ಹೊಸ ಐಫೋನ್‌ 13ನಲ್ಲಿದೆ ಸಿನಿಮಾಮೋಡ್ ಫೀಚರ್; ಏನಿದರ ಸ್ಪೆಷಲ್!

|

ಕೆಲ ದಿನಗಳ ಹಿಂದೆಯಷ್ಟೇ ಆಪಲ್‌ ಕಂಪೆನಿ ಐಫೋನ್ 13 ಸರಣಿಯನ್ನು ಲಾಂಚ್‌ ಮಾಡಿತ್ತು. ಐಫೋನ್‌ 13 ಸರಣಿ ಸಾಕಷ್ಟು ಹೊಸ ಮಾದರಿಯ ಅಪ್ಡೇಟ್‌ಗಳನ್ನು ಒಳಗೊಂಡಿದೆ. ಇನ್ನು ಈ ಸರಣಿಯ ಕ್ಯಾಮೆರಾ ವಿಭಾಗದಲ್ಲಿ ಸಂಪೂರ್ಣವಾಗಿ ಹೊಸ ಕ್ಯಾಮೆರಾ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಕ್ಯಾಮೆರಾ ಫೀಚರ್ಸ್‌ ಮಾತ್ರವಲ್ಲ ಆಪಲ್ ಈ ವರ್ಷ ವೀಡಿಯೋ ಫ್ರಂಟ್‌ನಲ್ಲಿ ಹೊಸತನದ ಫೀಚರ್ಸ್‌ಗಳನ್ನು ಅಳವಡಿಸಿದೆ. ಇನ್ನು ಈ ಹೊಸ ಐಫೋನ್ 13 ನಲ್ಲಿ ವಿಶೇಷವಾಗಿ ಸಿನೆಮಾಟಿಕ್ ಮೋಡ್ ಎಂಬ ಹೊಸ ಫೀಚರ್ ಅನ್ನು ಸೇರಿಸಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಕಳೆದ ವಾರ ಪರಿಚಯಿಸಿದ ಐಫೋನ್ 13 ಸರಣಿ ನೂತನ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇದರಲ್ಲಿ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಸೇರಿಸಿರುವ ಸಿನೆಮಾಟಿಕ್‌ ಮೋಡ್‌ ಫೀಚರ್ಸ್‌ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ಸಿನಿಮೀಯ ಮೋಡ್ ಮೂಲಕ ವೀಡಿಯೋ ಫೀಲ್ಡ್‌ನಲ್ಲಿ ಹಿಡಿತ ಸಾಧಿಸುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ಆಪಲ್‌ ಸಿನಿಮಾಟಿಕ್‌ ಮೋಡ್‌ ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿರಿ.

ಆಪಲ್‌ನ ಸಿನಿಮಾ ಮೋಡ್ ಎಂದರೇನು?

ಆಪಲ್‌ನ ಸಿನಿಮಾ ಮೋಡ್ ಎಂದರೇನು?

ಸಿನಿಮಾ ಮೋಡ್‌ ಅನ್ನೊದು ಆಪಲ್‌ ಐಫೋನ್‌13 ಸರಣಿಯ ಕ್ಯಾಮರಾ ಅಪ್ಲಿಕೇಶನ್‌ಲ್ಲಿ ಸೇರಿಸಲಾದ ಹೊಸ ಫೀಚರ್ಸ್‌ ಆಗಿದೆ. ಇದು ಈ ಹಿಂದಿನ ಯಾವುದೇ ಐಫೋನ್‌ಗಳಲ್ಲಿಯೂ ಇಲ್ಲದ ಫೀಚರ್ಸ್‌ ಆಗಿದೆ. ಇನ್ನು ಈ ಫೀಚರ್ಸ್‌ ಹೆಸರೇ ಸೂಚಿಸುವಂತೆ ನೀವು ಚಿತ್ರಿಕರಿಸುವ ವೀಡಿಯೋಗಳ ಡೆಪ್ತ್‌ ಗಾತ್ರವನ್ನು ತಿಳಿಯಲು ಅವಕಾಶ ನೀಡಲಿದೆ. ಪ್ರಸ್ತುತ, ಈ ಫೀಚರ್ಸ್‌ 16:9 ರಚನೆಯ ಅನುಪಾತದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೀಚರ್ಸ್‌ ಬಳಸಿ 1080p 30fps ನಲ್ಲಿ ವೀಡಿಯೊ ರೆಕಾರ್ಡ್‌ ಮಾಡಲು ಅವಕಾಶ ನೀಡಲಿದೆ.

ಐಫೋನ್‌

ಇನ್ನು ಈ ಫೀಚರ್ಸ್‌ ಅನ್ನು ಬಳಸುವುದಕ್ಕಾಗಿಯೇ ಐಫೋನ್‌ 13ನಲ್ಲಿ ರೆಕಾರ್ಡಿಂಗ್ ಮಾಡುವಾಗ, ಮೇಲಿನ ರೈಟ್‌ಸೈಡ್‌ನಲ್ಲಿ ಹೊಸ ಬಟನ್ ಕಾಣಲಿದೆ. ಅದರಲ್ಲಿ ನೀವು ವೀಡಿಯೋ ರೇಕಾರ್ಡಿಂಗ್‌ ಅಪರ್ಚರ್ ಸಂಖ್ಯೆಯನ್ನು ನೋಡಬಹುದಾಗಿದೆ. ಇದರಲ್ಲಿ ನೀವು ಚಿತ್ರೀಕರಿಸಿರುವ ವೀಡಿಯೋ ತುಣುಕಿನಲ್ಲಿ ಡೆಪ್ತ್‌ ಆಫ್‌ ಫಿಲ್ಡ್‌ ಪಡೆಯಲು ನೀವು ಈ ಬಟನ್‌ ಅನ್ನು ಟ್ಯಾಪ್ ಮಾಡಬಹುದು. ಇದಲ್ಲದೆ ಯಾವುದೇ ಒಂದು ವಿಷಯವು ಯಾವಾಗ ಫ್ರೇಮ್‌ಗೆ ಬರಲಿದೆ ಅನ್ನೊದನ್ನ ಇದು ಸುಲಭವಾಗಿ ಊಹೆ ಮಾಡಲಿದೆ. ಹಾಗೆಯೇ ಫ್ರೇಮ್‌ಗೆ ಬಂದ ನಂತರ ಅದರ ಕಡೆಗೆ ಆಟೋಮ್ಯಾಟಿಕ್‌ ಆಗಿ ಫೋಕಸ್‌ ಮಾಡಲಿದೆ. ಇದಲ್ಲದೆ ಐಫೋನ್ ಕ್ಯಾಮರಾ ಯಾವಾಗ ರಿಯಲ್‌ ಟೈಂನಲ್ಲಿ ಮತ್ತು ಪೋಸ್ಟ್ ಶೂಟಿಂಗ್‌ನಲ್ಲಿ ಫೋಕಸ್ ಬದಲಾಯಿಸಬೇಕು ಅನ್ನೊದನ್ನ ನೀವೇ ನಿರ್ಧಾರ ಮಾಡಬಹುದು. ಜೊತೆಗೆ ಡಾಲ್ಬಿ ವಿಷನ್ ಎಚ್‌ಡಿಆರ್ ಅನ್ನು ಸಿನಿಮ್ಯಾಟಿಕ್ ಮೋಡ್ ಬೆಂಬಲಿಸುತ್ತದೆ.

ಸಿನಿಮಾಟಿಕ್‌ ಮೋಡ್‌ ಹೇಗೆ ಕೆಲಸ ಮಾಡುತ್ತದೆ?

ಸಿನಿಮಾಟಿಕ್‌ ಮೋಡ್‌ ಹೇಗೆ ಕೆಲಸ ಮಾಡುತ್ತದೆ?

ಸಿನೆಮಾಟಿಕ್ ಮೋಡ್‌ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಲು ನೀವು ಕ್ಯಾಮೆರಾ ಆಪ್ ಅನ್ನು ತೆರೆಯಬೇಕು. ರೆಕಾರ್ಡಿಂಗ್ ಪ್ರಾರಂಭಿಸಿದ ನಂತರ ಬಳಕೆದಾರರು ಮೊಬೈಲ್‌ ಅನ್ನು ಅತ್ತ ಇತ್ತ ಮಾಡಿದರೂ ಕೂಡ ರೇಕಾಡಿಂಗ್‌ ಕಂಟೆಂಟ್‌ ಮೇಲೆ ತನ್ನ ಫೋಕಸ್‌ ಅನ್ನು ಮಾಡಲಿದೆ. ಐಫೋನ್‌ 13 ನಲ್ಲಿ ಸಿನಿಮಾ ಮೋಡ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಲು ಆರಂಭಿಸಿದರೆ, ಫೂಟೇಜ್ ಅನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ. ಆದರೆ ಇದರಲ್ಲಿರುವ ಪ್ರತಿಯೊಂದು ಫ್ರೇಮ್‌ ಡೆಪ್ತ್‌ ಮಾಹಿತಿಯನ್ನು ದಾಖಲಿಸುತ್ತದೆ. ಇದು ಈ ಫೋನ್‌ಗಳ ಹೊಸ A15 ಬಯೋನಿಕ್ ಚಿಪ್‌ನ ಹೆಚ್ಚಿನ ಸಂಸ್ಕರಣಾ ಶಕ್ತಿಯಿಂದ ಸಾಧ್ಯವಾಗಲಿದೆ. ಇದು ಕೇವಲ ಐಫೋನ್ 13 ಅಲ್ಲಿ ಮಾತ್ರ ಲಭ್ಯವಿದೆ. ಈ ಹಿಂದಿನ ಐಫೋನ್ 12 ಸರಣಿ ಸೇರಿದಂತೆ ಯಾವುದೇ ಐಫೋನ್‌ಗಳಲ್ಲಿ ಲಭ್ಯವಿಲ್ಲ.

ಮ್ಯಾಕ್‌ನೊಂದಿಗೆ ಹೊಂದಾಣಿಕೆ

ಮ್ಯಾಕ್‌ನೊಂದಿಗೆ ಹೊಂದಾಣಿಕೆ

ಸಿನೆಮಾಟಿಕ್ ಮೋಡ್ ಡಾಲ್ಬಿ ವಿಷನ್ HDR ನಲ್ಲಿ ವಿಡಿಯೋ ರೆಕಾರ್ಡಿಂಗ್‌ ಮಾಡಲು ಅವಕಾಶ ನೀಡಲಿದೆ. ಇದು ಫೋನಿನಲ್ಲಿರುವ ಎಲ್ಲಾ ಮೂರು ಹಿಂಬದಿಯ ಕ್ಯಾಮರಾಗಳಲ್ಲಿ ಹಾಗೂ ಸಿಂಗಲ್ ಫ್ರಂಟ್ ಕ್ಯಾಮೆರಾದಲ್ಲಿ ಲಭ್ಯವಿದೆ. ಸಿನಿಮ್ಯಾಟಿಕ್ ಮೋಡ್ ಫೂಟೇಜ್ ಮ್ಯಾಕ್ ಸಿಸ್ಟಂಗಳಲ್ಲಿ ಫೈನಲ್ ಕಟ್ ಪ್ರೊ ಮತ್ತು ಐಮೂವಿಯೊಂದಿಗೆ ಸೆಟ್‌ ಆಗಲಿದೆ. ಅದರಲ್ಲಿಯೂ ಎಡಿಟ್ ಮಾಡುವಾಗ ಬಳಕೆದಾರರು ಫಿಲ್ಡ್‌ ಡೆಪ್ತ್‌ ಅನ್ನು ಬದಲಾಯಿಸಲು ಅವಕಾಶ ಮಾಡಿಕೊಡಲಿದೆ.

Best Mobiles in India

English summary
Cinematic Mode records video footage in Dolby Vision HDR and is available across all three rear cameras on the phone as well as the single front camera on the iPhone 13 Series.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X