ವಾಟ್ಸಾಪ್‌ನಲ್ಲಿ ಗ್ರೂಪ್‌ ಚಾಟ್ ಅನ್ನು ಆರ್ಕೈವ್ ಮಾಡುವುದು ಹೇಗೆ?

|

ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಆಗಿದೆ. ವಾಟ್ಸಾಪ್‌ ಇದೀಗ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅದು ಪ್ರಮುಖವಲ್ಲದ ಸಂದೇಶಗಳನ್ನು ಆರ್ಕೈವ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ನೀವು ಪ್ರಮುಖವಾದವುಗಳ ಕಡಗೆ ಗಮನ ಹರಿಸವುದು ಸುಲಭವಾಗಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಹೊಸ ಆರ್ಕೈವ್‌ ಚಾಟ್‌ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಪ್ರಮುಖವಲ್ಲದ ಸಂದೇಶಗಳನ್ನು ಬದಿಗೆ ಸರಿಸುವುದಕ್ಕೆ ಅನುಕೂಲವಾಗಲಿದೆ. ಎಲ್ಲಾ ಸಂದೇಶಗಳನ್ನು ನೋಡುವುದಕ್ಕಿಂತ ಪ್ರಮುಖವಾದ ಸಂದೇಶ ನೋಡುವುದಕ್ಕೆ ಸುಲಭವಾಗಲಿದೆ. ಅಲ್ಲದೆ ಒಂದೇ ಖಾತೆಯಿಂದ ಅಥವಾ ಗುಂಪಿನಿಂದ ಆರ್ಕೈವ್ ಮಾಡಲಾದ ಸಂದೇಶಗಳು ಆರ್ಕೈವ್ ಆಗಿರುತ್ತವೆ ಮತ್ತು ಆ ಥ್ರೆಡ್‌ನಲ್ಲಿ ಹೊಸ ಸಂದೇಶವಿದ್ದರೂ ಸಹ ಈ ಸಂದೇಶ ಮುಖ್ಯ ಫೋಲ್ಡರ್‌ನಲ್ಲಿ ತಿರುಗುವುದಿಲ್ಲ. ಹಾಗಾದ್ರೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಾಟ್ ಅಥವಾ ಗ್ರೂಪ್‌ ಚಾಟ್‌‌ ಆರ್ಕೈವ್ ಮಾಡುವುದು ಹೇಗೆ?

ಚಾಟ್ ಅಥವಾ ಗ್ರೂಪ್‌ ಚಾಟ್‌‌ ಆರ್ಕೈವ್ ಮಾಡುವುದು ಹೇಗೆ?

ಆರ್ಕೈವ್ ಚಾಟ್ ಫೀಚರ್ಸ್‌ ನಿಮ್ಮ ಮುಖ್ಯ ಚಾಟ್ ಫೋಲ್ಡರ್‌ನಿಂದ ಒಬ್ಬ ವ್ಯಕ್ತಿ ಅಥವಾ ಗ್ರೂಪ್‌ ಚಾಟ್ ಅನ್ನು ಮರೆಮಾಡಲು ನಿಮಗೆ ಅನುಮತಿಸುತ್ತದೆ. ಚಾಟ್ ಅನ್ನು ಆರ್ಕೈವ್ ಮಾಡುವುದರಿಂದ ಚಾಟ್ ಅನ್ನು ಅಳಿಸುವುದಿಲ್ಲ. ಹೊಸ ಸೆಟ್ಟಿಂಗ್‌ಗಳೊಂದಿಗೆ, ಆರ್ಕೈವ್ ಮಾಡಿದ ವ್ಯಕ್ತಿ ಅಥವಾ ಗ್ರೂಪ್‌ ಚಾಟ್ ಅನ್ನು ನೀವು ಹಸ್ತಚಾಲಿತವಾಗಿ ಬದಲಾಯಿಸದ ಹೊರತು ಆ ವ್ಯಕ್ತಿ ಅಥವಾ ಗುಂಪು ಚಾಟ್‌ನಿಂದ ಹೊಸ ಸಂದೇಶವನ್ನು ಸ್ವೀಕರಿಸಿದಾಗಲೂ ಆರ್ಕೈವ್ ಆಗಿರುತ್ತದೆ.

ಒಬ್ಬ ವ್ಯಕ್ತಿ ಅಥವಾ ಗ್ರೂಪ್‌ ಚಾಟ್ ಅನ್ನು ಆರ್ಕೈವ್ ಮಾಡುವುದು ಹೇಗೆ?

ಒಬ್ಬ ವ್ಯಕ್ತಿ ಅಥವಾ ಗ್ರೂಪ್‌ ಚಾಟ್ ಅನ್ನು ಆರ್ಕೈವ್ ಮಾಡುವುದು ಹೇಗೆ?

ಹಂತ:1 ನೀವು ಆರ್ಕೈವ್ ಮಾಡಲು ಬಯಸುವ ಚಾಟ್‌ನಲ್ಲಿ ವಾಟ್ಸಾಪ್ ತೆರೆಯಿರಿ. ಲಾಂಗ್‌ ಪ್ರೆಸ್‌ ಮಾಡಿರಿ.
ಹಂತ:2 ಇದು ಚಾಟ್ ಅನ್ನು ಓದಿಲ್ಲವೆಂದು ಗುರುತಿಸಲು, ಆರ್ಕೈವ್ ಮಾಡಲು ಅಥವಾ ಅಳಿಸಲು ನಿಮಗೆ ಆಯ್ಕೆಗಳನ್ನು ತೆರೆಯುತ್ತದೆ. ನೀವು ಇಲ್ಲಿಂದ ಒಬ್ಬ ವ್ಯಕ್ತಿ ಅಥವಾ ಗುಂಪು ಚಾಟ್ ಅನ್ನು ಆರ್ಕೈವ್ ಮಾಡಬಹುದು.

ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡುವುದು ಹೇಗೆ ?

ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡುವುದು ಹೇಗೆ ?

ಹಂತ:1 ಚಾಟ್‌ಗಳ ಟ್ಯಾಬ್‌ನಲ್ಲಿ, "ಮೋರ್‌" ಕ್ಲಿಕ್ ಮಾಡಿ ಮತ್ತು ನಂತರ "ಸೆಟ್ಟಿಂಗ್‌ಗಳು" ಗೆ ಹೋಗಿ.
ಹಂತ:2 "ಚಾಟ್‌ಗಳು" ಟ್ಯಾಪ್ ಮಾಡಿ, "ಚಾಟ್ ಹಿಸ್ಟರಿ" ಗೆ ಹೋಗಿ, ತದನಂತರ "ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಿ" ಕ್ಲಿಕ್ ಮಾಡಿ.

ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳನ್ನು ವೀಕ್ಷಿಸುವುದು ಹೇಗೆ ?

ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳನ್ನು ವೀಕ್ಷಿಸುವುದು ಹೇಗೆ ?

ಹಂತ:1 "ಚಾಟ್‌ಗಳು" ಪರದೆಯ ಮೇಲ್ಭಾಗಕ್ಕೆ ಸ್ಕ್ರಾಲ್ ಮಾಡಿ.
ಹಂತ:2 "ಆರ್ಕೈವ್" ನಲ್ಲಿ ಟ್ಯಾಪ್ ಮಾಡಿ. ಆರ್ಕೈವ್ ಮಾಡಿದ ಮುಂದಿನ ಸಂಖ್ಯೆ ಎಷ್ಟು ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗ್ರೂಪ್‌ ಚಾಟ್‌ಗಳಲ್ಲಿ ಓದದಿರುವ ಸಂದೇಶಗಳನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ. ನೀವು ಎಲ್ಲವನ್ನೂ ಇಲ್ಲಿ ಪರಿಶೀಲಿಸಬಹುದು.

Most Read Articles
Best Mobiles in India

English summary
WhatsApp's latest feature gives users better control over their Archived Chats folder. This is going to help you keep the main folder uncluttered and let you focus on the messages that are important.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X