ಇನ್ಮುಂದೆ ವಾಟ್ಸಾಪ್‌ನಲ್ಲಿಯೇ ಸಿಗಲಿದೆ ಕ್ಯಾಬ್‌ ಬುಕ್ಕಿಂಗ್‌ ಅವಕಾಶ!

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಸೇವೆಯನ್ನು ನೀಡುವುದಕ್ಕೆ ಮುಂದಾಗಿದೆ. ವಾಟ್ಸಾಪ್‌ ಇದೀಗ Uber ಜೊತೆಗೆ ಭಾರತದಲ್ಲಿ ಹೊಸ ಪಾಲುದಾರಿಕೆಯನ್ನು ಘೋಷಿಸಿದೆ. ಈ ಮೂಲಕ ರೈಡ್-ಶೇರ್ ಸೇವೆಯನ್ನು ವಾಟ್ಸಾಪ್‌ ಮೂಲಕವೂ ಬುಕ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಅಂದರೆ ಇನ್ಮುಂದೆ ವಾಟ್ಸಾಪ್‌ನಲ್ಲಿಯೇ ಕ್ಯಾಬ್‌ ಅನ್ನು ಬುಕ್‌ ಮಾಡಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರಿಗೆ ಕ್ಯಾಬ್‌ ಬುಕ್ಕಿಂಗ್‌ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಉಬರ್‌ ಸಂಸ್ಥೆ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದರಿಂದ ವಾಟ್ಸಾಪ್‌ ಚಾಟ್‌ಬಾಟ್ ಅನ್ನು ಬಳಸಿಕೊಂಡು ಕ್ಯಾಬ್ ಅನ್ನು ಬುಕ್ ಮಾಡಬಹುದಾಗಿದೆ. ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ತನ್ನ ಬ್ಯುಸಿನೆಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ. ಸದ್ಯ ಉಬರ್ ಇದನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗಹೊಳಿಸಿದೆ. ಹಾಗಾದ್ರೆ ವಾಟ್ಸಾಪ್‌ ಮೂಲಕ ಉಬರ್‌ ಬುಕ್‌ ಮಾಡಲು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಎಲ್ಲಾ ಮಾದರಿಯ ಸೇವೆಗಳನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ನೀಡುವುದಕ್ಕೆ ಪ್ರಯತ್ನ ನಡೆಸುತ್ತಲೇ ಇದೆ. ಇದಕ್ಕೆ ಹೊಸ ಉದಾಹರಣೆ ಉಬರ್‌ ಜೊತೆಗಿನ ಪಾಲುದಾರಿಕೆ ಎನ್ನಬಹುದು. ಕ್ಯಾಬ್‌ ಬುಕ್‌ ಮಾಡಲು ಬಯಸುವವರು ಅದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಅವಶ್ಯಕೆತೆಯಿಲ್ಲ. ಬದಲಿಗೆ ವಾಟ್ಸಾಪ್‌ ಬ್ಯುಸಿನೆಸ್‌ ಅಕೌಂಟ್‌ನಲ್ಲಿ ಕ್ಯಾಬ್‌ ಬುಕ್‌ ಮಾಡಬಹುದು. ಭಾರತದಲ್ಲಿ ಹೊಸ ವರ್ಗದ ರೈಡರ್‌ಗಳೊಂದಿಗೆ Uber ಅಳವಡಿಕೆಯನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಾಟ್ಸಾಪ್‌ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.

ವಾಟ್ಸಾಪ್‌

ಇನ್ಮುಂದೆ ವಾಟ್ಸಾಪ್‌ ಬಳಕೆದಾರರು ವಾಟ್ಸಾಪ್‌ ಮೂಲಕವೇ ಉಬರ್‌ ಕ್ಯಾಬ್‌ ಅನ್ನು ಬುಕ್‌ಮಾಡಬಹುದಾಗಿದೆ. ಭಾರತದಲ್ಲಿ ಲಕ್ನೋ ನಗರದಲ್ಲಿ ಈ ಸೇವೆಯನ್ನು ಪರಿಚಯಿಸಲಾಗಿದೆ. ಶೀಘ್ರದಲ್ಲೇ ಭಾರತದ ಇತರ ನಗರ ಪ್ರದೇಶಗಳಿಗೂ ಈ ಸೇವೆ ವಿಸ್ತಾರವಾಗಲಿದೆ ಎನ್ನಲಾಗಿದೆ. ಇನ್ನು ಈ ಫೀಚರ್ಸ್‌ ಮೂಲಕ ಗ್ರಾಹಕರು ಉಬರ್ ಕಾರುಗಳು, ಉಬರ್ ಮೋಟೋ (ಮೋಟಾರ್ ಸೈಕಲ್‌ಗಳು) ಮತ್ತು ಆಟೋಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

ವಾಟ್ಸಾಪ್‌

ಇದಕ್ಕಾಗಿ ವಾಟ್ಸಾಪ್‌ ಉಬರ್ ಜೊತೆಗೆ ಟೈ-ಅಪ್ ಮಾಡಿಕೊಂಡಿದೆ. ಸದ್ಯ ಭಾರತದಲ್ಲಿ ವಾಟ್ಸಾಪ್‌ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಇದೇ ಕಾರಣಕ್ಕೆ ಉಬರ್‌ ಕೂಡ ತನ್ನ ಪಾಲುದಾರಿಕೆಯನ್ನು ವಾಟ್ಸಾಪ್‌ನೊಂದಿಗೆ ಘೋಷಿಸಿಕೊಂಡಿದೆ. ಇದರಿಂದ ಕ್ಯಾಬ್ ಅನ್ನು ಬುಕ್ ಮಾಡಲು Uber ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅವಶ್ಯಕತೆಯಿಲ್ಲ. ಬದಲಿಗೆ ವಾಟ್ಸಾಪ್‌ ಮೂಲಕವೇ ಉಬರ್ ಕ್ಯಾಬ್‌ ಅನ್ನು ಬುಕ್‌ ಮಾಡಬಹುದಾಗಿದೆ.

ಕ್ಯಾಬ್‌ ಬುಕ್‌

ಕ್ಯಾಬ್‌ ಬುಕ್‌ ಮಾಡುವ ಗ್ರಾಹಕರು ವಾಟ್ಸಾಪ್ ಚಾಟ್‌ಬಾಟ್ ಮೂಲಕ ನೋಂದಣಿಯಿಂದ ಕ್ಯಾಬ್ ಬುಕ್ ಮಾಡಬಹುದು. ಇದರಿಂದ ಟ್ರಿಪ್ ರಶೀದಿಯವರೆಗೆ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ. ಸದ್ಯ ವಾಟ್ಸಾಪ್‌ ಮೂಲಕ ರೈಡ್ ಬುಕ್ ಮಾಡುವ ಆಯ್ಕೆಯು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. Uber ನಿಖರವಾದ ಟೈಮ್‌ಲೈನ್ ಅನ್ನು ನೀಡದಿದ್ದರೂ, ಶೀಘ್ರದಲ್ಲೇ ಇದನ್ನು ಇತರ ಭಾರತೀಯ ಭಾಷೆಗಳಿಗೆ ವಿಸ್ತರಿಸಲಾಗುವುದು ಎಂಬ ಮಾತು ಕೂಡ ಕೇಳಿ ಬಂದಿದೆ.

ಫೋನ್

Uber ನಲ್ಲಿ ಕೇವಲ ಫೋನ್ ಸಂಖ್ಯೆಯೊಂದಿಗೆ ನೋಂದಾಯಿಸಿದ ಹೊಸ ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸೇವೆಯು ಲಭ್ಯವಿದೆ. ಆದರೆ ಬಳಕೆದಾರರು ವಾಟ್ಸಾಪ್‌ ಮೂಲಕ ರೈಡ್ ಅನ್ನು ಬುಕ್ ಮಾಡಿದಾಗ, ನೇರವಾಗಿ ಟ್ರಿಪ್‌ಗಳನ್ನು ಬುಕ್ ಮಾಡುವವರಿಗೆ ಅದೇ ಸುರಕ್ಷತಾ ಫೀಚರ್ಸ್‌ಗಳು ಮತ್ತು ವಿಮಾ ಸೆಕ್ಯುರ್‌ ಪಡೆಯಲಿದ್ದಾರೆ ಎಂದು ಉಬರ್‌ ಹೇಳಿದೆ. ಕಾರಿನ ಡ್ರೈವಿನ ಹೆಸರು, ಲೈಸೆನ್ಸ್ ಪ್ಲೇಟ್ ಅನ್ನು ತೋರಿಸುವಂತೆ, ವಾಟ್ಸಾಪ್ ಮೂಲಕ ಬುಕ್ ಮಾಡಲು ನಿರ್ಧರಿಸಿದಾಗಲೂ ಕಾರಿನ ಚಾಲಕನ ಹೆಸರು ತಿಳಿಯಲಿದೆ.

ಡ್ರೈವರ್

ಇನ್ನು ಬಳಕೆದಾರರು ಪಿಕಪ್ ಪಾಯಿಂಟ್‌ಗೆ ಹೋಗುವ ಮಾರ್ಗದಲ್ಲಿ ಡ್ರೈವರ್ ಎಲ್ಲಿ ಸಾಗುತ್ತಿದ್ದಾನೆ ಎನ್ನುವುದನ್ನು ಕೂಡ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಪ್ರಯಾಣಿಸುವಾಗ ತುರ್ತು ಸಂದರ್ಭದಲ್ಲಿ "ತುರ್ತು" ಆಯ್ಕೆಯನ್ನು ಆರಿಸಿದರೆ, ಅವರು Uber ನ ಕಸ್ಟಮರ್‌ ಕೇರ್‌ ಜೊತೆಗೆ ಮಾತನಾಡಬಹುದು. ಜೊತೆಗೆ ನಿಮ್ಮ ಟ್ರಿಪ್ ಮುಗಿದ ನಂತರ ನಿಮಗೆ ಪ್ರಯಾಣದ ಸಂದರ್ಭದಲ್ಲಿ ಯಾವುದೇ ರಿತಿಯ ಅಹಿತಕರ ಘಟನೆ ಎದುರಾಗಿದ್ದರೆ 30 ನಿಮಿಷಗಳವರೆಗೆ Uber ರೈಡರ್‌ಗಳು ಅದರ ಸುರಕ್ಷತಾ ಲೈನ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ವಾಟ್ಸಾಪ್‌ ಮೂಲಕ ಉಬರ್‌ ಕ್ಯಾಬ್‌ ಬುಕ್‌ ಮಾಡುವುದು ಹೇಗೆ?

ವಾಟ್ಸಾಪ್‌ ಮೂಲಕ ಉಬರ್‌ ಕ್ಯಾಬ್‌ ಬುಕ್‌ ಮಾಡುವುದು ಹೇಗೆ?

* ವಾಟ್ಸಾಪ್‌ ಬಳಕೆದಾರರು ಮೂರು ರೀತಿಯಲ್ಲಿ ಊಬರ್‌ ರೈಡ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.
* ಮೊದಲಿಗೆ, ಅವರು ಊಬರ್‌ ನ ಬ್ಯುಸಿನೆಸ್‌ ಖಾತೆ ಸಂಖ್ಯೆಗೆ ಸಂದೇಶ ಕಳುಹಿಸಬಹುದು.
* ಎರಡನೇಯದಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.
* ಮೂರನೇಯದಾಗಿ ಬಳಕೆದಾರರು ಊಬರ್‌ ವಾಟ್ಸಾಪ್‌ ಚಾಟ್ ಅನ್ನು ತೆರೆಯಲು ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.

ಊಬರ್‌

ಪ್ರಸ್ತುತ ಊಬರ್‌ ಇನ್ನೂ ಕೂಡ ವಾಟ್ಸಾಪ್‌ನಲ್ಲಿ ಕಳುಹಿಸಬೇಕಾದ ಸಂಖ್ಯೆಯನ್ನು ಸ್ಪಷ್ಟಪಡಿಸಿಲ್ಲ. ಆದರೆ ವಾಟ್ಸಾಪ್‌ನಲ್ಲಿ ಊಬರ್‌ ನೊಂದಿಗೆ ಚಾಟ್ ಪ್ರಾರಂಭಿಸುವ ಗ್ರಾಹಕರು ಪಿಕಪ್ ಮತ್ತು ಡ್ರಾಪ್-ಆಫ್ ಸ್ಥಳಗಳನ್ನು ಒದಗಿಸಲು ಕೇಳಲಾಗುತ್ತದೆ. ಬಳಕೆದಾರರು ವಾಟ್ಸಾಪ್ ಮೂಲಕವೇ ಚಾಲಕನ ಆಗಮನದ ನಿರೀಕ್ಷಿತ ಸಮಯ, ಟ್ರಿಪ್‌ ಶುಲ್ಕ ಎಲ್ಲ ವಿವರವನ್ನು ಸ್ವೀಕರಿಸುತ್ತಾರೆ. ಏತನ್ಮಧ್ಯೆ, ಪ್ಲಾಟ್‌ಫಾರ್ಮ್‌ನಲ್ಲಿರುವ ಚಾಲಕರು ವಾಟ್ಸಾಪ್ ಮೂಲಕ ಬುಕ್ ಮಾಡಿದ ರೈಡ್‌ಗಳ ಅನುಭವದಲ್ಲಿ ಯಾವುದೇ ಬದಲಾವಣೆಯನ್ನು ಕಾಣುವುದಿಲ್ಲ ಎಂದು ಉಬರ್ ಹೇಳಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಕಸ್ಟಮೈಸ್‌ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಸ್ಟಿಕ್ಕರ್ ಮೇಕರ್ ಟೂಲ್‌ ಬಳಸಿಕೊಂಡು ನಿಮ್ಮ ಸ್ವಂತ ಕಸ್ಟಮ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಲು ವಾಟ್ಸಾಪ್‌ ಅನುಮತಿಸುತ್ತದೆ. ಈ ಫೀಚರ್ಸ್‌ ಅನ್ನು ನೀವು ಸುಲಭವಾಗಿ ಪ್ರವೇಶಿಸಬಹುದಾಗಿದ್ದು, ವಾಟ್ಸಾಪ್‌ನ ಸ್ಟಿಕ್ಕರ್ ವಿಭಾಗದಲ್ಲಿ ಇದನ್ನು ಕಾಣಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ವಾಟ್ಸಾಪ್‌ ಚಾಟ್ ಅನ್ನು ತೆರೆಯಬೇಕು, ನಂತರ ಪೇಪರ್‌ಕ್ಲಿಪ್ ಐಕಾನ್ ಮೇಲೆ ಕ್ಲಿಕ್ ಮಾಡಿ, ತದನಂತರ "ಸ್ಟಿಕ್ಕರ್" ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ನಿಮ್ಮ ಕಸ್ಟಮ್ ಸ್ಟಿಕ್ಕರ್ ಅನ್ನು ಕ್ರಿಯೆಟ್‌ ಮಾಡಲು ನೀವು ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬಹುದಾಗಿದೆ. ಇದಲ್ಲದೆ ವಾಟ್ಸಾಪ್‌ ನಿಮಗೆ ಫೋಟೋವನ್ನು ಸ್ಟಿಕ್ಕರ್‌ನಲ್ಲಿ ಕ್ರಾಪ್ ಮಾಡಲು ಮತ್ತು ಎಮೋಜಿಗಳನ್ನು ಸೇರಿಸಲು ಅನುಮತಿಸುತ್ತದೆ. ಇದು ಪ್ರಸ್ತುತ ವಾಟ್ಸಾಪ್‌ನ ವೆಬ್ ಆವೃತ್ತಿಗೆ ಲಭ್ಯವಿದೆ.

Most Read Articles
Best Mobiles in India

English summary
book an Uber using WhatsApp. The feature has been built on the WhatsApp Business Platform and will start rolling out as a pilot in Lucknow first.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X