ನಿಮ್ಮ Gmail ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ನಿಮ್ಮ ಆನ್‌ಲೈನ್ ಡಾಕ್ಯುಮೆಂಟ್‌ಗಳನ್ನ ರವಾನಿಸುವುದಕ್ಕೆ ಇಲ್ಲವೇ ಸಂಗ್ರಹ ಮಾಡುವುದಕ್ಕೆ ಜಿಮೇಲ್ ಅನ್ನು ಬಳಕೆ ಮಾಡುವುದು ಹೆಚ್ಚಾಗಿದೆ. ಸದ್ಯ ನಿಮಗೆಲ್ಲಾ ತಿಳಿದಿರುವಂತೆ GMAIL ಖಾತೆಯನ್ನ ಬಹುತೇಕ ಮಂದಿ ಬಳಸುತ್ತಾರೆ. ಆದರೆ ನಿಮ್ಮ ಆನ್‌ಲೈನ್ ಡಾಕ್ಯುಮೆಂಟ್ ಸುರಕ್ಷತೆ ನಿಮ್ಮ ಆನ್‌ಲೈನ್ ಪಾಸ್‌ವರ್ಡ್‌ನಷ್ಟೇ ಉತ್ತಮವಾಗಿರಬೇಕಾಗಿರುತ್ತದೆ. ಅಲ್ಲದೆ ನಿಮ್ಮ ಆನ್‌ಲೈನ್ ಖಾತೆಗಳನ್ನ ನೀವು ಮಾತ್ರ ಪ್ರವೇಶಿಸಬಹುದೆಂದು ಖಚಿತ ಪಡಿಸಕೊಳ್ಳುತ್ತಿರಬೇಕು. ಇದಕ್ಕಾಗಿ ಆಗಾಗ ನಿಮ್ಮ ಪಾಸ್‌ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸುವುದು ಉತ್ತಮವಾಗಿದೆ.

ಹೌದು, ನಿಮ್ಮ ಆನ್‌ಲೈನ್ ಖಾತೆಗಳ ಸುರಕ್ಷತೆಯ ದೃಷ್ಟಿಯಿಂದ ನಿಮ್ಮ ಪಾಸ್‌ವರ್ಡ್‌ಗಳನ್ನು ನಿಯಮಿತವಾಗಿ ಬದಲಾವಣೆ ಮಾಡುವುದು ಉತ್ತಮ ಎಂದು ಹೇಳಲಾಗ್ತಿದೆ. ಇದರಿಂದಾಗಿ ಹ್ಯಾಕರ್ಸ್‌ಗಳು ನಿಮ್ಮ ಪಾಸ್‌ವರ್ಡ್ ಅನ್ನು ಡೀಫೈರ್ ಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ನಿಮಗೆ ಯಾವ ಮಾದರಿಯ ಪಾಸ್‌ವರ್ಡ್‌ಗಳು ನಿಮಗೆ ಹೆಚ್ಚು ಮುಖ್ಯವೆಂದು ಕಂಡುಹಿಡಿಯುವುದು ಪ್ರಮುಖವಾಗಿರುತ್ತದೆ. ಇದಲ್ಲದೆ ನಿಮ್ಮ ಒಂದು ಅಥವಾ ಹೆಚ್ಚಿನ ಖಾತೆಗಳನ್ನು ಹ್ಯಾಕ್ ಮಾಡಿದರೆ, ಒಂದೇ ಬಾರಿಗೆ ನಿಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಲು ಕಾರಣವಾಗಬಹುದು. ಇದರಿಂದಾಗಿ ನಿಮ್ಮ Gmail ಪಾಸ್‌ವರ್ಡ್ ಆಗಾದ ಬದಲಾಯಿಸುತ್ತಿರುವುದು ಉತ್ತಮವಾಗಿದೆ. ಹಾಗಾದ್ರೆ ನಿಮ್ಮ Gmail ಖಾತೆಯ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಾಮಾನ್ಯವಾಗಿ ಬಹುತೇಕ ಮಂದಿ Google ಇಲ್ಲವೇ Gmail ಖಾತೆಗೆ ಒಂದೆ ಮಾದರಿಯ ಪಾಸ್‌ವರ್ಡ್ ಅನ್ನು ನೀಡಿರುತ್ತಾರೆ. ಅಲ್ಲದೆ ಇದೇ ಪಾಸ್‌ವರ್ಡ್ ಅನ್ನು ಫೇಸ್‌ಬುಕ್, ಟ್ವಿಟರ್ ಮತ್ತು ಲಿಂಕ್ಡ್‌ಇನ್‌ನಂತಹ ಇತರ ಸೇವೆಗಳಲ್ಲಿ ಸೈನ್ ಅಪ್ ಮಾಡಲು ಹೆಚ್ಚಾಗಿ ಬಳಕೆ ಮಾಡುತ್ತಿರುತ್ತಾರೆ. ಇದರಿಂದಾಗಿ ನಿಮ್ಮ Gmail ಪಾಸ್‌ವರ್ಡ್ ಅನ್ನು ಒಮ್ಮೆ ಮರೆತು ಹೋದರೆ ಮತ್ತೇ ಸೈನ್‌ಇನ್ ಮಾಡುವುದು ತುಂಬಾ ಕಠಿಣ ಆದ್ರೆ ನಿಮ್ಮ ಪಾಸ್‌ವರ್ಡ್ ಅನ್ನು ನೀವು ಮರೆತಿದ್ದರೆ ಇಲ್ಲವೇ ಅದನ್ನು ಮತ್ತೇ ಬದಲಾಯಿಸಬೇಕೆಂದು ಕೊಂಡರೆ ನೀವು ಈ ಕೆಳಗಿನ ಬಳಸಬಹುದಾದ ಹಂತಗಳನ್ನು ಅನುಸರಿಸಿ.

ನಿಮ್ಮ Gmail ಪಾಸ್‌ವರ್ಡ್ ಬದಲಾಯಿಸುವುದು ಹೇಗೆ?
ಹಂತ 1: Gmail ತೆರೆಯಿರಿ
ನಿಮ್ಮ ಡೆಸ್ಕ್‌ಟಾಪ್‌ನಲ್ಲಿರುವ ನಿಮ್ಮ Gmail ಇನ್‌ಬಾಕ್ಸ್‌ಗೆ ಹೋಗಿ. ನಿಮ್ಮದೇ ಖಾತೆ ಎಂದು ನೀವೇ ಖಚಿತಪಡಿಸಿಕೊಳ್ಳಲು ನೀವು ಸೈನ್ ಇನ್ ಮಾಡಬೇಕಾಗುತ್ತದೆ.

ಹಂತ 2: ಪಾಸ್ವರ್ಡ್ ಬದಲಾಯಿಸುವ ಆಯ್ಕೆಯನ್ನು ಹುಡುಕಿ
ನೀವು ಪ್ರವೇಶಿಸಿದ ನಂತರ, ‘ಭದ್ರತೆ' ಟ್ಯಾಬ್ ಅನ್ನು ಪತ್ತೆ ಮಾಡಿ ಮತ್ತು ‘Google ಗೆ ಸೈನ್ ಇನ್' ಆಯ್ಕೆಮಾಡಿ. ಪಾಸ್ವರ್ಡ್ ಅನ್ನು ಇಲ್ಲಿ ಆಯ್ಕೆ ಮಾಡಿ ಮತ್ತು ಭದ್ರತಾ ಕಾರಣಗಳಿಗಾಗಿ ನಿಮ್ಮನ್ನು ಮತ್ತೊಮ್ಮೆ ಸೈನ್ ಇನ್ ಮಾಡಲು ಕೇಳಬಹುದು.

ಹಂತ 3: ನಿಮ್ಮ ಪಾಸ್‌ವರ್ಡ್ ಬದಲಾಯಿಸಿ
ನಿಮ್ಮ ಹಳೆಯ ಮತ್ತು ಹೊಸ ಪಾಸ್‌ವರ್ಡ್‌ಗಳನ್ನು ಮುಂದಿನ ಕಾಲಮ್‌ಗಳಲ್ಲಿ ನಮೂದಿಸಿ. ಯಾವುದೇ ತಪ್ಪುಗಳನ್ನು ತಪ್ಪಿಸಲು ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ಎರಡು ಬಾರಿ ಹಾಕಲು ನಿಮ್ಮನ್ನು ಕೇಳಲಾಗುತ್ತದೆ. ಎರಡೂ ಕಾಲಮ್‌ಗಳಲ್ಲಿ ನೀವು ಅದೇ ಹೊಸ ಪಾಸ್‌ವರ್ಡ್ ಅನ್ನು ನಮೂದಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಇದಲ್ಲದೆ, ಭವಿಷ್ಯದಲ್ಲಿ ನಿಮಗೆ ಸುಲಭವಾಗಿ Google ಗೆ ಲಾಗ್ ಇನ್ ಆಗಲು ಸಾಧ್ಯವಾಗದ ಕಾರಣ, ಅದು ನಿಮಗೆ ನೆನಪಿರಲಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ಹೊಂದಿಸಿದ ನಂತರ, ‘ಪಾಸ್‌ವರ್ಡ್ ಬದಲಾಯಿಸಿ' ಕ್ಲಿಕ್ ಮಾಡಬೇಕಾಗುತ್ತದೆ.


Click it and Unblock the Notifications