20 ಲಕ್ಷ ಜನ ಆಡುತ್ತಿರುವ 'ಡ್ರೀಮ್ 11'ನಲ್ಲಿ ಹಣ ಗಳಿಸಬಹುದಾ?..ಹಾಗಾದರೆ ಹೇಗೆ?!

|

ಕ್ರಿಕೆಟ್ ಎಂದರೆ ಹಾಗೆ ಭಾರತದ ಪ್ರತಿಯೊಬ್ಬರಿಗೂ ರೋಮಾಂಚನ, ಏನೋ ಪುಳಕ. ಅದರಲ್ಲೂ ಭಾರತೀಯರಿಗಿಂತ ಹೆಚ್ಚು ಕ್ರಿಕೆಟ್‌ ಆಟವನ್ನು ಇಷ್ಟಪಡುವ ರಾಷ್ಟ್ರ ಇನ್ನೊಂದಿಲ್ಲ ಎಂದು ಹೇಳಬಹುದು. ಹಾಗಾಗಿಯೇ ಕ್ರಿಕೆಟ್ ಪ್ರೇಮಿಗಳಿಗಾಗಿಯೇ 'ಡ್ರೀಮ್ 11' ಫ್ಯಾಂಟಸಿ ಕ್ರಿಕೆಟ್ ಲೀಗ್‌ ಎನ್ನುವ ಆಪ್‌ ಒಂದು ಹುಟ್ಟಿಕೊಂಡಿದೆ. ಕಳೆದೆರಡು ವರ್ಷಗಳಿಂದಲೂ ಸುದ್ದಿಯಲ್ಲಿರುವ ಈ ಆಪ್‌ನಲ್ಲಿ ಈಗ ಬರೋಬ್ಬರಿ 20 ಲಕ್ಷ ಜನರು ಫ್ಯಾಂಟಸಿ ಗೇಮ್ ಆಡುತ್ತಿದ್ದಾರೆ.

ಹೌದು, ಲೈವ್ ನಡೆಯುತ್ತಿರುವ ಪಂದ್ಯಗಳಲ್ಲಿ ಫ್ಯಾಂಟಸಿ ಕ್ರಿಕೆಟ್ ಲೀಗ್‌ ಆಡಬಹುದಾಗಿದ್ದು, ನಿಮಗೆ ಕ್ರಿಕೆಟ್ ಸ್ಕಿಲ್‌ಗಳ ಬಗ್ಗೆ ಹೆಚ್ಚು ತಿಳಿದಿದ್ದರೆ ನಿವು ಹೆಚ್ಚು ಹಣಗಳಿಸಬಹುದಾಗಿದೆ. ಫ್ಯಾಂಟಸಿ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಬೆಟ್ಟಿಂಗ್ ಎರಡು ವಿಷಯಗಳು ಅಯಸ್ಕಾಂತದ ಎರಡು ವಿರುದ್ದ ದಿಕ್ಕುಗಳಿದ್ದಂತೆ ಎಂದು ಹೇಳಿಕೊಂಡಿರುವ ಡ್ರೀಮ್ 11 ಸಂಸ್ಥೆ, ಕ್ರಿಕೆಟ್ ಅಥವಾ ಇತರೆ ಗೇಮ್‌ಗಳ ಬಗ್ಗೆ ನೀವು ಹೆಚ್ಚು ತಿಳಿದುಕೊಂಡಿದ್ದರೆ ನೀವು ಕಾನೂನಾತ್ಮಕವಾಗಿಯೇ ಹಣ ಗಳಿಸಬಹುದು ಎಂದು ತಿಳಿಸಿದೆ.

20 ಲಕ್ಷ ಜನ ಆಡುತ್ತಿರುವ 'ಡ್ರೀಮ್ 11'ನಲ್ಲಿ ಹಣ ಗಳಿಸಬಹುದಾ?..ಹಾಗಾದರೆ ಹೇಗೆ?!

'ಡ್ರೀಮ್ 11' ಫ್ಯಾಂಟಸಿ ಕ್ರಿಕೆಟ್ ಲೀಗ್‌ ಆಪ್‌ ಹೆಚ್ಚು ಸೆಕ್ಯೂರ್ ಆಪ್ ಆಗಿದ್ದು, ಈ ಭಾರತದ 100 ಸ್ಟಾರ್ಟ್‌ಅಪ್‌ಗಳಲ್ಲಿ ಇದು ಸಹ ಒಂದಾಗಿದೆ. ನೀವು ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರೆ ನೀವು ಈ ಆಪ್‌ ಮೂಲಕ ಹಣ ಗಳಿಸಬಹುದಾಗಿದೆ. ಪ್ರಪಂಚದಾದ್ಯಂತ ಈ ಆಪ್‌ ಮೂಲಕ ಹಲವರು ಹಣಗಳಿಸುತ್ತಿದ್ದಾರೆ. ಹಾಗೆಯೇ ಇದು ಯಾವುದೇ ಕ್ರೀಡಾ ಬೆಟ್ಟಿಂಗ್ ಅಲ್ಲ. ಹಾಗಾದರೆ, "ಡ್ರೀಮ್ 11" ಫ್ಯಾಂಟಸಿ ಕ್ರಿಕೆಟ್ ಲೀಗ್‌ನಲ್ಲಿ ಹಣಗಳಿಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಇಲ್ಲಿ ಎಲ್ಲವೂ ಕಾನೂನಾತ್ಮಕ

ಇಲ್ಲಿ ಎಲ್ಲವೂ ಕಾನೂನಾತ್ಮಕ

ಕ್ರಿಕೆಟ್ ಅಥವಾ ಇತರೆ ಗೇಮ್‌ಗಳ ಬಗ್ಗೆ ನೀವು ಹೆಚ್ಚು ತಿಳಿದುಕೊಂಡಿದ್ದರೆ ನೀವು ಕಾನೂನಾತ್ಮಕವಾಗಿಯೇ 'ಡ್ರೀಮ್ 11'ನಲ್ಲಿ ಹಣ ಗಳಿಸಬಹುದು ಎಂದು ಸಂಸ್ಥೆ ತಿಳಿಸಿದೆ. ಪಬ್ಲಿಕ್ ಗೇಮಿಂಗ್ ಆಕ್ಟ್, 1947ರ ಅಡಿಯಲ್ಲಿ ಈ ಫ್ಯಾಂಟಸಿ ಗೇಮ್ ಕರ್ನಾಟಕದಲ್ಲೂ ಕಾರ್ಯನಿರ್ವಹಿಸುತ್ತದೆ. ಹಣ ಗೆದ್ದವರು ಟ್ಯಾಕ್ಸ್ ಕಟ್ಟುವುದರಿಂದ ಇತರೆ ತೊಂದರೆಗಳು ಸಹ ಇರುವುದಿಲ್ಲ.

ಡ್ರೀಮ್ 11 ವೆಬ್‌ಸೈಟ್‌ಗೆ ಲಾಗಿನ್ ಆಗಿ.

ಡ್ರೀಮ್ 11 ವೆಬ್‌ಸೈಟ್‌ಗೆ ಲಾಗಿನ್ ಆಗಿ.

Dream11.com ವೆಬ್‌ಸೈಟ್‌ ತೆರೆದು ನಿಮ್ಮ ಇ-ಮೇಲ್ ಅಕೌಂಟ್ ಮೂಲಕ ಲಾಗಿನ್ ಆಗಿ. ಪೆಜ್ ತೆರದ ನಂತರ ಪೇಜ್ ಬಲಬಾಗದಲ್ಲಿ ಕಾಣುವ ವೆರಿಫೈ ಐಕಾನ್ ಕ್ಲಿಕ್ ಮಾಡಿ ನಿಮ್ಮ ಪಾನ್‌ಕಾರ್ಡ್ ಡೀಟೆಲ್ಸ್ ಮತ್ತು ನಿಮ್ಮ ಬ್ಯಾಂಕ್ ಡೀಟೆಲ್ಸ್ ನಮೂದಿಸಿ. ಡ್ರೀಮ್ 11 ಆಪ್‌ಗೆ ನೀವು ಲಾಗಿನ್ ಆದರೆ 1oo ರೂಪಾಯಿ ಹಣವನ್ನು ಅವರು ನೀಮಗೆ ಬೋನಸ್ ಆಗಿ ನಿಡುತ್ತಾರೆ.

ಕನಸಿನ ಕ್ರಿಕೆಟ್ ಟೀಂ ಕ್ರಿಯೆಟ್ ಮಾಡಿ.

ಕನಸಿನ ಕ್ರಿಕೆಟ್ ಟೀಂ ಕ್ರಿಯೆಟ್ ಮಾಡಿ.

ನಿಮ್ಮ ಪಾನ್‌ಕಾರ್ಡ್‌ ಮಾಹಿತಿ ನಿಡಿದ ನಂತರ ಪೇಜ್‌ನಲ್ಲಿ ಕಾಣುವ ಕ್ರಿಕೆಟ್ ಮ್ಯಾಚ್‌ಗಳಲ್ಲಿ ಒಂದನ್ನು ಆಯ್ಕ ಮಾಡಿ. ಆ ಮ್ಯಾಚ್‌ನಲ್ಲಿ ಆಡುತ್ತಿರುವ ಎರಡು ತಂಡಗಳ ಆಟಗಾರರನ್ನು ಸೇರಿಸಿ ನಿಮ್ಮದೇ ಒಂದು ಕನಸಿನ ತಂಡ ಕಟ್ಟಿರಿ. ನೀವು ಪಂದ್ಯಕ್ಕೆ ಆರು ಆಯ್ಕೆಯ ಕ್ರಿಕೆಟ್ ಟೀಂಗಳನ್ನು ಕಟ್ಟಬಹುದು ಮತ್ತು ಹಲವು ಲೀಗ್‌ಗಳಿಗೆ ಹಣಪಾವತಿಸಿ ಸೇರಿಕೊಳ್ಳಬಹುದು.

ಕ್ಯಾಪ್ಟನ್ ಮತ್ತು ವೈಸ್‌ಕ್ಯಾಪ್ಟನ್ ಆಯ್ಕೆ ಮಾಡಿ.

ಕ್ಯಾಪ್ಟನ್ ಮತ್ತು ವೈಸ್‌ಕ್ಯಾಪ್ಟನ್ ಆಯ್ಕೆ ಮಾಡಿ.

ನಿಮ್ಮ ಕ್ರಿಕೆಟ್ ಟೀಂ ಕಟ್ಟಿದ ನಂತರ ಆ ತಂಡಕ್ಕೆ ನಾಯಕ ಮತ್ತು ಉಪನಾಯಕನ್ನು ಆಯ್ಕೆಮಾಡಿ. ನೀವು ಆಯ್ಕೆ ಮಾಡಿದ ಕ್ಯಾಪ್ಟನ್ ಗಳಿಸುವ ಯಾವುದೇ ಪಾಯಿಂಟ್ಸ್‌ಗಳು ಎರಡುಪಟ್ಟು ಹೆಚ್ಚಿರುತ್ತದೆ. ಮತ್ತು ನೀವು ಆಯ್ಕೆ ಮಾಡಿದ ವೈಸ್‌ಕ್ಯಾಪ್ಟನ್ ಗಳಿಸುವ ಯಾವುದೇ ಪಾಯಿಂಟ್ಸ್‌ಗಳು ಒಂದುವರೆ ಪಟ್ಟು ಹೆಚ್ಚಿರುತ್ತದೆ. ಇದು ಕೂಡ ಆಟದಲ್ಲಿ ಮುಖ್ಯವಾಗಿರುತ್ತದೆ.

ಪಾಯಿಂಟ್‌ಗಳಿಸಿ ಹಣಗಳಿಸಿ!

ಪಾಯಿಂಟ್‌ಗಳಿಸಿ ಹಣಗಳಿಸಿ!

ನಿಮಗೆ ಹೆಚ್ಚು ಕ್ರಿಕೆಟ್‌ ಸ್ಕಿಲ್ ತಿಳಿದಿದ್ದರೆ ಎರಡು ಕ್ರಿಕೆಟ್‌ ತಂಡಗಳಿಂದ ನಿಮ್ಮ ಉತ್ತಮ ತಂಡ ಕಟ್ಟಿ ಹಣವನ್ನು ಗಳಿಸಬಹುದು. ನಿಮ್ಮ ತಂಡದ ಆಟಗಾರರು ಹೆಚ್ಚು ರನ್, ವಿಕೆಟ್, ಕ್ಯಾಚ್ ಪಡೆದರೆ ನಿಮಗೆ ಹೆಚ್ಚು ಪಾಯಿಂಟ್ ಸಿಗುತ್ತದೆ. ಒಂದೇ ಪಂದ್ಯದ ಹಲವು ಲೀಗ್‌ಗಳಿದ್ದು, ಯಾವ ಲೀಗ್‌ ಆದರೂ ನೀವು ಆಡಬಹುದು. ಇಲ್ಲ ಕೆಲವು ಉಚಿತ ಲೀಗ್‌ಗಳು ಸಹ ಇರುತ್ತವೆ.

ಅದೃಷ್ಟವಿದ್ದರೆ ಹಣ ಬರುತ್ತದೆ!

ಅದೃಷ್ಟವಿದ್ದರೆ ಹಣ ಬರುತ್ತದೆ!

ನಿಮಗೆ ಅದೃಷ್ಟವಿದ್ದರೆ ನಿಮ್ಮ ಆಯ್ಕೆ ಮಾಡಿದ ತಂಡದ ಆಟಗಾರರು ಹೆಚ್ಚು ರನ್, ವಿಕೆಟ್, ಕ್ಯಾಚ್ ಪಡೆದರೆ ನಿಮಗೆ ಹೆಚ್ಚು ಪಾಯಿಂಟ್ ಪಡೆದು ನೀವು ಲೀಗ್ ಅನ್ನು ಗೆಲ್ಲಬಹುದು. ಲೀಗ್‌ ಗೆದ್ದರೆ ಅರ್ಧಗಂಟೆಯಲ್ಲೇ ನಿಮಗೆ ಹಣ ಸಂದಾಯವಾಗುತ್ತದೆ. ಅದನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಎರಡು ದಿನಗಳಲ್ಲಿ ತೆಗೆದುಕೊಳ್ಳಬಹುದು. ಆದರೆ,ಗೆದ್ದ ಹಣಕ್ಕೆ ಟ್ಯಾಕ್ಸ್ ಕಟ್ಟಬೆಕಾಗುತ್ತದೆ.

Best Mobiles in India

English summary
Log into your Dream11 account and select any of the upcoming matches from the current or upcoming cricket tournaments. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X