ಡೇಟಿಂಗ್ ಆ್ಯಪ್ ಬಳಸುವ ಮುನ್ನ ಈ ಸುದ್ದಿಯನ್ನೊಮ್ಮೆ ಗಮನಿಸಿ!
ಇಂದಿನ ದಿನಗಳಲ್ಲಿ ಯುವಜನತೆಯನ್ನು ಅತಿ ಹೆಚ್ಚು ಆಕರ್ಷಿಸುವ ಆ್ಯಪ್‌ಗಳೆಂದರೆ ಅದು ಡೇಟಿಂಗ್ ಆ್ಯಪ್‌ಗಳು. ಡೇಟಿಂಗ್ ಆ್ಯಪ್‌ಗಳು ಯುವಜನರ ಆಶಯ, ಭಾವನೆ, ಪ್ರೀತಿ, ಏಕಾಂತ ಎಲ್ಲದಕ್ಕೂ ಪರಿಹಾರ ನೀಡುವ ಪ್ಲಾಟ್‌ಫಾರ್ಮ್ ಎನ್ನುವ ರೀತಿ ರೂಪುಗೊಂಡಿದೆ. ಇದೇ ಕಾರಣಕ್ಕೆ ಹೆಚ್ಚಿನ ಯುವಜನತೆ ಡೇಟಿಂಗ್ ಆಪ್‌ಗಳನ್ನು ಬಳಸುತ್ತಿದ್ದಾರೆ.
ಹೌದು, ಡೇಟಿಂಗ್ ಆ್ಯಪ್‌ಗಳು ಯುವಜನರ ನೆಚ್ಚಿನ ಆ್ಯಪ್‌ಗಳಲ್ಲಿ ಒಂದಾಗಿದೆ. ಆದರೆ ಕಾಲ ಬದಲಾದಂತೆ ಡೇಟಿಂಗ್ ಆ್ಯಪ್‌ಗಳು ನಿಜಕ್ಕೂ ಯುವಜನರ ಆಶಯಗಳನ್ನು ಈಡೇರಿಸುತ್ತಿವೆಯಾ? ಡೇಟಿಂಗ್ ಆ್ಯಪ್‌ಗಳಲ್ಲಿ ಯುವಜನರು ಬಯಸಿದ ಪ್ರೀತಿ ದೊರೆಯುತ್ತಿದೆಯಾ? ಹಾಗಾದ್ರೆ 2023ರಲ್ಲಿ ಡೇಟಿಂಗ್ ಆ್ಯಪ್‌ಗಳು ಹೇಗೆ ವಿಕಸನಗೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಯುವಜನತೆ ತಮ್ಮ ಏಕಾಂತವನ್ನು ಕಳೆಯಲು ಮೊದಲು ಆಯ್ಕೆ ಮಾಡುವ ತಾಣವೆಂದರೆ ಅದು ಡೇಟಿಂಗ್ ಆ್ಯಪ್. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಇತ್ತೀಚಿಗೆ ಹೆಚ್ಚಿನ ಜನರು ಪ್ರೀತಿಯನ್ನು ಹುಡುಕಲು ಆನ್‌ಲೈನ್‌ನಲ್ಲಿ ಸೈನ್ ಅಪ್ ಮಾಡುತ್ತಿದ್ದಾರೆ. ಇದರಿಂದ ಹಲವು ಡೇಟಿಂಗ್ ವೆಬ್‌ಸೈಟ್‌ಗಳು ಎಂಟ್ರಿ ನೀಡುತ್ತಿವೆ. ಆದರೆ ಎಲ್ಲಾ ಡೇಟಿಂಗ್ ಆ್ಯಪ್‌ಗಳು ಕೂಡ ಯುವಜನತೆಯ ಆಶಯಕ್ಕೆ ಪೂರಕವಾಗಿಲ್ಲ ಅನ್ನೊದು ಗಂಭೀರವಾದ ವಿಚಾರವಾಗಿದೆ.
ಆದರೆ ಮುಂದಿನ ದಿನಗಳಲ್ಲಿ ವರ್ಚುವಲ್ ಜಗತ್ತು ವಿಸ್ತಾರವಾದಂತೆ ಅಲ್ಗಾರಿದಮ್‌ಗಳ ಪ್ರೀತಿಯಲ್ಲಿ ನೀವು ಬೀಳಬಹುದು. ನಿಮ್ಮ ಪ್ರೀತಿಯನ್ನು ನೆಚ್ಚಿಕೊಳ್ಳುವ ಅವತಾರ್ ಜೊತೆಗೆ ಡೇಟಿಂಗ್ ನಡೆಸುವ ಸಮಯಬಂದರೂ ಅಚ್ಚರಿಯಿಲ್ಲ. ಯಾಕಂದ್ರೆ ಇತ್ತೀಚಿಗೆ ಡೇಟಿಂಗ್ ಅಪ್ಲಿಕೇಶನ್ ಕ್ವಾಕ್‌ಕ್ವಾಕ್‌ನ ನಡೆಸಿದ ಸಮೀಕ್ಷೆಯ ಪ್ರಕಾರ 35 ವರ್ಷಕ್ಕಿಂತ ಮೇಲ್ಪಟ್ಟ 29% ರಷ್ಟು ಬಳಕೆದಾರರು ಈ ಅಪ್ಲಿಕೇಶನ್‌ಗಳು ಕೇವಲ ಅಂತರ್ಮುಖಿಗಳಿಗೆ ಮಾತ್ರ ಸೂಕ್ತವಾಗಿದೆ ಎಂದು ಭಾವಿಸಿದ್ದಾರೆ ಎನ್ನಲಾಗಿದೆ.

ಇನ್ನು ಡೇಟಿಂಗ್ ಅಪ್ಲಿಕೇಶನ್‌ಗಳು ಲೀಡ್ ಜನರೇಟರ್‌ಗಳಂತೆ ಕಾರ್ಯನಿರ್ವಹಿಸುವ ಇಂಟರ್‌ಫೇಸ್‌ಗಳನ್ನು ಹೊಂದಿವೆ. ಆದರಿಂದ ನೀವು ನಿಮಗೆ ಜೋಡಿ ಎನಿಸುವ ಸೂಕ್ತ ಆಯ್ಕೆಗಳ್ನು ಕಾಣಬಹುದು. ಇಬ್ಬರ ಪ್ರೊಫೈಲ್‌ಗಳಿಗೂ ಹೊಂದಿಕೆಯಾದ ನಂತರ ಅವರ ಜೊತೆ ಸಂಭಾಷಣೆ ಮಾಡುವುದಕ್ಕೆ ಅವಕಾಶ ಸಿಗಲಿದೆ. ಆದರೆ ಸಂಬಾಷಣೆ ಪ್ರಾರಂಭವಾದ ನಂತರ ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಆ ಜೋಡಿಗಳಿಗೆ ಬಿಟ್ಟದ್ದು. ಇದರಿಂದ ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಜೋಡಿಯಿಂದ ವಂಚನೆ ಆದರೂ ಅದು ಅನಿವಾರ್ಯ ಎಂಬಂತೆ ಇರಬೇಕಾಗುತ್ತದೆ.
ಇದರೊಂದಿಗೆ ಡೇಟಿಂಗ್ ಮಾಡುವುದಕ್ಕೆ ಅವಕಾಶ ನೀಡುವ ಆ್ಯಪ್‌ಗಳಲ್ಲಿ ಟಿಂಡರ್, ಬಂಬಲ್ ಮತ್ತು ಹಿಂಜ್ ಆ್ಯಪ್‌ಗಳು ವಿಶ್ವದೆಲ್ಲಡೆ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳಾಗಿವೆ. ಈ ಅಪ್ಲಿಕೇಶನ್‌ಗಳು ಎಲ್ಲಾ ವಯೋಮಾನದ ಜನರಿಗೆ ಆಯ್ಕೆಯ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತವೆ. ಆದರೂ ಕೂಡ ಯುವಜನರ ಲೈಂಗಿಕ ದೃಷ್ಟಿಕೋನಗಳಿಂದಾಗಿ ಹೆಚ್ಚು ಹೆಚ್ಚಿನ ಡೇಟಿಂಗ್ ಆ್ಯಪ್‌ಗಳು ಎಂಟ್ರಿ ನೀಡುತ್ತಲೇ ಇವೆ. ಈ ಆ್ಯಪ್‌ಗಳಲ್ಲಿ ಸೂಕ್ತ ಜೋಡಿ ಸಿಗದೆ ಹೋದರೆ ಮತ್ತೊಂದು ಡೇಟಿಂಗ್ ಆ್ಯಪ್ ಸೈನ್ ಇನ್ ಆಗುವ ಪ್ರವೃತ್ತಿ ಜಾಸ್ತಿ ಆಗುತ್ತಿದೆ.

ಡೇಟಿಂಗ್ ಆ್ಯಪ್‌ಗಳಲ್ಲಿ ಹೆಚ್ಚಿನ ಯುವಜನರು ತಮ್ಮ ಆಪ್ತ ಸಾಂಗತ್ಯವನ್ನು ಬಯಸುವವರನ್ನು ಸರ್ಚ್ ಮಾಡುತ್ತಾರೆ. ಅಷ್ಟೆ ಪ್ರಮಾಣದಲ್ಲಿ ಲೈಂಗಿಕ ಹವ್ಯಾಸಕ್ಕೆ ಹೊಂದಿಕೆ ಆಗುವವರುನ್ನು ಸಹ ಬಯಸುತ್ತಾರೆ. ಇದೇ ಕಾರಣಕ್ಕೆ ಹೆಚ್ಚಿನ ಪ್ರಮಾಣದ ಡೇಟಿಂಗ್ ಆ್ಯಪ್‌ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದು ಈ ವರ್ಷವೂ ಕೂಡ ಮುಂದುವರೆಯುವ ಸೂಚನೆ ಸಿಕ್ಕಿದೆ. ಇದು ಮುಂದುವರೆದಂತೆ ಯುವಜನರ ಡೇಟಿಂಗ್ ಅಭಿರುಚಿ ಇನ್ನಷ್ಟು ಜಾಸ್ತಿಯಾಗುವ ಸಾದ್ಯತೆ ಕೂಡ ಇದೆ.
ಹಾಗಂತೆ ಪ್ಲೇ ಸ್ಟೋರ್‌ನಲ್ಲಿ ಸಿಕ್ಕ ಸಿಕ್ಕ ಎಲ್ಲಾ ಡೇಟಿಂಗ್ ಆ್ಯಪ್‌ಗಳಿಗೂ ಸೈನ್ ಇನ್ ಆಗುವುದು ಅಪಾಯಕಾರಿ. ಏಕೆಂದರೆ ಡೇಟಿಂಗ್ ಪ್ರಿಯರ ನ್ಯೂನತೆಗಳು ತಿಳಿದಿರುವ ವಂಚಕರು ಸಂಗಾತಿಯ ಹೆಸರಿನಲ್ಲಿ ನಿಮ್ಮನ್ನು ಯಾಮಾರಿಸುವ ಸಾದ್ಯತೆಯಿದೆ. ಅಷ್ಟೇ ಯಾಕೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ನಂತರ ಪ್ರೀತಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಆದರಿಂದ ಡೇಟಿಂಗ್ ಆ್ಯಪ್ ಬಳಸುವವರು ತಮ್ಮ ಆಯ್ಕೆಗೆ ಸೂಕ್ತವಾದ ಆ್ಯಪ್‌ಗಳನ್ನು ಸೆಲೆಕ್ಟ್ ಮಾಡುವುದು ಸೂಕ್ತವಾಗಿದೆ.


Click it and Unblock the Notifications








