ಟೆಲಿಗ್ರಾಮ್‌ನಲ್ಲಿ ವಾಯ್ಸ್‌ ಚಾಟ್ ಶೆಡ್ಯೂಲ್ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

|

ಟೆಲಿಗ್ರಾಮ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ಸ್ನೇಹಿ ಎನಿಸಿದೆ. ಇನ್ನು ಕಳೆದ ವರ್ಷ ಬಳಕೆದಾರರಿಗೆ ವಾಯ್ಸ್‌ ಚಾಟ್ ಫೀಚರ್ಸ್‌ ಪರಿಚಯಿಸಿದ್ದ ಟೆಲಿಗ್ರಾಮ್, ಈಗ ಕ್ಲಬ್‌ಹೌಸ್‌ನಂತೆಯೇ ಅಪ್ಲಿಕೇಶನ್‌ನ ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ವಾಯ್ಸ್‌ ಚಾಟ್‌ಗಳನ್ನು ನಿಗದಿಪಡಿಸುವ ಸಾಮರ್ಥ್ಯವನ್ನು ಪರಿಚಯಿಸಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ವಾಯ್ಸ್‌ ಚಾಟ್‌ಗಳನ್ನು ಶೇಡ್ಯೂಲ್‌ ಮಾಡುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಈ ಫೀಚರ್ಸ್‌ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಅಪ್ಲಿಕೇಶನ್‌ನ ಅಂತಿಮ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ಆವೃತ್ತಿ v7.7.0 ಹೊಸ ವಾಯ್ಸ್‌ ಚಾಟ್ ಫೀಚರ್ಸ್‌ ಅನ್ನು ಸ್ವೀಕರಿಸುತ್ತದೆ. ನಿಗದಿತ ವಾಐ್ಸ್‌ ಚಾಟ್ ಅನ್ನು ನಿರ್ದಿಷ್ಟ ಚಾನಲ್‌ಗೆ ಕೌಂಟ್ಡೌನ್ ಮೂಲಕ ಪಿನ್ ಮಾಡಬಹುದಾಗಿದ್ದು, ಅದು ಆ ಚಾನಲ್‌ನಲ್ಲಿರುವ ಎಲ್ಲ ಬಳಕೆದಾರರಿಗೆ ಗೋಚರಿಸುತ್ತದೆ. ಹಾಗಾದ್ರೆ ವಾಯ್ಸ್‌ ಚಾಟ್‌ ಶೆಡ್ಯೂಲ್‌ ಫೀಚರ್ಸ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌ ವಾಯ್ಸ್‌ ಚಾಟ್‌ ಶೆಡ್ಯೂಲ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಟೆಲಿಗ್ರಾಮ್‌ ವಾಯ್ಸ್‌ ಚಾಟ್‌ ಶೆಡ್ಯೂಲ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಟಲಿಗ್ರಾಮ್‌ ನಲ್ಲಿ ನೀವು ಯಾರ ಜೊತೆಗೆ ಆದರೂ ಪ್ರಮುಖ ಸಭೆ ಅಥವಾ ಚಾಟ್ ಸೆಷನ್ ಅನ್ನು ನಿಗದಿಪಡಿಸಲು ಬಯಸಿದರೆ, ನೀವು ಅದನ್ನು ವಾಯ್ಸ್‌ ಚಾಟ್ ಫೀಚರ್ಸ್‌ ಮೂಲಕ ನಡೆಸಬಹುದು. ಆದ್ದರಿಂದ ಆ ಚಾನಲ್‌ನಲ್ಲಿರುವ ಜನರು ಈ ಫೀಚರ್ಸ್‌ ಜನರ ಗಮನ ಸೆಳೆಯುತ್ತಿದೆ. ಹಿಂದಿನ v7.6.0 ನಂತರ, ಟೆಲಿಗ್ರಾಮ್ ಚಾನೆಲ್‌ಗಳಿಗೆ ವಾಯ್ಸ್‌ ಚಾಟ್ ಕಾರ್ಯವನ್ನು ಪಡೆದುಕೊಂಡಿದೆ, ಟೆಲಿಗ್ರಾಮ್ ಈ ಫೀಚರ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಈ ಮೂಲಕ ವಾಯ್ಸ್‌ ಚಾಟ್ ಅನ್ನು ನಿಗದಿಪಡಿಸಬಹುದು ಮತ್ತು ಇದು ಎಲ್ಲಾ ಬಳಕೆದಾರರಿಗೆ ಗೋಚರಿಸುವ ಕ್ಷಣಗಣನೆಯೊಂದಿಗೆ ಚಾನಲ್‌ಗೆ ಪಿನ್ ಆಗುತ್ತದೆ.

ವಾಯ್ಸ್‌ ಚಾಟ್ ಶೆಡ್ಯೂಲ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ವಾಯ್ಸ್‌ ಚಾಟ್ ಶೆಡ್ಯೂಲ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ನೀವು ಮೊದಲು ನಿಮ್ಮ ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ಇತ್ತೀಚಿನ ಬೀಟಾ ಆವೃತ್ತಿ v7.7.0 ಗೆ ನವೀಕರಿಸಬೇಕಾಗಿದೆ.
ಹಂತ:2 ನೀವು ನಿರ್ವಹಿಸುವ ಟೆಲಿಗ್ರಾಮ್ ಚಾನಲ್ ತೆರೆಯಿರಿ.
ಹಂತ:3 ಸೆಟ್ಟಿಂಗ್‌ಗಳಲ್ಲಿನ ಚಾನಲ್ ಐಕಾನ್ ಮತ್ತು ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ.
ಹಂತ:4 "Start voice chat" ಟ್ಯಾಪ್ ಮಾಡಿ.
ಹಂತ:5 ನಂತರ "Schedule voice chat" ಆಯ್ಕೆಯನ್ನು ಆರಿಸಿ.
ಹಂತ:6 ನಿರ್ದಿಷ್ಟ ಸಮಯ ಮತ್ತು ದಿನಾಂಕವನ್ನು ಆರಿಸಿ ಮತ್ತು "Start" ಆಯ್ಕೆಯನ್ನು ಟ್ಯಾಪ್ ಮಾಡಿ.

ಟೆಲಿಗ್ರಾಮ್

ಟೆಲಿಗ್ರಾಮ್ ಈ ಹೊಸ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿರುವಾಗ, ಇತ್ತೀಚಿನ ಬೀಟಾ ಬಳಕೆದಾರರು ಚಾನಲ್‌ನಿಂದ ಹೊರಹೋಗದೆ ಚಾಟ್‌ನ ಭಾಗವಾಗಿದ್ದಾಗ ಅವರ ಹೆಸರು ಮತ್ತು ವಿವರಣೆಯನ್ನು ಮಾರ್ಪಡಿಸಲು ಅನುಮತಿಸುತ್ತದೆ ಎಂದು ವರದಿಯಾಗಿದೆ. ಹಲವಾರು ಬಳಕೆದಾರರು ಚಾಟ್ ಸಮಯದಲ್ಲಿ ಇತರ ಪ್ರೊಫೈಲ್‌ಗಳನ್ನು ಬ್ರೌಸ್ ಮಾಡಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಸೇರಿಸಲಾಗಿದೆ ಮತ್ತು ಬಳಕೆದಾರರು ತಮ್ಮ ಹೆಸರುಗಳನ್ನು ಮಾಡರೇಟರ್‌ಗಳಿಗೆ ಸುಲಭವಾಗಿ ಗುರುತಿಸಲು ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ.

Most Read Articles
Best Mobiles in India

English summary
How to activate the voice chat scheduling feature on the latest Telegram beta version.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X