ಸ್ಮಾರ್ಟ್‌ಫೋನ್‌ಗಳಲ್ಲಿ RAM ವಿಸ್ತರಣೆ ಮಾಡುವುದು ಹೇಗೆ? ಉಪಯೋಗ ಏನು?

|

ಸ್ಮಾರ್ಟ್‌ಫೋನ್‌ ಪ್ರಿಯರು ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ಹಲವು ಸಂಗತಿಗಳನ್ನು ಗಮನಿಸುತ್ತಾರೆ. ಇದರಲ್ಲಿ RAM ಸಾಮರ್ಥ್ಯವನ್ನು ಗಮನಿಸುವುದು ಕೂಡ ಸಾಮಾನ್ಯ ಸಂಗತಿ. ಯಾಕೆಂದರೆ RAM ಸಾಮರ್ಥ್ಯ ಹೆಚ್ಚಿದಷ್ಟು ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದೇ ಕಾರಣಕ್ಕೆ ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು RAM ವಿಚಾರದ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಅಷ್ಟೇ ಅಲ್ಲ ಬಳಕೆದಾರರಿಗೆ ಅನುಕೂಲವಾಗುವಂತೆ RAM ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ನೀಡುತ್ತಿವೆ.

ಸ್ಮಾರ್ಟ್‌ಫೋನ್‌

ಹೌದು, ಇತ್ತೀಚಿಗೆ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಸ್ಮಾರ್ಟ್‌ಫೋನ್‌ಗಳು ವಿಶೇಷವಾಗಿ RAM ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡುತ್ತಿವೆ. ಇದನ್ನು ವರ್ಚುವಲ್‌ RAM ಎಂದು ಹೇಳಲಾಗ್ತಿದೆ. ಈ ವರ್ಚುವಲ್‌ RAM ನಿಮ್ಮ ಫೋನ್‌ನಲ್ಲಿ ತಾತ್ಕಾಲಿಕ ಫೈಲ್‌ಗಳನ್ನು ಸ್ಟೋರೇಜ್‌ ಮಾಡಲು ಅವಕಾಶ ನೀಡಲಿದೆ. ಹಾಗಾದ್ರೆ ವಿಸ್ತರಣೆ ಮಾಡಬಹುದಾದ ವರ್ಚುವಲ್‌ RAM ಹೇಗೆ ಕೆಲಸ ಮಾಡುತ್ತೆ? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಸ್ತರಿಸಬಹುದಾದ ವರ್ಚುವಲ್ RAM ಹೇಗೆ ಕಾರ್ಯನಿರ್ವಹಿಸಲಿದೆ ಗೊತ್ತಾ?

ವಿಸ್ತರಿಸಬಹುದಾದ ವರ್ಚುವಲ್ RAM ಹೇಗೆ ಕಾರ್ಯನಿರ್ವಹಿಸಲಿದೆ ಗೊತ್ತಾ?

ನೀವು ವಿಸ್ತರಿಸಬಹುದಾದ ವರ್ಚುವಲ್ RAM ನಿಮ್ಮ ಫೋನ್‌ನ ಇಂಟರ್‌ ಸ್ಟೋರೇಜ್‌ನಲ್ಲಿ ಪ್ರಿಸೆಟ್‌ ಪೋಷನ್‌ನಲ್ಲಿ ತಾತ್ಕಾಲಿಕ ಫೈಲ್‌ಗಳನ್ನು ಸ್ಟೋರೇಜ್‌ ಮಾಡಲಿದೆ. ಇಲ್ಲವೇ ಹೆಚ್ಚಿನ RAM ಅಗತ್ಯವಿದ್ದಾಗ RAM ಕರ್ತವ್ಯಗಳನ್ನು ರಿಸರ್ವ್‌ ಮಾಡಲಿದೆ. ಇನ್ನು ನಿಮಗೆಲ್ಲಾ ತಿಳಿದಿರುವ ಹಾಗೇ ಕಂಪ್ಯೂಟಿಂಗ್ ಡಿವೈಸ್‌ಗಳಲ್ಲಿ RAM ಅತಿ ಮುಖ್ಯವಾಗಿದೆ. ಇದರಿಂದ ನಿಮ್ಮ ಫೋನ್ ಎಷ್ಟು ವೇಗವಾಗಿ ಕೆಲಸ ಮಾಡಲಿದೆ ಅನ್ನೊದು ತಿಳಿಯಲಿದೆ. ಕಡಿಮೆ RAM ಇದ್ದಷ್ಟು ಫೋನ್‌ ನಿಧಾನವಾಗಿ ಕಾರ್ಯನಿರ್ವಹಿಸಲಿದೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಹೆಚ್ಚಿನ RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳ ಮೊರೆ ಹೋಗುತ್ತಾರೆ.

RAM

ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ RAMನ ಬಹುಭಾಗವನ್ನು ಬಳಸಿ ನಿಮಗೆ ಮತ್ತೆ RAM ಅವಶ್ಯಕತೆ ಇದ್ದಾಗ ಅದನ್ನು ವಿಸ್ತರಿಸಬಹುದಾಗಿದೆ. ಈ ವಿಸ್ತರಿಸಬಹುದಾದ ವರ್ಚುವಲ್ RAM ತಾತ್ಕಾಲಿಕ ಫೈಲ್‌ಗಳನ್ನು ಈ ಕಾಯ್ದಿರಿಸಿದ ಇಂಟರ್‌ ಸ್ಟೋರೇಶಜ್‌ ಸ್ಪೇಸ್‌ಗೆ ಕಳುಹಿಸುತ್ತದೆ. ಅಲ್ಲದೆ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಲೋಡ್ ಮಾಡಲು ಇದು ನಿಮ್ಮ RAM ನಲ್ಲಿ ಹೆಚ್ಚಿನ ಜಾಗವನ್ನು ಕ್ಲಿಯರ್‌ ಮಾಡಿಕೊಡುತ್ತದೆ. ಒಂದು ವೇಳೆ ನೀವು ನಿಮ್ಮ ಹಳೆಯ ಅಪ್ಲಿಕೇಶನ್‌ಗಳಿಗೆ ವಾಪಸ್‌ ಆದರೆ ನಿಮ್ಮ ತಾತ್ಕಾಲಿಕ ಫೈಲ್‌ಗಳನ್ನು ನಿಮ್ಮ ಆಂತರಿಕ ಸಂಗ್ರಹಣೆಯಿಂದ RAM ಗೆ ಮರಳಿ ತರುತ್ತದೆ. ಅಲ್ಲದೆ ಆ ಅಪ್ಲಿಕೇಶನ್‌ಗಳನ್ನು ಮತ್ತೆ ಬಳಸಲು ನಿಮಗೆ ಅವಕಾಶ ನೀಡುತ್ತದೆ.

ಸಾಮಾನ್ಯ ಫೋನ್‌ಗಳಿಗಿಂತ ಇದು ಹೇಗೆ ಭಿನ್ನವಾಗಿದೆ?

ಸಾಮಾನ್ಯ ಫೋನ್‌ಗಳಿಗಿಂತ ಇದು ಹೇಗೆ ಭಿನ್ನವಾಗಿದೆ?

ವಿಸ್ತರಿಸಬಹುದಾದ ವರ್ಚುವಲ್ RAM ಇಲ್ಲದ ಫೋನ್‌ಗಳಲ್ಲಿ ಹೊಸ ಅಪ್ಲಿಕೇಶನ್‌ಗಳನ್ನು ತೆರೆಯುವುದಕ್ಕೆ RAM ನ ಕೊರತೆ ಎದುರಾಗಲಿದೆ. RAM ವಿಸ್ತರಿಸುವ ಅವಕಾಶವಿಲ್ಲದ ಫೋನ್‌ಗಳಲ್ಲಿ, ನೀವು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ತೆರೆದಾಗ ಸ್ಮಾರ್ಟ್‌ಫೋನ್‌ ನಿದಾನವಾಗಿ ಬಿಡುತ್ತದೆ. ಅಲ್ಲದೆ ಆಂಡ್ರಾಯ್ಡ್‌ನ ಆಪ್ಟಿಮೈಸೇಶನ್ ಬ್ಯಾಕ್‌ಗ್ರೌಂಡ್‌ನಲ್ಲಿ ಅಪ್ಲಿಕೇಶನ್‌ನ ತಾತ್ಕಾಲಿಕ ಫೈಲ್‌ಗಳನ್ನು ಡಿಲೀಟ್‌ ಮಾಡಲು ಪ್ರಾರಂಭಿಸುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲರೂ RAM ಆಪ್ಟಿಮೈಸೇಶನ್ ಎನ್ನುತ್ತಾರೆ.

ಸ್ಮಾರ್ಟ್‌ಫೋನ್‌

ಆದರೆ RAM ವಿಸ್ತರಿಸುವ ಅವಕಾಶವಿರುವ ಸ್ಮಾರ್ಟ್‌ಫೋನ್‌ ನಿಮಗೆ ಹೊಸ ಆಪ್‌ಗಳನ್ನು ಬಳಸಲು ಅನುಮತಿಸುತ್ತದೆ. ಅಲ್ಲದೆ ನೀವು ನೀವು ಹಳೆಯ ಆಅಪ್ಲಿಕೇಶನ್‌ಗೆ ಹಿಂತಿರುಗಿದಾಗ ನೀವು ಸ್ಟಾಪ್‌ ಮಾಡಿರುವ ಸ್ಕ್ರೀನ್‌ನಿಂದ ಪುನರಾರಂಭಿಸುವ ಬದಲು ಆಪ್ ರಿಸ್ಟಾರ್ಟ್‌ ಆಗಲಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ವರ್ಚುವಲ್ RAM ವಾಸ್ತವವಾಗಿ ಡಿವೈಸ್‌ನಲ್ಲಿರುವ ಒಟ್ಟು RAM ಗಾತ್ರವನ್ನು ಹೆಚ್ಚಿಸುವುದಿಲ್ಲ. ಬದಲಿಗೆ ನಿಮ್ಮ ತಾತ್ಕಾಲಿಕ ಫೈಲ್‌ಗಳನ್ನು ಉಳಿಸಲು ಅವಕಾಸ ಮಾಡಿಕೊಡಲಿದೆ ಅಷ್ಟೇ.

6GBRAM

ಉದಾಹರಣೆಗೆ ನಿಮ್ಮ ಬಳಿ 6GBRAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಇದೆ. ಇದು ವಿಸ್ತರಿಸಬಹುದಾದ ವರ್ಚುವಲ್ RAM ಅನ್ನು ಹೊಂದಿದೆ ಎಂದುಕೊಳ್ಳಿ. ನೀವು ಸಾಕಷ್ಟು ಅಪ್ಲಿಕೇಶನ್‌ಗಳನ್ನು ತೆರೆದಾಗ, 6GB RAM ಸ್ಟೋರೇಜ್‌ ಫುಲ್‌ ಆಗಲಿದೆ. ಇಂತಹ ಸಮಯದಲ್ಲಿ ವರ್ಚುವಲ್ RAM ಫೀಚರ್ಸ್‌ ಪ್ರಾರಂಭವಾಗಲಿದೆ. ಇದು ನಿಮ್ಮ ಬ್ಯಾಕ್‌ಗ್ರೌಂಡ್‌ನಲ್ಲಿರುವ ಆಪ್‌ಗಳನ್ನು ನಿರ್ವಹಿಸಲು ಹೆಚ್ಚುವರಿ 2GB ಸ್ಟೇಸ್‌ ಅನ್ನು ಬಳಸುತ್ತದೆ. ಇದರಿಂದ ನಿಮ್ಮ ಹಳೆಯ ಅಪ್ಲಿಕೇಶನ್‌ಗಳನ್ನು ಕ್ಲೋಸ್‌ ಮಾಡುವ ದಲು ಹೆಚ್ಚುವರಿ RAMನಲ್ಲಿ ಬಳಸಲು ಅವಕಾಶ ಸಿಗಲಿದೆ.

ವರ್ಚುವಲ್ RAM ಉತ್ತಮವಾಗಿದೆಯೇ?

ವರ್ಚುವಲ್ RAM ಉತ್ತಮವಾಗಿದೆಯೇ?

ಇಲ್ಲ, ಕಾರ್ಯಕ್ಷಮತೆಯ ಪ್ರಕಾರ, ನಿಜವಾದ RAM ಸ್ಟೋರೇಜ್‌ನಂತೆ ವರ್ಚುವಲ್‌ RAM ಇರುವುದಿಲ್ಲ. RAMಸ್ಟೋರೇಜ್‌ ಯಾವಾಗಲೂ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿರುತ್ತದೆ. ಏಕೆಂದರೆ RAM ವೇಗವು ಆಂತರಿಕ ಶೇಖರಣಾ ವೇಗಕ್ಕಿಂತ ಹೆಚ್ಚು ವೇಗವಾಗಿರುತ್ತದೆ. ಆದರೆ ವಿಸ್ತರಿಸಬಹುದಾದ ವರ್ಚುವಲ್ RAM ಅನ್ನು ಬಳಸಿದಾಗ, RAM ನಿಂದ ಇಂಟರ್‌ ಸ್ಟೋರೇಜ್‌ ಮತ್ತು ಬ್ಯಾಕ್‌ಗ್ರೌಂಡ್‌ಗೆ ಸಾಕಷ್ಟು ಡೇಟಾವನ್ನು ವರ್ಗಾಯಿಸಲಾಗುತ್ತದೆ. ಇದರಿಂದ RAM ಮಾಡ್ಯೂಲ್ ಒಳಗೆ ನಡೆಯುವ ವರ್ಗಾವಣೆಗಳಿಗಿಂತ ನಿಧಾನಗತಿಯಲ್ಲಿ ನಡೆಯಲಿದೆ.

ಅನಾನುಕೂಲಗಳು

ಅನಾನುಕೂಲಗಳು

6ಜಿಬಿ+2 ಜಿಬಿ (ವರ್ಚುವಲ್) ಫೋನ್ 8 ಜಿಬಿ RAM ಹೊಂದಿರುವ ಫೋನ್‌ಗೆ ಸಮಾನವಾಗಿ ಕಾರ್ಯನಿರ್ವಹಿಸುವುದಿಲ್ಲ. ವಿಸ್ತರಿಸಬಹುದಾದ ವರ್ಚುವಲ್ ಮೆಮೊರಿ ತಾತ್ಕಾಲಿಕ RAM ಬಳಕೆಗಾಗಿ ಖಾಲಿ ಆಂತರಿಕ ಶೇಖರಣೆಯನ್ನು ಬದಲಿಸುವ ಸಾಫ್ಟ್‌ವೇರ್ ಆಗಿದೆ. ಇದರಲ್ಲಿ ನೀವು ಹೆಚ್ಚುವರಿ ಇಂಟರ್‌ ಸ್ಟೋರೇಜ್‌ ಉಳಿಸಿಕೊಂಡಾಗ ಮಾತ್ರ ಕಾರ್ಯನಿರ್ವಹಿಸಲಿದೆ.ಒಂದು ವೇಳೆ ನಿಮ್ಮ ಒಟ್ಟು ಇಂಟರ್‌ ಸ್ಟೋರೇಜ್‌ ಸ್ಪೇಸ್‌ ಫುಲ್‌ ಆಗಿದ್ದರೆ ನೀವು ಯಾವುದೇ ಹೆಚ್ಚುವರಿ RAM ಅನ್ನು ವಿಸ್ತರಿಸಲು ಸಾಧ್ಯವಿಲ್ಲ.

Best Mobiles in India

English summary
Check out how the expandable virtual RAM feature works on phones like the Redmi 10 Prime and what advantages and disadvantages it comes with.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X