ಈ ಶಾಕಿಂಗ್ ಸುದ್ದಿ ಕೇಳಿದರೆ 'ಫಿಂಗರ್‌ಪ್ರಿಂಟ್ ಲಾಕ್' ಮಾಡುವುದನ್ನೇ ಬಿಡುತ್ತೀರಾ!!

|

ಇತ್ತೀಚಿಗಂತೂ ಫಿಂಗರ್‌ಪ್ರಿಂಟ್ ಫೀಚರ್ ಇರದ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವವರೆ ಇಲ್ಲ. ಯಾರು ನೋಡಿದರೂ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದರಷ್ಟೆ ಆ ಮೊಬೈಲ್‌ ಖರೀದಿಸಲು ಮುಂದಾಗುತ್ತಾರೆ. ಏಕೆಂದರೆ, ಫಿಂಗರ್‌ಪ್ರಿಂಟ್‌ನಿಂದ ಹೆಚ್ಚು ಸುರಕ್ಷತೆ ಸಿಗಲಿದೆ ಎಂಬುದು ಅವರ ಯೋಚನೆ. ಆದರೆ, ಫಿಂಗರ್‌ಪ್ರಿಂಟ್ ನಿಜವಾಗಿಯೂ ನಿಮಗೆ ಸುರಕ್ಷತೆಯನ್ನು ಒದಗಿಸುತ್ತಿಲ್ಲ.!

ಹೌದು, ಎಲ್ಲವೂ ಡಿಜಿಟಲ್ ರೂಪದಲ್ಲೇ ಬೆರಳೊತ್ತನ್ನು ಉಳಿಸಿಡುವ ಫಿಂಗರ್‌ಪ್ರಿಂಟ್‌ ನಕಲಿಸಿ ಬಳಸುವುದು ಸುಲಭಸಾಧ್ಯವಲ್ಲ. ಆದರೆ, ಅಸಾಧ್ಯ ಸಂಗತಿಯೇನಲ್ಲ ಎನ್ನುತ್ತಿವೆ ವರದಿಗಳು. ಫಿಂಗರ್‌ಪ್ರಿಂಟ್ ಒಂದು ಉತ್ತಮ ಆಯ್ಕೆಯಾಗಿದ್ದರೂ ಸಹ, ಫಿಂಗರ್‌ಪ್ರಿಂಟ್ ಬದಲಾಗಿ ನಂಬರ್ ಪಾಸ್‌ವರ್ಡ್‌ಗಳೇ ಹೆಚ್ಚು ಸುರಕ್ಷಿತವಾಗಿವೆ ಎಂದು ಟೆಕ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.!

ಈ ಶಾಕಿಂಗ್ ಸುದ್ದಿ ಕೇಳಿದರೆ 'ಫಿಂಗರ್‌ಪ್ರಿಂಟ್ ಲಾಕ್' ಮಾಡುವುದನ್ನೇ ಬಿಡುತ್ತೀರಾ!

ಒಬ್ಬರ ಕೈಬೆರಳ ಗುರುತು ಇನ್ನೊಬ್ಬರ ಕೈಬೆರಳ ಗುರುತಿನಂತೆ ಇಲ್ಲದಿರುವುದಕ್ಕೆ ಫಿಂಗರ್‌ಪ್ರಿಂಟ್ ಆಯ್ಕೆ ಉತ್ತಮ. ಇದರಿಂದ ನಮ್ಮ ಹತ್ತಿರದವರಿಗೆ ನಮ್ಮ ಫೋನ್ ತೆರೆಯಲು ಸಾಧ್ಯವಿಲ್ಲ. ಆದರೆ, ಕ್ರಿಮಿನಲ್‌ಗಳಿಗೆ ಫಿಂಗರ್‌ಪ್ರಿಂಟ್ ಅನ್ನು ಕ್ರ್ಯಾಕ್ ಮಾಡುವುದು ಬಹಳ ಸುಲಭ ಎಂದು ವರದಿ ಹೇಳಿದೆ. ಹಾಗಾದರೆ, ಏನಿದು ಶಾಕಿಂಗ್ ವರದಿ ಎಂಬುದನ್ನು ಮುಂದೆ ತಿಳಿಯಿರಿ.

ಫಿಂಗರ್‌ಪ್ರಿಂಟ್ ಕೆಲಸ ಮಾಡುವುದು ಹೇಗೆ?

ಫಿಂಗರ್‌ಪ್ರಿಂಟ್ ಕೆಲಸ ಮಾಡುವುದು ಹೇಗೆ?

ಫಿಂಗರ್‌ಪ್ರಿಂಟ್ ಬಳಸಲು ನಮ್ಮ ಬೆರಳೊತ್ತನ್ನು ಸ್ಕ್ಯಾನ್ ಮಾಡಿ ಉಳಿಸಿಟ್ಟುಕೊಳ್ಳುವುದು (ಎನ್​ರೋಲ್​ವೆುಂಟ್) ಪ್ರಕ್ರಿಯೆಯ ಮೊದಲ ಭಾಗವಾದರೆ ನಂತರ ಯಾವಾಗಲೋ ನಾವು ನೀಡುವ ಬೆರಳೊತ್ತನ್ನು ಹೀಗೆ ಉಳಿಸಿಟ್ಟ ವಿವರದೊಡನೆ ಹೋಲಿಸಿ ಇದು ಇಂಥವರದ್ದೇ ಎಂದು ದೃಢೀಕರಿಸುವುದು ಇನ್ನೊಂದು ಭಾಗ. ಇದನ್ನೆಲ್ಲ ಬಹಳ ಕ್ಷಿಪ್ರವಾಗಿ ಹಾಗೂ ಸಮರ್ಥವಾಗಿ ಮಾಡಬಲ್ಲ ಫಿಂಗರ್‌ಪ್ರಿಂಟ್‌ಗಳು ಈಗ ನಮ್ಮ ಮೊಬೈಲ್‌ನಲ್ಲಿವೆ.

ಆದರೆ, ಫಿಂಗರ್‌ಪ್ರಿಂಟ್ ಸುರಕ್ಷಿತವಲ್ಲ!

ಆದರೆ, ಫಿಂಗರ್‌ಪ್ರಿಂಟ್ ಸುರಕ್ಷಿತವಲ್ಲ!

ನ್ಯೂಯಾರ್ಕ್ ಯೂನಿವರ್ಸಿಟಿ ಮತ್ತು ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ಆವಿಷ್ಕಾರಗಳು ವ್ಯಾಪಕವಾಗಿ ಬಳಕೆಯಾಗಿರುವ ಫಿಂಗರ್‌ಪ್ರಿಂಟ್ ತಂತ್ರಜ್ಞಾನದ ಸುರಕ್ಷತೆಯನ್ನು ಈಗಾಗಲೇ ಪ್ರಶ್ನಿಸಿರುವುದನ್ನು ನೀವು ನೋಡಬಹುದು. ಆದಕ್ಕೆ ಪೂರಕವಾಗಿ ಈಗ ಫಿಂಗರ್‌ಪ್ರಿಂಟ್ ಅನ್ನು ಬಹುಬೇಗ ಕ್ರ್ಯಾಕ್ ಮಾಡುವಂತಹ ತಂತ್ರಜ್ಞಾನಗಳನ್ನು ಕ್ರಿಮಿನಲ್‌ಗಳು ಹೊಂದಿದ್ದಾರೆ. ಫೋನಿನ ಫಿಂಗರ್‌ಪ್ರಿಂಟ್ ಅನ್ನು ಮೋಸ ಮಾಡಲು ಅವರಿಗೆ ಕಷ್ಟವಾಗಿಲ್ಲ ಎಂದು ಹೇಳಲಾಗಿದೆ.

ಫಿಂಗರ್‌ಪ್ರಿಂಟ್ ತೆರೆಯಲು ಸಾಧ್ಯ!

ಫಿಂಗರ್‌ಪ್ರಿಂಟ್ ತೆರೆಯಲು ಸಾಧ್ಯ!

ಸಂಶೋಧಕರು ಹೇಳುವಂತೆ, ಫಿಂಗರ್ಪ್ರಿಂಟ್ ಅನ್ನು ಬಹಳ ಸುಲಭವಾಗಿ ತೆರೆಯಲು ಸಾಧ್ಯವಾಗುತ್ತಿದೆ. ಸ್ಮಾರ್ಟ್‌ಫೋನ್‌ಳನ್ನು ಅನ್ಲಾಕ್ ಮಾಡಲು, ಅಪ್ಲಿಕೇಶನ್ಗಳಿಗೆ ಲಾಗ್ ಇನ್ ಮಾಡಲು ಮತ್ತು ಪಾವತಿಗಳನ್ನು ಮಾಡಲು, ನೈಜ ಮುದ್ರಣಗಳಲ್ಲಿ ಕಂಡುಬರುವ ಮಾದರಿಗಳನ್ನು ಬಳಸಿಕೊಂಡು ನಕಲಿ ಬೆರಳಚ್ಚುಗಳನ್ನು ಬಳಸಿಕೊಂಡು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಇದು ಅತ್ಯಂತ ಸುಲಭವಾಗಿದೆ ಎಂದು ಅವರು ಹೇಳಿದ್ದಾರೆ.

ಪಾಸ್‌ವರ್ಡ್‌ಗಳೇ ಹೆಚ್ಚು ಸುರಕ್ಷಿತ!

ಪಾಸ್‌ವರ್ಡ್‌ಗಳೇ ಹೆಚ್ಚು ಸುರಕ್ಷಿತ!

ಫಿಂಗರ್‌ಪ್ರಿಂಟ್ ತಂತ್ರಜ್ಞಾನಕ್ಕಿಂತ ಪಾಸ್‌ವರ್ಡ್‌ಗಳೇ ಹೆಚ್ಚು ಸುರಕ್ಷಿತ ಎಂಬ ಅಭಿಪ್ರಾಯಕ್ಕೆ ತಂತ್ರಜ್ಞರು ಬಂದಿದ್ದಾರೆ. ಫಿಂಗರ್‌ಪ್ರಿಂಟ್ ಸಾಧನದಲ್ಲಿ ಲಭ್ಯವಿರುವ ಸುಲಭ ಮಾರ್ಗಗಳಿಂದಾಗಿ ಸ್ಮಾರ್ಟ್‌ಪೋನಿನಲ್ಲಿ ಪಾಸ್‌ವರ್ಡ್‌ಗಳೇ ಹೆಚ್ಚು ಸುರಕ್ಷಿತವಾಗಿ ಇರುವಂತೆ ಕಾಣುತ್ತದೆ. ಫಿಂಗರ್‌ಪ್ರಿಂಟ್ ಸಂವೇದಕಗಳನ್ನು ಮೋಸಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ 'ಮಾಸ್ಟರ್ ಫಿಂಗರ್ಪ್ರಿಂಟ್' ಅಭಿವೃದ್ದಿಪಡಿಸಿದ್ದ ವಿಜ್ಞಾನಿಗಳು ಸಹ ಇದನ್ನೇ ಹೇಳಿದ್ದಾರೆ.

ಎಲ್ಲದಕ್ಕೂ ಫಿಂಗರ್‌ಪ್ರಿಂಟ್ ಬಳಕೆ ಬೇಡ!

ಎಲ್ಲದಕ್ಕೂ ಫಿಂಗರ್‌ಪ್ರಿಂಟ್ ಬಳಕೆ ಬೇಡ!

ಫಿಂಗರ್‌ಪ್ರಿಂಟ್ ತಂತ್ರಜ್ಞಾನವು ಸಾಮಾನ್ಯ ಬಳಕೆಗೆ ಹೆಚ್ಚು ವಿಶ್ವಾಸಾರ್ಹ ತಂತ್ರಜ್ಞಾನ ಎನ್ನಬಹುದಾದರೂ ಸಹ, ಮೊಬೈಲ್ ಪಾವತಿಗಳಂತಹ ಅತ್ಯಂತ ಸೂಕ್ಷ್ಮ ಅಪ್ಲಿಕೇಶನ್ಗಳಿಗಾಗಿ ಫಿಂಗರ್ಪ್ರಿಂಟ್ ದೃಢೀಕರಣವನ್ನು ಆಫ್ ಮಾಡುವುದರ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ. ಫಿಂಗರ್ಪ್ರಿಂಟ್ ಸ್ಕ್ಯಾನರ್‌ಗಳ ಅಸಾಮರ್ಥ್ಯ ವ್ಯಾಪಕ ಭದ್ರತಾ ರಂಧ್ರಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಮೊಬೈಲ್‌ ಅನ್‌ಲಾಕ್‌ ಮಾಡೋಕೆ ಮಾತ್ರವಲ್ಲ ಫಿಂಗರ್‌ಪ್ರಿಂಟ್!!.ಮತ್ತೆ?

ಮೊಬೈಲ್‌ ಅನ್‌ಲಾಕ್‌ ಮಾಡೋಕೆ ಮಾತ್ರವಲ್ಲ ಫಿಂಗರ್‌ಪ್ರಿಂಟ್!!.ಮತ್ತೆ?

ಯಾರು ನೋಡಿದರೂ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದರಷ್ಟೆ ಆ ಮೊಬೈಲ್‌ಗೆ ಬೆಲೆ ಎಂದು ಹೇಳುತ್ತಾರೆ. ಫಿಂಗರ್‌ಪ್ರಿಂಟ್ ಫೀಚರ್ ಒಂದು ಉತ್ತಮ ಆಯ್ಕೆ ಎಂದು ಹೇಳುತ್ತಾರೆ. ಆದರೆ, ಅವರು ಫಿಂಗರ್‌ಪ್ರಿಂಟ್ ಅನ್ನು ಮೊಬೈಲ್‌ ಅನ್‌ಲಾಕ್‌ ಮಾಡುವುದಕ್ಕೆ ಮಾತ್ರ ಉಪಯೋಗಿಸುತ್ತಿದ್ದಾರೆ.!

ಹೌದು, ಮೊಬೈಲ್‌ ಅನ್‌ಲಾಕ್‌ ಮಾಡುವುದರ ಜೊತೆಯಲ್ಲಿಯೇ ಫಿಂಗರ್‌ಪ್ರಿಂಟ್ ಫೀಚರ್‌ನಿಂದ ನಾವು ನಿರ್ವಹಿಸಬಹುದಾದ ಇನ್ನು ಹೆಚ್ಚಿನ ಕಾರ್ಯಗಳು ಲಭ್ಯವಿವೆ.ಹಾಗಾಗಿ, ಈ ಆಯ್ಕೆಯಿಂದ ನಮಗೆ ಇತರೆ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂಬುದನ್ನು ಮುಂದೆ ತಿಳಿಯಿರಿ.!

ಫಿಂಗರ್‌ಪ್ರಿಂಟ್‌ ಡಬಲ್ ಟಚ್

ಫಿಂಗರ್‌ಪ್ರಿಂಟ್‌ ಡಬಲ್ ಟಚ್

ಒಮ್ಮೆ ಫಿಂಗರ್‌ಪ್ರಿಂಟ್‌ ಅನ್ನು ಒಮ್ಮೆ ಮುಟ್ಟಿದರೆ ಫೇಸ್‌ಬುಕ್‌ ತೆರೆದುಕೊಳ್ಳುವ, ಎರಡು ಬಾರಿ ಮುಟ್ಟಿದರೆ ವಾಟ್ಸ್‌ಆಪ್‌ ತೆರೆದುಕೊಳ್ಳುವ, ಮೂರು ಭಾರಿ ಮುಟ್ಟಿದರೆ ಯೂಟ್ಯೂಬ್ ತೆರೆಯುವಹಾಗೆ ಮಾಡಬೇಕೆ? ಹಾಗಾದ್ರೆ, Fingerprint Gestures ಆಪ್ ಅಳವಡಿಸಿಕೊಳ್ಳಿ ಸಾಕು.

ಸೆಲ್ಫಿ ಒಮ್ಮೆಲೇ ಹಲವು ಸೆಲ್ಫಿ ತೆಗೆಯಲು.

ಸೆಲ್ಫಿ ಒಮ್ಮೆಲೇ ಹಲವು ಸೆಲ್ಫಿ ತೆಗೆಯಲು.

ಸೆಲ್ಫಿ ತೆಗೆಯುವಾಗ ಫಿಂಗರ್‌ಪ್ರಿಂಟ್‌ ಬಟನ್ ಒತ್ತುತ್ತಿದ್ದರೆ ಒಮ್ಮೆಲೇ ಎಷ್ಟಾದರೂ ಸೆಲ್ಫಿ ತೆಗೆಯಬಹುದಾದ ಆಯ್ಕೆ ನೀಡುವ ಆಯ್ಕೆಯೂ ಸಹ ಫಿಂಗರ್‌ಪ್ರಿಂಟ್‌ ಫೀಚರ್‌ ಮೂಲಕ ಲಭ್ಯವಿದೆ. ಇದು ಸೆಲ್ಫಿ ತೆಗೆಯಲು ಪರ್ಫೆಕ್ಟ್ ಆದ ಫೀಲ್ ನೀಡುತ್ತದೆ ಎಂದು ಹೇಳಬಹುದು.

ಆಪ್‌ಗೆ ಫಿಂಗರ್‌ಪ್ರಿಂಟ್ ಬೀಗಹಾಕಿ.

ಆಪ್‌ಗೆ ಫಿಂಗರ್‌ಪ್ರಿಂಟ್ ಬೀಗಹಾಕಿ.

ಸ್ನೇಹಿತರು ಅಥವಾ ಮನೆಯವರು ನ ಇಮ್ಮ ಮೊಬೈಲ್ ತೆರೆದು ನೋಡುತ್ತಾರೆ ಎನ್ನುವ ಭಯ ಇದ್ದರೆ, ನೀವು ಫಿಂಗರ್‌ಪ್ರಿಂಟ್ ಮೂಲಕ ಅದನ್ನು ಲಾಕ್ ಮಾಡಬಹುದು. ಇದಕ್ಕಾಗಿ AppLock-Fingerprint Unlock ಎಂಬ ಆಪ್‌ ಲಭ್ಯವಿದ್ದು, ನಿಮ್ಮ ಆಯ್ಕೆಯ ಆಪ್‌ಗಳನ್ನು ಲಾಕ್ ಮಾಡಬಹದು. ನಿಮ್ಮ ಬೆರಳಚ್ಚು ಇಲ್ಲದೆ ಆಪ್ ತೆರೆಯಲು ಸಾಧ್ಯವೇ ಇಲ್ಲ.

ಕೆಲವೇ ಇಮೇಜ್‌ಗಳನ್ನು ಹೈಡ್‌ ಮಾಡಿ.

ಕೆಲವೇ ಇಮೇಜ್‌ಗಳನ್ನು ಹೈಡ್‌ ಮಾಡಿ.

ಗ್ಯಾಲರಿ ಆಪ್‌ ಅನ್ನು ಲಾಕ್ ಮಾಡಿ ನಿಮ್ಮ ಸ್ವಂತ ಚಿತ್ರಗಳನ್ನು ಲಾಕ್ ಮಾಡಬಹುದಾದರೂ ಕೆಲವೇ ಇಮೇಜ್‌ಗಳನ್ನು ಹೈಡ್ ಮಾಡಲು Solo Photo ಎಂಬ ಆಪ ಲಭ್ಯವಿದೆ. ಇದು ಮೊಬೈಲ್‌ನಲ್ಲಿರುವ ಗ್ಯಾಲರಿ ಆಪ್‌ನಂತೆಯೇ ಇದ್ದು, ಚಿತ್ರಗಳನ್ನು ಬೆರಳಚ್ಚು ಮೂಲಕ ಹೈಡ್ ಮಾಡಿಡಲು ಸಹಾಯಕ!

Best Mobiles in India

English summary
“MasterPrint” that could match one or more of the stored templates of a significant number of users by serendipity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X