Google Pixel 8 Pro ಫೋನ್‌ನಲ್ಲಿ ಥರ್ಮಾಮೀಟರ್ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸಲಿದೆ
ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಪರಿಚಯಿಸಲಾಗಿರುವ ಥರ್ಮಾಮೀಟರ್ ಅಪ್ಲಿಕೇಶನ್ ಸಾಕಷ್ಟು ಸುದ್ದಿಯಲ್ಲಿದೆ. ಮೊಬೈಲ್ ಮೂಲಕ ದೇಹದ ಉಷ್ಣತೆಯನ್ನು ಅಳೆಯುವುದು ಹೇಗೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಇದರ ಬಗ್ಗೆ ಗೂಗಲ್ ಕೂಡ ಮಾಹಿತಿ ನೀಡಿದ್ದು, ಇದು ಮೊದಲ FDA-ಅನುಮೋದಿತ ದೇಹದ ತಾಪಮಾನ ಅಪ್ಲಿಕೇಶನ್ ಆಗಿದೆ.
ಹೌದು, ಗೂಗಲ್ ಪಿಕ್ಸೆಲ್ 8 ಪ್ರೊ (Google Pixel 8 Pro) ಸ್ಮಾರ್ಟ್‌ಫೋನ್‌ನಲ್ಲಿ ಥರ್ಮಾಮೀಟರ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಇದರ ಮೂಲಕ ಬಳಕೆದಾರರ ದೇಹದ ಉಷ್ಣತೆಯನ್ನು ಅಳೆಯಬಹುದಾಗಿದೆ. ಆರೋಗ್ಯದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ಫೀಚರ್ಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಎಫ್‌ಡಿಎ ಅನುಮೋದನೆ ಪಡೆದುಕೊಂಡಿದೆ. ಹಾಗಾದ್ರೆ ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಥರ್ಮಾಮೀಟರ್ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಪಿಕ್ಸೆಲ್ 8 ಪ್ರೊ: ಥರ್ಮಾಮೀಟರ್ ಅಪ್ಲಿಕೇಶನ್ ಹೇಗೆ ಕೆಲಸ ಮಾಡಲಿದೆ
ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಥರ್ಮಾ ಮೀಟರ್ ಅಪ್ಲಿಕೇಶನ್ ಕಾರ್ಯನಿರ್ವಹಿಸುವ ವಿಧಾನವೇ ವಿಶೇಷವಾಗಿದೆ. ಏಕೆಂದರೆ ಫೋನ್‌ನಲ್ಲಿ ಅತಿಗೆಂಪು ಸೆನ್ಸಾರ್ ಹಿಂಭಾಗದ ಕ್ಯಾಮೆರಾದ ಪಕ್ಕದಲ್ಲಿದೆ, ಇದು ದೇಹದಿಂದ ಹೊರಸೂಸುವ ಶಾಖವನ್ನು ಪತ್ತೆ ಮಾಡುತ್ತದೆ. ಅಲ್ಲದೆ ಫೋನ್ ಅನ್ನು ಹಣೆಯ ಸಮೀಪದಲ್ಲಿರುವಾಗ ಸಂವೇದಕದ ವಿಶಾಲವಾದ ನೋಟವು ನಿಖರವಾದ ವಾಚನಗೋಷ್ಠಿಯನ್ನು ಅನುಮತಿಸುತ್ತದೆ. ಇದರಿಂದ ನಮ್ಮ ಬಾಡಿ ಟೆಂಪ್‌ರೇಚರ್ ಎಷ್ಟಿದೆ ಅನ್ನೊದನ್ನ ತಿಳಿದುಕೊಳ್ಳಬಹುದಾಗಿದೆ. ಇನ್ನು ಈ ಮಾಪನವನ್ನು ಪ್ರಾರಂಭಿಸುವ ಮೊದಲು ಫೋನ್‌ನ ಸಾಮೀಪ್ಯವನ್ನು ಪತ್ತೆಹಚ್ಚಲು LDAF ಸೆನ್ಸಾರ್ ಅನ್ನು ಬಳಸಲಾಗಿದೆ ಎಂದು ಗೂಗಲ್ ಹೇಳಿದೆ.
ಇನ್ನು ಕ್ಲಿನಿಕಲ್ ಪ್ರಯೋಗಗಳಲ್ಲಿ, ಸಾಫ್ಟ್‌ವೇರ್ ಅಲ್ಗಾರಿದಮ್ ದೇಹದ ಉಷ್ಣತೆಯನ್ನು 96.9 ° F - 104 ° F (36.1 ° C - 40 ° C) ವ್ಯಾಪ್ತಿಯಲ್ಲಿ ನಿಖರವಾಗಿ ಲೆಕ್ಕಾಚಾರ ಮಾಡುತ್ತದೆ. ಅದರಲ್ಲೂ FDA- ದ ತಾತ್ಕಾಲಿಕ ಅಪಧಮನಿಗೆ ಹೋಲಿಸಿದರೆ ± 0.3 ° C ನ ಪ್ರಭಾವಶಾಲಿ ನಿಖರತೆಯ ರಿಸಲ್ಟ್ ಅನ್ನು ಈ ಥರ್ಮಾಮೀಟರ್ ಅಪ್ಲಿಕೇಶನ್ ನೀಡಲಿದೆ. ಅಂದರೆ ಪಿಕ್ಸೆಲ್ನ ಈ ಥರ್ಮಾಮೀಟರ್ ಅಪ್ಲಿಕೇಶನ್ ಫೀಚರ್ಸ್ ಇತರ ತಾತ್ಕಾಲಿಕ ಅಪಧಮನಿ ಥರ್ಮಾಮೀಟರ್‌ಗಳ ನಿಖರತೆಗೆ ಪ್ರತಿಸ್ಪರ್ಧಿಯಾಗಿದೆ.

ಬಳಕೆದಾರರ ಸ್ನೇಹಿ ವಿನ್ಯಾಸ ಪಡೆದಿದೆ
ಇನ್ನು ಈ ಹೊಸ ಅಪ್ಲಿಕೇಶನ್ ಸಂಪರ್ಕರಹಿತ ಅನುಭವವನ್ನು ಕಾಪಾಡಿಕೊಳ್ಳಲು ಉತ್ತಮವಾದ ವಿನ್ಯಾಸವನ್ನು ಹೊಂದಿದೆ. ಇದರಿಂದ ಬಳಕೆದಾರರು ತಮ್ಮ ಹಣೆಯನ್ನು ಮುಟ್ಟದೆಯೇ ದೇಹದ ತಾಪಮಾನವನ್ನು ಅಳೆಯಬಹುದು ಎಂದು ಗೂಗಲ್ ಹೇಳಿದೆ. ಏಕೆಂದರೆ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿರುವ ಅತಿಗೆಂಪು ಸೆನ್ಸಾರ್‌ನ ವಿಶಾಲ ಕ್ಷೇತ್ರವು (130 ಡಿಗ್ರಿಗಳಿಗಿಂತ ಹೆಚ್ಚು) ಫೋನ್ ಹತ್ತಿರದಲ್ಲಿರುವಾಗ ದೇಹದ ಶಾಖವನ್ನು ನಿಖರವಾಗಿ ಸೆರೆಹಿಡಿಯುವ ಕೆಲಸ ಮಾಡಲಿದೆ.
ಇನ್ನು ಸಾಮಾನ್ಯವಾಗಿ ಆಟೋಫೋಕಸ್‌ಗಾಗಿ ಬಳಸುವ LDAF ಸೆನ್ಸಾರ್, ದೇಹದ ಉಷ್ಣತೆಯನ್ನು ಅಳೆಯುವ ಮೊದಲು ಫೋನ್ ಹಣೆಯಿಂದ ಸರಿಯಾದ ದೂರದಲ್ಲಿದೆಯೇ ಎಂದು ನಿರ್ಧರಿಸುತ್ತದೆ. ಇದಲ್ಲದೆ ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ಕಾರ್ಯನಿರ್ವಹಿಸುವ ರೀತಿಯಲ್ಲಿ ಈ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವ ಬಳಕೆದಾರರಿಗೆ ಅನುಕೂಲಕರವಾಗಿದೆ. ಅಲ್ಲದೆ ಇದರಲ್ಲಿ ಬರುವ ಸ್ಪಷ್ಟ ಸೂಚನೆಗಳು ಮತ್ತು ಹ್ಯಾಪ್ಟಿಕ್ಸ್ ಮತ್ತು ಆಡಿಯೊ ಮಾರ್ಗದರ್ಶನ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

ಒಟ್ಟಿನಲ್ಲಿ ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿರುವ ಥರ್ಮಾಮೀಟರ್ ಅಪ್ಲಿಕೇಶನ್ ಬಳಕೆದಾರರ ದೆಹದ ಉಷ್ಣತೆಯನ್ನು ಅಳೆಯುವಲ್ಲಿ ಸಫಲವಾಗಿದೆ. ಇದರಿಂದ ಬಳಕೆದಾರರು ತಾವು ಇದ್ದಲ್ಲಿಯೇ ದೇಹದ ಉಷ್ಣತೆಯಲ್ಲಿ ಆಗಿರುವ ಬದಲಾವಣೆ, ಆರೋಗ್ಯದ ಮೇಲಿನ ಪರಿಣಾಮವನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಗಲಿದೆ.


Click it and Unblock the Notifications








