Subscribe to Gizbot

ಗೂಗಲ್ ಫಿ: ತೊಡಕಿಲ್ಲದ ಇಂಟರ್ನೆಟ್ ಸೇವೆಗಾಗಿ

Written By:

ಏಪ್ರಿಲ್‌ನಲ್ಲಿ, ಗೂಗಲ್ ಹೊಸ ವೈರ್‌ಲೆಸ್ ಸೇವೆಯಾದ ಪ್ರಾಜೆಕ್ಟ್ ಫಿ ಅನ್ನು ಬಳಕೆದಾರರಿಗೆ ಪ್ರಸ್ತುತಪಡಿಸಲಿದೆ. ಇದು ಹೆಚ್ಚುವರಿ ವೇಗದೊಂದಿಗೆ ಬರುತ್ತಿದ್ದು ಆರ್ಥಿಕವಾಗಿ ಕೂಡ ಪ್ರಯೋಜನಕಾರಿಯಾಗಲಿದೆ. ಹೆಚ್ಚು ವೇಗದ ವೈರ್‌ಲೆಸ್ ನೆಟ್‌ವರ್ಕ್ ಅನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂಬ ನಿಟ್ಟಿನಿಂದ ಗೂಗಲ್ ಪ್ರಾಯೋಜಿಸುತ್ತಿರುವ ವ್ಯವಸ್ಥೆಯಾಗಿದೆ.

ಓದಿರಿ: ಬಳಕೆದಾರ ಸ್ನೇಹಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್ಸ್

ಇಂದಿನ ಸಂಪರ್ಕಿತ ಜಗತ್ತಿನಲ್ಲಿ, ವೇಗವಾಗಿ ಮಾಹಿತಿ ಪಡೆಯಲು ಸಾಧ್ಯವಾಗುವಂತೆ ಪ್ರಾಜೆಕ್ಟ್ ಫಿಯನ್ನು ಗೂಗಲ್ ಅಭಿವೃದ್ಧಿಪಡಿಸಿದೆ. ಹೆಚ್ಚು ವೇಗದ ಡೇಟಾ ಸೇವೆಯೊಂದಿಗೆ ಗೂಗಲ್ ಫಿಯನ್ನು ಇನ್ನಷ್ಟು ಕೈಗೆಟಕುವಂತೆ ರೂಪಿಸುತ್ತಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಇದರ ವಿಶೇಷತೆಗಳನ್ನು ಅರಿತುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈರ್‌ಲೆಸ್ ಕ್ಯಾರಿಯರ್
  

ಪ್ರಾಜೆಕ್ಟ್ ಫಿ ಎಂಬುದು ವೈರ್‌ಲೆಸ್ ಕ್ಯಾರಿಯರ್ ಆಗಿದ್ದು ಯುಎಸ್‌ನ ಎರಡು ಮೊಬೈಲ್ ಕ್ಯಾರಿಯರ್‌ಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಸೆಲ್ಯುಲರ್ ಸಂಪರ್ಕಕ್ಕಾಗಿ ಅವುಗಳ ಟವರ್ ಅನ್ನು ಇದು ಆಧರಿಸಿದೆ.

ಇದು ಹೇಗೆ ಕೆಲಸ ಮಾಡುತ್ತದೆ
  

ನೆಟ್‌ವರ್ಕ್‌ಗಳ ನೆಟ್‌ವರ್ಕ್ ಆಗಿರುವ ಪ್ರಾಜೆಕ್ಟ್ ಫಿ ನೀವು ಎಲ್ಲಿದ್ದರೂ ನಿಮ್ಮನ್ನು ಉತ್ತಮ ನೆಟ್‌ವರ್ಕ್‌ನ ಸಂಪರ್ಕದಲ್ಲಿರುವಂತೆ ಮಾಡುತ್ತದೆ. ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ನಿಮಗೆ ಒದಗಿಸುವ ಭರವಸೆಯನ್ನು ಪ್ರಾಜೆಕ್ಟ್ ಫಿ ನೀಡುತ್ತದೆ.

ಬೆಲೆ
  

ನಿಮ್ಮ ಬಳಕೆಗೆ ಅನುಗುಣವಾಗಿ ಇದು ಬೆಲೆಯನ್ನು ವಿಧಿಸಲಿದ್ದು, ಯಾವುದೇ ವಾರ್ಷಿಕ ಒಪ್ಪಂದಗಳಿಲ್ಲ, ಇನ್ನು ಯೋಜನೆಯ ಪ್ರಥಮ ಭಾಗದಲ್ಲಿ ತಿಂಗಳಿಗೆ $20 ಅನ್ನು ನೀಡಬೇಕಾಗುತ್ತದೆ. ಇದು ಅನಿಯಮಿತ ಡೊಮೆಸ್ಟಿಕ್ ಟಾಕ್, ಟೆಕ್ಸ್ಟ್ ಮೊದಲಾದ ಯೋಜನೆಗಳನ್ನು ಒಳಗೊಂಡಿದೆ.

ಕಡಿಮೆ ದರ
  

ಕಡಿಮೆ ದರದ ಅಂತರಾಷ್ಟ್ರೀಯ ಕರೆಗಳು, ವೈಫೈ ಟೆದರಿಂಗ್ ಮತ್ತು 120 ಕ್ಕಿಂತಲೂ ಹೆಚ್ಚಿನ ದೇಶಗಳನ್ನು ಇದು ಕವರ್ ಮಾಡುತ್ತದೆ. ಇದಲ್ಲದೆ ಡೇಟಾದ ಪ್ರತೀ ಗಿಗಾಬೈಟ್‌ಗೆ $10 ಅನ್ನು ವಿಧಿಸುತ್ತದೆ. ಅಂದರೆ 1ಜಿಬಿಗೆ $10, 2ಜಿಬಿಗೆ $20,ಇತ್ಯಾದಿ.

ಡೇಟಾ ಬಳಕೆ
  

ಇನ್ನು ನೀವು 2ಜಿಬಿ ಡೇಟಾ ಯೋಜನೆಯಲ್ಲಿದ್ದು, ನೀವು ನಿರ್ದಿಷ್ಟ ತಿಂಗಳಲ್ಲಿ 1ಜಿಬಿ ಡೇಟಾವನ್ನು ಮಾತ್ರ ಬಳಸಿದ್ದೀರಿ ಎಂದಾದಲ್ಲಿ ನಂತರ ತಿಂಗಳಿನಲ್ಲಿ $10 ಅನ್ನು ನೀವು ಹಿಂದಕ್ಕೆ ಪಡೆದುಕೊಳ್ಳುತ್ತೀರಿ.

ಲಭ್ಯತೆ
  

ಗೂಗಲ್ ನೆಕ್ಸಸ್ 6 ಮಾಲೀಕರಿಗೆ ಮಾತ್ರವೇ ಪ್ರಾಜೆಕ್ಟ್ ಫಿ ಲಭ್ಯವಿದೆ. ಈ ಡಿವೈಸ್ ಹೆಚ್ಚು ಶ್ರೇಣಿಯ ಎಲ್‌ಟಿಇ ನೆಟ್‌ವರ್ಕ್‌ಗಳಿಗೆ ಮಾತ್ರ ಇದು ಬೆಂಬಲವನ್ನು ಒದಗಿಸುತ್ತದೆ. ಇನ್ನು ಇತರ ಡಿವೈಸ್‌ಗಳನ್ನು ಬಳಸುತ್ತಿರುವವರು ಕೊಂಚ ಸಮಯ ಕಾಯಲೇಬೇಕು.

ವೈಯಕ್ತಿಕ ಖಾತೆ
  

ಪ್ರಾಜೆಕ್ಟ್ ಫಿ ಕೇವಲ ವೈಯಕ್ತಿಕ ಖಾತೆಗಳಿಗೆ ಪ್ರಥಮವಾಗಿ ಬೆಂಬಲವನ್ನೊದಗಿಸುತ್ತದೆ, ಇನ್ನು ಕುಟುಂಬ ಯೋಜನೆಗಳಿಗೆ ಯಾವುದೇ ಬೆಂಬಲವನ್ನೊದಗಿಸುವುದಿಲ್ಲ.

ಸೈನ್ ಅಪ್ ಮಾಡುವುದು ಹೇಗೆ
  

ನಮ್ಮ ಪೂರ್ವ ಪ್ರವೇಶ ಪ್ರೊಗ್ರಾಮ್ ಅನ್ನು ಸೇರಿ ಮತ್ತು ಹೆಚ್ಚು ವೇಗದ ನೆಟ್‌ವರ್ಕ್‌ಗೆ ಪ್ರವೇಶ ಪಡೆಯಿರಿ ಸರಳ ಬೆಲೆಯಲ್ಲಿ ತೊಡಕಿಲ್ಲದ ಸಂವಹನ ನಿಮ್ಮದಾಗಲಿ.

ಸೇವೆ ಹೊಂದು
  

ನೀವು ಆಹ್ವಾನವನ್ನು ವಿನಂತಿಸಿದ ನಂತರ, ನಿಮ್ಮ ಜಿಪ್ ಕೋಡ್‌ನಲ್ಲಿ ನೀವು ಸೇವೆಯನ್ನು ಹೊಂದಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಆಹ್ವಾನ ಮಾತ್ರ ಪ್ರೊಗ್ರಾಮ್
  

ಪ್ರಾಜೆಕ್ಟ್ ಫಿ ಒಂದು ಆಹ್ವಾನ ಮಾತ್ರ ಪ್ರೊಗ್ರಾಮ್ ಆಗಿದೆ ಆದರೆ ನೀವಿಂದೇ ನಿರೀಕ್ಷೆ ಪಟ್ಟಿಯನ್ನು ಪಡೆದುಕೊಳ್ಳಬಹುದು! ನೀವು ಗೂಗಲ್ ನೆಕ್ಸಸ್ 6 ಅನ್ನು ಹೊಂದಿರುವಿರಿ ಮತ್ತು ನೆಟ್‌ವರ್ಕ್‌ಗಳ ನೆಟ್‌ವರ್ಕ್ ಅನ್ನು ಪಡೆದುಕೊಳ್ಳಿ. ಇಲ್ಲಿ ನಿಮಗೆ ಕೋರಿಕೆಯನ್ನು ಪಡೆದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In April, Google unveiled Project Fi — a new wireless service the company claims will deliver faster speeds and better coverage with a unique, economical approach to pricing. Today, we’re going to take a look at what Google wants to do, and how they plan to pull it off.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot