ಜಿ-ಮೇಲ್‌ ಇನ್‌ಬಾಕ್ಸ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಥೀಮ್ ಬದಲಾಯಿಸುವುದು ಹೇಗೆ ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ Gmail ಅತ್ಯಂತ ಜನಪ್ರಿಯ ಇಮೇಲ್ ಸೇವೆಗಳಲ್ಲಿ ಒಂದಾಗಿದೆ. ಇದು ಬಳಸಲು ಸಾಕಷ್ಟು ಸುಲಭವಾಗಿದ್ದು, ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಮದಿದೆ. ಕ್ಷಣಾರ್ಧದಲ್ಲಿ ಇ-ಮೇಲ್‌ ಕಳುಹಿಸಬಲ್ಲ ಇ-ಮೇಲ್‌ ಸೇವೆಗಳಲ್ಲಿ ಜಿ-ಮೇಲ್ ಸೇವೆ ಕೂಡ ಒಂದಾಗಿದೆ. ಗೂಗಲ್ ಸೂಟ್ ಆಫ್ ಅಪ್ಲಿಕೇಶನ್‌ಗಳ ಭಾಗವಾಗಿರುವ ಇದು ಮೊಬೈಲ್ ಅಪ್ಲಿಕೇಶನ್ ಮತ್ತು ಮೊಬೈಲ್ ಬ್ರೌಸರ್ ಮೂಲಕ ಲಕ್ಷಾಂತರ ಆಂಡ್ರಾಯ್ಡ್ ಫೋನ್‌ಗಳಿಗೆ ಪ್ರವೇಶಿಸಬಹುದಾಗಿದೆ.

ಗೂಗಲ್‌ನ

ಹೌದು, ಗೂಗಲ್‌ನ ಜಿ-ಮೇಲ್ ಸೇವೆ ಸಾಕಷ್ಟು ಉಪಯುಕ್ತ ಫೀಚರ್ಸ್‌ಗಳನ್ನು ಹೊಂದಿದ್ದು, ಬಳಕೆದಾರರಿಗೆ ಉಪಯುಕ್ತವಾಗಿದೆ. ಇನ್ನು ನೀವು ಸಾಮಾನ್ಯ Gmail ಬಳಕೆದಾರರಾಗಿದ್ದರೆ, ಇಮೇಲ್ ಸೇವೆಯಲ್ಲಿ ಸಾಕಷ್ಟು ಉಪಯುಕ್ತ ಫೀಚರ್ಸ್‌ಗಳನ್ನ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ನೀವು ಇನ್‌ಬಾಕ್ಸ್‌ನ ಬ್ಯಾಕ್‌ಗ್ರೌಂಡ್‌ನ ಥೀಮ್‌ ಚೇಂಜ್‌ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಅಲ್ಲದೆ ನೀವು ನಿಮ್ಮ ಜಿ-ಮೇಲ್‌ ಇನ್‌ಬಾಕ್ಸ್ ಬ್ಯಾಕ್‌ಗ್ರೌಂಡ್‌ನಲ್ಲಿ ನಿಮ್ಮ ಚಿತ್ರಗಳನ್ನು ಥೀಮ್‌ ಆಗಿ ಬಳಸಲು Gmail ಬಳಕೆದಾರರನ್ನು ಅನುಮತಿಸುತ್ತದೆ. ಹಾಗಾದ್ರೆ ಜಿ-ಮೇಲ್‌ ಇನ್‌ಬಾಕ್ಸ್‌ ಬ್ಯಾಕ್‌ಗ್ರೌಂಡ್‌ನಲ್ಲಿ ನಿಮ್ಮದೇ ಪೋಟೋಗಳನ್ನ ಬ್ಯಾಕ್‌ಗ್ರೌಂಡ್‌ ಥೀಮ್‌ ಆಗಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿ-ಮೇಲ್‌ ಇನ್‌ಬಾಕ್ಸ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಥೀಮ್ ಬದಲಾಯಿಸುವುದು ಹೇಗೆ ?

ಜಿ-ಮೇಲ್‌ ಇನ್‌ಬಾಕ್ಸ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಥೀಮ್ ಬದಲಾಯಿಸುವುದು ಹೇಗೆ ?

ಜೀಮೆಲ್‌ನಲ್ಲಿ ಲಭ್ಯವಿರುವ ಥೀಮ್‌ಗಳಿಂದ ಬ್ಯಾಕ್‌ಗ್ರೌಂಡ್‌ ಥೀಮ್‌ ಆಯ್ಕೆ ಮಾಡುವುದಕ್ಕೆ ಈ ಹಂತಗಳನ್ನು ಅನುಸರಿಸಿ.

ಹಂತ 1: Gmail ತೆರೆಯಿರಿ ಮತ್ತು ಬಲ ಮೇಲಿನ ಮೂಲೆಯಲ್ಲಿ ಗೋಚರಿಸುವ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ.

ಹಂತ 2: ಥೀಮ್‌ಗಳನ್ನು ಕ್ಲಿಕ್ ಮಾಡಿ

ಹಂತ 3: ಕೊಟ್ಟಿರುವ ಲೈಬ್ರರಿಯಿಂದ ಥೀಮ್ ಆಯ್ಕೆಮಾಡಿ. ಪಠ್ಯ ಹಿನ್ನೆಲೆ, ವಿಗ್ನೆಟ್ ಅಥವಾ ಮಸುಕು ಕ್ಲಿಕ್ ಮಾಡುವ ಮೂಲಕ ನೀವು ಅದನ್ನು ಮತ್ತಷ್ಟು ವೈಯಕ್ತೀಕರಿಸಬಹುದು.

ಹಂತ 4: ಹೊಸ ಥೀಮ್‌ನೊಂದಿಗೆ ಪ್ರಾರಂಭಿಸಲು ಸೇವ್ ಅನ್ನು ಮಾಡಿ.

ನಿಮ್ಮ ಫೋಟೋಗಳನ್ನೇ ಬ್ಯಾಕ್‌ಗ್ರೌಂಡ್‌ ಥೀಮ್‌ ಆಗಿ ಆಯ್ಕೆ ಮಾಡುವುದು ಹೇಗೆ?

ನಿಮ್ಮ ಫೋಟೋಗಳನ್ನೇ ಬ್ಯಾಕ್‌ಗ್ರೌಂಡ್‌ ಥೀಮ್‌ ಆಗಿ ಆಯ್ಕೆ ಮಾಡುವುದು ಹೇಗೆ?

ಹಂತ 1: Gmail ತೆರೆಯಿರಿ ಮತ್ತು ಬಲ ಮೇಲಿನ ಮೂಲೆಯಲ್ಲಿ ಗೋಚರಿಸುವ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ.

ಹಂತ 2: ಥೀಮ್‌ಗಳಿಗೆ ಹೋಗಿ, My Photos ಕ್ಲಿಕ್ ಮಾಡಿ (ಕೆಳಗಿನ ಎಡಭಾಗದಲ್ಲಿ ಕಾಣಿಸಿಕೊಳ್ಳುತ್ತದೆ).

ಹಂತ 3: ಫೋಟೋ ಆಯ್ಕೆಮಾಡಿ ಮತ್ತು ಫೀಚರ್ಸ್‌ಗೊಳಿಸಿದ ನಂತರ ಕ್ಲಿಕ್ ಮಾಡಿ.

ಹಂತ 4: ಇಲ್ಲಿ ನಿಮ್ಮ ಫೋಟೋವನ್ನು ಮತ್ತಷ್ಟು ವೈಯಕ್ತೀಕರಿಸಬಹುದು.

ಹಂತ 5: ನಂತರ ಸೇವ್ ಕ್ಲಿಕ್ ಮಾಡಿ ಮತ್ತು ನಿರ್ಗಮಿಸಿ.

ಜಿ-ಮೇಲ್

ಇದಲ್ಲದೆ ನೀವು ನಿಮ್ಮ ಜಿ-ಮೇಲ್‌ನಲ್ಲಿ ನಿರ್ದಿಷ್ಟ ಉದ್ದೇಶ ಅಥವಾ ಸ್ವರೂಪಕ್ಕಾಗಿ ಬರುವ ಇಮೇಲ್‌ಗಳನ್ನು ಸಂಘಟಿಸಲು ಲೇಬಲ್‌ಗಳು ನಿಮಗೆ ಸಹಾಯ ಮಾಡುತ್ತವೆ. ಅಂತಹ ಇಮೇಲ್‌ಗಳ ಫುಲ್‌ ವಿವ್ಯೂ ಮಾಡಲು ಡೇಡಿಕೇಟೆಡ್‌ ಲೇಬಲ್ ಟ್ಯಾಬ್ ನಿಮಗೆ ಸಹಾಯ ಮಾಡುತ್ತದೆ. ಹಾಗಾದ್ರೆ ಜಿ ಮೇಲ್‌ನಲ್ಲಿ ಲೇಬಲ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಹಂತ 1: Gmail ತೆರೆಯಿರಿ. ಎಡಗೈ ಮೆನು ಕೆಳಗೆ ಸ್ಕ್ರಾಲ್ ಮಾಡಿ> ಮೋರ್‌ ಕ್ಲಿಕ್ ಮಾಡಿ.

ಹಂತ 2: ಕ್ರಿಯೆಟ್‌ ಲೇಬಲ್ ಕ್ಲಿಕ್ ಮಾಡಿ. ಲೇಬಲ್‌ಗಾಗಿ ಹೆಸರನ್ನು ನಮೂದಿಸಿ.

ನಿಮ್ಮ ಇನ್‌ಬಾಕ್ಸ್ ಸಂದೇಶಗಳಿಗೆ ನೀವು ಲೇಬಲ್ ಅನ್ನು ಕೂಡ ಸೇರಿಸಬಹುದು. ಹಾಗೆ ಮಾಡಲು, ಸಂದೇಶ / ಸಂದೇಶಗಳನ್ನು ಆಯ್ಕೆಮಾಡಿ. ಮೇಲ್ಭಾಗದಲ್ಲಿ, ಲೇಬಲ್‌ಗಳನ್ನು ಕ್ಲಿಕ್ ಮಾಡಿ. ಪಟ್ಟಿಯಿಂದ ಲೇಬಲ್ ಆಯ್ಕೆಮಾಡಿ ಅಥವಾ ಹೊಸದನ್ನು ರಚಿಸಿ. ಮತ್ತು ಸೇವ್‌ ಮಾಡಿ.

Best Mobiles in India

English summary
Here is a step-by-step guide to personalise a theme for your Gmail inbox on your computer. Also, check out steps to create a label.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X