Home
ಸುದ್ದಿಜಾಲ

ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡಿಸುವುದು ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಬೇಕಾದರೆ ಪಾಸ್‌ಪೋರ್ಟ್‌ ಅತ್ಯಗತ್ಯವಾಗಿರಬೇಕಾದ ದಾಖಲೆಯಾಗಿದೆ. ಇನ್ನು ಪಾಸ್‌ಪೋರ್ಟ್‌ ನಿಮ್ಮ ಹೆಸರು, ವಿಳಾಸ ಮತ್ತು ಜನ್ಮ ದಿನಾಂಕದ ದಾಖಲೆಯಾಗಿ ಕಾರ್ಯನಿರ್ವಹಿಸಲಿದೆ. ಆದರಿಂದ ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಅಡ್ರೆಸ್‌ ಸರಿಯಾಗಿರುವುದು ಮುಖ್ಯವಾಗಿದೆ.

ಹೌದು, ಪಾಸ್‌ಪೋರ್ಟ್‌ನಲ್ಲಿ ನಿಮ್ಮ ವಿಳಾಸದ ವಿವರಗಳು ನಿಖರವಾಗಿರಬೇಕು. ಒಂದು ವೇಳೆ ನೀವು ನಿಮ್ಮ ವಿಳಾಸವನ್ನು ಬದಲಾಯಿಸಿದ್ದರೆ ಪಾಸ್‌ಪೋರ್ಟ್‌ನಲ್ಲಿಯೂ ಕೂಡ ವಿಳಾಸವನ್ನು ಅಪ್ಡೇಟ್‌ ಮಾಡಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಅಡ್ರೆಸ್‌ ಅಪ್ಡೇಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡಿಸುವುದು ಹೇಗೆ ಗೊತ್ತಾ?

ಪಾಸ್‌ಪೋರ್ಟ್‌ ಕೂಡ ನಿಮ್ಮ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುವುದರಿಂದ ವಿಳಾಸವನ್ನು ಆಗಾಗ ಅಪ್ಡೇಟ್‌ ಮಾಡಿಸುವುದು ಅಗತ್ಯವಾಗಿದೆ. ಭಾರತ ಸರ್ಕಾರ ಪಾಸ್‌ಪೋರ್ಟ್‌ನಲ್ಲಿ ವಿಳಾಸವನ್ನು ಅಪ್ಡೇಟ್‌ ಮಾಡುವುದು ಕಡ್ಡಾಯಗೊಳಿಸಿಲ್ಲ. ಆದರೆ ನೀವು ವಿದೇಶಗಳಿಗೆ ಪ್ರಯಾಣ ಮಾಡುವಾಗ ಇದು ಅತಿ ಅಗತ್ಯವಾಗಿದೆ. ಒಂದು ವೇಳೆ ಪಾಸ್‌ಪೋರ್ಟ್‌ನಲ್ಲಿ ಅಡ್ರೆಸ್‌ ಅಪ್ಡೇಟ್‌ ಮಾಡಿಸದೇ ಹೋದರೆ ನಿಮ್ಮ ಗುರುತಿನ ಪುರಾವೆಗಾಗಿ ಬೇರೆ ದಾಖಲೆಗಳನ್ನು ರುಜುವಾತು ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು.

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ವಿಳಾಸವನ್ನು ಬದಲಾಯಿಸುವುದು ಹೇಗೆ ?

ಪಾಸ್‌ಪೋರ್ಟ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವುದಕ್ಕೆ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್ ಸೂಕ್ತವಾಗಿದೆ. ಇದರಲ್ಲಿ ಅರ್ಜಿದಾರರು ತಮ್ಮ ಪಾಸ್‌ಪೋರ್ಟ್‌ಗಳಲ್ಲಿನ ವಿಳಾಸವನ್ನು ಬದಲಾಯಿಸಲು/ಅಪ್‌ಡೇಟ್ ಮಾಡಲು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.
* ಮೊದಲಿಗೆ ಪಾಸ್‌ಪೋರ್ಟ್‌ ಬಳಕೆದಾರರು ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಬೇಕು
* "ಅಸ್ತಿತ್ವದಲ್ಲಿರುವ ಬಳಕೆದಾರ" ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ತಮ್ಮ ಖಾತೆಗೆ ಲಾಗ್ ಇನ್ ಆಗಬೇಕು
* ನಂತರ, ಪರದೆಯ ಮೇಲೆ ಅಪ್ಲಿಕೇಶನ್ ಫಾರ್ಮ್ ಕಾಣಲಿದೆ ಇದರಲ್ಲಿ ನಿಮಗೆ ಸಂಬಂಧಿಸಿದ ಟ್ಯಾಬ್‌ನಲ್ಲಿ ಕ್ಲಿಕ್ ಮಾಡಬೇಕು
* ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಅಗತ್ಯ ವಿವರಗಳನ್ನು ಒದಗಿಸಬೇಕು.
* ನಂತರ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಿ
* ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಅರ್ಜಿ ಶುಲ್ಕವನ್ನು ಪಾವತಿಸಬೇಕು.
* ನಂತರ ನೀವು ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮ ಅಡ್ರೆಸ್‌ ಅನ್ನು ಬದಲಾಯಿಸಬಹುದು.

ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡಿಸುವುದು ಹೇಗೆ ಗೊತ್ತಾ?

ಪಾಸ್‌ಪೋರ್ಟ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡಿಸಲು ಬೇಕಾದ ಅಗತ್ಯ ದಾಖಲೆಗಳು!

* ನಿಮ್ಮ ಬಳಿ ಈಗಾಗಲೇ ಲಭ್ಯವಿರುವ ಪಾಸ್‌ಪೋರ್ಟ್
* ವಿಳಾಸದ ಬದಲಾವಣೆಗಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಲಾದ ಅಪ್ಲಿಕೇಶನ್‌ನ ಪ್ರತಿ
* ಹಳೆಯ ಪಾಸ್‌ಪೋರ್ಟ್‌ನ ಮೊದಲ ಎರಡು ಮತ್ತು ಕೊನೆಯ ಎರಡು ಪುಟಗಳ ಸ್ವಯಂ-ದೃಢೀಕರಿಸಿದ ಪ್ರತಿಗಳು.
* ಪಾಸ್‌ಪೋರ್ಟ್‌ನ ಅಧಿಕಾರ ಮಾಹಿತಿಯನ್ನು ನೀಡುವುದು.
* ಇಸಿಆರ್/ಇಸಿಆರ್ ಅಲ್ಲದ ಪುಟದ ಸ್ವಯಂ-ದೃಢೀಕರಿಸಿದ ಪ್ರತಿ.
* ಹೊಸ ವಿಳಾಸ ಪುರಾವೆಗೆ ಸಂಬಂಧಿಸಿದ ದಾಖಲೆ ಪತ್ರಗಳು

ಭಾರತೀಯ ಪಾಸ್‌ಪೋರ್ಟ್‌ಗೆ ಅಗತ್ಯವಾಗಿ ಬೇಕಾಗುವ ದಾಖಲೆಗಳು!

ವಿಳಾಸದ ಪುರಾವೆಗಾಗಿ ಅರ್ಜಿದಾರರ ಫೋಟೋ ಹೊಂದಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್, ಲ್ಯಾಂಡ್‌ಲೈನ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲ್ ಬಿಲ್, ರೆಂಟಲ್‌ ಅಗ್ರಿಮೆಂಟ್‌, ಎಲೆಕ್ಟ್ರಿಕಲ್‌ ಬಿಲ್, ಮತದಾರರ ಗುರುತಿನ ಚೀಟಿ, ವಾಟರ್‌ ಬಿಲ್, ಕಂದಾಯ ರಶೀದಿ, ಗ್ಯಾಸ್ ಸಂಪರ್ಕದ ಪುರಾವೆ, ಆಧಾರ್ ಕಾರ್ಡ್ ದಾಖಲೆಗಳನ್ನು ನೀಡಬೇಕಾಗುತ್ತದೆ.

ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡಿಸುವುದು ಹೇಗೆ ಗೊತ್ತಾ?

ಹುಟ್ಟಿದ ದಿನಾಂಕದ ಪುರಾವೆಗಾಗಿ ಬೇಕಾಗುವ ದಾಖಲೆಗಳು

* ಆಧಾರ್ ಕಾರ್ಡ್/ಇ-ಆಧಾರ್
* PAN ಕಾರ್ಡ್
* ಭಾರತದ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿ
* ಡ್ರೈವಿಂಗ್‌ ಲೈಸೆನ್ಸ್‌
* ಜನನ ಪ್ರಮಾಣಪತ್ರ.
* ವರ್ಗಾವಣೆ ಪ್ರಮಾಣಪತ್ರ / ಶಾಲೆ.

ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ:1 ಮೊದಲಿಗೆ ಪಾಸ್‌ಪೋರ್ಟ್ ಸೇವಾ ಅಧಿಕೃತ ಪೋರ್ಟಲ್‌ನಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.
ಹಂತ:2 ನಂತರ ನಿಮ್ಮ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ
ಹಂತ:3 ಇದೀಗ ನಿಮಗೆ ಫ್ರೇಶ್‌ ಮತ್ತು ರಿ ಇಶ್ಯೂ ಎಂಬ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಇದರಲ್ಲಿ ನಿಮಗೆ ಅನ್ವಯವಾಗುವ ಆಯ್ಕೆಯನ್ನು ಆರಿಸಿ
ಹಂತ:4 ನಂತರ ಸ್ಕೀಮ್ ಪ್ರಕಾರದಲ್ಲಿ 'ತತ್ಕಾಲ್' ಆಯ್ಕೆಯನ್ನು ಆಯ್ಕೆಮಾಡಿ
ಹಂತ:5 ಇದೀಗ ನಿಮ್ಮ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ
ಹಂತ:6 ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ
ಹಂತ:7 ಇದೀಗ ಪಾವತಿ ವಿಧಾನವನ್ನು ಪೂರ್ಣಗೊಳಿಸಿ
ಹಂತ:8 ಪಾವತಿ ಮುಗಿದ ನಂತರ ಆನ್‌ಲೈನ್ ಪಾವತಿಯ ರಸೀದಿಯನ್ನು ಮುದ್ರಿಸಿ
ಹಂತ:9 ನಂತರ ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿಕೊಳ್ಳಬಹುದು.

Best Mobiles in India

English summary
How To Change Address in Passport via Passport Seva Portal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+