ಕೇವಲ 9 ರೂ.ಗಳಿಗೆ LPG Gas Cylinder ಪಡೆಯಬಹುದು! ಅದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಗ್ಯಾಸ್‌ ಸಿಲಿಂಡರ್‌ನ ಬೆಲೆ ಗಗನಕ್ಕೇರಿದೆ. ಒಂದು ಭರ್ತಿ ಮಾಡಿದ ಸಿಲಿಂಡರ್‌ನ ದರ 800 ರೂ.ಗಿಂತ ಹೆಚ್ಚಿರುವುದರಿಂದ ದೇಶದ ಕೆಲವು ಭಾಗಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳು ತುಂಬಾ ದುಬಾರಿಯಾಗಿದೆ. ಆದರೆ ನಾವು ಹೇಳಿದ ರೀತಿ ಮಾಡಿದರೆ ನೀವು ಊಹಿಸದ ಬೆಲೆಯಲ್ಲಿ ಭರ್ತಿ ಮಾಡಿದ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು 800 ರೂ. ನೀಡುವ ಬದಲು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಎಲ್‌ಪಿಜಿ

ಹೌದು, ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ನ ಬೆಲೆ ಇಂದಿನ ದಿನಗಳಲ್ಲಿ 800 ರೂ.ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿದೆ. ಹೆಚ್ಚು ಕಡಿಮೆ 809 ರೂ. ಬೆಲೆ ಹೊಂದಿರುವ ಎಲ್‌ಪಿಜಿ ಸಿಲಿಂಡರ್‌ ಅನ್ನು ನೀವು ಕೇವಲ 9 ರೂ.ಗಳಿಗೆ ಖರೀದಿಸಬಹುದು. ಅಬ್ಬಾ ಇದು ಸಾಧ್ಯಾನಾ ಅಂತಾ ಬಾಯಿ ಮೇಲೆ ಬೆರಳಿಟ್ಟು ನೋಡಬೇಡಿ. ನೀವು ನಾವು ಹೇಳಿದ ಹಾಗೇ ಮಾಡಿದರೆ 9ರೂ.ಗಳಿಗೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪಡೆದುಕೊಳ್ಳಬಹುದು ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಲ್‌ಪಿಜಿ

ನೀವು ಊಹಿಸಿದ ಬೆಲೆಯಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಅನ್ನು ಪಡೆದುಕೊಳ್ಳುವ ಅವಕಾಶವನ್ನು ಪೇಟಿಎಂ ನೀಡಿದೆ. ಜಿ ನ್ಯೂಸ್‌ ಇಂಡಿಯಾ.ಕಾಂನ ವರದಿಯ ಪ್ರಕಾರ ಪೇಟಿಎಂ ತನ್ನ ಗ್ರಾಹಕರಿಗೆ 809 ರೂ.ಗಳ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂ.ಗಳಿಗೆ ಪಡೆದು ಕೊಳ್ಳುವ ಬಂಪರ್ ಆಫರ್ ಅನ್ನು ಬಿಡುಗಡೆ ಮಾಡಿದೆ. ಈ ಕೊಡುಗೆಯನ್ನು ಪೇಟಿಎಂ ಕಂಪನಿಯು ಕ್ಯಾಶ್‌ಬ್ಯಾಕ್‌ ರೂಪದಲ್ಲಿ ಒದಗಿಸುತ್ತಿದೆ. ಅಂದರೆ ನೀವು ಪೇಟಿಎಂ ಬಳಸಿ ಎಲ್‌ಪಿಜಿ ಸಿಲಿಂಡರ್ ಖರೀದಿಸಿದರೆ 800 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಆಫರ್‌

ಇನ್ನು ಈ ಆಫರ್‌ ಅನ್ನು ಪಡೆಯಲು ನೀವು ಪೇಟಿಎಂ ಆ್ಯಪ್ ಮೂಲಕ ಎಲ್‌ಪಿಜಿ ಸಿಲಿಂಡರ್‌ಗೆ ಬುಕ್ ಮಾಡಿ ಪಾವತಿಸಬೇಕಾಗುತ್ತದೆ. ಬುಕಿಂಗ್ ಮಾಡಿದ ನಂತರ, Paytm ಬಳಕೆದಾರರು ಆಫರ್ ಅಡಿಯಲ್ಲಿ ಸ್ಕ್ರಾಚ್ ಪಡೆಯುತ್ತಾರೆ. ಇದು 800 ರೂ.ಗಳ ಕ್ಯಾಶ್ಬ್ಯಾಕ್ ಮೌಲ್ಯ ಹೊಂದಿದೆ. ಸ್ಕ್ರಾಚ್‌ ಕಾರ್ಡ್ ಪಡೆದ ನಂತರ, ವ್ಯಕ್ತಿಯು ಬಹುಮಾನ ಪಡೆದ ಮೊತ್ತವನ್ನು ಪರಿಶೀಲಿಸಲು ಅದನ್ನು ಸ್ಕ್ರಾಚ್ ಮಾಡಬೇಕಾಗುತ್ತದೆ. ಇದರಲ್ಲಿ ಬಹುಮಾನದ ಮೊತ್ತವು 10 ರಿಂದ 800 ರೂ.ವರೆಗೆ ಇರಲಿದೆ.

ಪಡೆಯಲು

ಈ ಆಫರ್‌ ಅನ್ನು ಪಡೆಯಲು ದಿನಾಂಕ ಮೇ 31, 2021.ಕೊನೆಯ ದಿನವಾಗಿದೆ. ಅಲ್ಲದೆ, ಸ್ಕ್ರ್ಯಾಚ್ ಕಾರ್ಡ್ ಸ್ವೀಕರಿಸುವ Paytm ಬಳಕೆದಾರರು ಇದನ್ನು 7 ದಿನಗಳಲ್ಲಿ ಸ್ಕ್ರಾಚ್ ಮಾಡಬೇಕಾಗುತ್ತದೆ. ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಮೊದಲ ಬಾರಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಮತ್ತು ಪೇಟಿಎಂ ಮೂಲಕ ಪಾವತಿಸುವ ಗ್ರಾಹಕರಿಗೆ ಮಾತ್ರ ಈ ಕೊಡುಗೆ ಅನ್ವಯವಾಗಲಿದೆ. ಮೊದಲ ಎಲ್‌ಪಿಜಿ ಸಿಲಿಂಡರ್‌ನ ಬುಕಿಂಗ್‌ಗೆ ಆಫರ್ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ.

Most Read Articles
Best Mobiles in India

Read more about:
English summary
Paytm has launched a bumper offer for its customers providing them with a chance to get a gas cylinder worth Rs 809 for only Rs 9.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X