ಮೊಬೈಲ್‌ನಲ್ಲಿ ಇಂಟರ್‌ನೆಟ್ ಡೇಟಾ ಬೇಗ ಖಾಲಿಯಾಗ್ತಾ ಇದ್ದರೆ ಕೂಡಲೇ ಹೀಗೆ ಮಾಡಿ!
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೇ ಕ್ಷಣಗಳಲ್ಲಿ ಡೇಟಾ ಖಾಲಿಯಾಗ್ತಾ ಇದೀಯಾ. ಹೆಚ್ಚಿನ ಸಮಯ ಇಂಟರ್‌ನೆಟ್ ಬ್ರೌಸರ್ ಬಳಕೆ ಮಾಡಿಲ್ಲ ಆದರೂ ನೆಟ್ ಖಾಲಿಯಾಗಿದೆ ಅನ್ನೊ ಚಿಂತೆ ಕಾಡ್ತಿದೆಯಾ. ಇದಕ್ಕೆಲ್ಲಾ ಕಾರಣ ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುವುದು. ಇದನ್ನು ತಪ್ಪಿಸಬೇಕಾದರೆ ನೀವು ಕೆಲವು ಕ್ರಮಗಳನ್ನು ಅನುಸರಿಸಬೇಕಿದೆ.
ಹೌದು, ಮೊಬೈಲ್‌ನಲ್ಲಿರುವ ಅಪ್ಲಿಕೇಶನ್‌ಗಳಿಂದ ಆನ್‌ಲೈನ್ ಸೇವೆಗಳು ಸುಲಭವಾಗಿ ದೊರೆಯುತ್ತಿವೆ. ಆದರೆ ಈ ಅಪ್ಲಿಕೇಶನ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ಡೇಟಾ ಕಿಲ್ ಮಾಡುತ್ತಿರುತ್ತವೆ ಇದರಿಂದ ನಿಮ್ಮ ಮೊಬೈಲ್‌ನಲ್ಲಿನ ಡೇಟಾ ಖಾಲಿಯಾಗುತ್ತದೆ. ಇದನ್ನು ತಡೆಗಟ್ಟಬೇಕಾದರೆ ನೀವುಗಳು ತಮ್ಮ ಮೊಬೈಲ್‌ನಲ್ಲಿ ಡೇಟಾ ಸೇವರ್ ಮೋಡ್ ಅನ್ನು ಆಕ್ಟಿವ್ ಮಾಡಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಡೇಟಾ ಸೇವರ್ ಮೋಡ್ ಆಕ್ಟಿವ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಯಾವುದೇ ಅಪ್ಲಿಕೇಶನ್ ತೆರೆದಾಗ ಅದರ ಬ್ಯಾಕ್‌ಗ್ರೌಂಡ್‌ನಲ್ಲಿ ಡೇಟಾ ಬಳಕೆಯಾಗುತ್ತಿರುತ್ತದೆ. ಇದರಿಂದ ಡೇಟಾ ಕೂಡ ಬೇಗನೇ ಖಾಲಿಯಾಗುತ್ತದೆ, ಜೊತೆಗೆ ಫೋನ್‌ನ ಬ್ಯಾಟರಿ ಕೂಡ ಬೇಗನೇ ಖಾಲಿಯಾಗುತ್ತದೆ. ಇದನ್ನು ತಪ್ಪಿಸಲು ಡೇಟಾ ಸೇವರ್ ಮೋಡ್ ಆಯ್ಕೆ ಉತ್ತಮವಾಗಿದೆ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಈ ಆಯ್ಕೆಯು ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಾಗಲಿದೆ. ಇದನ್ನು ನೀವು ಆಕ್ಟಿವ್ ಮಾಡಬೇಕಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ಸೇವರ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?
* ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
* ನಂತರ ನಿಮ್ಮ ಮೊಬೈಲ್ ನೆಟ್‌ವರ್ಕ್ ಮೇಲೆ ಕ್ಲಿಕ್ ಮಾಡಿ.
* ಇದೀಗ ನೀವು ಡೇಟಾ ಸೇವರ್ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
* ನಂತರ ಡೇಟಾ ಸೇವರ್ ಅನ್ನು ಆನ್ ಮಾಡಿ.
ಈ ಮೂಲಕ ನಿಮ್ಮ ಫೋನ್‌ನಲ್ಲಿ ಡೇಟಾ ಸೇವರ್ ಮೋಡ್ ಅನ್ನು ಆಕ್ಟಿವ್ ಮಾಡಬಹುದಾಗಿದೆ.
ಇನ್ನು ನಿಮ್ಮ ಫೋನ್‌ನಲ್ಲಿ ಡೇಟಾ ಸೇವರ್ ಮೋಡ್ ಅನ್ನು ಸಕ್ರಿಯಗೊಳಸಿದರೆ, ನಿಮ್ಮ ಮೊಬೈಲ್‌ನಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಇಂಟರ್‌ನೆಟ್ ಪ್ರವೇಶಿಸುವ ಅಪ್ಲಿಕೇಶನ್‌ಗಳಿಗೆ ತಡೆ ನೀಡಲಿದೆ. ಆದರೆ ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್‌ನ ಬಳಕೆದಾರ ಇಂಟರ್ಫೇಸ್ ಅನ್ನು ಅವಲಂಬಿಸಿ ಈ ಸಂಗತಿಯು ಬದಲಾಗಬಹುದು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ರೀಸೆಟ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಫೋನಿನ ಸೆಟ್ಟಿಂಗ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಸಿಸ್ಟಮ್ ಅನ್ನು ಟ್ಯಾಪ್ ಮಾಡಿ.
ಹಂತ:2 ಇದರಲ್ಲಿ ರಿಸೆಟ್ ಮಾಡುವ ಆಯ್ಕೆಗಳನ್ನು ಆಯ್ಕೆಮಾಡಿ.
ಹಂತ:3 ಇದೀಗ ಲಿಸ್ಟ್‌ನ ಕೆಳಭಾಗದಲ್ಲಿ ಎಲ್ಲಾ ಡೇಟಾವನ್ನು ಅಳಿಸಿ ಆಯ್ಕೆಮಾಡಿ.
ಹಂತ:4 ಡಿಲೀಟ್ ಮಾಡಲಾಗುವ ಡೇಟಾಗೆ ಸಂಬಂಧಿಸಿದ ಮಾಹಿತಿಯನ್ನು ಓದಿ, ನಂತರ ಎಲ್ಲಾ ಡೇಟಾವನ್ನು ಅಳಿಸಿ ಟ್ಯಾಪ್ ಮಾಡಿ.
ಹಂತ:5 ನಂತರ ಪ್ರಕ್ರಿಯೆಯನ್ನು ದೃಢೀಕರಿಸಲು ನಿಮ್ಮ ಪಿನ್ ಅಥವಾ ಪಾಸ್ಕೋಡ್ ಅನ್ನು ನಮೂದಿಸಿ.
ಹಂತ:6 ಸ್ಕ್ರೀನ್ ಮೇಲೆ ತೋರಿಸುವ ಎಚ್ಚರಿಕೆಯನ್ನು ಪರಿಶೀಲಿಸಿ.
ಹಂತ:7 ಇದೀಗ ನಿಮ್ಮ ಫೋನ್‌ನಲ್ಲಿ ಎಲ್ಲಾ ಡೇಟಾವನ್ನು ಅಳಿಸು ಆಯ್ಕೆಯನ್ನು ಟ್ಯಾಪ್ ಮಾಡಿ.
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಫ್ಯಾಕ್ಟರಿ ರಿಸೆಟ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಸೆಟ್ಟಿಂಗ್ಸ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಅಕೌಂಟ್ ಮತ್ತು ಬ್ಯಾಕಪ್ ಆಯ್ಕೆಮಾಡಿ > ಮ್ಯಾನೇಜ್ ಅಕೌಂಟ್ಸ್.
ಹಂತ:3 ಲಿಸ್ಟ್‌ನಲ್ಲಿ ನಿಮ್ಮ ಸ್ಯಾಮ್‌ಸಂಗ್ ಖಾತೆಯನ್ನು ಪತ್ತೆ ಮಾಡಿ ಮತ್ತು ಎಂಟ್ರಿ ಟ್ಯಾಪ್ ಮಾಡಿ, ನಂತರ ರಿಮೂವ್ ಅಕೌಂಟ್ ಆಯ್ಕೆಮಾಡಿ.
ಹಂತ:4 ಇದೀಗ ಮೇನ್ ಸೆಟ್ಟಿಂಗ್ಸ್ ಮೆನುಗೆ ಹಿಂತಿರುಗಿ,
ಹಂತ:5 ನಂತರ ಜನರಲ್ ಮ್ಯಾನೇಜ್‌ಮೆಂಟ್ ಟ್ಯಾಪ್ ಮಾಡಿ.
ಹಂತ:6 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ರಿಸೆಟ್ ಮೇಲೆ ಟ್ಯಾಪ್ ಮಾಡಿ.
ಹಂತ:7 ಇದರಲ್ಲಿ ಫ್ಯಾಕ್ಟರಿ ಡೇಟಾ ರೀಸೆಟ್ ಮೇಲೆ ಟ್ಯಾಪ್ ಮಾಡಿ.
ಹಂತ:8 ಅಳಿಸಲಾಗುವ ಡೇಟಾಗೆ ಸಂಬಂಧಿಸಿದ ಮಾಹಿತಿಯನ್ನು ಓದಿ, ನಂತರ ರಿಸೆಟ್ ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:9 ಡಿಲೀಟ್ ಮಾಡಲು ನಿಮ್ಮ ಪಿನ್ ಅಥವಾ ಪಾಸ್ಕೋಡ್ ಅನ್ನು ನಮೂದಿಸಿ.
ಹಂತ:10 ಇದೀಗ ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಎಲ್ಲವನ್ನೂ ಅಳಿಸಿ ಟ್ಯಾಪ್ ಮಾಡಿ.


Click it and Unblock the Notifications








