ರೈಲು ಟಿಕೆಟ್ ಅನ್ನು ಅತಿ ಸುಲಭವಾಗಿ ಬುಕ್ಕಿಂಗ್ ಮಾಡಲು ಹೀಗೆ ಮಾಡಿರಿ?
ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ IRCTC ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಕೂಡ ಸೇರಿದೆ. IRCTCಯ ವೆಬ್‌ಸೈಟ್‌ಗೆ ಬೇಟಿ ನೀಡುವ ಮೂಲಕ ಕೂಡ ನೀವು ಟಿಕೆಟ್ ಬುಕ್ ಮಾಡಬಹುದಾಗಿದೆ.
ಹೌದು, IRCTC ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಪ್ರಯಾಣಿಕರು ರೈಲು ಟಿಕೆಟ್ ಬುಕ್ ಮಾಡಬಹುದು. ಇದಕ್ಕಾಗಿ ನೀವು IRCTC ಯೂಸರ್ ಅಕೌಂಟ್ ಅನ್ನು ಹೊಂದಿರುವುದು ಅಗತ್ಯವಾಗಿದೆ. ಹಾಗಾದ್ರೆ IRCTC ಆ್ಯಪ್‌ನಲ್ಲಿ ನಿಮ್ಮ ಯೂಸರ್ ಅಕೌಂಟ್ ತೆರೆಯುವುದು ಹೇಗೆ? ಇದರ ಮೂಲಕ ಟಿಕೆಟ್ ಬುಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

IRCTC ಮೂಲಕ ಆನ್‌ಲೈನ್‌ನಲ್ಲಿ ಟ್ರೈನ್ ಟಿಕೆಟ್ ಬುಕ್ ಮಾಡುವುದು ಹೇಗೆ?
IRCTC ವೆಬ್‌ಸೈಟ್ ಇಲ್ಲವೇ ಆ್ಯಪ್ ಟ್ರೈನ್ ಟಿಕೆಟ್ ಬುಕ್ ಮಾಡಬೇಕಾದರೆ ಮೊದಲಿಗೆ IRCTC ಯೂಸರ್ ಅಕೌಂಟ್ ಹೊಂದಿರಬೇಕಾಗುತ್ತದೆ. ನೀವು ನಿಮ್ಮದೇ ಆದ ಯೂಸರ್ ಅಕೌಂಟ್ ಕ್ರಿಯೆಟ್ ಮಾಡಿದ ನಂತರ ಲಾಗ್ ಇನ್ ಆಗಬೇಕಾಗುತ್ತದೆ. ಇದಕ್ಕೆ ಸೂಕ್ತವಾದ ಪಾಸ್‌ವರ್ಡ್ ಕ್ರಿಯೆಟ್ ಮಾಡಿಕೊಳ್ಳುವುದು ಕೂಡ ಅಗತ್ಯವಾಗಿದೆ. ಒಮ್ಮೆ ಅಕೌಂಟ್ ಕ್ರಿಯೆಟ್ ಮಾಡಿಕೊಂಡ ನಂತರ ಟಿಕೆಟ್ ಬುಕ್ ಮಾಡುವುದು, ರೈಲುಗಳ ಮಾಹಿತಿ ಸೆರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

IRCTC ಅಕೌಂಟ್ ಅನ್ನು ಕ್ರಿಯೆಟ್ ಮಾಡುವುದು ಹೇಗೆ?
* ಮೊದಲಿಗೆ ನೀವು IRCTC ಯ ಅಧಿಕೃತ ವೆಬ್‌ಸೈಟ್ irctc.co.in/nget/train-search ತೆರೆಯಿರಿ
* ಇದೀಗ ವೆಬ್‌ಸೈಟ್‌ನ ಮೇನ್‌ಪೇಜ್ ಮೇಲ್ಭಾಗದಲ್ಲಿ ಲಭ್ಯವಿರುವ ರಿಜಿಸ್ಟರ್ ಬಟನ್ ಟ್ಯಾಪ್ ಮಾಡಿರಿ
* ಇದರಲ್ಲಿ ನೀವು ನಿಮ್ಮ ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಯಂತಯ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
* ನಂತರ ನಿಮ್ಮ ಅಕೌಂಟ್‌ಗೆ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
* ಇದಾದ ಮೇಲೆ ಸೆಕ್ಯುರಿಟಿ ಪ್ರಶ್ನೆಯನ್ನು ಆಯ್ಕೆಮಾಡಿ.
* ಇದೀಗ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ನಿಮ್ಮ ವಿವರಗಳನ್ನು ಪರಿಶೀಲಿಸಿ.
* ಎಲ್ಲವೂ ಮಗಿದ ನಂತರ ಸಬ್ಮಿಟ್ ಬಟನ್ ಟ್ಯಾಪ್ ಮಾಡಿರಿ.
* ಇದೀಗ ನಿಮ್ಮ ಲಾಗಿನ್ ಅನ್ನು ಒಕೆ ಮಾಡಲು ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
* ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿದ ನಂತರ ಮತ್ತೊಮ್ಮೆ ಸಬ್ಮಿಟ್ ಬಟನ್ ಟ್ಯಾಪ್ ಮಾಡಿ.

IRCTC ಅಕೌಂಟ್ ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡುವುದು ಹೇಗೆ?
* ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ.
* ಇದೀಗ ನೀವು ಹೊರಡಬೇಕಾದ ಟ್ರೈನ್ ವಿವರಗಳನ್ನು ಆಯ್ಕೆ ಮಾಡಿ
* ನಿಮ್ಮ ಪ್ರಯಾಣಕ್ಕಾಗಿ ಲಭ್ಯವಿರುವ ರೈಲುಗಳು ಮತ್ತು ಸಮಯಗಳನ್ನು ಪರಿಶೀಲಿಸಿ
* ನಿಮ್ಮ ಆಯ್ಕೆಯ ಟ್ರೈನ್ ಲಭ್ಯತೆ ಮತ್ತು ಶುಲ್ಕ ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಆಯ್ಕೆಯ ಸೀಟ್ ಕೋಟಾವನ್ನು ಆಯ್ಕೆ ಮಾಡಿ ಮತ್ತು ಬುಕ್ ನೌ ಬಟನ್ ಒತ್ತಿರಿ.
* ಇದೀಗ ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
* ನಂತರ ಬುಕ್ಕಿಂಗ್ ಮುಂದುವರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
* ಇದಾದ ಮೇಲೆ ವಿವರಗಳನ್ನು ಪರಿಶೀಲಿಸಿ ಮತ್ತು ಪಾವತಿ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡಿ.
* ಪಾವತಿ ವಿಧಾನವನ್ನು ಆಯ್ಕೆಮಾಡಿ, ಪಾವತಿ ಪೂರ್ಣಗೊಂಡ ನಂತರ ನಿಮ್ಮ IRCTC ಅಕೌಂಟ್‌ನಲ್ಲಿ ಟಿಕೆಟ್ ಡೌನ್‌ಲೋಡ್ ಆಗಲಿದೆ.


Click it and Unblock the Notifications








