PF ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

|

ಖಾಸಗಿ ಸಂಸ್ಥೆಯಲ್ಲಿ ದುಡಿಯುವ ನೌಕರರ ಪಾಲಿಗೆ ನೌಕರರ ಭವಿಷ್ಯ ನಿಧಿ(PF) ಕಷ್ಟಕಾಲಕ್ಕೆ ಆರ್ಥಿಕ ನೆರವಿನ ಭರವಸೆ ಆಗಿದೆ. ಪ್ರತಿಯೊಬ್ಬ ನೌಕರನು ತನ್ನ ಭವಿಷ್ಯ ನಿಧಿಯ ಬಗ್ಎ ಸಾವಿರಾರು ಕನಸು ಕಟ್ಟಿಕೊಂಡಿರುತ್ತಾನೆ. ನಿವೃತ್ತಿಯ ನಂತರ, ಇಲ್ಲವೇ ಕಷ್ಟ ಕಾಲದಲ್ಲಿ ಪಿಎಫ್‌ ಹಣ ನೌಕರರ ಸಹಾಯಕ್ಕೆ ಬರಲಿದೆ. ಇನ್ನು ಪ್ರತಿ ತಿಂಗಳು ಕಾರ್ಯನಿರತ ನೌಕರರ ಸಂಬಳದಲ್ಲಿನ ಒಂದು ನಿರ್ದಿಷ್ಟ ಮೊತ್ತ ಮತ್ತು ಉದೋಗ ಸಂಸ್ಥೆಯಿಂದ ಒಂದು ನಿರ್ದಿಷ್ಟ ಮೊತ್ತ ಉದ್ಯೋಗಿಯ ಪಿಎಫ್‌ ಖಾತೆಯಲ್ಲಿ ಜಮಾ ಆಗುತ್ತದೆ.

ಪಿಎಫ್‌

ಹೌದು, ಖಾಸಗಿ ಸಂಸ್ಥೆಯಲ್ಲಿ ದುಡಿಯುವ ಪ್ರತಿಯೊಬ್ಬ ನೌಕರನು ಪಿಎಫ್‌ ಮೇಲೆ ಆಸೆ ಕಂಗಳಿಂದ ನೋಡುತ್ತಿರುತ್ತಾನೆ. ಇನ್ನು ಪಿಎಫ್‌ ಖಾತೆಯಿಂದ ಹಣ ವಿತ್‌ಡ್ರಾ ಮಾಡಲು ಉದ್ಯೋಗಿಯ ತನ್ನ ಕೆವೈಸಿ ಮಾಹಿತಿಯನ್ನು ನಮೂದಿಸಿರಬೇಕು. ಉದ್ಯೋಗಿಯು ಮುಖ್ಯವಾಗಿ ಆಧಾರ್ ಕಾರ್ಡ್‌ ಮಾಹಿತಿ ಸರಿಯಾಗಿರಬೇಕು. ಆಧಾರ್‌ ಕಾರ್ಡ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬಳಕೆಯಲ್ಲಿಟ್ಟಿರಬೇಕು. ಹಾಗೆಯೇ ಬ್ಯಾಂಕ್ ಖಾತೆಯ ವಿವರ, ಪ್ಯಾನ್ ಕಾರ್ಡ್‌ ಮಾಹಿತಿ ಒದಗಿಸುವುದು ಅಗತ್ಯವಾಗಿದೆ. ಕೆಲವೊಮ್ಮೆ ನೀವು ಮೊಬೈಲ್‌ ಸಂಖ್ಯೆ ಬದಲಾಯಿಸಿದರೆ ಅದನ್ನು ಪಿಎಫ್‌ ಖಾತೆಯಲ್ಲಿ ಸಹ ಮೊಬೈಲ್‌ ನಂಬರ್‌ ಬದಲಾಯಿಸಬಹುದು. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

EPFO

ನೀವು ಯಾವುದಾದರೂ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದರೆ, ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಕಡಿತಗೊಳ್ಳುವ ಭವಿಷ್ಯ ನಿಧಿ ಮೊತ್ತದ ಬಗ್ಗೆ ನಿಮಗೆ ತಿಳಿದಿರಬೇಕು. ಇದನ್ನು ಸುಲಭಗೊಳಿಸಲು, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)UAN ಎಂದು ಹೆಚ್ಚು ವ್ಯಾಪಕವಾಗಿ ಕರೆಯಲ್ಪಡುವ ಯುನಿವರ್ಸಲ್ ಅಕೌಂಟ್ ಸಂಖ್ಯೆಯನ್ನು ಪ್ರಾರಂಭಿಸಿತು, ಅದು ಖಾತೆಯಲ್ಲಿ ಮಾಡಲಾಗುತ್ತಿರುವ ಎಲ್ಲಾ ವಹಿವಾಟುಗಳು ಮತ್ತು ಠೇವಣಿಗಳ ಬಗ್ಗೆ ನಿಗಾ ಇಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಇದು ನೀವು ಕೆಲಸ ಹಾಗೂ ಕಂಪೆನಿ ಬದಲಾಯಿಸಿದರೂ ಒಂದೇ ಖಾತೆ ಸಂಖ್ಯೆಯಲ್ಲಿ ರನ್‌ ಆಗಲಿದೆ.

ಸಕ್ರಿಯ

ಇನ್ನು ಇದರಲ್ಲಿ ಇತರ ಯಾವುದೇ ಬ್ಯಾಂಕ್ ಖಾತೆಗಳಂತೆ, ಯುಎಎನ್ ಸಹ ಸದಸ್ಯರು ಸಕ್ರಿಯ ಫೋನ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು, ಅದರ ಮೂಲಕ ಭವಿಷ್ಯದ ಎಲ್ಲಾ ಸಂವಹನಗಳನ್ನು ಮಾಡಲಾಗುತ್ತದೆ. ಇದರರ್ಥ, ನೀವು ಇತ್ತೀಚೆಗೆ ಹೊಸ ಸಂಖ್ಯೆಯನ್ನು ಪಡೆದುಕೊಂಡಿದ್ದರೆ ಮತ್ತು ಹಿಂದಿನದು ಇನ್ನು ಮುಂದೆ ಸಕ್ರಿಯವಾಗಿಲ್ಲದಿದ್ದರೆ ನಿಮ್ಮ ಫೋನ್ ಸಂಖ್ಯೆಯನ್ನು ಖಾತೆಯಲ್ಲಿ ನವೀಕರಿಸುವುದು ಸಹ ಮುಖ್ಯವಾಗಿದೆ. EPFO ಪೋರ್ಟಲ್ ಬಳಸಿ ನಿಮ್ಮ ಫೋನ್ ಸಂಖ್ಯೆಯನ್ನು ಹೇಗೆ ಬದಲಾಯಿಸುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ.

PF ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

PF ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

ಹಂತ:1 Https://www.epfindia.gov.in/site_en/index.php ಗೆ ಭೇಟಿ ನೀಡಿ ಮತ್ತು ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ

ಹಂತ:2 ಮ್ಯಾನೇಜ್ ಟ್ಯಾಬ್ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ ಸಂಪರ್ಕ ವಿವರಗಳ ಆಯ್ಕೆಯನ್ನು ಆರಿಸಿ

ಹಂತ:3 ಇಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಚೆಕ್‌ಬಾಕ್ಸ್ ಆಯ್ಕೆಯನ್ನು ಆರಿಸಿ

ಹಂತ:4 ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದನ್ನು ಖಚಿತಪಡಿಸಲು ಮರು ನಮೂದಿಸಿ

ಹಂತ:5 ನಂತರ ಒಟಿಪಿ ಸ್ವೀಕರಿಸಲು ಗೆಟ್ ಆಥರೈಸೇಶನ್ ಪಿನ್ ಬಟನ್ ಕ್ಲಿಕ್ ಮಾಡಿ

ಹಂತ:6 ಈಗ, ಹಿಂದಿನ ಹಂತದಲ್ಲಿ ನಮೂದಿಸಲಾದ ನಿಮ್ಮ ಹೊಸ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ಬದಲಾವಣೆಗಳನ್ನು ಉಳಿಸು ಬಟನ್ ಕ್ಲಿಕ್ ಮಾಡಿ

ಹಂತ:7 ಇದರ ನಂತರ, ಸಂಪರ್ಕ ವಿವರಗಳನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ ಎಂದು ಹೊಸ ಸಂದೇಶ ಕಾಣಿಸುತ್ತದೆ.

Best Mobiles in India

English summary
Just like any other bank accounts, UAN also requires members to register an active phone number through which all the future communications will be done.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X