ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಎಷ್ಟು ಬಾರಿ ಅಪ್ಡೇಟ್ ಮಾಡಬಹುದು?
ಆಧಾರ್ ಕಾರ್ಡ್‌ನಲ್ಲಿ ನಮ್ಮ ವಿಳಾಸವನ್ನು ನಾವು ಎಷ್ಟು ಭಾರಿ ಬದಲಾಯಿಸಬಹುದು? ನಮ್ಮ ಹೆಸರನ್ನು ಬದಲಾಯಿಸಲು ಅವಕಾಶವಿದೆಯಾ? ನಮ್ಮ ಜನ್ಮ ದಿನಾಂಕ ಬದಲಾಯಿಸುವುದಕ್ಕೆ ಅವಕಾಶ ಸಿಗುತ್ತಾ? ಹೀಗೆ ಆಧಾರ್ ಕಾರ್ಡ್ ವಿಚಾರದಲ್ಲಿ ಅನೇಕ ಪ್ರಶ್ನೆಗಳು ಸಾಮಾನ್ಯ ಜನರನ್ನು ಕಾಡುವುದು ಸಹಜವಾಗಿದೆ.
ಹೌದು, ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿವರಗಳನ್ನು ಎಷ್ಟು ಸಲ ಅಪ್ಡೇಟ್ ಮಾಡಬಹುದು ಅನ್ನೊ ಗೊಂದಲ ಇದ್ದೆ ಇದೆ. ಆದರೆ ಹಾಗಂತ ತಲೆ ಕೆಡಿಸಿಕೊಳ್ಳಬೇಕಾದ ಅನಿವಾರ್ಯತೆಯಿಲ್ಲ. ನೀವು ನಿಮ್ಮ ಆಧಾರ್‌ನಲ್ಲಿ ಯಾವೆಲ್ಲಾ ವಿವರಗಳನ್ನು ಎಷ್ಟು ಭಾರಿ ಹಾಗೂ ಹೇಗೆ ಬದಲಾಯಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್ ಕಾರ್ಡ್ ಸರ್ಕಾರದ ಸೌಲಭ್ಯಗಳಿಗೆ ನೀವು ಒದಗಿಸಲೇಬೇಕಾದ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಪ್ರತಿಯೊಂದು ಸೇವೆಗೂ ಆಧಾರ್ ಕಡ್ಡಾಯ ಅನ್ನೊದನ್ನ ನಾವು ಕೇಳುತ್ತಲೇ ಇದ್ದೇವೆ. ಇನ್ನು ಕೆಲವೊಮ್ಮ ಕಣ್ತಪ್ಪಿನಿಂದ, ಇಲ್ಲವೇ ಟೈಪಿಂಗ್ ಮಿಸ್ಟೆಕ್‌ನಿಂದ ನಿಮ್ಮ ಆಧಾರ್‌ನಲ್ಲಿ ವಿಳಾಸ ವಿವರಗಳು ತಪ್ಪಾಗಿರುತ್ತದೆ. ಅಲ್ಲದೆ ಕೆಲವೊಮ್ಮೆ ನಿಮ್ಮ ಹೆಸರು ಕೂಡ ತಪ್ಪಾಗಿ ನಮೂದಾಗಿರುತ್ತದೆ. ಹಾಗಂತ ಪದೇ ಪದೇ ನಿಮ್ಮ ಆಧಾರ್ ಅನ್ನು ಅಪ್ಡೇಟ್ ಮಾಡಬಹುದಾ ಅನ್ನೊ ಗೊಂದಲಕ್ಕೆ ಉತ್ತರ ಇಲ್ಲಿದೆ.
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಎಷ್ಟು ಭಾರಿ ಅಪ್ಡೇಟ್ ಮಾಡಬಹುದು?
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಕೆಲವೊಮ್ಮೆ ಕಣ್ತಪ್ಪಿನಿಂದ ತಪ್ಪಾಗಿ ನಮೂದಾಗಿರುತ್ತದೆ. ಇದರಿಂದ ನಿಮ್ಮ ಹೆಸರನ್ನು ನೀವು ಬದಲಾಯಿಸಲು ಬಯಸಿದರೆ ನಿಮಗೆ ಎರಡು ಬಾರಿ ಮಾತ್ರ ಅವಕಾಶ ಸಿಗಲಿದೆ. ಅಂದರೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನು ಎರಡು ಬಾರಿ ಮಾತ್ರ ಬದಲಾಯಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ.

ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕವನ್ನು ಎಷ್ಟು ಭಾರಿ ಬದಲಾಯಿಸಲು ಅವಕಾಶವಿದೆ?
ನೀವು ಬಹು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಆಧಾರ್‌ನಲ್ಲಿರುವ ನಿಮ್ಮ ಜನ್ಮ ದಿನಾಂಕವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಡೇಟಾ ಎಂಟ್ರಿ ಪ್ರಕ್ರಿಯೆಯಲ್ಲಿ ಉಂಟಾದ ದೋಷದಿಂದ ನಿಮ್ಮ ಜನ್ಮ ದಿನಾಂಕ ಬದಲಾಗಿದ್ದರೆ ಮಾತ್ರ ಬದಲಾಯಿಸುವುದಕ್ಕೆ ಅವಕಾಶ ಸಿಗಲಿದೆ
ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಎಷ್ಟು ಭಾರಿ ಬದಲಾಯಿಸಬಹುದು?
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಮತ್ತು ಲಿಂಗ ವಿವರಗಳನ್ನು ಒಮ್ಮೆ ಮಾತ್ರ ಬದಲಾಯಿಸಬಹುದು. ಆದರೆ ಯುಐಡಿಎಐ ಪ್ರಾದೇಶಿಕ ಕಚೇರಿಗೆ ಭೇಟಿ ನೀಡುವ ಮೂಲಕ ನಿಮ್ಮ ವಿಳಾಸವನ್ನು ನಿರ್ದಿಷ್ಟ ಮಿತಿಯನ್ನು ಮೀರಿದ ನಂತರವೂ ಬದಲಾವಣೆ ಮಾಡುವುದಕ್ಕೆ ಅವಕಾಶವಿದೆ.

ನಿಗಧಿತ ಮಿತಿ ಮೀರಿದ ನಂತರವು ಆಧಾರ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಸುವುದು ಹೇಗೆ?
ನಿಮ್ಮ ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡಲು ನಿಗದಿತ ಮಿತಿ ಮೀರಿದ್ದರೆ ನೀವು UIDAI ಪ್ರಾದೇಶಿಕ ಕಚೇರಿಗೆ ರಿಕ್ವೆಸ್ಟ್ ಅನ್ನು ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ಬೇಕಾದ URN ಸ್ಲಿಪ್, ಆಧಾರ್ ವಿವರಗಳು ಮತ್ತು ಪೂರಕವಾದ ಅತ್ಯಗತ್ಯ ದಾಖಲೆಗಳ ಪ್ರತಿಯನ್ನು ನೀಡಬೇಕಾಗುತ್ತದೆ.
ಆಧಾರ್ ಕಾರ್ಡ್ ವಿವರಗಳನ್ನು ಅಪ್ಡೇಟ್ ಮಾಡಲುಬೇಕಾದ ಅಗತ್ಯವಿರುವ ದಾಖಲೆಗಳು
* ಪಾಸ್‌ಪೋರ್ಟ್
* ಬ್ಯಾಂಕ್ ಪಾಸ್‌ಬುಕ್
* ಪೋಸ್ಟ್ ಆಫೀಸ್ ಪಾಸ್‌ಬುಕ್
* ಪಡಿತರ ಚೀಟಿ
* ಡ್ರೈವಿಂಗ್ ಲೈಸೆನ್ಸ್
* ಮತದಾರರ ಗುರುತಿನ ಚೀಟಿ

ಇನ್ನು ಇತ್ತೀಚಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ಪಡೆದುಕೊಂಡು 10 ವರ್ಷ ಆಗಿರುವವರು ಮತ್ತೊಮ್ಮೆ ಆಧಾರ್ ಅಪ್ಡೇಟ್ ಮಾಡುವಂತೆ ಸೂಚಕಿಸಿದೆ. ಯಾಕೆಂದರೆ ಇತ್ತೀಚಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕಳೆದ 10 ವರ್ಷಗಳಲ್ಲಿ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕು, ಭಾರತೀಯ ನಿವಾಸಿಗಳು ಸರ್ಕಾರಿ ಡೇಟಾಬೇಸ್‌ನಲ್ಲಿ ಮಾಹಿತಿಯ ನಿಖರತೆಯನ್ನು ಮುಂದುವರೆಸುವುದಕ್ಕೆ ಇದು ಅತ್ಯಗತ್ಯ ಎಂದು ಹೇಳಿದೆ.


Click it and Unblock the Notifications








