ಇನ್ಮುಂದೆ ಸೆಕೆಂಡ್‌ ಹ್ಯಾಂಡ್ ಮೊಬೈಲ್‌ಗೂ ಬರುತ್ತಿವೆ ಒಳ್ಳೆಯ ದಿನಗಳು!

|

ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಹೊಸ ಮೊಬೈಲ್‌ ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಹಾಗಾಗಿ, ಗ್ರಾಹಕರು ಕೂಡ ಇಂದಿನ ಜಮಾನಕ್ಕೆ ತಕ್ಕಂತೆ ಹೊಸ ಮೊಬೈಲ್‌ ಫೋನ್‌ ಖರೀದಿ ಮಾಡುತ್ತಿದ್ದಾರೆ. ಆದರೆ, ಹೊಸ ಮೊಬೈಲ್‌ ಖರೀದಿ ವೇಳೆ ನಮ್ಮಲ್ಲಿರುವ ಹಳೆಯ ಮೊಬೈಲ್‌ ಫೋನ್‌ ಏನು ಮಾಡುವುದು ಎಂಬ ಚಿಂತೆ ಗ್ರಾಹಕರದ್ದು. ಆದರೆ, ಚಿಂತಿಸಬೇಡಿ. ಏಕೆಂದರೆ, ಹಳೆ ಮೊಬೈಲ್‌ಗಳ ಮಾರಾಟಕ್ಕೂ ಈಗ ಒಳ್ಳೆಯ ದಿನಗಳು ಬಂದಿವೆ ಮತ್ತು ಬರುತ್ತಿವೆ.

ಹೌದು, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಮೊಬೈಲ್‌ ಫೋನ್‌ ಖರೀದಿ ಹೆಚ್ಚಾಗಿದ್ದು, ಜೊತೆಗೆ ಮೊಬೈಲ್ ಎಕ್ಸ್‌ಚೇಂಜ್ ಮಾಡುವುದು ಕೂಡ ಸಾಮಾನ್ಯವಾಗುತ್ತಿದೆ. ಸಮೀಕ್ಷೆಯೊಂದರ ಪ್ರಕಾರ ಶೇ.40ರಷ್ಟು ಮೊಬೈಲ್‌ ಫೋನ್‌ ಬಳಕೆದಾರರು ಒಂದು ವರ್ಷಕ್ಕಿಂತ ಮುಂಚೆಯೇ ತಮ್ಮ ಮೊಬೈಲ್‌ ಫೋನ್‌ಗಳನ್ನು ಬದಲಾಯಿಸುತ್ತಾರೆ. ಶೇ.2ರಷ್ಟು ಮಂದಿ ನಾಲ್ಕು ವರ್ಷದ ಬಳಿಕ ಕೂಡ ಒಂದೇ ಮೊಬೈಲ್‌ ಫೋನ್‌ ಬಳಕೆ ಮಾಡುತ್ತಾರೆ. ಹಾಗಾಗಿ ದೊಡ್ಡ ದೊಡ್ಡ ಮೊಬೈಲ್ ಕಂಪೆನಿಗಳು ಹೊಸ ಪ್ಲಾನ್ ಮಾಡಿಕೊಂಡಿವೆ.

ಇನ್ಮುಂದೆ ಸೆಕೆಂಡ್‌ ಹ್ಯಾಂಡ್ ಮೊಬೈಲ್‌ಗೂ ಬರುತ್ತಿವೆ ಒಳ್ಳೆಯ ದಿನಗಳು!

ಐಫೋನ್, ಸ್ಯಾಮ್‌ ಸಂಗ್‌ ಸೇರಿದಂತೆ ಪ್ರಮುಖ ಕಂಪೆನಿಯ ಬಳಸಿದ ಮೊಬೈಲ್‌ಗ‌ಳನ್ನು ಸ್ಥಳೀಯರಿಂದ ಖರೀದಿಸಲಿವೆಯಂತೆ. ಈ ವಿಚಾರವಾಗಿ ದೊಡ್ಡ ಸ್ಮಾರ್ಟ್‌ಫೋನ್‌ ಕಂಪೆನಿಗಳ ಜೊತೆಗೆ ಮಾತುಕತೆ ನಡೆಯುತ್ತಿದ್ದು, ಈ ಮೂಲಕ ಕಡಿಮೆ ಬೆಲೆಗೆ ಕೆಲ ತಿಂಗಳುಗಳ ವಾರಂಟಿಯೊಂದಿಗೆ ಬಳಸಿದ ಪ್ರಮಾಣಿಕೃತ ಮೊಬೈಲ್‌ಗ‌ಳು ಗ್ರಾಹಕರ ಕೈಗೆ ಸಿಗಲಿವೆ. ಈ ಮೂಲಕಹೊಸ ಮೊಬೈಲ್‌ ಖರೀದಿ ವೇಳೆ ನಮ್ಮಲ್ಲಿರುವ ಹಳೆ ಮೊಬೈಲ್‌ ಬದಲಾವಣೆ ಮಾಡಲು ಪ್ರತ್ಯೇಕ ವ್ಯವಸ್ಥೆ ಹುಟ್ಟಲಿದೆ ಎಂದು ಹೇಳಲಾಗಿದೆ.

ಆನ್‌ಲೈನ್‌ನಲ್ಲಿ ಹೊಸ ಮೊಬೈಲ್‌ ಖರೀದಿಸುವ ಸಮಯದಲ್ಲಿ 'ಹಳೆ ಮೊಬೈಲ್‌ ಎಕ್ಸೇಂಜ್' ಲಿಂಕ್‌ ಕ್ಲಿಕ್‌ ಮಾಡಿ, ನಮ್ಮಲ್ಲಿರುವ ಹಳೆ ಫೋನ್‌ ಮಾಡೆಲ್‌ ನಂಬರ್‌ ಹಾಕಿದರೆ, ಹಳೆ ಫೋನ್‌ಗೆ ದೊರಕುವ ಬೆಲೆ ಕಾಣುತ್ತದೆ. ಆದರೆ, ಎಕ್ಸ್‌ಚೇಂಜ್ ಮಾಡುವ ಬೆಲೆ ಮಾತ್ರ ತುಂಬಾ ಕಡಿಮೆ ಇರುತ್ತದೆ. ಇದನ್ನು ಮನಗಂಡಿರುವ ಮೊಬೈಲ್ ಕಂಪೆನಿಗಳು ಬಳಸಿದ ಮೊಬೈಲ್‌ಗ‌ಳನ್ನು ಸ್ಥಳೀಯರಿಂದ ಉತ್ತಮ ಬೆಲೆಗೆ ಖರೀದಿಸಿ ವಾರಂಟಿಯೊಂದಿಗೆ ಬಳಸಿದ ಪ್ರಮಾಣಿಕೃತ ಪತ್ರದ ಮೂಲಕ ಮತ್ತೆ ಮೊಬೈಲ್ ಅನ್ನು ಮಾರಲು ಮುಂದಾಗಿವೆ ಎಂದು ಹೇಳಲಾಗಿದೆ.

ಇನ್ಮುಂದೆ ಸೆಕೆಂಡ್‌ ಹ್ಯಾಂಡ್ ಮೊಬೈಲ್‌ಗೂ ಬರುತ್ತಿವೆ ಒಳ್ಳೆಯ ದಿನಗಳು!

ಇಂದಿನ ದಿನಗಳಲ್ಲಿ ಶೇ.75ರಷ್ಟು ಮಂದಿ ಮೊಬೈಲ್‌ ಫೋನ್‌ ಖರೀದಿಗೆ 10,000 ರೂ.ಗೂ ಹೆಚ್ಚಿನ ಹಣ ಹೂಡುತ್ತಿದ್ದು, ಕೇವಲ ಶೇ.25ರಷ್ಟು ಮಂದಿ 5 ರಿಂದ 10 ಸಾವಿರ ಮತ್ತು 15 ಸಾವಿರಕ್ಕೂ ಹೆಚ್ಚಿನ ದರದ ಮೊಬೈಲ್‌ ಖರೀದಿಸುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳಿರುವುದರಿಂದ ಮೊಬೈಲ್ ಕಂಪೆನಿಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ. ಹಾಗಾಗಿ, ಆಪಲ್‌, ಸ್ಯಾಮ್‌ಸಂಗ್ ಕಂಪೆನಿಯ ಬಳಸಿದ ಸ್ಮಾರ್ಟ್‌ಫೋನ್‌ಗಳು ವ್ಯಾರಂಟಿ ಜೊತೆಗೆ ಪ್ರಾಮಾಣಿಕೃತ ನವೀಕರಣವಾಗಿ ಗ್ರಾಹಕರ ಕೈಗೆ ಸಿಗುವ ದಿನಗಳು ದೂರವಿಲ್ಲ.

Best Mobiles in India

English summary
Mobile Exchange work in future. Buy Certified Pre-Owned, Refurbished, Box Opened Mobiles & Tablets. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X