Home
ಸುದ್ದಿಜಾಲ

ಹೈ-ಸ್ಪೀಡ್ ಇಂಟರ್‌ನೆಟ್‌ನಿಂದ ನಿದ್ದೆ ಹಾಳು..! ಶಾಕಿಂಗ್ ವರದಿ..!

By Gizbot Bureau

ಒಂದು ಒಳ್ಳೆಯದರ ಹಿಂದೆ ಇನ್ನೊಂದು ಕೆಟ್ಟದಿರುತ್ತದೆ ಎಂದು ಹೇಳಲಾಗುತ್ತೆ. ಅದೇ ರೀತಿ ತಂತ್ರಜ್ಞಾನ ಬೆಳೆದಂತೆ ಅದರ ಜೊತೆಜೊತೆಗೆ ಒಂದಷ್ಟು ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತದೆ ಎಂಬುದು ದಿಟವಾದ ಸಂಗತಿ. ದಿನದಿಂದ ದಿನಕ್ಕೆ ಅಂತರ್ಜಾಲದ ವೇಗ ಹೆಚ್ಚಾಗುತ್ತಿದೆ. ಅದನ್ನು ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಈಗ ಎಲ್ಲರೂ ಆತಂಕಪಡಬೇಕಾದ ಮಾಹಿತಿಯೊಂದನ್ನು ಅಧ್ಯಯನವು ಹೊರಹಾಕಿದೆ.

ಸದ್ಯ ನಡೆಸಿರುವ ಅಧ್ಯಯನವೊಂದು ಎಲ್ಲರೂ ಯೋಚಿಸಬೇಕಾಗಿರುವ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ನೀವೇನಾದರೂ ಹೈ ಸ್ಪೀಡ್ ಇಂಟರ್ನೆಂಟ್ ನ್ನು ಬಳಸುತ್ತಿದ್ದರೆ, ನಿಮ್ಮ ನಿದ್ದೆಯ ಅವಧಿ ಮತ್ತು ಅದರ ಗುಣಮಟ್ಟ ಹಾಳಾಗುತ್ತೆ ಎಂಬ ವಿಷಯವನ್ನು ಅಧ್ಯಯನ ಹೇಳುತ್ತಿದೆ.

ಹೈ-ಸ್ಪೀಡ್ ಇಂಟರ್‌ನೆಟ್‌ನಿಂದ ನಿದ್ದೆ ಹಾಳು..! ಶಾಕಿಂಗ್ ವರದಿ..!

ಜರ್ನಲ್ ಆಫ್ ಎಕನಾಮಿಕ್ ಬಿಹೇವಿಯರ್ ಮತ್ತು ಆರ್ಗನೈಸೇಷನ್ ನಡೆಸಿರುವ ಅಧ್ಯಯನದ ಪ್ರಕಾರ ಡಿಎಸ್ಎಲ್ (ಡಿಜಿಟಲ್ ಸಬ್ ಸ್ಕ್ರೈಬರ್ ಲೈನ್) ಬಳಸುವವರು, ಡಿಎಸ್ಎಲ್ ಇಂಟರ್ನೆಟ್ ಬಳಸದೇ ಇರುವವರಿಗಿಂತ 25 ನಿಮಿಷ ಕಡಿಮೆ ನಿದ್ದೆಯನ್ನು ಮಾಡುತ್ತಾರಂತೆ. ಡಿಎಸ್ಎಲ್ ಹೆಚ್ಚು ಬ್ಯಾಂಡ್ ವಿಡ್ತ್ ನಲ್ಲಿ ಮನೆಗಳಿಗೆ ಮತ್ತು ಸಣ್ಣ ಬ್ಯುಸಿನೆಸ್ ಜಾಗಗಳಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಒಂದು ತಂತ್ರಜ್ಞಾನವಾಗಿದೆ.

ಇಟಲಿಯ ಬೊಕ್ಕೊನಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ಮತ್ತು ಯುಎಸ್ ನ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯ ಹೇಳುವಂತೆ ಹೆಚ್ಚು ವೇಗದ ಅಂತರ್ಜಾಲ ಸಂಪರ್ಕ ಬಳಸುವುದರ ಪರಿಣಾಮದಿಂದಾಗಿ ಆ ವ್ಯಕ್ತಿಯ ನಿದ್ದೆಯ ಸಮಯವು ಕುಂಠಿತಗೊಳ್ಳುತ್ತದೆ ಮತ್ತು ನಿದ್ದೆಯ ತೃಪ್ತಿಯು ಅವರಿಗೆ ಲಭ್ಯವಾಗುವುದಿಲ್ಲ. ಯಾಕೆಂದರೆ ಅವರು ಮಾರನೆಯ ದಿನ ಬೆಳಿಗ್ಗೆ ಕುಟುಂಬ ಅಥವಾ ಕೆಲಸದ ಕಾರಣದಿಂದ ಬೇಗನೆ ಏಳುತ್ತಾರೆ.

ಬೊಕ್ಕೊನಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ಪ್ರ್ಯಾನ್ಸಿಸ್ಕೋ ಬಿಲ್ಲಾರಿ ಕೂಡ ಇದನ್ನೇ ಸಮರ್ಥಿಸಿಕೊಂಡಿದ್ದಾರೆ. ಒಬ್ಬ ಮನುಷ್ಯನಿಗೆ ದಿನಕ್ಕೆ ಅಗತ್ಯವಿರುವ 7 ರಿಂದ 9 ಘಂಟೆಯ ನಿದ್ದೆಯನ್ನು ಅವರು ತಪ್ಪಿಸಿಕೊಳ್ಳುತ್ತಾರೆ ಮತ್ತು ಅತೃಪ್ತಿಯನ್ನು ಅನುಭವಿಸುತ್ತಾರಂತೆ.

ಹೈ-ಸ್ಪೀಡ್ ಇಂಟರ್‌ನೆಟ್‌ನಿಂದ ನಿದ್ದೆ ಹಾಳು..! ಶಾಕಿಂಗ್ ವರದಿ..!

ದಿನವಿಡೀ ಹೆಚ್ಚು ಸ್ಪೀಡ್ ಇರುವ ಇಂಟರ್ನೆಟ್ ಬಳಕೆ ಮಾಡುವುದು ಅಥವಾ ಮಲಗಿಕೊಂಡು ಕೂಡ ಅಂತರ್ಜಾಲವನ್ನು ಬಳಸುತ್ತಲೇ ಇರುವುದು ಕೆಲವರಿಗೆ ಅಭ್ಯಾಸವಾಗಿ ಬಿಡುತ್ತದೆ. ಡಿಜಿಟಲ್ ಸಾಧನಗಳ ಬಳಕೆಯ ಅಭ್ಯಾಸವು ನಿದ್ದೆಯ ಸಮಯದ ಮೇಲೆ ಮತ್ತು ಒಟ್ಟಾರೆ ನಿದ್ದೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಮತ್ತು ಇದು ಮನುಷ್ಯನ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ.

ಅದರಲ್ಲೂ 13 ರಿಂದ 30 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ ಎಂಬುದು ಅಧ್ಯಯನಕಾರರ ಅಭಿಪ್ರಾಯ. ಮೊಬೈಲ್ ನೋಡುವುದು, ಟಿವಿ ನೋಡುವುದು, ಕಂಪ್ಯೂಟರ್ ಗೇಮ್ಸ್ ಇತ್ಯಾದಿಗಳನ್ನು ಹೈ ಸ್ಪೀಡ್ ಇಂಟರ್ನೆಂಟ್ ಬಳಸಿ ಇವರು ಮಾಡುತ್ತಾರೆ ಮತ್ತು ನಿದ್ದೆಯನ್ನು ಹಾಳು ಮಾಡಿಕೊಳ್ಳುತ್ತಾರೆ.

ಒಂದು ವೇಳೆ ಈ ಸಾಲಿನಲ್ಲಿ ನೀವೂ ಕೂಡ ಸೇರುವವರಾಗಿದ್ದರೆ ಖಂಡಿತ ನಿಮ್ಮ ಆರೋಗ್ಯದ ಕಡೆ ಗಮನ ಕೊಡಬೇಕಾಗಿರುವುದು ಬಹಳ ಮುಖ್ಯ.

Best Mobiles in India

English summary
How hi-speed internet can affect your sleep. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+