Home
ಸುದ್ದಿಜಾಲ

ನಿಮ್ಮ ಪೋನನ್ನು ಪುಸ್ತಕವನ್ನು ಓದುವ ಮೂಡ್‌ಗೆ ಸೆಟ್ ಮಾಡಿಕೊಳ್ಳುವುದು ಹೇಗೆ?

ಯಾವಾಗಲೂ ಸ್ಮಾರ್ಟ್‌ಫೋನ್ ಕೈನಲ್ಲೇ ಇರುವುದರಿಂದ ಪುಸ್ತಕ ಹಿಡಿಯದೇ ಸ್ಮಾರ್ಟ್‌ಫೋನಿನಲ್ಲೇ ಓದುವವರ ಸಂಖ್ಯೆ ಹೆಚ್ಚು. ಆದರೆ, ಇಲ್ಲಿ ಸಮಸ್ಯೆ ಎಂದರೆ, ಸ್ಮಾರ್ಟ್‌ಪೋನಿನಲ್ಲಿ ಓದುವುದು ಪುಸ್ತಕದಲ್ಲಿ ಓದಿದಂತಹ ಅನುಭವ ನೀಡುವುದಿಲ್ಲ ಮತ್ತು ಆ ಅನುಭವ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಆದರೆ, ಸ್ಮಾರ್ಟ್‌ಫೋನಿನಲ್ಲಿ ಓದುವಾಗ ಕಿರಿಕಿರಿಯನ್ನು ಸಹಿಸಿಕೊಳ್ಳಬೇಕೆ?. ಖಂಡಿತಾ ಇಲ್ಲ. ನೀವೀಗ ಸ್ಮಾರ್ಟ್‌ಫೋನಿನಲ್ಲೇ ಸುಲಭವಾಗಿ ಓದುವಂತಹ ಫೀಚರ್ ಒಂದು ಲಭ್ಯವಿದೆ.

'ಹಿಡನ್ ರೀಡರ್ ಮೋಡ್'

ಇತ್ತೀಚೆಗೆ ಗೂಗಲ್ ತನ್ನ ಕ್ರೋಮ್ ವರ್ಷನ್ 75 ಅನ್ನು ಅಪ್ ಡೇಟ್ ಅನ್ನು ರಿಲೀಸ್ ಮಾಡಿರುವ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಈ ಹೊಸ ಅಪ್ಡೇಟ್ ನಲ್ಲಿ ಹಲವು ಉಪಯುಕ್ತ ಫೀಚರ್ಗಳಿವೆ. ಇವುಗಳಲ್ಲಿ ಬಹಳ ಮುಖ್ಯವಾದ ಮತ್ತು ಆಸಕ್ತಿದಾಯಕವಾಗಿರುವ ಫೀಚರ್ ಎಂದರೆ ಅದು 'ಹಿಡನ್ ರೀಡರ್ ಮೋಡ್'. ಏಕೆಂದರೆ, ಇದು ಸ್ಮಾರ್ಟ್‌ಫೋನ್ ಮತ್ತು ಡೆಸ್ಕ್‌ಟಾಪ್ ಅನ್ನು ಓದುವಿಕೆಗೆ ಸಜ್ಜುಗೊಳಿಸುತ್ತದೆ. ಅಂದರೆ, ನೀವು ಇಲ್ಲಿ ಸುಲಭವಾಗಿ ಓದುವಂತೆ ಫೋನನ್ನು ಬದಲಾಯಿಸಿಕೊಳ್ಳಬಹುದಾಗಿದೆ.

 ಹಿಡನ್ ರೀಡರ್ ಮೋಡ್

ಒಂದು ವೇಳೆ ನೀವು ಕೂಡ ಸೀಕ್ರೆಟ್ ರೀಡರ್ ಮೋಡ್ ನ್ನು ಕ್ರೋಮ್ 75 ನಲ್ಲಿ ಆಕ್ಟಿವೇಟ್ ಮಾಡುವುದಕ್ಕೆ ಆಸಕ್ತಿ ವಹಿಸಿದ್ದರೆ ಕೆಲವು ಸರಳವಾಗಿರುವ ಹಂತಗಳನ್ನು ಈ ಕೆಳಗೆ ನಾವು ತಿಳಿಸಿದ್ದೇವೆ. ಅದನ್ನು ಫಾಲೋ ಮಾಡಿ. ಒಂದು ವಿಚಾರ ನೆನಪಿರಲಿ ಈ ಫೀಚರ್ ಇನ್ನು ಅಧಿಕೃತವಾಗಿ ಪ್ರಕಟವಾಗಿಲ್ಲ. ಹಾಗಾಗಿ ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ನಾವು ನಿರೀಕ್ಷಿಸಬಹುದು. ಹಾಗಾದರೆ, ಪ್ರಸ್ತುತ ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 1.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 1.

ಮೊದಲನೆಯದಾಗಿ ನಿಮ್ಮ ಕ್ರೋಮ್ ಬ್ರೌಸರ್ ಅನ್ನು ತೆರೆಯಿರಿ ಮತ್ತು ಮೆನುಗೆ ತೆರಳಿ> ಹೆಲ್ಪ್ > ಅಬೌಟ್ ತೆರೆಯಿರಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ?ಹಂತ 2.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ?ಹಂತ 2.

ಅಲ್ಲಿ ನೀವು ಕ್ರೋಮ್ 75 ಅನ್ನೇ ಬಳಸುತ್ತಿದ್ದೀರಾ ಎಂಬುದನ್ನು ಚೆಕ್ ಮಾಡಿ. ಒಂದು ವೇಳೆ ನೀವು ಹಳೆಯ ಕ್ರೋಮ್ ವರ್ಷನ್ ರನ್ ಮಾಡುತ್ತಿದ್ದರೆ ಅದನ್ನು ಅಪ್ಡೇಟ್ ಮಾಡಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 3.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 3.

ಕ್ರೋಮ್ 75 ಅಪ್‌ಡೇಟ್ ಆದ ನಂತರ ಮತ್ತೆ ಕ್ರೋಮ್ ತೆರೆಯಿರಿ. ನಂತರ ಯುಆರ್ಎಲ್ ಬಾರ್ ನಲ್ಲಿ "chrome://flags/#enable-reader-mode" ಎಂದು ಟೈಪಿಸಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 4.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 4.

ಮೇಲಿನ ಯುಆರ್ಎಲ್ ನಿಮ್ಮನ್ನ 'Enable Reader Mode' ಆಯ್ಕೆಗೆ ಕರೆದುಕೊಂಡು ಹೋಗುತ್ತದೆ. ಡ್ರಾಪ್ ಡೌನ್ ಮೆನುವಿನಲ್ಲಿ ಅನೇಬಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 5.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 5.

ಇದೀಗ 'ರೀಲಾಂಚ್ ನೌ' ಬಟನ್ ಅನ್ನು ಪೇಜಿನ ಕೆಳಭಾಗದಲ್ಲಿ ಪ್ರೆಸ್ ಮಾಡಿ ವೆಬ್ ಬ್ರೌಸರ್ ಅನ್ನು ರೀಸ್ಟಾರ್ಟ್ ಮಾಡಿದಾಗ ರೀಡರ್ ಮೋಡ್ ಎನೇಬಲ್ ಆಗುತ್ತದೆ.

ಹ್ಯಾಂಡಿ ಆಗಿರುವ ಕ್ರೋಮ್ ಟೂಲ್

ಹ್ಯಾಂಡಿ ಆಗಿರುವ ಕ್ರೋಮ್ ಟೂಲ್

ಈ ಹಿಡನ್ ರೀಡರ್ ಮೋಡ್ ಬಹಳ ಹ್ಯಾಂಡಿ ಆಗಿರುವ ಗೂಗಲ್ ಕ್ರೋಮ್ ಟೂಲ್ ಆಗಿದ್ದು, ನ್ಯೂಸ್‌ಗಳ ಸ್ಟೋರಿಯನ್ನು ಸರಳಗೊಳಿಸುತ್ತದೆ ಮತ್ತು ದೊಡ್ಡ ದೊಡ್ಡ ಕಟೆಂಟ್ ಗಳನ್ನು ಕೂಡ ಸುಲಭದಲ್ಲಿ ಓದುವುದಕ್ಕೆ ನೆರವು ನೀಡುತ್ತದೆ. ನೀವು ಭೇಟಿ ನೀಡುವ ವೆಬ್‌ಸೈಟ್ ನಲ್ಲಿರುವ ಎಲ್ಲಾ ಕ್ಲಟ್ಟರ್ ಗಳನ್ನು ಈ ಸೀಕ್ರೆಟ್ ರೀಡರ್ ಮೋಡ್ ರಿಮೂವ್ ಮಾಡುತ್ತದೆ ಮತ್ತು ನೀವು ಓದಬಯಸುವ ಆರ್ಟಿಕಲ್ ನ ಕಡೆಗೆ ಸಂಪೂರ್ಣ ಗಮನವನ್ನು ಕೇಂದ್ರಿಕರಿಸಿ ನಿಮ್ಮ ಓದುವಿಕೆಗೆ ನೆರವು ನೀಡುತ್ತದೆ.

Best Mobiles in India

English summary
Open Chrome (make sure you're running the latest version) and type chrome://flags in the address bar. Press Go. Head to Menu > Find on Page and search for "Enable Reader Mode Toolbar Icon". to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+