡಿ. ಮಕ್ಕಳು ಹೆಚ್ಚು ಹೆಚ್ಚು ಗೇಮ್‌ಗಳನ್ನು ಆಡಿದದರೆ ಅವರ ಮನಸ್ಸು ಹೆಚ್ಚು ಚುರುಕಾಗಿರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಮಕ್ಕಳಲ್ಲಿ ಕ್ರಿಯೇಟಿವಿಟಿ ಮತ್ತು ದೈಹಿಕ ಕಾರ್ಯವನ್ನು ಪ್ರೋತ್ಸಾಹಿಸುವ ಗೇಮ್‌ಗಳು ಅವರ ಭವಿಷ್ಯದ ಬೆಳವಣಿಗೆಗೆ ಸಹಕಾರಿ ಎಂದು ಹೇಳಲಾಗಿದೆ.

ಒಂದು ಹಂತದವರೆಗೂ ಇಂಟರ್‌ನೆಟ್ ಬೇಡ!

ಒಂದು ಹಂತದವರೆಗೂ ಇಂಟರ್‌ನೆಟ್ ಬೇಡ!

ಯಾವುದೇ ಕಾರಣಕ್ಕೂ ಮಕ್ಕಳ ಸ್ಮಾರ್ಟ್‌ಫೋನ್ ಬಳಕೆ ಕೇವಲ ಗೇಮ್‌ಗಳನ್ನು ಆಡಲು ಮಾತ್ರ ಸೀಮಿತವಾಗಿರಲಿ. ನಿಮ್ಮ ಮಕ್ಕಳಿಗೆ 14 ವರ್ಷ ತುಂಬುವವರೆಗೂ ಯಾವುದೇ ಕಾರಣಕ್ಕೂ ಇಂಟರ್‌ನೆಟ್‌ ಸಂಪರ್ಕವನ್ನು ನೀಡಬೇಡಿ. ನಂತರ ಅವರಿಗೆ ಇಂಟರ್‌ನೆಟ್ ಕಾರ್ಯದ ಬಗ್ಗೆ ನಿಧಾನವಾಗಿ ತಿಳಿಸಿ. ಇದರಿಂದ ಅವರು ಕೆಟ್ಟ ಕಾರ್ಯಗಳಿಗೆ ಮನಸೋಲುವುದು ತಪ್ಪುತ್ತದೆ.

ವಾಸ್ತವ ಪ್ರಪಂಚದ ಬಗ್ಗೆ ಅರಿವು!

ವಾಸ್ತವ ಪ್ರಪಂಚದ ಬಗ್ಗೆ ಅರಿವು!

ಈ ಎಲ್ಲವಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಮಕ್ಕಳಿಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಟಿವಿ ಅಥವಾ ಸ್ಮಾರ್ಟ್‌ಪೋನ್‌ಗಳಿಂದ ಮಕ್ಕಳು ಫ್ಯಾಂಟಸಿ ಪ್ರಪಂಚಕ್ಕೆ ಕಾಲಿಡುವುದು ಸಾಮಾನ್ಯ. ಹಾಗಾಗಿ, ನಿಮ್ಮ ಮಕ್ಕಳಿಗೆ ವಾಸ್ತವ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡಿ. ಮಕ್ಕಳನ್ನು ಹೊರಗೆ ತಿರುಗಾಡಲು ಕರೆದುಕೊಂಡು ಹೋಗುವುದು ಉತ್ತಮ.

ಮೊಬೈಲ್ ಕೊಟ್ಟು ಕೂರಿಸಬೇಡಿ!

ಮೊಬೈಲ್ ಕೊಟ್ಟು ಕೂರಿಸಬೇಡಿ!

ಮಕ್ಕಳು ಹಠ ಮಾಡುತ್ತಾರೆ ಎಂಬ ಒಂದೇ ಒಂದು ಕಾರಣಕ್ಕೆ ಅವರಿಗೆ ಮೊಬೈಲ್ ಅನ್ನು ಕೊಡುವ ಅಭ್ಯಾಸವನ್ನು ರೂಢಿಸಬೇಡಿ. ಅದರಲ್ಲಿಯೂ ಅತ್ಯಂತ ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಡುವುದು ತಪ್ಪು. ಇನ್ನು ನೀವು ಕೂಡ ಮಕ್ಕಳ ಮುಂದೆ ಮೊಬೈಲ್ ಉಪಯೋಗಿಸುವುದು ಕೂಡ ತಪ್ಪು. ಇದರಿಂದಲೂ ಸಹ ಮಕ್ಕಳು ಫೋನ್‌ಗೆ ಅಡಿಕ್ಟ್ ಆಗುವ ಸಂಭವ ಹೆಚ್ಚಿರುತ್ತದೆ.

Best Mobiles in India

English summary
Smartphone Addiction Causing Problems for Children. How to deal with smartphone addiction in children. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X