Home
ಸುದ್ದಿಜಾಲ

ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ಮನೆ ಬ್ಲರ್‌ ಆಗಿ ಕಾಣಲು ಹೀಗೆ ಮಾಡಿ!

ಗೂಗಲ್‌ ಮ್ಯಾಪ್ಸ್‌ನಲ್ಲಿ ಬಳಕೆದಾರರಿಗೆ ಉಪಯೋಗವಾಗುವ ಹಲವಾರು ಫೀಚರ್ಸ್‌ಗಳಿವೆ. ಇದರಲ್ಲಿ ಸ್ಟ್ರೀಟ್‌ ವ್ಯೂ ಫೀಚರ್ಸ್‌ (Google Maps street view) ಕೂಡ ಒಂದಾಗಿದೆ. ಇದರಿಂದ ನೀವು ನಿಮ್ಮ ಹತ್ತಿರದ ಪ್ರದೇಶಗಳನ್ನು ಸರ್ಚ್‌ ಮಾಡುವುದಕ್ಕೆ ಮಾತ್ರವಲ್ಲ ಬಹಳ ಸೂಕ್ಷ್ಮವಾಗಿ ಗಮನಿಸುವುದಕ್ಕೆ ಅವಕಾಶ ನೀಡಲಿದೆ. ಈ ಫೀಚರ್ಸ್‌ನಿಂದ ನಿಮ್ಮ ಪ್ರೈವೆಸಿಗೆ ದಕ್ಕೆ ಆಗುವ ಸಾಧ್ಯತೆ ಕೂಡ ಇದೆ.

ಹೌದು, ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ವ್ಯೂ ಫೀಚರ್ಸ್‌ನಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು 360 ಡಿಗ್ರಿ ವ್ಯೂ ನೋಡಲು ಅವಕಾಶವಿದೆ. ಇದರಲ್ಲಿ ನಿಮ್ಮ ಹತ್ತಿರ ಮನೆಗಳು, ಕಟ್ಟಡಗಳು, ಕಾರುಗಳು, ರಸ್ತೆಗಳ ಹೆಸರನ್ನು ಸಹ ನೋಡಬಹುದು. ಇದು ನಿಮ್ಮ ಭದ್ರತೆಗೆ ದಕ್ಕೆ ತರುವ ಸಾಧ್ಯತೆಯಿದೆ. ಆದರಿಂದ ನೀವು ಬಯಸಿದರೆ ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂ ನಲ್ಲಿ ನಿಮ್ಮ ಮನೆ ಕಾಣದಂತೆ ಬ್ಲರ್‌ ಮಾಡಬಹುದಾಗಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ಮನೆಯನ್ನು ಬ್ಲರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ಮನೆ ಬ್ಲರ್‌ ಆಗಿ ಕಾಣಲು ಹೀಗೆ ಮಾಡಿ!

ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ವ್ಯೂ ಮೂಲಕ ನಿಮ್ಮ ಮನೆಯ ವಿಳಾಸ, ರಸ್ತೆಗಳು ಹೆಸರು ಎಲ್ಲವೂ ಕೂಡ ಬಹಿರಂಗವಾಗಲಿದೆ. ಭದ್ರತೆಯ ದೃಷ್ಟಿಯಿಂದ ನಿಮಗೆ ಇದು ಸವಾಲು ಎನಿಸಬಹುದು, ಆದರಿಂದ ನಿಮ್ಮ ಮನೆ ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಕಾಣದಂತೆ ಬ್ಲರ್‌ ಮಾಡುವುದಕ್ಕೆ ಅವಕಾಶವಿದೆ ಇದರಿಂದ ನಿಮ್ಮ ಭದ್ರತೆಗೆ ದಕ್ಕೆ ಆಗುವುದನ್ನು ತಪ್ಪಿಸಬಹುದಾಗಿದೆ. ಇದಕ್ಕಾಗಿಯೇ ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ವ್ಯೂನಲ್ಲಿ ಕೆಲವು ಸೆಕ್ಯೂರಿಟಿ ಪಾಲಿಸಿಗಳನ್ನು ನೀಡಲಾಗಿದೆ.

ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ವ್ಯೂ ನ ಅಧಿಕೃತ ಬೆಂಬಲ ಪುಟವು ರಸ್ತೆ-ಮಟ್ಟದ ಸಂಗ್ರಹಣೆಗಳು ಮತ್ತು ಮಾರ್ಗಗಳ ಮುಖಗಳು ಮತ್ತು ಪರವಾನಗಿ ಫಲಕಗಳಂತಹ ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಮಾಹಿತಿಯನ್ನು ಬ್ಲರ್‌ ಆಗಿಸುವುದಕ್ಕೆ ಸಾದ್ಯವಿದೆ ಎಂದು ಹೇಳಿದೆ. ಅಲ್ಲದೆ, ನೀವು 360 ಡಿಗ್ರಿ ವ್ಯೂನಲ್ಲಿ ಫೋಟೋವನ್ನು ಅಪ್‌ಲೋಡ್ ಮಾಡುವವರಾಗಿದ್ದರೆ, ಯಾವ ಅಂಶಗಳು ಗೋಚರಿಸಬೇಕು ಮತ್ತು ಬ್ಲರ್‌ ಆಗಿರಬೇಕು ಅನ್ನೊದನ್ನ ಆಯ್ಕೆ ಮಾಡುವುದಕ್ಕೆ ಸಾಧ್ಯವಾಗಲಿದೆ.

ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ವ್ಯೂನಲ್ಲಿ ಯಾರಾದರೂ ನಿಮ್ಮ ಮನೆ ಬರುವ ವಿಳಾಸದ ಫೋಟೋವನ್ನು ಅಪ್ಲೋಡ್‌ ಮಾಡಿದ್ದು, ನಿಮ್ಮ ಮನೆಯು ಕಾಣುತ್ತಿದ್ದರೆ ಅವರಿಗೆ ನಿಮ್ಮ ಮನೆಯನ್ನು ಬ್ಲರ್‌ ಮಾಡುವಂತೆ ಹೇಳಬಹುದು. ಇಲ್ಲವೆ ಗೂಗಲ್‌ಗೆ ನೀವು ಮನೆಯನ್ನು ಬ್ಲರ್‌ ಮಾಡುವಂತೆ ರಿಕ್ವೆಸ್ಟ್‌ ಕಳುಹಿಸಬಹುದು. ಇದರಲ್ಲಿ ನಿಮ್ಮ ಮನೆ, ಕಟ್ಟಡ ಸಂಖ್ಯೆ, ವಿಳಾಸ, ಕಾರಿನ ಪರವಾನಗಿ ಪ್ಲೇಟ್, ಯಾವುದೇ ವಿಷಯವಾಗಿದ್ದರೂ ಸಹ ಬ್ಲರ್‌ ಮಾಡಿಸಬಹುದು.

ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ಮನೆ ಬ್ಲರ್‌ ಆಗಿ ಕಾಣಲು ಹೀಗೆ ಮಾಡಿ!

ಗೂಗಲ್‌ ಮ್ಯಾಪ್ಸ್‌ ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ಮನೆ ಬ್ಲರ್‌ ಆಗಿಸಲು ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
* ಮೊದಲಿಗೆ ಕ್ರೋಮ್‌ ಬ್ರೌಸರ್‌ ಮೂಲಕ "maps.google.com" ತೆರೆಯಿರಿ, ಲಾಗಿನ್‌ ಆಗಿ.
* ಇದೀಗ ಗೂಗಲ್‌ ಬ್ಲರ್‌ ಸೇರಿಸಲು ಬಯಸುವ ನಿಮ್ಮ ಮನೆ, ಕಾರಿನ ನಂಬರ್‌ ಕಾಣುವ ಸ್ಥಳವನ್ನು ಆಯ್ಕೆ ಮಾಡಿ
* ಸ್ಥಳದ ಹೆಸರಿನ ಟ್ಯಾಗ್‌ನಲ್ಲಿ ಮೂರು ಲಂಬ ಚುಕ್ಕೆಗಳು ಕಾಣಲಿವೆ, ಅದರ ಮೇಲೆ ಕ್ಲಿಕ್ ಮಾಡಿ
* ಇದರಲ್ಲಿ ನಿಮ್ಮ "ಸಮಸ್ಯೆಯನ್ನು ವರದಿ ಮಾಡಿ" ಆಯ್ಕೆಮಾಡಿ
* ಇದೀಗ ಕಟ್ಟಡ, ನಂಬರ್ ಪ್ಲೇಟ್ ಅಥವಾ ನೀವು ವರದಿ ಮಾಡಲು ಬಯಸುವ ಯಾವುದೇ ವಿಷಯವನ್ನು ಆಯ್ಕೆಮಾಡಿ
* ನೀವು ಯಾವ ವಿಚಾರ ವರದಿ ಮಾಡುತ್ತಿದ್ದೀರಿ ಅನ್ನೊದನ್ನ ಆಯ್ಕೆ ಮಾಡಿ ಮತ್ತು ಕಾರಣವನ್ನು ವಿವರಿಸಿ,
* ನಂತರ ಬರುವ ಕ್ಯಾಪ್ಚಾ ಮತ್ತು ಇಮೇಲ್ ವಿಳಾಸವನ್ನು ಭರ್ತಿ ಮಾಡಿ
* ಇದೀಗ ನಿಮ್ಮ ರಿಕ್ವೆಸ್ಟ್‌ ಅನ್ನು ರಿಜಿಸ್ಟರ್‌ ಮಾಡಲು ಸಬ್ಮಿಟ್‌ ಬಟನ್‌ ಟ್ಯಾಪ್‌ ಮಾಡಿರಿ

ಹೀಗೆ ಮಾಡುವ ಮೂಲಕ ನಿಮ್ಮ ಮನೆ ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ಬ್ಲರ್‌ ಆಗಿ ಕಾಣುವಂತೆ ಮಾಡಬಹುದು.

Best Mobiles in India

English summary
How to blur your house on Google Maps street view: Complete details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+