ಜೂಮ್‌ ಮೀಟಿಂಗ್‌ನಲ್ಲಿ ಫೋಕಸ್ ಮೋಡ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಜೂಮ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಇನ್ನು ಜೂಮ್‌ ಅಪ್ಲಿಕೇಶನ್‌ ಬಳಕೆದಾರರ ನೆಚ್ಚಿನ ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಜೂಮ್‌ ತನ್ನ ವಿಡಿಯೋ ಕಾನ್ಫರೆನ್ಸಿಂಗ್ ಆಪ್‌ಗೆ ಹೊಸ ಫೋಕಸ್ ಮೋಡ್ ಫೀಚರ್ಸ್‌ ಅನ್ನು ಸೇರಿಸಿದೆ.

ಜೂಮ್‌

ಹೌದು, ಜೂಮ್‌ ಅಪ್ಲಿಕೇಶನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೋಕಸ್‌ ಮೋಡ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ವರ್ಚುವಲ್ ತರಗತಿಯಲ್ಲಿದ್ದಾಗ ವಿದ್ಯಾರ್ಥಿಗಳು ವಿಚಲಿತರಾಗದಂತೆ ಕಾಪಾಡುವ ಗುರಿಯನ್ನು ಹೊಂದಿದೆ. ಆನ್‌ಲೈನ್‌ ಕ್ಲಾಸ್‌ ನಡೆಯುವಾಗ ತಮ್ಮ ಗೆಳೆಯರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಲು ಸಾಧ್ಯವಾಗದಂತೆ ವಿದ್ಯಾರ್ಥಿಗಳ ವಿಡಿಯೊಗಳನ್ನು ಮತ್ತು ಸ್ಕ್ರೀನ್ ಶೇರ್‌ಗಳನ್ನು ಮರೆಮಾಡಲು ಶಿಕ್ಷಕರಿಗೆ ನಿಯಂತ್ರಣಗಳನ್ನು ಒದಗಿಸುವುದಾಗಿದೆ. ಹಾಗಾದ್ರೆ ಈ ಫೋಕಸ್‌ ಮೋಡ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜೂಮ್‌

ಜೂಮ್‌ ಪರಿಚಯಿಸಿರುವ ಫೋಕಸ್ ಮೋಡ್ ಫೀಚರ್ಸ್‌ ಇದೀಗ ಎಲ್ಲಾ ಖಾತೆಗಳು, ಗುಂಪುಗಳು ಮತ್ತು ವೈಯಕ್ತಿಕ ಬಳಕೆದಾರರಿಗೆ ಲಭ್ಯವಿದೆ. ಇನ್ನು ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದಾಗ, ಜೂಮ್ ಸಭೆಯ ಎಲ್ಲಾ ಭಾಗವಹಿಸುವವರ ವೀಡಿಯೊಗಳನ್ನು ಪ್ರವೇಶಿಸಲು ಮೀಟಿಂಗ್ ಹೋಸ್ಟ್‌ಗೆ ಅನುಮತಿಸುತ್ತದೆ. ಅದೇ ಸಮಯದಲ್ಲಿ ಬಳಕೆದಾರರು ತಮ್ಮ ಗೆಳೆಯರ ಲೈವ್ ವೀಡಿಯೊಗಳನ್ನು ನೋಡದಂತೆ ಮತ್ತು ಸಭೆಯಲ್ಲಿ ವಿಚಲಿತರಾಗುವುದನ್ನು ತಪ್ಪಿಸಲು ಅವರಿಗೆ ನಿಯಂತ್ರಣವನ್ನು ನೀಡುತ್ತದೆ.

ಫೋಕಸ್

ಇನ್ನು ಫೋಕಸ್ ಮೋಡ್ ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ವೀಡಿಯೋಗಳನ್ನು ನೋಡಲು ಅನುಮತಿಸುತ್ತದೆ. ವಿದ್ಯಾರ್ಥಿಗಳು ತಮ್ಮ ತರಗತಿಯ ಭಾಗವಹಿಸುವವರನ್ನು ನೋಡದೆ ತಮ್ಮ ಶಿಕ್ಷಕರನ್ನು ನೋಡುತ್ತಾರೆ. ಈ ಫೀಚರ್ಸ್‌ ಮೂಲಕ ಶಿಕ್ಷಕರು ತಮ್ಮ ತರಗತಿಯನ್ನು ಮೇಲ್ವಿಚಾರಣೆ ಮಾಡಬಹುದು. ಆದರೆ ವಿದ್ಯಾರ್ಥಿಗಳು ತಮ್ಮ ಗೆಳೆಯರ ವೀಡಿಯೋ ಫೀಡ್‌ಗಳಿಂದ ವಿಚಲಿತರಾಗುವುದಿಲ್ಲ ಅಥವಾ ತಮ್ಮ ಸ್ವಂತ ಕ್ಯಾಮರಾ ಆನ್ ಮಾಡುವ ಬಗ್ಗೆ ಸ್ವಯಂ ಪ್ರಜ್ಞೆ ಹೊಂದುವುದಿಲ್ಲ ಎಂದು ಜೂಮ್ ಹೇಳಿಕೆಯಲ್ಲಿ ತಿಳಿಸಿದೆ.

ಜೂಮ್‌ನಲ್ಲಿ ಫೋಕಸ್ ಮೋಡ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಜೂಮ್‌ನಲ್ಲಿ ಫೋಕಸ್ ಮೋಡ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಇದಲ್ಲದೆ ಫೋಕಸ್ ಮೋಡ್‌ನಲ್ಲಿ ಸಹ ಭಾಗವಹಿಸುವವರು ಇನ್ನೂ ಇತರ ಭಾಗವಹಿಸುವವರ ಹೆಸರುಗಳು, ಮೌಖಿಕ ಪ್ರತಿಕ್ರಿಯೆ ಅಥವಾ ಪ್ರತಿಕ್ರಿಯೆಗಳನ್ನು ನೋಡಬಹುದು ಮತ್ತು ಮ್ಯೂಟ್ ಮಾಡದಿದ್ದಾಗ ಅವುಗಳನ್ನು ಕೇಳಬಹುದು ಎಂದು ಕಂಪನಿ ಸ್ಪಷ್ಟಪಡಿಸಿದೆ. ಹಾಗಾದ್ರೆ ಜೂಮ್‌ನಲ್ಲಿ ಫೋಕಸ್‌ ಮೋಡ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಹಂತ:1 ಹೋಸ್ಟ್ ಅಥವಾ ಸಹ-ಹೋಸ್ಟ್ ಆಗಿ ಹೊಸ ಸಭೆಯನ್ನು ಪ್ರಾರಂಭಿಸಿ.
ಹಂತ:2 ಈಗ ಮೀಟಿಂಗ್ ಟೂಲ್‌ಬಾರ್‌ನ ಒಳಗೆ "ಇನ್ನಷ್ಟು" ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ.
ಹಂತ:3 "ಸ್ಟಾರ್ಟ್ ಫೋಕಸ್ ಮೋಡ್" ಆಯ್ಕೆಯನ್ನು ಆರಿಸಿ.
ಹಂತ:4 ಖಚಿತಪಡಿಸಲು "ಪ್ರಾರಂಭಿಸು" ಕ್ಲಿಕ್ ಮಾಡಿ.
ಹಂತ:5 ಫೋಕಸ್ ಮೋಡ್ ಪ್ರಾರಂಭವಾದ ನಂತರ, ಜೂಮ್ ನೀವು ಸೇರಿದಂತೆ ಎಲ್ಲಾ ಭಾಗವಹಿಸುವವರಿಗೆ ವೀಡಿಯೊದ ಮೇಲ್ಭಾಗದಲ್ಲಿ ಬ್ಯಾನರ್‌ನೊಂದಿಗೆ ತಿಳಿಸುತ್ತದೆ.
ಹಂತ:6 ಫೋಕಸ್ ಮೋಡ್ ಆಯ್ಕೆಯು ಯಾವಾಗಲೂ ವೀಡಿಯೊದ ಮೇಲಿನ ಎಡ ಮೂಲೆಯಲ್ಲಿ ಗೋಚರಿಸುತ್ತದೆ.

Best Mobiles in India

Read more about:
English summary
Zoom recently launched a new Focus mode feature. Here we will be taking a look at how you can enable it to control Zoom meetings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X