ಜೂಮ್‌ ಆಪ್‌ನಲ್ಲಿ 2 ಅಂಶಗಳ ದೃಡೀಕರಣವನ್ನು ಸಕ್ರಿಯಗೊಳಿಸುವುದು ಹೇಗೆ?

|

ಸದ್ಯ ದೇಶದೆಲ್ಲೆಡೆ ಕೊರೊನಾ ವೈರಸ್‌ನ ಆರ್ಭಟ ಇನ್ನು ಕಡಿಮೆ ಆಗಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಕಲ್ಪಿಸಿವೆ. ಸದ್ಯ ವರ್ಕ್ ಫ್ರಂ ಹೋಂ ಮಾಡುವಾಗ ಆನ್‌ಲೈನ್‌ ಮೀಟಿಂಗ್‌ ನಡೆಸಲು ವಿಡಿಯೊ ಕಾನ್ಫರೆನ್ಸ್‌ ಆಪ್‌ಗಳು ನೆರವಾಗಿವೆ. ಅವುಗಳಲ್ಲಿ ಜೂಮ್ ಆಪ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಜೂಮ್‌ ಆಪ್‌ ಬಳಸಿ ವಿಡಿಯೋ ಕಾನ್ಪರೆನ್ಸ್‌ ನಡೆಸುವಾಗ ಸಾಕಷ್ಟು ಬಾರಿ ಹ್ಯಾಕಿಂಗ್‌ ಆಗಿರುವ ಸುದ್ದಿ ಆಗಿತ್ತು. ಇದೇ ಕಾರಣಕ್ಕೆ ಜೂಮ್‌ ಸುರಕ್ಷಿತವಲ್ಲ ಎಂದು ಹೇಳಲಾಗಿತ್ತು. ಇದೀಗ ಜೂಮ್‌ ಇದನ್ನು ತಡೆಗಟ್ಟುವ ಸಲುವಾಗಿ ಎರಡು ಅಂಶಗಳ ದೃಡೀಕರಣವನ್ನು ಪ್ಲಾಟ್‌ಫಾರ್ಮ್‌ಗೆ ಸೇರಿಸಿದೆ.

ಜೂಮ್‌

ಹೌದು, ಜನಪ್ರಿಯ ವಿಡಿಯೊ ಕಾನ್ಫರೆನ್ಸ್‌ ಆಪ್‌ ಜೂಮ್‌,ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಅಂಶಗಳ ದೃಡೀಕರಣವನ್ನು ಸೇರಿಸಿದೆ. ಇದು ಜೂಮ್‌ ಮೂಲಕ ವಿಡಿಯೋ ಕಾನ್ಪರೆನ್ಸ್‌ ನಡೆಸುವ ಗ್ರೂಪ್‌ ಆಡ್ಮಿನ್‌ ಮತ್ತು ಸಂಸ್ಥೆಗಳಿಗೆ ತಮ್ಮ ಬಳಕೆದಾರರನ್ನು ರಕ್ಷಿಸಲು ಮತ್ತು ಭದ್ರತಾ ಉಲ್ಲಂಘನೆಯನ್ನು ತಡೆಯಲು ಅನುಕೂಲ ಮಾಡಿಕೊಡಲಿದೆ. ವಿಡಿಯೋ ಕಾನ್ಪರೆನ್ಸ್ನಲ್ಲಿ ಭಾಗವಹಿಸುವ ಮುನ್ನ ಎರಡು ಅಂಶಗಳ ದೃಡೀಕರಣವನ್ನು ಮಾಡಬೇಕಿರುವುದರಿಂದ ಹ್ಯಾಕಿಂಗ್‌ ದಾಳಿಯನ್ನು ತಡೆಗಟ್ಟಬಹುದು ಎನ್ನಲಾಗಿದೆ. ಹಾಗಾದ್ರೆ ಜೂಮ್‌ ಆಪ್‌ನಲ್ಲಿ ಎರಡು ಅಂಶಗಳ ದೃಡೀಕರಣವನ್ನು ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಜೂಮ್‌

ಇನ್ನು ಜೂಮ್‌ ಪರಿಚಯಿಸಿರುವ 2 ಎಫ್ಎ ಸುರಕ್ಷಿತ ಲಾಗಿನ್ ಫೀಚರ್ಸ್‌ ಆಗಿದ್ದು, ಆನ್‌ಲೈನ್ ಬಳಕೆದಾರರನ್ನು ಪ್ರಕ್ರಿಯೆಯ ಮೂಲಕ ಗುರುತಿಸಲು ಸಹಾಯ ಮಾಡುತ್ತದೆ. ಇದು ಖಾತೆಯ ಮಾಲೀಕತ್ವವನ್ನು ದೃಡೀಕರಿಸುವ ಎರಡು ಅಥವಾ ಹೆಚ್ಚಿನ ಮಾಹಿತಿಯನ್ನು ಪ್ರಸ್ತುತಪಡಿಸಲು ಅವಕಾಶವನ್ನ ನೀಡಲಿದೆ. ಇದರಿಂದ ಇನ್ನುಮುಂದೆ, ಜೂಮ್ ಬಳಕೆದಾರರು ಪಾಸ್‌ವರ್ಡ್ ಮತ್ತು ಪಿನ್ ಅಥವಾ ಸ್ಮಾರ್ಟ್‌ಕಾರ್ಡ್ ಅಥವಾ ಮೊಬೈಲ್ ಡಿವೈಸ್‌ ಅಥವಾ ಫಿಂಗರ್‌ಪ್ರಿಂಟ್ ಅಥವಾ ವಾಯ್ಸ್‌ನಂತಹ ಬಯೋಮೆಟ್ರಿಕ್ ದೃಡೀಕರಣ ಅಂಶಗಳ ಮಾಹಿತಿಯನ್ನು ಬಳಸಬೇಕಾಗುತ್ತದೆ.

ಪ್ಲಾಟ್‌ಫಾರ್ಮ್‌

ಇದಲ್ಲದೆ ಈ ಪ್ಲಾಟ್‌ಫಾರ್ಮ್‌ನಲ್ಲಿ 2 ಎಫ್‌ಎ ಫೀಚರ್ಸ್‌ಅನ್ನು ಪರಿಚಯಿಸುವ ಮುಖ್ಯ ಉದ್ದೇಶ ಬಳಕೆದಾರರನ್ನು ಮೌಲ್ಯೀಕರಿಸಲು ಮತ್ತು ಉಲ್ಲಂಘನೆಗಳಿಂದ ರಕ್ಷಿಸುವುದಾಗಿದೆ. ಇದರಿಂದ ಬಳಕೆದಾರರು ಸಮಯ-ಆಧಾರಿತ ಒನ್-ಟೈಮ್ ಪಾಸ್‌ವರ್ಡ್ (TOTP) ಪ್ರೋಟೋಕಾಲ್ ಅನ್ನು ಬೆಂಬಲಿಸುವ ಮೂರನೇ ವ್ಯಕ್ತಿಯ ಸಹ ದೃಡೀಕರಣ ಅಪ್ಲಿಕೇಶನ್‌ಗಳನ್ನು ತರಬಹುದಾಗಿದೆ. ಇದಕ್ಕಾಗಿ ಗೂಗಲ್ ದೃಡೀಕರಣ, ಮೈಕ್ರೋಸಾಫ್ಟ್ ಅಥೆಂಟಿಕೇಟರ್, ಫ್ರೀಒಟಿಪಿ ಇತ್ಯಾದಿ ಸೇರಿವೆ.

ಜೂಮ್‌ನಲ್ಲಿ ನೀವು 2FA ಅನ್ನು ಸಕ್ರಿಯಗೊಳಿಸುವುದು ಹೇಗೆ?

ಜೂಮ್‌ನಲ್ಲಿ ನೀವು 2FA ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಮೊದಲು, ಜೂಮ್ ಡ್ಯಾಶ್‌ಬೋರ್ಡ್‌ಗೆ ಸೈನ್ ಇನ್ ಮಾಡಿ.

ಹಂತ:2 ನ್ಯಾವಿಗೇಷನ್ ಮೆನುವಿನಿಂದ, 'ಅಡ್ವಾನ್ಸ್ಡ್' ಕ್ಲಿಕ್ ಮಾಡಿ, ನಂತರ ‘ಸೆಕ್ಯುರಿಟಿ' ಕ್ಲಿಕ್ ಮಾಡಿ.

ಹಂತ:3 ಮುಂದೆ, ಎರಡು ಅಂಶಗಳ ದೃಡೀಕರಣದೊಂದಿಗೆ ಸೈನ್ ಇನ್ ಮಾಡಿ ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಹಂತ:4 ನಂತರ, ಇದಕ್ಕಾಗಿ 2FA ಅನ್ನು ಸಕ್ರಿಯಗೊಳಿಸಲು ಈ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ: ನಿಮ್ಮ ಖಾತೆಯ ಎಲ್ಲ ಬಳಕೆದಾರರು, ಖಾತೆಯ ಎಲ್ಲ ಬಳಕೆದಾರರಿಗಾಗಿ 2 ಎಫ್ಎ ಸಕ್ರಿಯಗೊಳಿಸಿ.

ಹಂತ:5 ನಿರ್ದಿಷ್ಟ ಪಾತ್ರಗಳನ್ನು ಹೊಂದಿರುವ ಬಳಕೆದಾರರು: ನಿರ್ದಿಷ್ಟಪಡಿಸಿದ ಪಾತ್ರಗಳೊಂದಿಗೆ 2FA ಅನ್ನು ಸಕ್ರಿಯಗೊಳಿಸಿ. ನಿರ್ದಿಷ್ಟಪಡಿಸಿದ ಪಾತ್ರಗಳನ್ನು ಆರಿಸಿ ಕ್ಲಿಕ್ ಮಾಡಿ, ಪಾತ್ರಗಳನ್ನು ಆರಿಸಿ, ನಂತರ ಸರಿ ಕ್ಲಿಕ್ ಮಾಡಿ.

ಹಂತ:6 ನಿರ್ದಿಷ್ಟ ಗುಂಪುಗಳಿಗೆ ಸೇರಿದ ಬಳಕೆದಾರರು: ನಿರ್ದಿಷ್ಟಪಡಿಸಿದ ಗುಂಪುಗಳಲ್ಲಿರುವ ಬಳಕೆದಾರರಿಗಾಗಿ 2FA ಅನ್ನು ಸಕ್ರಿಯಗೊಳಿಸಿ. ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಿ, ಗುಂಪುಗಳನ್ನು ಆರಿಸಿ, ನಂತರ ಸರಿ ಕ್ಲಿಕ್ ಮಾಡಿ.

ಹಂತ:7 ಅಂತಿಮವಾಗಿ, ನಿಮ್ಮ 2FA ಸೆಟ್ಟಿಂಗ್‌ಗಳನ್ನು ಖಚಿತಪಡಿಸಲು ‘ಸೇವ್‌' ಕ್ಲಿಕ್ ಮಾಡಿ.

Most Read Articles
Best Mobiles in India

Read more about:
English summary
Activating two-factor authentication will help you protect your own account as well as stop hackers from getting into meetings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X