ಬಳಕೆದಾರರಿಗೆ ಮತ್ತೊಂದು ಆಕರ್ಷಕ ಫೀಚರ್ಸ್ ಪರಿಚಯಿಸಿದ ವಾಟ್ಸಾಪ್‌!

|

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಆಪ್‌ ಆಗಿರುವ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಆಪ್‌ ಆಗಿ ಗುರುತಿಸಿಕೊಂಡಿದೆ. ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ಗಳಲ್ಲಿ ಟಾಪ್‌ ಆಪ್‌ ಆಗಿರುವ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಿದೆ. ಈಗಾಗಲೇ ಹಲವು ಅನುಕೂಕರ ಫೀಚರ್ಸ್‌ಗಳನ್ನ ಬಳಕೆದಾರರಿಗೆ ಪರಿಚಯಿಸಿರುವ ವಾಟ್ಸಾಪ್‌ ಇದೀಗ ತನ್ನ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ವಾಟ್ಸಾಪ್‌

ಹೌದು, ಕಳೆದ ಕೆಲವು ದಿನಗಳ ಹಿಂದೆ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಪರಿಚಯಿಸಲಿರುವ ಹೊಸ ಮಾದರಿಯ ಫೀಚರ್ಸ್‌ಗಳ ಬಗ್ಗೆ ಹಿಂದಿನ ಲೇಖನದಲ್ಲಿ ಮಾಹಿತಿ ನೀಡಿದ್ದೇವು. ಅದರಲ್ಲಿ QR ಕೋಡ್‌ ಮೂಲಕ ಕಂಟ್ಯಾಕ್ಟ್‌ ಅನ್ನು ಆಡ್‌ ಮಾಡುವ ಫೀಚರ್ಸ್‌ ಕೂಡ ಒಂದಾಗಿತ್ತು. ಸದ್ಯ ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅಧಿಕೃತವಾಗಿ ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಮೂಲಕ ನೀವು ಸಂಖ್ಯೆಗಳನ್ನು ಟೈಪ್‌ ಮಾಡದೇ ಕೇವಲ ವಾಟ್ಸಾಪ್‌ QR ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ ಸಾಕು ಆ ನಂಬರ್‌ ಸೇವ್‌ ಆಗಲಿದೆ. ಅಷ್ಟಕ್ಕೂ ಈ ಫೀಚರ್ಸ್‌ನ ವಿಶೇಷತೆ ಏನು? ಇದು ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿನ ಕ್ಯೂಆರ್ ಕೋಡ್‌ ಮೂಲಕ ಕಂಟ್ಯಾಕ್ಟ್‌ ಸೇವ್‌ ಮಾಡುವ ಫೀಚರ್ಸ್‌ ಅನ್ನು ಕೆಲವು ತಿಂಗಳುಗಳಿಂದ ಪರೀಕ್ಷಿಸಲಾಗುತ್ತಿತ್ತು. ಅದರಲ್ಲೂ ಕೆಲವು ವಾಟ್ಸಾಪ್ ಬೀಟಾ ಬಳಕೆದಾರರು ಕಳೆದ ವರ್ಷದಿಂದಲೂ ಈ ಫೀಚರ್ಸ್‌ ಅನ್ನು ಹೊಂದಿದ್ದರು. ಹಾಗೆ ನೋಡುವುದಾದರೆ ಪ್ರತಿಯೊಬ್ಬ ವಾಟ್ಸಾಪ್ ಬಳಕೆದಾರರು ಈ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತಾರೆ ಮತ್ತು ಅದನ್ನು ಇತರರು ಸ್ಕ್ಯಾನ್ ಮಾಡಲು ಹಂಚಿಕೊಳ್ಳಬಹುದು. ಆದರೆ ಇದೀಗ ಈ ಕೋಡ್‌ ಮೂಲಕ ನಂಬರ್‌ ಅನ್ನು ಸೇವ್‌ ಮಾಡುವ ಅವಕಾಶವನ್ನ ನೀಡಲಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ನಲ್ಲಿನ ಕ್ಯೂಆರ್ ಕೋಡ್‌ ಬಳಕೆದಾರರ ಪ್ರೊಫೈಲ್‌ನ ಪಕ್ಕದಲ್ಲಿರುವ ಡಿಸ್‌ಪ್ಲೇ ಆಗಲಿದೆ. ಇದು ನಿಮ್ಮ ಪ್ರೊಫೈಲ್ ಹೆಸರು ಮತ್ತು ಚಿತ್ರದ ಪಕ್ಕದಲ್ಲಿರುವ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಇದನ್ನು ಕಾಣಬಹುದಾಗಿದೆ. ಇನ್ನು QR ಕೋಡ್ ಐಕಾನ್ ಮೇಲೆ ಟ್ಯಾಪ್ ಮಾಡಿದರೆ, ಅದು ಹೊಸ ಟ್ಯಾಬ್ ಅನ್ನು ತೆರೆಯುತ್ತದೆ. ಇಲ್ಲಿ, ನಿಮ್ಮ QR ಕೋಡ್ ಅನ್ನು ನೀವು ಕಾಣಬಹುದಾಗಿದೆ. ಇದನ್ನು ನೀವು ವಿಭಿನ್ನ ಪ್ಲಾಟ್‌ಫಾರ್ಮ್‌ಗಳ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಸ್ಕ್ಯಾನ್ ಕೋಡ್

ಇದರ ಪಕ್ಕದಲ್ಲಿಯೇ QR ಸ್ಕ್ಯಾನ್ ಕೋಡ್ ಆಯ್ಕೆಯನ್ನು ನೀಡಲಾಗಿದ್ದು. ಇದರ ಮೇಲೆ ಟ್ಯಾಪ್ ಮಾಡಿ ಮತ್ತು ಇನ್ನೊಬ್ಬರ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮ್ಮ ಫೋನ್‌ನ ಕ್ಯಾಮೆರಾ ಬಳಸಬಹುದಾಗಿದೆ. ಅಲ್ಲದೆ ನೀವು ಒಮ್ಮೆ ಅದನ್ನು ಸ್ಕ್ಯಾನ್ ಮಾಡಿದರೆ, ಆ ವ್ಯಕ್ತಿಯನ್ನು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಸ್ವಯಂಚಾಲಿತವಾಗಿ ಆಡ್‌ ಆಗಲಿದೆ. ನೀವು ವಾಟ್ಸಾಪ್‌ನಲ್ಲಿ ಯಾರನ್ನಾದರೂ ಸೇರಿಸಲು ಬಯಸಿದರೆ ಇದು ಬಹಳ ಸುಲಭವಾದ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
WhatsApp has started rolling out support for QR codes which makes it very easy to add contacts.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X