ಫೋನ್ ಇಂಟರ್ನೆಟ್ ಬಿಲ್ ಮಿತಿಮೀರಿದೆಯೇ? ಇಲ್ಲಿದೆ ಪರಿಹಾರ

By Shwetha
|

ಸ್ಮಾರ್ಟ್‌ಫೋನ್‌ನ ಬಳಕೆಯನ್ನು ಇಂದಿನ ಯುಗದಲ್ಲಿ ನಾವು ಹೆಚ್ಚು ಹೆಚ್ಚು ಮಾಡುತ್ತಿದ್ದೇವೆ. ಮಾಹಿತಿ ಸಂಗ್ರಹಿಸುವುದು, ಕರೆ ಮಾಡುವುದು, ಸಂದೇಶ ರವಾನೆ ಹೀಗೆ ಹಲವಾರು ಬಗೆಯಲ್ಲಿ ಫೋನ್ ಬಳಕೆಯನ್ನು ನಾವಿಂದು ಮಾಡುತ್ತಿರುವೆವು. ಇನ್ನು ಇಂಟರ್ನೆಟ್ ಬಳಕೆಯನ್ನು ಫೋನ್‌ನಲ್ಲಿ ಮಾಡುವ ಸಾಕಷ್ಟು ಬಳಕೆದಾರರಿದ್ದು ತಮ್ಮ ಹಲವಾರು ಕಚೇರಿ ಕೆಲಸಗಳನ್ನು ಫೋನ್ ಮೂಲಕವೇ ಇವರು ಮಾಡಿಕೊಳ್ಳುತ್ತಿದ್ದಾರೆ.

ಓದಿರಿ: ಅದ್ಭುತ ದರಕಡಿತ ಕೊಡುಗೆ: ಖರೀದಿ ಮಾಡಲು ಮರೆಯದಿರಿ

ಆದರೆ ಈ ವ್ಯವಸ್ಥೆ ಒಮ್ಮೊಮ್ಮೆ ಕುತ್ತಿಗೆಗೆ ಕುತ್ತಾಗಿ ಬರುತ್ತದೆ ಅಂದರೆ ಹೆಚ್ಚು ದುಬಾರಿಯಾಗಿರುತ್ತದೆ. ನಾವು ಹೆಚ್ಚು ಇಂಟರ್ನೆಟ್ ಬಳಕೆಯನ್ನು ಮಾಡದೇ ಇದ್ದರೂ ಅಂತರ್ಜಾಲ ಬಿಲ್ ಮಾತ್ರ ಎಗ್ಗಿಲ್ಲದೆ ಏರುತ್ತಿರುತ್ತದೆ. ನಿಮ್ಮ ಫೋನ್‌ನಲ್ಲಿ ಈ ರೀತಿಯ ಇಂಟರ್ನೆಟ್ ಏರಿಕಗೆ ಕಡಿವಾಣ ಹಾಕುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಯಲಿದ್ದೇವೆ.

ಇಂಟರ್ನೆಟ್ ಮಿತಿ ಹೊಂದಿಸಿ

ಇಂಟರ್ನೆಟ್ ಮಿತಿ ಹೊಂದಿಸಿ

ಪೂರ್ತಿ ತಿಂಗಳಲ್ಲಿ ನಿಮಗೆ ಎಷ್ಟು ಇಂಟರ್ನೆಟ್ ಬೇಕಾಗುತ್ತದೆ ಎಂಬುದನ್ನು ನಿರ್ಧಿರಿಸಿಕೊಳ್ಳಿ. ಡೇಟಾ ಯೂಸೇಜ್ ಸೆಟ್ಟಿಂಗ್‌ಗೆ ಹೋಗಿ ಇಲ್ಲಿ ಡೇಟಾ ಮಿತಿಯನ್ನು ಹೊಂದಿಸಿ.

ಹಿನ್ನಲೆ ಡೇಟಾ ಆಫ್ ಮಾಡಿ

ಹಿನ್ನಲೆ ಡೇಟಾ ಆಫ್ ಮಾಡಿ

ಕೆಲವೊಂದು ಅಪ್ಲಿಕೇಶನ್‌ಗಳು ಹಿನ್ನಲೆಯಲ್ಲಿ ಕೂಡ ಚಾಲನೆಯಲ್ಲಿರುತ್ತವೆ. ಇದನ್ನು ಆಫ್ ಮಾಡುವುದರಿಂದ ಇಂಟರ್ನೆಟ್ ಡೇಟಾದಲ್ಲಿ ಉಳಿತಾಯ ಸಾಧ್ಯ.

ಮ್ಯಾನುವಲ್ ಆಪ್ಸ್ ಅಪ್‌ಡೇಟ್

ಮ್ಯಾನುವಲ್ ಆಪ್ಸ್ ಅಪ್‌ಡೇಟ್

ಸ್ಮಾರ್ಟ್‌ಫೋನ್‌ನಲ್ಲಿ ಯಾವುದಾದರೂ ಅಪ್ಲಿಕೇಶನ್ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ಈ ಸಮಯದಲ್ಲಿ ಅಪ್ಲಿಕೇಶನ್ ಅನ್ನು ಆಟೊ ಅಪ್‌ಡೇಟ್‌ನಿಂದ ನಿವಾರಿಸಿ ಯಾವುದೋ ಅಗತ್ಯವೋ ಅದನ್ನು ಮಾತ್ರ ಅಪ್‌ಡೇಟ್ ಮಾಡಿ.

2ಜಿ ಡೇಟಾ

2ಜಿ ಡೇಟಾ

ಕೆಲವೊಂದು ಅಪ್ಲಿಕೇಶನ್‌ಗಳು 2ಜಿಯಲ್ಲಿ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆ ಸಮಯದಲ್ಲಿ ಈ ಅಪ್ಲಿಕೇಶನ್ ಅನ್ನು 2ಜಿಯಲ್ಲೇ ಬಳಸಿ. 3ಜಿ ಬಳಕೆಯನ್ನು ಮಾಡದಿರಿ.

ಪುಶ್ ನೋಟಿಫಿಕೇಶನ್

ಪುಶ್ ನೋಟಿಫಿಕೇಶನ್

ಕೆಲವೊಂದು ಮಾರ್ಕೆಟಿಂಗ್ ಮತ್ತು ಇ ಕಾಮರ್ಸ್ ಅಪ್ಲಿಕೇಶನ್ ಹೆಚ್ಚು ಅಧಿಸೂಚನೆಗಳನ್ನು ಕಳುಹಿಸುತ್ತವೆ. ಈ ಅಧಿಸೂಚನೆಗಳು ಡೇಟಾವನ್ನು ಬಳಸುತ್ತವೆ. ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ ಮತ್ತು ಅಧಿಸೂಚನೆಗಳನ್ನು ಆಫ್ ಮಾಡಿಟ್ಟುಕೊಳ್ಳಿ.

ವೀಡಿಯೊ

ವೀಡಿಯೊ

ಆನ್‌ಲೈನ್‌ನಲ್ಲಿ ವೀಡಿಯೊ ವೀಕ್ಷಣೆ ಕೂಡ ಹೆಚ್ಚುವರಿ ಡೇಟಾವನ್ನು ಖರ್ಚು ಮಾಡಿಸುತ್ತವೆ. ಇನ್ನು ವೀಡಿಯೊ ಎಚ್‌ಡಿ ಆವೃತ್ತಿಯಲ್ಲಿದ್ದರೆ ಪೂರ್ತಿ ಡೇಟಾ ಖರ್ಚಾದಂತೆಯೇ! ಯೂಟ್ಯೂಬ್‌ಗೆ ಹೋಗಿ ಎಚ್‌ಡಿ ವೀಡಿಯೊವನ್ನು ವೈಫೈನಲ್ಲಿ ಹೊಂದಿಸಿ.

ಅಪ್ಲಿಕೇಶನ್ ಕಾಲಿಂಗ್ ಆಫ್ ಮಾಡಿ

ಅಪ್ಲಿಕೇಶನ್ ಕಾಲಿಂಗ್ ಆಫ್ ಮಾಡಿ

ವಾಟ್ಸಾಪ್, ಫೇಸ್‌ಬುಕ್, ವೈಬರ್ ಉಚಿತ ಕರೆಮಾಡುವಿಕೆ ವ್ಯವಸ್ಥೆಯೊಂದಿಗೆ ಬಂದಿದ್ದು ಇವುಗಳು ನಿಮ್ಮ ಇಂಟರ್ನೆಟ್ ಬಳಕೆಗೆ ಕೊಕ್ ನೀಡುವುದು ಖಂಡಿತ. ಇವುಗಳು ಹೆಚ್ಚಿನ ಡೇಟಾವನ್ನು ಬಳಕೆ ಮಾಡುತ್ತವೆ.

ವೈಫೈ

ವೈಫೈ

ಎಷ್ಟು ಸಾಧ್ಯವೋ ಅಷ್ಟು ವೈಫೈ ಬಳಕೆಯನ್ನು ಮಾಡಿ.

ಗೇಮ್ ಆಡುವ ಸಮಯದಲ್ಲಿ ಡೇಟಾ ಆಫ್ ಮಾಡಿ

ಗೇಮ್ ಆಡುವ ಸಮಯದಲ್ಲಿ ಡೇಟಾ ಆಫ್ ಮಾಡಿ

ನೀವು ಮೊಬೈಲ್‌ನಲ್ಲಿ ಗೇಮ್ ಆಡುತ್ತಿರುವ ಸಂದರ್ಭದಲ್ಲಿ ಕೆಳಗೆ ಸೂಚನೆಗಳು ಬರುತ್ತಿರಬಹುದು. ನಿಮ್ಮ ಫೋನ್‌ನ ಇಂಟರ್ನೆಟ್ ಆನ್ ಆಗಿದ್ದ ಸಂದರ್ಭದಲ್ಲಿ ಮಾತ್ರ ಈ ಸೂಚನೆಗಳು ಬರುತ್ತಿರುತ್ತವೆ. ಖಂಡಿತವಾಗಿ ಇವುಗಳು ಡೇಟಾವನ್ನು ಬಳಸುತ್ತವೆ.

ಕಂಪ್ರೆಸ್ ವೆಬ್‌ಸೈಟ್

ಕಂಪ್ರೆಸ್ ವೆಬ್‌ಸೈಟ್

ಒಪೇರಾ, ಕ್ರೋಮ್ ಮತ್ತು ಯೂಸಿ ಬ್ರೌಸರ್ ಮುಂತಾದ ಬ್ರೌಸರ್‌ಗಳು ಡೇಟಾ ಕಂಪ್ರೆಸ್‌ನಂತೆ ಕೆಲಸ ಮಾಡುತ್ತವೆ. ಇವುಗಳನ್ನು ಆನ್ ಮಾಡಿ.

Best Mobiles in India

English summary
In this article we can find solution for internet bill on smartphone. Unlimited usage how to icrease internet bill we can find here. So in slider we described how to limit on internet access on your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X