ಆಪಲ್ ಉಚಿತವಾಗಿ ನೀಡುತ್ತಿದೆ ರೂ.20000 ಮೌಲ್ಯದ ಹೆಡ್ ಫೋನ್: ಪಡೆಯುವುದು ಹೇಗೆ..?
ಗ್ಯಾಜೆಟ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ವಹಿವಾಟು ನಡೆಸುವವರು ಎಂದರೆ ವಿದ್ಯಾರ್ಥಿಗಳು. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಗ್ಯಾಜೆಟ್ ಕಂಪನಿಗಳು ವಿದ್ಯಾರ್ಥಿ ಬಳಗವನ್ನು ಸೆಳೆಯಲು ಹಲವಾರು ರೀತಿಯಲ್ಲಿ ಕಸರತ್ತು ಮಾಡುವುದನ್ನು ನಾವು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಟೆಕ್ ದೈತ್ಯ ಆಪಲ್ ಸಹ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿದೆ. ಇದರ ಮೂಲಕ ಆಪಲ್ ತನ್ನ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.

ಆಪಲ್ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಬ್ಯಾಕ್ ಟು ಸ್ಕೂಲ್ ಪ್ರೋಮೋಷನ್ ಆಫರ್ ಅನ್ನು ನೀಡಲು ಮುಂದಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿರುವುದಲ್ಲದೇ, ತನ್ನ ವಸ್ತುಗಳನ್ನು ಖರೀದಿಸಿದ ಸಂದರ್ಭದಲ್ಲಿ ಉಚಿತವಾಗಿ ಬಿಟ್ಸ್ ಹೆಡ್ ಫೋನ್ ವೊಂದನ್ನು ಉಚಿತವಾಗಿ ನೀಡಲಿದೆ. ಇದು ಸಹ ಉತ್ತಮ ಗುಣಮಟ್ಟದಾಗಿರಲಿದ್ದು, ಇದರ ಮೊಹಕ್ಕೆ ಬೀಳುವ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಆಪಲ್ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ. ಈ ಹೆಡ್ ಫೋನ್ ಬೆಲೆ ರೂ. 20,999ಆಗಿದೆ.

ಆಪಲ್ ಸ್ಟೋರ್ ನಲ್ಲಿ ಖರೀದಿಸಿದರೆ ಮಾತ್ರ..!
ಆಪಲ್ ಸ್ಟೋರ್ ಗಳಲ್ಲಿ ಆಪಲ್ ಮ್ಯಾಕ್ ಮತ್ತು ಆಪಲ್ ಐಪ್ಯಾಡ್ ಗಳನ್ನು ಖರೀದಿಸಿದವರಿಗೆ ಮಾತ್ರವೇ ಉಚಿತವಾಗಿ ರೂ. 20,999 ಮೌಲ್ಯದ ಬಿಟ್ಸ್ ಹೆಡ್ ಫೋನ್ ದೊರೆಯಲಿದೆ. ಇಲ್ಲವಾದರೆ ಈ ಆಫರ್ ದೊರೆಯುವುದಿಲ್ಲ. ಅಲ್ಲದೇ ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ ಸೀಮಿತವಾಗಿರುವ ಆಫರ್ ಆಗಿದ್ದು, ಬೇರೆಯವರಿಗೆ ಲಭ್ಯವಿಲ್ಲ. ಅಲ್ಲದೇ ಆಪಲ್ ಎಜುಕೇಷನ್ ಸ್ಟೋರ್ ಮೂಲಕವೂ ಖರೀದಿ ಮಾಡಬಹುದಾಗಿದೆ.

ಬಿಟ್ಸ್ ಸೊಲೊ 3 ವೈರ್ ಲೈಸ್ ಹೆಡ್ ಫೋನ್:
ಆಪಲ್ ಉಚಿತವಾಗಿ ನೀಡುತ್ತಿದೆ ಎನ್ನಲಾಗಿರುವ ಉಚಿತ ಹೆಡ್ ಫೋನ್ ಹೆಚ್ಚಿನ ಗುಣಮಟ್ಟದ್ದು,. ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡಿರುವ ಬಿಟ್ಸ್ ಕಂಪನಿಯದ್ದು, ಇದೊಂದು ಬ್ರಾಂಡೆಡ್ ಹೆಡ್ ಫೋನ್ ಆಗಿದ್ದು, ರೂ. 20,999ಕ್ಕೆ ಮಾರಾಟವಾಗಲಿರುವ ಬಿಟ್ಸ್ ಸೊಲೊ 3 ವೈರ್ ಲೈಸ್ ಹೆಡ್ ಫೋನ್ ಆಗಿದೆ. ಇದರೊಂದಿಗೆ ಪವರ್ ಬಿಟ್ಸ್ 3 ವೈರ್ ಲೈಸ್ ಹೆಡ್ ಫೋನ್ ಅನ್ನು ನೀಡಲಿದೆ. ಇದು ಎರಡು ಬೇರೆ ಬೇರೆಯದಾಗಿದ್ದು, ಖರೀದಿಯ ಮೇಲೆ ಯಾವುದು ಸಿಗಲಿದೆ ಎನ್ನುವುದು ತೀರ್ಮಾನವಾಗಲಿದೆ.

ಸಾಮಾನ್ಯರಿಗೂ ಆಫರ್ ಇದೆ:
ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ ಉಚಿತ ಹೆಡ್ ಫೋನ್ ನೀಡಲಾಗುತ್ತಿದ್ದು, ಇದನ್ನು ಬಿಟ್ಟು ಸಾಮಾನ್ಯ ಖರೀದಿದಾರರಿಗೆ ತನ್ನ ವಸ್ತುಗಳ ಬೆಲೆಯಲ್ಲಿ ಶೇ.20ರ ವರೆಗೂ ಕಡಿತವನ್ನು ಮಾಡಿದ್ದು, ಇದು ವಸ್ತುಗಳ ಮೇಲೆ ನಿರ್ಧಾರಿತವಾಗಲಿದೆ. ಸುಮಾರು ರೂ.10000ದ ವರೆಗೂ ಕಡಿತವನ್ನು ಇದರಲ್ಲಿ ಕಾಣಬಹುದಾಗಿದೆ.

ಯಾವುದಕ್ಕೇ ಯಾವುದು:
ಆಪಲ್ ಮ್ಯಾಕ್ ಬುಕ್ ಗಳನ್ನು ಖರೀದಿ ಮಾಡಿದವರಿಗೆ, ಮ್ಯಾಕ್ ಬುಕ್ ಏರ್, ಮ್ಯಾಕ್ ಬುಕ್ ಪ್ರೋ ಮತ್ತು ಡೆಸ್ಕ್ ಟಾಪ್ ಮಾಡಲ್ ಗಳಾದ ಐಮ್ಯಾಕ್, ಐಮ್ಯಾಕ್ ಪ್ರೋ ಮತ್ತು ಮ್ಯಾಕ್ಸ್ ಫ್ರೋ ಗಳನ್ನು ಖರೀದಿ ಮಾಡಿದವರಿಗೆ ಬಿಟ್ಸ್ ಸೊಲೊ 3 ವೈರ್ ಲೈಸ್ ಹೆಡ್ ಫೋನ್ ಅನ್ನು ಕಾಣಬಹುದಾಗಿದೆ.

ಇದರೊಂದಿಗೆ:
ಇದಲ್ಲದೇ ಆಪಲ್ ಐಪ್ಯಾಡ್ ಖರೀದಿಸಿದವರಿಗೂ ದೊಡ್ಡ ಪ್ರಮಾಣದ ಆಫರ್ ಇದೆ. ಐಪ್ಯಾಡ್ ಪ್ರೋ ಖರೀದಿ ಮಾಡಿದವರಿಗೆ ಪವರ್ ಬಿಟ್ಸ್ 3 ವೈರ್ ಲೈಸ್ ಹೆಡ್ ಫೋನ್ ದೊರೆಯಲಿದೆ. ಇದು ಬಳಕೆದಾರರಿಗೆ ಹೆಚ್ಚಿನಲಾಭವನ್ನು ಮಾಡಿಕೊಡಲಿದೆ.


Click it and Unblock the Notifications








