Subscribe to Gizbot

ಲಾಲಿಪಪ್ ಅನ್ನು ಗ್ಯಾಲಕ್ಸಿ ಎಸ್5 ಗೆ ಹೀಗೆ ಅಳವಡಿಸಿ

Posted By:

ಕಿಟ್‌ಕ್ಯಾಟ್ ಕಾಲ ಇದೀಗ ಮುಗಿದು ಹೋಗಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ನಂತರ ಲಾಲಿಪಪ್ ಆವೃತ್ತಿ ಹೆಚ್ಚಿನ ಫೋನ್ ಮಾಲೀಕರ ಮನಸ್ಸನ್ನು ಕದಿಯುತ್ತಿದೆ. ಹೆಚ್ಚಿನ ಹಳೆಯ ಆವೃತ್ತಿ ಮಾಲೀಕರು ಲಾಲಿಪಪ್ ಅನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಈ ಆವೃತ್ತಿಗೆ ಮಾರುಹೋಗುತ್ತಿದ್ದಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಗೆ ಲಾಲಿಪಪ್ ಅನ್ನು ಹೇಗೆ ನವೀಕರಿಸಿಕೊಳ್ಳುವುದು ಎಂಬುದನ್ನು ನೋಡೋಣ.

ಲಾಲಿಪಪ್ ಆವೃತ್ತಿಯನ್ನು ಎಸ್5 ಗೆ ಅಳವಡಿಸುವುದು ಹೇಗೆ

ಇದನ್ನೂ ಓದಿ: ಎಚ್‌ಟಿಸಿ ಫೋನ್‌ಗಳ ಧಮಾಕಾಧಾರ್ ಆಫರ್‌ಗಳು

ನಿಮ್ಮ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಗೆ ಆಂಡ್ರಾಯ್ಡ್ 5.0 ವನ್ನು ಹೇಗೆ ಇನ್‌ಸ್ಟಾಲ್ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

ಹಂತ ೧
ಮೊದಲಿಗೆ ಸಿನೋಜನ್ ಮೋಡ್ ಆಂಡ್ರಾಯ್ಡ್ 5.0 ಲಾಲಿಪಪ್ ಸಿಎಮ್12 ಆಲ್ಫಾ ಸಿರೀಸ್ ಕಸ್ಟಮ್ ರೋಮ್ ಹಾಗೂ ಗೂಗಲ್ ಅಪ್ಲಿಕೇಶನ್ ಅನ್ನು ನಿಮ್ಮ ಪಿಸಿಗೆ ಡೌನ್‌ಲೋಡ್ ಮಾಡಿ. ಯುಎಸ್‌ಬಿ ಕೇಬಲ್ ಬಳಸಿ ಪಿಸಿಗೆ ಹ್ಯಾಂಡ್‌ಸೆಟ್ ಅನ್ನು ಸಂಪರ್ಕಪಡಿಸಿ.

ಹಂತ ೨
ಇದೀಗ, ಆಂಡ್ರಾಯ್ಡ್ 5.0 ಲಾಲಿಪಪ್ ಆಲ್ಫಾ ಸಿಎಮ್12 ಕಸ್ಟಮ್ ರೋಮ್ ಝಿಪ್ ಫೈಲ್ ಅನ್ನು ಫೋನ್‌ನ ಎಸ್‌ಡಿ ಕಾರ್ಡ್‌ ಮೆಮೊರಿಗೆ ಸಂಪರ್ಕಿಸಿ. ಎಸ್‌ಡಿ ಕಾರ್ಡ್ ಅಲ್ಲದೆ ಬೇರೆಡೆಗೆ ಅದನ್ನು ಪೇಸ್ಟ್ ಮಾಡುವುದು ಅತ್ಯಗತ್ಯವಾಗಿದೆ. ಡಿವೈಸ್ ರೂಟ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ClockworkMod Recovery/TWRP ಟೂಲ್ ಇನ್‌ಸ್ಟಾಲ್ ಆಗಿದೆ ಎಂಬುದನ್ನು ನೋಡಿ.

ಹಂತ ೩
ಇದೀಗ ಡಿವೈಸ್ ಅನ್ನು ಆಫ್ ಮಾಡಿ, ಮತ್ತು ಪಿಸಿಯಿಂದ ಡಿಸ್‌ಕನೆಕ್ಟ್ ಮಾಡಿ.

ಹಂತ ೪
ವಾಲ್ಯುಮ್ ಅಪ್, 'ಹೋಮ್' ಹಾಗೂ ಪವರ್ ಬಟನ್‌ಗಳನ್ನು ಜೊತೆಗೆ ಒತ್ತಿ ನಂತರ, ಸಾಮಾನ್ಯ ರಿಕವರಿ ಮೋಡ್ ಆಪರೇಶನ್ ಅನ್ನು ನಿರ್ವಹಿಸಿ.

ಹಂತ ೫
ರಿಕವರಿ ಮೋಡ್‌ನಲ್ಲಿ 'ವೈಪ್ ಡೇಟಾ/ಫ್ಯಾಕ್ಟ್ರಿ ರೀಸೆಟ್' ಅನ್ನು ಆಯ್ಕೆಮಾಡುವ ಮೂಲಕ ಫೋನ್ ಮೆಮೊರಿಯನ್ನು ತೆರವುಗೊಳಿಸಿ. ನ್ಯಾವಿಗೇಟ್ ಮಾಡಲು ನೀವು ಯಾವಾಗಲೂ 'ವಾಲ್ಯೂಮ್' ಕೀಗಳನ್ನು ಬಳಸಬಹುದು ಮತ್ತು ರಿಕವರಿ ಮೋಡ್ ಅಡಿಯಲ್ಲಿ ಆಪರೇಟ್ ಮಾಡುವಾಗ ಆಯ್ಕೆಗಳನ್ನು ಆರಿಸುವಾಗ 'ಪವರ್' ಬಟನ್ ಬಳಸಿ.

ಹಂತ ೬
ಇದೀಗ, 'ವೈಪ್ ಕ್ಯಾಶ್ ಪಾರ್ಟೀಶನ್' ಆರಿಸುವ ಮೂಲಕ ಕ್ಯಾಶ್ ಮೆಮೊರಿಯನ್ನು ಕ್ಲಿಯರ್ ಮಾಡಿ.

ಹಂತ ೭
ಮುಂದೆ, ಕ್ಲಾಕ್ ವರ್ಕ್ ಮೋಡ್ ರಿಕವರಿಗೆ ಹಿಂತಿರುಗಿ, 'ಸುಧಾರಿತ' ಆಯ್ಕೆಮಾಡಿ ಮತ್ತು 'ವೈಪ್ ದಾಲ್ವಿಕ್ ಕ್ಯಾಶ್' ತಟ್ಟಿರಿ.

ಹಂತ ೮
ಇದೆಲ್ಲವನ್ನೂ ಮುಗಿಸಿದ ನಂತರ, ಮುಖ್ಯ ರಿಕವರಿ ಸ್ಕ್ರೀನ್‌ಗೆ ಹಿಂತಿರುಗಿ ಮತ್ತು 'ಎಸ್‌ಡಿ ಕಾರ್ಡ್‌ನಿಂದ ಜಿಪ್ ಇನ್‌ಸ್ಟಾಲ್ ಮಾಡಿ'.

ಹಂತ ೯
ನಂತರ, ಎಸ್‌ಡಿ ಕಾರ್ಡ್‌ನಿಂದ ಜಿಪ್ ಚೂಸ್ ಮಾಡಿ' ತಟ್ಟಿರಿ ಹಾಗೂ ಆಂಡ್ರಾಯ್ಡ್ 5.0 ಲಾಲಿಪಪ್ ರೋಮ್‌ಗೆ ಹೋಗಿ. ಎಸ್‌ಡಿ ಕಾರ್ಡ್‌ನಲ್ಲಿ ಫೈಲ್ ಜಿಪ್ ಮಾಡಿ ಮತ್ತು ಇನ್‌ಸ್ಟಾಲೇಶನ್ ಪ್ರೊಸೆಸ್ ಅನ್ನು ನಮೂದಿಸಿ. ಗೂಗಲ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಲು ಇದೇ ಪ್ರಕ್ರಿಯೆಯನ್ನು ನೀವು ಪುನರಾವರ್ತಿಸಬೇಕು.

ಹಂತ ೧೦
ಇನ್‌ಸ್ಟಾಲೇಶನ್ ಪ್ರಕ್ರಿಯೆ ಮುಗಿದಾಗ, '+++++Go Back+++++' ಗೆ ನ್ಯಾವಿಗೇಟ್ ಮಾಡಿ ಮತ್ತು ರಿಕವರಿ ಮೆನುವಿನಲ್ಲಿ 'ರಿಬೂಟ್ ಸಿಸ್ಟಮ್ ನೌ' ಅನ್ನು ಆಯ್ಕೆಮಾಡುವ ಮೂಲಕ ಡಿವೈಸ್ ಮರುಪ್ರಾರಂಭಿಸಿ.

English summary
This article tells about The age of KitKat is necessarily over. While it surprises us that even a few months ago KitKat remained as the choice of Android for most smartphone owners.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot