Home
ಸುದ್ದಿಜಾಲ

ಐಫೋನ್ ಹ್ಯಾಕರ್‌ ತಾನಾಗೇ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ.?

By Gizbot Bureau

ನಿಮಗೆ ಎನ್ ಎಸ್ ಓ ಗ್ರೂ ಪಿ ತಿಳಿದಿದೆಯಾ. ಗೊತ್ತಿಲ್ಲದೇ ಇದ್ರೆ ನಾವು ತಿಳಿಸುತ್ತೇವೆ ಕೇಳಿ. ಇದೊಂದು ಭದ್ರತಾ ಪಡೆ. ಇಸ್ರೇಲ್ ಮೂಲದ ಒಂದು ಸಂಸ್ಥೆಯಾಗಿದ್ದು, ಇಸ್ರೇಲಿನ ಸಶಸ್ತ್ರ ಪಡೆಗಳಿಗೆ ಉಪಕರಣಗಳನ್ನು ನೀಡುವುದು ಮತ್ತು ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಗಳನ್ನು ಪರೀಕ್ಷಿಸಿ ಅದರ ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಇದು ಹೊತ್ತುಕೊಂಡಿರುತ್ತದೆ.

ಇತ್ತೀಚೆಗೆ ಈ ಎನ್ಎಸ್ಓ ಸಂಸ್ಥೆ ಭಾರೀ ಸುದ್ದಿ ಮಾಡುತ್ತಿದೆ. ಯಾಕೆಂದರೆ ಈ ಕಂಪೆನಿಯು ಕಳ್ಳರಿಂದ ಮಾಡಲ್ಪಟ್ಟಿದೆ ಎಂಬುದು ಪ್ರಚಾರದ ಹಿಂದಿನ ಕಾರಣ.. ಇದೇನಿದು ಕಳ್ಳರಿಂದ ಮಾಡಲ್ಪಟ್ಟ ಕಂಪೆನಿಯೊಂದು ಇಸ್ರೇಲ್ ಸೈನ್ಯದ ಜೊತೆ ಸಂಪರ್ಕ ಹೊಂದಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದೀರಾ?

ಐಫೋನ್ ಹ್ಯಾಕರ್‌ ತಾನಾಗೇ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ.?

ಹೊರಗಿನ ಕಳ್ಳರನ್ನು ಹೇಗೋ ಪತ್ತೆ ಮಾಡಬಹುದು, ಮನೆಯೊಳಗಿನ ಕಳ್ಳರನ್ನು ಹಿಡಿಯುವುದು ಕಷ್ಟ ಎಂಬ ಮಾತೊಂದಿದೆ. ಇದರ ಕಥೆಯೂ ಹಾಗೆಯೇ ಆಗಿತ್ತು. ಇತ್ತೀಚೆಗೆ ಪೋರ್ಬ್ಸ್ ಪತ್ರಿಕೆ ಒಂದು ವರದಿ ಪ್ರಕಟವಾಗಿತ್ತು. ಎನ್ಎಸ್ಓ ಸಂಸ್ಥೆ ಐಫೋನ್ ಹ್ಯಾಕ್ ಮಾಡಲು ಸೈನ್ಯಕ್ಕೆ ಮಾಹಿತಿ ಒದಗಿಸಲು ಬಳಸುವ ಸಾಧನಗಳನ್ನು ಕಳ್ಳರು ಕದ್ದಿದ್ದಾರೆ, ಹಾಗಾಗಿ ಇದು ಕಳ್ಳರಿಂದ ಮಾಡಲ್ಪಟ್ಟ ಸಂಸ್ಥೆ ಎಂಬ ವ್ಯಂಗ್ಯದ ನುಡಿಗಳನ್ನು ಆಡಲಾಗಿತ್ತು.

ಆದರೆ ನಿಜ ಸಂಗತಿ ಏನು ಅಂದರೆ, ಹೀಗೆ ಮಾಹಿತಿಗಳನ್ನು ಕದಿಯುತ್ತಿದ್ದ ಕಳ್ಳ ವ್ಯಕ್ತಿ 38 ವರ್ಷದ ಎನ್ಎಸ್ಓ ನ ಮಾಜಿ ಪ್ರೊಗ್ರಾಮರ್.. ಈ ವರ್ಷದ ಆರಂಭದಲ್ಲಿ ಈ ಕಳ್ಳ ಕಂಪೆನಿಯ ಕೋಡ್ ಗಳನ್ನು ಕದ್ದಿದ್ದಾನೆ ಮತ್ತು 50 ಮಿಲಿಯನ್ ಡಾಲರ್ ಗೆ ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಬೇರೆಬೇರೆ ವೆಬ್ ನಲ್ಲಿ ಅದನ್ನು ಮಾರಾಟ ಮಾಡಲು ಪ್ರಯತ್ನ ಪಟ್ಟಿದ್ದಾನೆ. ಎಕ್ಸ್ ಟರ್ನಲ್ ಹಾರ್ಡ್ ಡ್ರೈವ್ ಗಳಿಗೆ ಎನ್ಎಸ್ಓ ಕೋಡ್ ಗಳನ್ನು ವರ್ಗಾಯಿಸುವ ಮುನ್ನ ಆತ McAfee ಭದ್ರತಾ ಸಾಫ್ಟವೇರ್ ನ್ನು ತನ್ನ ಸಿಸ್ಟಮ್ ನಲ್ಲಿ ಡಿಸೇಬಲ್ ಕೂಡ ಮಾಡಿದ್ದ.

ಕಳ್ಳ ಚಾಪೆ ಕೆಳಗೆ ನುಸುಳಿದರೆ ಪೋಲೀಸರು ರಂಗೋಲಿ ಕೆಳಗೆ ನುಸುಳಿ ಕಳ್ಳನನ್ನು ಹಿಡಿಯುತ್ತಾರೆ ಎಂಬ ಮಾತೇ ಇದೆ. ಡಾರ್ಕ್ ವೆಬ್ ಒಂದರಲ್ಲಿ ಈ ಕಳ್ಳ ತನ್ನನ್ನು ತಾನು ಎನ್ಎಸ್ಓ ನ ಮಾಜಿ ಟೀಮ್ ಮೆಂಬರ್ ಎಂದು ಹೇಳಿಕೊಂಡಿದ್ದ. ಅವನ ದುರದೃಷ್ಟವಶಾತ್,ಡಾರ್ಕ್ ವೆಬ್ ನಲ್ಲಿ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬರು ಇಸ್ರೇಲಿನ ಜಸ್ಟೀಸ್ ಸಚಿವಾಲಯಕ್ಕೆ ಈ ಮಾಹಿತಿ ಒದಗಿಸಿದರು, ನಂತರ ಆತನನ್ನು ಬಂಧಿಸಿ, ಕಳ್ಳತನ ಮಾಡಿದ ಎಲ್ಲಾ ಡಾಟಾವನ್ನು ವಾಪಾಸ್ ಪಡೆದು ಭದ್ರತೆ ನೀಡಲಾಗಿದೆ.

ಎನ್ಎಸ್ಓ ಮಾಹಿತಿ ನೀಡಿರುವಂತೆ ಸದ್ಯ ಯಾವುದೇ ಡಾಟಾವನ್ನು ಮೂರನೇ ಪಾರ್ಟಿಯ ಕಂಪೆನಿಗಳಿಗೆ ಹಂಚಿಕೊಳ್ಳಲಾಗಿಲ್ಲ, ಕಡಿಮೆ ಸಮಯದಲ್ಲಿ ಕಳ್ಳತನ ಮಾಡಲು ಯತ್ನಿಸಿದ ಆ ಮಾಜಿ ಎನ್ಎಸ್ಓ ಕೆಲಸಗಾರನನ್ನು ಬಂಧಿಸಲಾಗಿದೆ, ಮತ್ತು ಕದ್ದಿರುವ ಮಾಹಿತಿಯನ್ನು ಪುನಃ ಪಡೆದು ಭದ್ರತೆ ನೀಡಲಾಗಿದೆ. ಎಂದು ಫೋರ್ಬ್ಸ್ ಗೆ ಎನ್ಎಸ್ಓ ವಕ್ತಾರರು ತಿಳಿಸಿದ್ದಾರೆ.

ಐಫೋನ್ ಹ್ಯಾಕರ್‌ ತಾನಾಗೇ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ.?

ಇದಕ್ಕೆ ಸಂಬಂಧ ಪಟ್ಟಂತೆ ಇತ್ತೀಚೆಗೆ ಆಪಲ್ ಸಂಸ್ಥೆಯೂ ಕೂಡ ನ್ಯೂಯಾರ್ಕ್ ಟೈಮ್ಸ್ ಗೆ ಭದ್ರತಾ ವೈಶಿಷ್ಟ್ಯವನ್ನು ಫೋನಿನಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಯುಎಸ್ ಬಿ ರಿಸ್ಟ್ರಿಕ್ ಮೋಡ್ ಆಯ್ಕೆಯನ್ನು ಪರಿಚಯಿಸಲಾಗುತ್ತಿದ್ದು, ಯಾವುದೇ ಮೂರನೇ ವ್ಯಕ್ತಿಯೂ ಐಫೋನ್ ಕ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಎಲ್ಲರೂ ನಿರೀಕ್ಷಿಸುತ್ತಿರುವುದೂ ಅಷ್ಟೇ, ಇನ್ನೇನು ಕೆಲವೇ ದಿನದಲ್ಲಿ ಆಪಲ್ ಐಓಎಸ್ 12 ನ ಅಂತಿಮ ವರ್ಷನ್ ನ್ನು ಬಿಡುಗಡೆಗೊಳಿಸುತ್ತಿದೆ. ಅದರಲ್ಲಿ ಬಳಕೆದಾರರ ಸೆಕ್ಯುರಿಟಿಯನ್ನು ಇನ್ನಷ್ಟು ಹೆಚ್ಚಿಸುವ ಎಲ್ಲಾ ಸವಲತ್ತುಗಳು ಇರುವ ಸೂಚನೆ ಇದೆ.

ಒಟ್ಟಾರೆ ಉಪ್ಪು ತಿಂದ ಮನೆಗೆ ಕನ್ನ ಹಾಕಲು ಹೊರಟಿದ್ದ ವ್ಯಕ್ತಿಯೊಬ್ಬ ತನ್ನದೇ ಸ್ವಯಂಕೃತ ಅಪರಾಧದಿಂದ ಬಲಿಪಶುವಾದ.

Best Mobiles in India

English summary
How the hackers of iPhones got hacked themselves. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+