ಮನೆಯಲ್ಲಿಯೇ ಕುಳಿತು ನಿಮ್ಮ ಆಧಾರ್‌ ಕಾರ್ಡ್‌ ವಿಳಾಸ ಬದಲಾವಣೆ ಮಾಡುವುದು ಹೇಗೆ?

|

ನಿಮ್ಮ ಆಧಾರ್‌ ಕಾರ್ಡ್‌ ವಿಳಾಸವನ್ನು ಬದಲಾಯಿಸಬೇಕೆ? ಇಲ್ಲ ನಿಮ್ಮ ಆಧಾರ್‌ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ತಿದ್ದುಪಡಿ ಮಾಡಿಸಬೇಕೆ? ಇದಕ್ಕಾಗಿ ಇನ್ಮುಂದೆ ನೀವು ಆಧಾರ್‌ ಸೇವಾ ಕೇಂದ್ರಕ್ಕೆ ಹೋಗಬೇಕಾದ ಅವಶ್ಯಕತೆಯಿಲ್ಲ. ಆಧಾರ್‌ ಸೇವಾ ಕೇಂದ್ರ ಆಥವಾ ದಾಖಲಾತಿ ನವೀಕರಣ ಕೇಂದ್ರಕ್ಕೆ ಬೇಟಿ ನೀಡಿ ಸರದಿ ಸಾಲಿನಲ್ಲಿ ಕಾಯುವ ಅಗತ್ಯವಿಲ್ಲ. ಏಕೆಂದರೆ ಇನ್ಮುಂದೆ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್‌ ಕಾರ್ಡ್‌ ವಿಳಾಸ ಬದಲಾವಣೆಯನ್ನು ಮಾಡಬಹುದು.

ಆಧಾರ್ ಕಾರ್ಡ್

ಹೌದು, ಆಧಾರ್ ಕಾರ್ಡ್ ವಿಳಾಸ ಬದಲಾವಣೆಯನ್ನು ಈಗ ನೀವು ಆನ್‌ಲೈನ್‌ನಲ್ಲಿಯೂ ಮಾಡಬಹುದು. ನಿಮ್ಮ ಆಧಾರ್ ಕಾರ್ಡ್ ವಿಳಾಸ ಬದಲಾವಣೆಯನ್ನು ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಆಧಾರ್ ಕಾರ್ಡ್ ಸ್ವ-ಸೇವೆಯ ಮೂಲಕ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು ಆಧಾರ್‌ ವೆಬ್‌ಸೈಟ್‌ಗೆ ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ಭೇಟಿ ನೀಡಬೇಕಾಗುತ್ತದೆ. ಜೊತೆಗೆ ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಆಧಾರ್ ಕಾರ್ಡ್‌ ವಿಳಾಸವನ್ನು ನೀವು ಆನ್‌ಲೈನ್‌ನಲ್ಲಿಯೇ ಬದಲಾಯಿಸಬಹುದಾಗಿದೆ. ಹಾಗಾದ್ರೆ ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ ವಿಳಾಸವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಧಾರ್‌

ಆಧಾರ್‌ ಕಾರ್ಡ್‌ ಇಂದು ಎಲ್ಲಾ ಕೆಲಸಗಳಿಗೂ ಅಗತ್ಯವಾಗಿದೆ. ಇದು ಸರ್ಕಾರದ ಪ್ರಯೋಜನಗಳಾದ ಎಲ್‌ಪಿಜಿ ಸಬ್ಸಿಡಿಗಳು ಮತ್ತು ಭವಿಷ್ಯ ನಿಧಿ, ವೈಯಕ್ತಿಕ ಬ್ಯಾಂಕ್ ಖಾತೆಗಳು ಮತ್ತು ಇತ್ತೀಚೆಗೆ ಕೊರೊನಾ ಲಸಿಕೆ ಪಡೆಯುವುದಕ್ಕೂ ಕೂಡ ಅಗತ್ಯ ಎನಿಸಿದೆ. ಆದ್ದರಿಂದ, ನಿಮ್ಮ ಆಧಾರ್ ಕಾರ್ಡ್ ವಿಳಾಸದಲ್ಲಿ ಕೆಲವು ತಪ್ಪುಗಳಿದ್ದರೆ, ಅದನ್ನು ತ್ವರಿತವಾಗಿ ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಇತ್ತೀಚೆಗೆ ಆಧಾರ್ ಕಾರ್ಡುದಾರರು ತಮ್ಮ 12-ಅಂಕಿಯ ಸಂಖ್ಯೆಗೆ ಲಿಂಕ್ ಮಾಡಲಾದ ವಿಳಾಸವನ್ನು ನವೀಕರಿಸಬಹುದು ಎಂದು ಘೋಷಿಸಿದೆ. ಈ ಹೊಸ ಸೇವೆ ಯುಐಡಿಎಐನ ಸ್ವಯಂ ಸೇವಾ ಪೋರ್ಟಲ್‌ನಲ್ಲಿ ಲಭ್ಯವಿದೆ ಮತ್ತು ಈ ಲಿಂಕ್‌ಗೆ ಭೇಟಿ ನೀಡುವ ಮೂಲಕ ಪ್ರವೇಶಿಸಬಹುದು. ಆಧಾರ್‌ ಕಾರ್ಡ್‌ ವಿಳಾಸ ಬದಲಾಯಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

ಮನೆಯಲ್ಲಿಯೆ ಕುಳಿತು ಆಧಾರ್ ಕಾರ್ಡ್ ವಿಳಾಸವನ್ನು ಆನ್‌ಲೈನ್‌ನಲ್ಲಿ ಬದಲಾಯಿಸುವುದು ಹೇಗೆ?

ಮನೆಯಲ್ಲಿಯೆ ಕುಳಿತು ಆಧಾರ್ ಕಾರ್ಡ್ ವಿಳಾಸವನ್ನು ಆನ್‌ಲೈನ್‌ನಲ್ಲಿ ಬದಲಾಯಿಸುವುದು ಹೇಗೆ?

ಹಂತ 1: ಆಧಾರ್ ಸ್ವಯಂ ಸೇವಾ ನವೀಕರಣ ಪೋರ್ಟಲ್‌ಗೆ ಲಾಗಿನ್ ಮಾಡಿ, ನಂತರ ಆಧಾರ್ ಅಪ್ಡೇಟ್‌ ಮಾಡಲು Proceed ಕ್ಲಿಕ್ ಮಾಡಿ.

ಹಂತ 2: ನೀವು ಈಗ ನಿಮ್ಮ 12 ಆಧಾರ್ ಅಂಕಿಯ ಸಂಖ್ಯೆಯನ್ನು ನಮೂದಿಸಿ ಮತ್ತು ಒಟಿಪಿ ಪಡೆಯಲು ಅಗತ್ಯವಾದ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ಒಟಿಪಿಯನ್ನು ನಮೂದಿಸಿದ ನಂತರ, ನಿಮ್ಮ ಎಲ್ಲಾ ಆಧಾರ್ ವಿವರಗಳನ್ನು ನೀವು ಡಿಸ್‌ಪ್ಲೇ ಮೇಲೆ ವೀಕ್ಷಿಸಬಹುದು. ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಭಾಷೆಯಂತಹ ನೀವು ಬದಲಾಯಿಸಲು ಬಯಸುವ ಆಯ್ಕೆಗಳನ್ನು ಈಗ ಎಡಿಟ್‌ ಮಾಡಿ.

ಹಂತ 4: ನೀವು ವಿವರಗಳ ಹೊಸ ಬದಲಾವಣೆಯನ್ನು ಪರಿಶೀಲಿಸಬಹುದಾದ ಸ್ಕ್ಯಾನ್ ಮಾಡಿದ ಮೂಲ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತರ ಸಬ್ಮಿಟ್‌ ಬಟನ್ ಕ್ಲಿಕ್ ಮಾಡಿ.

ಯುಐಡಿಎಐ

ಇನ್ನು ಯುಐಡಿಎಐ ಪ್ರಕಾರ, ಆಧಾರ್ ಸ್ವಯಂ ಸೇವಾ ನವೀಕರಣ ಪೋರ್ಟಲ್ ಮೂಲಕ ಅಪ್ಡೇಟ್‌ ಮಾಡಲು ಬಯಸುವ ಬಳಕೆದಾರರಿಗೆ ಆನ್‌ಲೈನ್ ಪೋರ್ಟಲ್ ಮೂಲಕ ಮಾಡಿದ ಅಪ್ಡೇಟ್‌ ರಿಕ್ವೆಸ್ಟ್‌ಗೆ 50ರೂ. ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ, ನವೀಕರಿಸಬೇಕಾದ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿದ್ದರೆ, ಬಳಕೆದಾರರು ಒಂದೇ ಸಮಯದಲ್ಲಿ ಎರಡನ್ನೂ ಬದಲಾಯಿಸಲು ಅರ್ಜಿ ಸಲ್ಲಿಸಬೇಕು. ಏಕೆಂದರೆ ಯುಐಡಿಎಐ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ನವೀಕರಿಸುವುದನ್ನು ಕೇವಲ ಒಂದು ಅಪ್ಡೇಟ್‌ ಎಂದು ಮಾತ್ರ ಪರಿಗಣಿಸಲಾಗುತ್ತದೆ.

ಆನ್‌ಲೈನ್‌ನಲ್ಲಿ ಮಾಡಬಹುದಾದ ಇತರ ಆಧಾರ್ ಕಾರ್ಡ್ ಅಪ್ಡೇಟ್‌ಗಳು

ಆನ್‌ಲೈನ್‌ನಲ್ಲಿ ಮಾಡಬಹುದಾದ ಇತರ ಆಧಾರ್ ಕಾರ್ಡ್ ಅಪ್ಡೇಟ್‌ಗಳು

ಇಲ್ಲಿಯವರೆಗೆ, ತಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಭಾಷೆಯನ್ನು ನವೀಕರಿಸಲು ಬಯಸುವ ಬಳಕೆದಾರರು ಯುಐಡಿಎಐ ವೆಬ್‌ಸೈಟ್ ಮೂಲಕ ಹಾಗೆ ಮಾಡಬಹುದು. ಆದಾಗ್ಯೂ, ಬಳಕೆದಾರನು ತನ್ನ ಕುಟುಂಬದ ಮುಖ್ಯಸ್ಥ / ಗಾರ್ಡಿಯನ್ ವಿವರಗಳನ್ನು ಹೊಂದಿಸಲು ಅಥವಾ ಎಡಿಟ್‌ ಮಾಡಲು ಅಥವಾ ಬಯೋಮೆಟ್ರಿಕ್ ನವೀಕರಣವನ್ನು ಮಾಡಲು ಬಯಸಿದರೆ, ಬದಲಾವಣೆಯನ್ನು ಮಾಡಲು ಆಧಾರ್ ಕೇಂದ್ರಕ್ಕೆ ಭೇಟಿ ಕೊಡಬೆಕಾಗುತ್ತದೆ.

Best Mobiles in India

English summary
UIDAI has made Aadhaar card address change online possible now and there is no need to visit the Aadhaar Seva Kendra; all you need is your smartphone and ₹50 to make the change form home.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X